CBSE Board Exam 2023: ನಾಳೆಯಿಂದ ಸಿಬಿಎಸ್ಸಿ 10, 12ನೇ ತರಗತಿ ಬೋರ್ಡ್ ಪರೀಕ್ಷೆ: ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸೂಚನೆಗಳು
ಸಿಬಿಎಸ್ಸಿ 10ನೇ, 12ನೇ ಬೋರ್ಡ್ ಪರೀಕ್ಷೆಗಳು ನಾಳೆಯಿಂದ (ಫೆಬ್ರವರಿ15) ಪ್ರಾರಂಭವಾಗುತ್ತದೆ. 10ನೇ ತರಗತಿಗೆ ಚಿತ್ರಕಲೆ, ಥಾಯ್, ರಾಯ್, ಗುರುಂಗ್, ತಮಾಂಗ್ ಮತ್ತು ಶೆರ್ಪಾ ಪತ್ರಿಕೆಗಳ ಪರೀಕ್ಷೆ, 12 ನೇ ತರಗತಿಗೆ ಉದ್ಯಮಶೀಲತೆ (Entrepreneurship) ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ.
CBSE Board Exam 2023: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ, ಸಿಬಿಎಸ್ಸಿ (CBSE) ತರಗತಿ 10, 12 ಬೋರ್ಡ್ ಪರೀಕ್ಷೆಗಳು ನಾಳೆ, (ಫೆಬ್ರವರಿ 15) ರಿಂದ ಪ್ರಾರಂಭವಾಗುತ್ತದೆ. CBSE ಎರಡೂ ತರಗತಿಗಳಿಗೆ ನಾಳೆ ವೃತ್ತಿಪರ ವಿಷಯದ ಪರೀಕ್ಷೆಗಳನ್ನು ನಡೆಸಲಿದೆ. 10 ನೇ ತರಗತಿಗೆ ಚಿತ್ರಕಲೆ, ಥಾಯ್, ರಾಯ್, ಗುರುಂಗ್, ತಮಾಂಗ್ ಮತ್ತು ಶೆರ್ಪಾ ಪರೀಕ್ಷೆ, 12 ನೇ ತರಗತಿಗೆ ಉದ್ಯಮಶೀಲತೆ (Entrepreneurship) ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಇನ್ನೇನು ನಾಳೆಯಿಂದ ಪರೀಕ್ಷೆಯು ಪ್ರಾರಂಭವಾಗುತ್ತಿದ್ದು ವಿದ್ಯಾರ್ಥಿಗಳು ಹಾಗು ಪೋಷಕರು ಕೆಲವು ಪ್ರಮುಖ ಸೂಚನೆಗಳು ಮತ್ತು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಉತ್ತಮ.
ಬೋರ್ಡ್ ಪರೀಕ್ಷೆಯ ಮುಂಚಿತವಾಗಿ ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು:
- ಅಧಿಕೃತ ಪರೀಕ್ಷಾ ಪ್ರವೇಶ ಸಮಯ ಬೆಳಗ್ಗೆ 9:30. ವಿದ್ಯಾರ್ಥಿಗಳು ಅಧಿಕೃತ ಪರೀಕ್ಷಾ ಪ್ರವೇಶ ಸಮಯದ ಮೊದಲು ತಮ್ಮ ಪರೀಕ್ಳ್ಶ ಕೇಂದ್ರದ ತರಗಳಿಗಳಲ್ಲಿ ಇರ ತಕ್ಕದ್ದು.
- ಪರೀಕ್ಷಾ ಕೇಂದ್ರಗಳ ಗೇಟ್ 10 ಗಂಟೆಗೆ ಸರಿಯಾಗಿ ಮುಚ್ಚುತ್ತಾರೆ. ತದ ನಂತರ ಯಾರಿಗೂ ಪ್ರವೇಶಿಸಲು ಅವಕಾಶ ಇರುವುದಿಲ್ಲ.
- ನಿಮಗೆ ನಿಮ್ಮ ರೋಲ್ ನಂಬರ್, ಪರೀಕ್ಷಾ ಸಂಖ್ಯೆ ನೆನಪಿನಲ್ಲಿರಬೇಕು. ಇದರ ಜೊತೆಗೆ ನಿಮ್ಮ ಶಾಲಾ ಐಡಿ, ಹಾಲ್ ಟಿಕೆಟ್ ಕಡ್ಡಾಯವಾಗಿ ನಿಮ್ಮ ಬಳಿಯೇ ಇರಬೇಕು. ನಿಮ್ಮ ಶಾಲೆಯಿಂದ ಹಾಲ್ ಟಿಕೆಟ್ ಮೇಲೆ ಅಧಿಕೃತ ಸಹಿ ಇಲ್ಲದಿದ್ದರೆ ನೀವು ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳು ನಿರಾಕರಿಸುತ್ತವೆ.
- ಪರೀಕ್ಷೆ ಬರೆಯುವ ಗಾಬರಿಯಲ್ಲಿ ಯಾವ ದಿನ ಯಾವ ವಿಷ್ಯದ ಪರೀಕ್ಷೆ ಇದೆ ಎಂದು ಗಾಬರಿ ಮಾಡಿಕೊಳ್ಳಬೇಡಿ. ನಿಮ್ಮ ಹಾಲ್ ಟಿಕೆಟ್ ಅಥವಾ ಸಿಬಿಎಸ್ಸಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಪರೀಕ್ಷಾ ವಿವರಗಳು ಇರುತ್ತದೆ. ಸರಿಯಾಗಿ ಗಮನ ಹರಿಸಿ.
- ಸಿಬಿಎಸ್ಸಿ ಬೋರ್ಡ್ ಪರೀಕ್ಷೆಯು ಸರಿಯಾಗಿ 10:30 ಕ್ಕೆ ಪ್ರಾರಂಭವಾಗಿ 12:30/1:30 (ವಿಷಯದ ಅನುಸಾರವಾಗಿ) ಮುಗಿಯುತ್ತದೆ. ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ.
- ವಿಶೇಷ ಅಗತ್ಯವಿರುವ ಮಕ್ಕಳುಗಾಗಿ, ಕಂಪ್ಯೂಟರ್‌ಗಳು ಮತ್ತು ಲಿಪಿಕಾರರನ್ನು ನೀಡುವ ವಿವಿಧ ಸೌಲಭ್ಯಗಳು ಸಹ ಲಭ್ಯವಿವೆ. ಇಂತಹ ಸೌಲಭ್ಯ ಪಡೆಯಲು ಪೋಷಕರು ಇವುಗಳನ್ನು ಮೊದಲೇ ಪರೀಕ್ಷಾ ಕೇಂದ್ರಗಳಲ್ಲಿ ವಿನಂತಿಸಬೇಕು.
- ಪರೀಕ್ಷಾ ಕೇಂದ್ರಗಳು ಪೇಪರ್ ಮತ್ತು ಪರೀಕ್ಷಾ ಪಾತ್ರಿಯಾಗಳನ್ನು ಮಾತ್ರ ನೀಡುತ್ತದೆ. ಪೆನ್, ಪೆನ್ಸಿಲ್, ಕಲರಿಂಗ್ ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಇವೆಲ್ಲವನ್ನೂ ವಿದ್ಯಾರ್ಥಿಗಳೇ ತೆಗೆದುಕೊಂಡು ಹೋಗಬೇಕು.
- ಮಧುಮೇಹ ಹೊಂದಿರುವ ವಿದ್ಯಾರ್ಥಿಗಳು ಮತ್ತು ಇತರ ವಿಶೇಷ ವೈದ್ಯಕೀಯ ಅಗತ್ಯತೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ತಮ್ಮ ಔಷಧಿ ಮತ್ತು ಸಣ್ಣ ತಿಂಡಿಯನ್ನು ಪರೀಕ್ಷೆಗೆ ಕೊಂಡೊಯ್ಯಲು ಅನುಮತಿಯಿದೆ.
ಪರೀಕ್ಷೆ ನಡೆಯುವ ತರಗತಿಗೆ ಏನನ್ನು ತರಬಹುದು ಮತ್ತು ಏನನ್ನೆಲ್ಲ ತರಬಾರದು ಎಂಬ ವಿಷಯಗಳ ಪಟ್ಟಿಯನ್ನು ಸಹ ಸಿಬಿಎಸ್ಸಿ ಪ್ರವೇಶ ಕಾರ್ಡ್‌ನಲ್ಲಿ ನಮೂದಿಸಲಾಗಿದೆ. ಅನುಮತಿಸಲಾದ ವಸ್ತುಗಳೆಂದರೆ ಪೆನ್ನುಗಳು, ನೀರಿನ ಬಾಟಲ್, ಪಾರದರ್ಶಕ ಕ್ಲಿಪ್ ಬೋರ್ಡ್, ಸಣ್ಣ ಬಾಟಲಿಯ ಸ್ಯಾನಿಟೈಸರ್ ಮತ್ತು ಮಾಸ್ಕ. ಯಾವುದೇ ಗ್ಯಾಜೆಟ್‌ಗಳನ್ನು (ಸ್ಮಾರ್ಟ್ ವಾಚ್‌ಗಳು, ಡಿಜಿಟಲ್ ರಿಸ್ಟ್ ಬ್ಯಾಂಡ್‌ಗಳು, ಇತ್ಯಾದಿ ಸೇರಿದಂತೆ) ಅನುಮತಿಸಲಾಗುವುದಿಲ್ಲ.
ಇದನ್ನೂ ಓದಿ: ಯುಪಿಎಸ್ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಲು ಇಲ್ಲಿದೆ ಟಿಪ್ಸ್
ಪ್ರವೇಶ ಪತ್ರದಲ್ಲಿ ಪರೀಕ್ಷೆಗೆ ಸಂಬಂಧಿಸಿದ ವಿವರವಾದ ಸೂಚನೆಗಳನ್ನು ಸಹ ಮುದ್ರಿಸಲಾಗುತ್ತದೆ. ಪಾಲಕರು ಮತ್ತು ವಿದ್ಯಾರ್ಥಿಗಳು ತಪ್ಪದೆ ಪಾಲಿಸಬೇಕಾದಂತ ಸಲಹೆ ಸೂಚನೆಗಳನ್ನು ಹಾಲ್ ಟಿಕೆಟ್ನಲ್ಲೇ ನೀಡಿರುತ್ತಾರೆ. ಕೊನೆಯ ಕ್ಷಣದಲ್ಲಿ ಆಗುವ ಗಾಬರಿಯಿಂದ ತಪ್ಪಿಸಿಕೊಳ್ಳಲು ಪೋಷಕರು ಒಂದು ದಿನ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಂದ ನೀಡಲಾದ ಸೂಚನೆಗಳನ್ನು ಪರಿಶೀಲಿಸಿ ತಮ್ಮ ಮಕ್ಕಳು ಪರೀಕ್ಷೆಗೆ ಸಂಪೂರ್ಣವಾಗಿ ತಯಾರಾಗಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Tue, 14 February 23