CBSE Results: ಸಿಬಿಎಸ್​ಇ 12ನೇ ತರಗತಿಯ 1ನೇ ಟರ್ಮ್ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಹೀಗೆ ಮಾಡಿ

ಸಿಬಿಎಸ್​ಇ 12ನೇ ತರಗತಿಯ 1ನೇ ಟರ್ಮ್ ಪರೀಕ್ಷೆಗಳನ್ನು 2021ರ ಡಿಸೆಂಬರ್ 1ರಿಂದ ಡಿಸೆಂಬರ್ 22ರವರೆಗೆ ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು.

CBSE Results: ಸಿಬಿಎಸ್​ಇ 12ನೇ ತರಗತಿಯ 1ನೇ ಟರ್ಮ್ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಹೀಗೆ ಮಾಡಿ
ಸಿಬಿಎಸ್​ಇ ಫಲಿತಾಂಶ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Mar 19, 2022 | 6:59 PM

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಅಧಿಕೃತ ಸೈಟ್‌ನಲ್ಲಿ CBSE 12ನೇ ತರಗತಿಯ 1ನೇ ಟರ್ಮ್ ಫಲಿತಾಂಶವನ್ನು ಘೋಷಿಸಿದೆ. 12ನೇ ತರಗತಿಯ 1ನೇ ಟರ್ಮ್ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು CBSEಯ ಅಧಿಕೃತ ಸೈಟ್ cbse.nic.in ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಫಲಿತಾಂಶಗಳನ್ನು cbseresults.nic.in ನಲ್ಲಿಯೂ ಪರಿಶೀಲಿಸಬಹುದು. ಅಧಿಕೃತ ವೆಬ್‌ಸೈಟ್‌ನ ಹೊರತಾಗಿ, CBSE ಬೋರ್ಡ್ ಫಲಿತಾಂಶವನ್ನು CBSE ಫಲಿತಾಂಶ ವೆಬ್‌ಸೈಟ್‌ನಲ್ಲಿ cbseresults.nic.inನಲ್ಲಿ ಕೂಡ ಪರಿಶೀಲಿಸಬಹುದು. ಇಂದು ಬಿಡುಗಡೆ ಮಾಡಲಾಗಿರುವ ಫಲಿತಾಂಶವನ್ನು ಎಸ್‌ಎಂಎಸ್ ಮೂಲಕ, ಅಧಿಕೃತ ವೆಬ್‌ಸೈಟ್‌ಗಳಲ್ಲಿ ಮತ್ತು ಡಿಜಿಲಾಕರ್ ಮತ್ತು ಉಮಂಗ್ ಸೇರಿದಂತೆ ವಿವಿಧ ಅಧಿಕೃತ ಅಪ್ಲಿಕೇಶನ್‌ಗಳಲ್ಲಿ ಪರಿಶೀಲಿಸಬಹುದು.

ಸಿಬಿಎಸ್​ಇ 12ನೇ ತರಗತಿಯ 1ನೇ ಟರ್ಮ್ ಪರೀಕ್ಷೆಗಳನ್ನು 2021ರ ಡಿಸೆಂಬರ್ 1ರಿಂದ ಡಿಸೆಂಬರ್ 22ರವರೆಗೆ ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಅದರ ಫಲಿತಾಂಶ ಈಗ ಪ್ರಕಟವಾಗಿದೆ. ಸಿಬಿಎಸ್​ಇ 2ನೇ ಟರ್ಮ್ ಪರೀಕ್ಷೆಗಳ ನಂತರ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. 2ನೇ ಟರ್ಮ್ ಪರೀಕ್ಷೆಗಳನ್ನು ಏಪ್ರಿಲ್‌ನಲ್ಲಿ ನಡೆಸಲಾಗುವುದು. ಅದರ ದಿನಾಂಕ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

CBSE 12ನೇ ತರಗತಿ ಫಲಿತಾಂಶಗಳ ಮಾರ್ಕ್‌ಶೀಟ್ ಡೌನ್‌ಲೋಡ್ ಮಾಡುವುದು ಹೇಗೆ?:

– ಅಧಿಕೃತ ವೆಬ್‌ಸೈಟ್‌ಗಳಾದ cbse.gov.in, cbseresults.nic.in ಗೆ ಭೇಟಿ ನೀಡಿ. – CBSE 12ನೇ ತರಗತಿ ಟರ್ಮ್ 1 ಫಲಿತಾಂಶ 2021 ಅನ್ನು ಕ್ಲಿಕ್ ಮಾಡಿ. – ನಿಮ್ಮನ್ನು ಲಾಗಿನ್ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. – ಅಲ್ಲಿ ರೋಲ್ ಸಂಖ್ಯೆ ಮುಂತಾದ ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ. – ಲಾಗಿನ್ ಆದ ನಂತರ CBSE 10ನೇ, 12ನೇ ತರಗತಿ ಫಲಿತಾಂಶ 2021 ಸ್ಕ್ರೀನ್ ಮೇಲೆ ಬರುತ್ತದೆ. – ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದಿಟ್ಟುಕೊಳ್ಳಿ.

CBSE 12ನೇ ತರಗತಿ 1ನೇ ಟರ್ಮ್ ಫಲಿತಾಂಶಗಳ ವೆಬ್‌ಸೈಟ್‌ಗಳ ಪಟ್ಟಿ ಹೀಗಿದೆ. cbseresults.nic.in results.gov.in digilocker.gov.in ಇಲ್ಲಿ ಸಿಬಿಎಸ್​ಇ 12ನೇ ತರತಿ ಫಲಿತಾಂಶವನ್ನು ಪರಿಶೀಲಿಸಬಹುದು.

ಇದನ್ನೂ ಓದಿ: CBSE Term 1 Board Exam 2021 Date ಸಿಬಿಎಸ್ಇ ಟರ್ಮ್ 1 ಪರೀಕ್ಷೆ ನ.30 ರಿಂದ ಆರಂಭ

CBSE ಕ್ಲಾಸ್​ 10 ಮತ್ತು 12 ಅಂತಿಮ ಪರೀಕ್ಷೆಗಳು ಏಪ್ರಿಲ್​ 26 ರಿಂದ ಪ್ರಾರಂಭ, ಆಫ್​ಲೈನ್​ ಅಲ್ಲ

Published On - 6:56 pm, Sat, 19 March 22