CBSE: ಸಿಬಿಎಸ್ಇ 10ನೇ ತರಗತಿ ಫಸ್ಟ್ ಟರ್ಮ್ ರಿಸಲ್ಟ್: ಶಾಲೆಗಳಿಗೆ ತಲುಪಿದೆ ಆಂಕಪಟ್ಟಿ
ಫಲಿತಾಂಶ ವಿವರವನ್ನು ಡೌನ್ಲೋಡ್ ಮಾಡಿಕೊಂಡು, ಅಂಕಗಳನ್ನು ಪರಿಶೀಲಿಸಿದ ನಂತರ ಫಲಿತಾಂಶ ಘೋಷಣೆ ಸಾಧ್ಯವಾಗಲಿದೆ ಎಂದು ಸಿಬಿಎಸ್ಇ ಹೇಳಿದೆ.
ಸಿಬಿಎಸ್ಇ (CBSE) 2021-22ನೇ ಸಾಲಿನ 10ನೇ ತರಗತಿಯ ಮೊದಲ ಟರ್ಮ್ ಫಲಿತಾಂಶ ಪ್ರಕಟವಾಗಿದ್ದು, ಶಾಲೆಗಳಿಗೆ ಅಂಕಪಟ್ಟಿಯನ್ನು ಕಳುಹಿಸಲಾಗಿದೆ ಎಂದು ಸಿಬಿಎಸ್ಇ ಮಂಡಳಿಯು ತಿಳಿಸಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್ (Central Board of Secondary Education – CBSE) ಮಂಡಳಿಯು ಈಗಾಗಲೇ ಸಂಬಂಧಿಸಿದ ಶಾಲೆಗಳಿಗೆ ವಿದ್ಯಾರ್ಥಿಗಳ ಅಂಕದ ವಿವರಗಳನ್ನು ಕಳುಹಿಸಿದೆ. ಫಲಿತಾಂಶ ವಿವರವನ್ನು ಡೌನ್ಲೋಡ್ ಮಾಡಿಕೊಂಡು, ಅಂಕಗಳನ್ನು ಪರಿಶೀಲಿಸಿದ ನಂತರ ಫಲಿತಾಂಶ ಘೋಷಣೆ ಸಾಧ್ಯವಾಗಲಿದೆ ಎಂದು ಸಿಬಿಎಸ್ಇ ಹೇಳಿದೆ.
‘ಪ್ರಿಯ ಪ್ರಾಚಾರ್ಯರೇ, 2021-22ನೇ ಸಾಲಿನ ಫಸ್ಟ್ ಟರ್ಮ್ ಫಲಿತಾಂಶಗಳನ್ನು ಗಮನಿಸಿ’ ಎಂದು ಶಾಲೆಗಳಿಗೆ ಕಳುಹಿಸಿರುವ ಇಮೇಲ್ಗಳಲ್ಲಿ ಹೇಳಲಾಗಿದೆ. ಸಿಬಿಎಸ್ಇ ಪಠ್ಯಕ್ರಮದ ವಿದ್ಯಾರ್ಥಿಗಳು ಮಂಡಳಿಯ ವೆಬ್ಸೈಟ್ cbse.gov.in and cbseresults.nic.in ಮೂಲಕವೂ ಫಲಿತಾಂಶವನ್ನು ಪರಿಶೀಲಿಸಬಹುದು. ಈ ನಡುವೆ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ ಸಿಬಿಎಸ್ಇ 12ನೇ ತರಗತಿಯ ಫಲಿತಾಂಶ ಈವರೆಗೆ ಘೋಷಣೆಯಾಗಿಲ್ಲ.
ಕಳೆದ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ನಡೆದ ಫಸ್ಟ್ ಟರ್ಮ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದಿರುವ ಅಂಕದ ವಿವರಗಳನ್ನು ಮಾತ್ರ ನೀಡುತ್ತದೆ. ಪರೀಕ್ಷೆಯ ಫಲಿತಾಂಶವನ್ನು ಪಾಸ್, ಫೇಲ್ ಅಥವಾ ರಿಪೀಟ್ ಎಂದು ಘೋಷಿಸುವುದಿಲ್ಲ. 2021-22ರ ಸಾಲಿನ ಅಂತಿಮ ಪರೀಕ್ಷೆಯು ಏಪ್ರಿಲ್-ಮೇ 2022ರಲ್ಲಿ ನಡೆಯಲಿದೆ.
ಸಿಬಿಎಸ್ಇ 10ನೇ ತರಗತಿಗಾಗಿ ಎರಡು ದಿನಾಂಕ ಮಾಹಿತಿ ಪತ್ರಕಗಳನ್ನು ಪ್ರಕಟಿಸಿದೆ. (Date Sheets) ಪ್ರಕಟಿಸಿದೆ. 10ನೇ ತರಗತಿಯ ಪರೀಕ್ಷೆಯು ಏಪ್ರಿಲ್ 26ರಿಂದ ಮೇ 24ರವರೆಗೂ ನಡೆಯಲಿದೆ. ದಿನಾಂಕಗಳ ಸಂಪೂರ್ಣ ವಿವರ ಸಿಬಿಎಸ್ಇಯ ಅಧಿಕೃತ ಜಾಲತಾಣದಲ್ಲಿ (cbse.gov.in) ಲಭ್ಯವಿದೆ.
ಏಪ್ರಿಲ್ 27ರಂದು ಇಂಗ್ಲಿಷ್, ಮೇ 5ರಂದು ಗಣಿತ, ಮೇ 10ರಂದು ವಿಜ್ಞಾನ, ಮೇ 18ರಂದು ಹಿಂದಿ, ಮೇ 23ಕ್ಕೆ ಕಂಪ್ಯೂಟರ್ ಅಪ್ಲಿಕೇಶನ್ ಪರೀಕ್ಷೆಗಳು ನಡೆಯಲಿವೆ. 10ನೇ ತರಗತಿ ಪರೀಕ್ಷೆಯು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ.
(2/2) #CBSE #CBSEexams #CBSEexamSchedule #Students Schedule for Term II exams Class XII 2022 Details also available at https://t.co/xA4WhyG5VW pic.twitter.com/h60prCMIvT
— CBSE HQ (@cbseindia29) March 11, 2022
ಇದನ್ನೂ ಓದಿ: 2002ರ ಗುಜರಾತ್ ಹಿಂಸಾಚಾರ ಯಾವ ಸರ್ಕಾರದಡಿಯಲ್ಲಿ ನಡೆಯಿತು?-ಸಿಬಿಎಸ್ಇ ಪರೀಕ್ಷೆಯಲ್ಲಿ ಕೇಳಲಾದ ಈ ಪ್ರಶ್ನೆಯಿಂದ ದೊಡ್ಡ ವಿವಾದ
Published On - 8:51 am, Sat, 12 March 22