2002ರ ಗುಜರಾತ್ ಹಿಂಸಾಚಾರ ಯಾವ ಸರ್ಕಾರದಡಿಯಲ್ಲಿ ನಡೆಯಿತು?-ಸಿಬಿಎಸ್ಇ ಪರೀಕ್ಷೆಯಲ್ಲಿ ಕೇಳಲಾದ ಈ ಪ್ರಶ್ನೆಯಿಂದ ದೊಡ್ಡ ವಿವಾದ
ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾದ ಪ್ರಶ್ನೆಯಲ್ಲಿರುವ ವಿಷಯ ಸಿಬಿಎಸ್ಇ 12ನೇ ತರಗತಿ ಪುಸ್ತಕದ 141ನೇ ಅಧ್ಯಾಯ ಭಾರತೀಯ ಸಮಾಜದ 2ನೇ ಪ್ಯಾರಾದಲ್ಲಿ ಇದೆ ಎಂದು ಟ್ವಿಟರ್ ಬಳಕೆದಾರರಾದ ದೀಪೇಂದರ್ ಮಿಶ್ರಾ ಫೋಟೋ ಸಮೇತ ಹಂಚಿಕೊಂಡಿದ್ದಾರೆ.
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE)ಯು ಟರ್ಮ್ 1ರ 12ನೇ ತರಗತಿ ಪರೀಕ್ಷೆಗಳನ್ನು ನಿನ್ನೆಯಿಂದ ನಡೆಸುತ್ತಿದೆ. ಡಿಸೆಂಬರ್ 22ರವರೆಗೂ ಪರೀಕ್ಷೆ ಇರಲಿದೆ. ಹಾಗೇ, ನಿನ್ನೆ (ಡಿಸೆಂಬರ್ 1) ಮೊದಲ ದಿನ ಬೆಳಗ್ಗೆ 11.30ರಿಂದ 1 ಗಂಟೆಯವರೆಗೆ ಸೋಶಿಯಾಲಜಿ (ಸಮಾಜಶಾಸ್ತ್ರ) ಪರೀಕ್ಷೆ ಇತ್ತು. ಆದರೆ ಈ ಪರೀಕ್ಷೆ ಪತ್ರಿಕೆಯಲ್ಲಿ ನೀಡಲಾಗಿದ್ದ ಒಂದು ಪ್ರಶ್ನೆ ದೊಡ್ಡ ವಿವಾದ ಸೃಷ್ಟಿಸಿದ್ದ ಪರಿಣಾಮ ಇದೀಗ ಸಿಬಿಎಸ್ಇ ಕ್ಷಮೆ ಕೋರಿದೆ. ಈ ಬಾರಿ ಮಲ್ಟಿಪಲ್ ಚಾಯ್ಸ್ (ಒಂದು ಪ್ರಶ್ನೆಗೆ ಮೂರ್ನಾಲ್ಕು ಉತ್ತರ ನೀಡಲಾಗುತ್ತದೆ, ಅದರಲ್ಲಿ ಒಂದು ಆಯ್ಕೆ ಮಾಡಬೇಕು) ವಿಧಾನದಲ್ಲಿ ಪರೀಕ್ಷೆ ನಡೆಯುತ್ತಿದೆ.
ಅಂದಹಾಗೆ ವಿವಾದ ಸೃಷ್ಟಿಸಿದ್ದ ಪ್ರಶ್ನೆ ‘The unprecedented scale and spread of anti-muslim violence in Gujarat in 2002 took place under which government?’ (ಗುಜರಾತ್ನಲ್ಲಿ 2002ರಲ್ಲಿ ಭಾರಿ ಪ್ರಮಾಣದ ಮುಸ್ಲಿಂ ವಿರೋಧಿ ಹಿಂಸಾಚಾರ ಹರಡಿದ್ದು ಯಾವ ಸರ್ಕಾರದಡಿಯಲ್ಲಿ?) ಎಂಬುದು. ಅದಕ್ಕೆ ಕಾಂಗ್ರೆಸ್, ಬಿಜೆಪಿ, ಡೆಮಾಕ್ರಟಿಕನ್ ಮತ್ತು ರಿಪಬ್ಲಿಕನ್ ಎಂಬ ನಾಲ್ಕು ಉತ್ತರಗಳನ್ನು ನೀಡಲಾಗಿತ್ತು. ಆದರೆ ಈ ಪ್ರಶ್ನೆ ಸಿಕ್ಕಾಪಟೆ ವೈರಲ್ ಆಗುವ ಮೂಲಕ ದೊಡ್ಡ ವಿವಾದ ಸೃಷ್ಟಿಸಿತ್ತು.ನೆಟ್ಟಿಗರು ಅದನ್ನು ಟ್ವೀಟ್ ಮಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಸಿಬಿಎಸ್ಇ ಕ್ಷಮೆ ಕೋರಿತ್ತು. ಇಂದಿನ ಕ್ಲಾಸ್ 12ನೇ ತರಗತಿಯ ಸೋಷಿಯಾಲಜಿ ಪರೀಕ್ಷೆಯಲ್ಲಿ ಒಂದು ಅಸಮರ್ಪಕ ಪ್ರಶ್ನೆ ಕೇಳಲಾಗಿದೆ. ಈ ಮೂಲಕ ಸಿಬಿಎಸ್ಇ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಸಿಬಿಎಸ್ಇ 12ನೇ ತರಗತಿ ಟರ್ಮ್ 1ರ ಪರೀಕ್ಷೆ ಪತ್ರಿಕೆ ಸಿದ್ಧಪಡಿಸಲು ಬಾಹ್ಯ ವಿಷಯ ತಜ್ಞರಿಗೆ ಜವಾಬ್ದಾರಿ ವಹಿಸಲಾಗಿತ್ತು. ಆದರೆ ಈಗಾಗಿರುವ ದೋಷವನ್ನು ಸಿಬಿಎಸ್ಇ ಒಪ್ಪಿಕೊಂಡಿದೆ ಮತ್ತು ಕ್ಷಮೆ ಕೋರುತ್ತೇವೆ ಮತ್ತು ಇದಕ್ಕೆ ಜವಾಬ್ದಾರರಾದ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದೂ ಟ್ವಿಟರ್ನಲ್ಲಿ ಬರೆದುಕೊಂಡಿದೆ.
For those asking What was the question.. pic.twitter.com/dUpq5PxRlu
— ︎Alok S Kumar (@Harry_Powell96) December 1, 2021
A question has been asked in today’s class 12 sociology Term 1 exam which is inappropriate and in violation of the CBSE guidelines for external subject experts for setting question papers.CBSE acknowledges the error made and will take strict action against the responsible persons
— CBSE HQ (@cbseindia29) December 1, 2021
ಪುಸ್ತಕದಲ್ಲೇ ವಿಷಯವಿದ್ದಾಗ ನೀವೇನು ಮಾಡ್ತೀರಿ? ಸಿಬಿಎಸ್ಇ ಕ್ಷಮೆ ಕೇಳುತ್ತಿದ್ದಂತೆ ಈಗ ಒಂದಷ್ಟು ಜನರು ನಿಮ್ಮದೇನು ತಪ್ಪಿಲ್ಲ ಬಿಡಿ ಎನ್ನುತ್ತಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾದ ಪ್ರಶ್ನೆಯಲ್ಲಿರುವ ವಿಷಯ ಸಿಬಿಎಸ್ಇ 12ನೇ ತರಗತಿ ಪುಸ್ತಕದ 141ನೇ ಅಧ್ಯಾಯ ಭಾರತೀಯ ಸಮಾಜದ 2ನೇ ಪ್ಯಾರಾದಲ್ಲಿ ಇದೆ ಎಂದು ಟ್ವಿಟರ್ ಬಳಕೆದಾರರಾದ ದೀಪೇಂದರ್ ಮಿಶ್ರಾ ಫೋಟೋ ಸಮೇತ ಹಂಚಿಕೊಂಡಿದ್ದಾರೆ. ಹಾಗೇ ಇನ್ನೊಬ್ಬರು ಕೂಡ ಇದನ್ನೇ ಹೇಳಿದ್ದಾರೆ. ಪಠ್ಯದಲ್ಲೇ ವಿಷಯ ಇರುವಾಗ ಪರೀಕ್ಷೆಯಲ್ಲಿ ಬರಬಾರದು ಎಂದರೆ ಹೇಗೆ? ಅಂದ ಮೇಲೆ ನೀವ್ಯಾಕೆ ಕ್ಷಮೆ ಕೇಳಬೇಕು ಎಂದು ಪ್ರಶ್ನಿಸಿದ್ದಾರೆ.
What has been asked in the question paper already there in the book . Kindly check the page no. 141 of the sociology book (Class: XII) name : भारतीय समाज (2nd Paragraph). @dpradhanbjp ji @AshokShrivasta6 ji pic.twitter.com/W8b8TGcKhO
— दीपेंद्र मिश्रा (Deependra Mishra) (@13_deependra) December 1, 2021
How can you afford to be apologetic when this content is the part of textbook’? Chapter The Challenges of Cultural Diversity @sssingh21 @NAN_DINI_ @SandipGhose pic.twitter.com/DUEdpgzJ82
— Sangeeta Tyagi (@sangeeta_tyagi) December 1, 2021
2002ರಲ್ಲಿ ಇದ್ದದ್ದು ಬಿಜೆಪಿ ಸರ್ಕಾರ 2002ರ ಫೆಬ್ರವರಿ 27ರಂದು ಶಬರಮತಿ ಎಕ್ಸ್ಪ್ರೆಸ್ನ s6 ಕೋಚ್ಗೆ ಗೋದ್ರಾದಲ್ಲಿ ಬೆಂಕಿ ಹಾಕಲಾಯಿತು. ಇದರಲ್ಲಿ ಕರಸೇವಕರು ಅಯೋಧ್ಯೆಗೆ ಪ್ರಯಾಣ ಮಾಡುತ್ತಿದ್ದರು. ಗೋದ್ರಾ ದುರಂತದಲ್ಲಿ 59 ಮಂದಿ ಮೃತಪಟ್ಟರು. ಬಳಿಕ ಶುರುವಾದ ಹಿಂಸಾಚಾರದಲ್ಲಿ 1000ಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಆಗ ಅಲ್ಲಿದ್ದಿದ್ದು ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದರು.
ಇದನ್ನೂ ಓದಿ: ಕೊವಿಡ್ ಲಸಿಕೆ ಪಡೆಯುವುದಕ್ಕೆ ಜನರ ಹಿಂದೇಟು; ಮನೆ ಮನೆಗೆ ತೆರಳಿ ಲಸಿಕೆ ಹಾಕಲು ಮುಂದಾದ ಬಿಬಿಎಂಪಿ
Published On - 8:46 am, Thu, 2 December 21