AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮಿಕ್ರಾನ್​ ಹೈರಿಸ್ಕ್​ ದೇಶಗಳಿಂದ ಬಂದ 6 ಮಂದಿಯಲ್ಲಿ ಕೊವಿಡ್​ 19 ದೃಢ; ಎಲ್ಲರ ಮಾದರಿಗಳೂ ಲ್ಯಾಬ್​​ಗೆ ರವಾನೆ

ಬುಧವಾರ ಮಧ್ಯಾಹ್ನ 4ಗಂಟೆಯವರೆಗೆ ಒಟ್ಟು 11 ಅಂತಾರಾಷ್ಟ್ರೀಯ ವಿಮಾನಗಳು ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡ್​ ಆಗಿವೆ. ಇವುಗಳಿಂದ  3476 ಪ್ರಯಾಣಿಕರು ಆಗಮಿಸಿದ್ದಾರೆ.

ಒಮಿಕ್ರಾನ್​ ಹೈರಿಸ್ಕ್​ ದೇಶಗಳಿಂದ ಬಂದ 6 ಮಂದಿಯಲ್ಲಿ ಕೊವಿಡ್​ 19 ದೃಢ; ಎಲ್ಲರ ಮಾದರಿಗಳೂ ಲ್ಯಾಬ್​​ಗೆ ರವಾನೆ
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Dec 02, 2021 | 7:34 AM

Share

ಒಮಿಕ್ರಾನ್​ ಸೋಂಕು ಹೆಚ್ಚಾದ ಬೆನ್ನಲ್ಲೇ ಭಾರತ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಲ್ಲೂ ಒಮಿಕ್ರಾನ್​ ಹೈ ರಿಸ್ಕ್​ ದೇಶಗಳು ಎಂದು ವಿಂಗಡಿಸಿಕೊಂಡು, ಅಂಥ ದೇಶಗಳಿಂದ ಭಾರತಕ್ಕೆ ಬರುವವರು ಕಡ್ಡಾಯವಾಗಿ ಕೆಲವು ನಿಯಮಗಳ ಪಾಲನೆ ಮಾಡಬೇಕಿದೆ. ಆದರೆ ಈಗೊಂದು ಆತಂಕ ಎದುರಾಗಿದೆ.  ಒಮಿಕ್ರಾನ್​ ಹೈರಿಸ್ಕ್​ ಇರುವ ದೇಶಗಳಿಂದ ಬುಧವಾರ ಒಟ್ಟಾರೆ 3 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಭಾರತಕ್ಕೆ ಬಂದಿದ್ದು, ಅವರಲ್ಲಿ ಆರು ಮಂದಿಯಲ್ಲಿ ಬುಧವಾರ ಕೊವಿಡ್​ 19 ವೈರಸ್ ದೃಢಪಟ್ಟಿದೆ. ಇದು ಒಮಿಕ್ರಾನ್​ ಸೋಂಕಿರಬಹುದಾ ಎಂದು ಪತ್ತೆ ಹಚ್ಚಲು ಸೋಂಕಿತರ ಮಾದರಿಯನ್ನು ಜಿನೋಮಿಕ್​ ಸಿಕ್ವೆನ್ಸಿಂಗ್​​ಗೆ ಕಳಿಸಲಾಗಿದೆ. 

ಬುಧವಾರ ಮಧ್ಯಾಹ್ನ 4ಗಂಟೆಯವರೆಗೆ ಒಟ್ಟು 11 ಅಂತಾರಾಷ್ಟ್ರೀಯ ವಿಮಾನಗಳು ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡ್​ ಆಗಿವೆ. ಇವುಗಳಿಂದ  3476 ಪ್ರಯಾಣಿಕರು ಆಗಮಿಸಿದ್ದಾರೆ. ಹೀಗೆ ತಲುಪಿದ ಎಲ್ಲ ಪ್ರಯಾಣಿಕರಿಗೂ ನಿಯಮದಂತೆ ಆರ್​ಟಿಪಿಸಿಆರ್​ ಟೆಸ್ಟ್​ ಮಾಡಲಾಗಿದೆ. ಅದರಲ್ಲಿ 6ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನೆದರ್​​ಲ್ಯಾಂಡ್ ಮತ್ತು ಯುಕೆಯಿಂದ ದೆಹಲಿಗೆ ಬಂದ ಒಟ್ಟು ನಾಲ್ವರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಇವೆರಡೂ ಕೂಡ ಒಮಿಕ್ರಾನ್​ ಹೈರಿಸ್ಕ್​ ದೇಶಗಳ ಪಟ್ಟಿಗೇ ಸೇರುತ್ತವೆ.  ಹೀಗೆ ಕೊರೊನಾ ದೃಢಪಟ್ಟವರನ್ನು ಸದ್ಯ ಎಲ್​ಎನ್​ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೇ, ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ವಿಚಾರದಲ್ಲಿ ಗಮನಹರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರದ ಜತೆಗೆ ಕೆಲವು ರಾಜ್ಯಸರ್ಕಾರಗಳೂ ಕೂಡ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಪಡಿಸಿವೆ. ಈ ಸಾಲಿನಲ್ಲಿ ಮಹಾರಾಷ್ಟ್ರವೂ ಒಂದು. ಮಹಾರಾಷ್ಟ್ರಕ್ಕೆ ಹೈರಿಸ್ಕ್​ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್​​ಗೆ ಒಳಗಾಗಬೇಕು. 2, 4 ಮತ್ತು 7ನೇ ದಿನ ಆರ್​ಟಿಪಿಸಿಆರ್​ ಟೆಸ್ಟ್​ ಆಗಬೇಕು. ಈ ಮೂರು ಟೆಸ್ಟ್​​ಗಳಲ್ಲಿ ಒಂದು ಟೆಸ್ಟ್​​ನಲ್ಲಿ ವರದಿ ಪಾಸಿಟಿವ್ ಬಂದರೂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದು ಮಹಾ ಸರ್ಕಾರ ಹೇಳಿದೆ.  ಕರ್ನಟಕ ಕೂಡ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿಯಮ ಪ್ರಕಟಿಸಿದೆ. ಒಮಿಕ್ರಾನ್​ ಹೈರಿಸ್ಕ್​ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರ್​ಟಿಸಿಪಿಆರ್ ಟೆಸ್ಟ್​ ಮಾಡಲಾಗುವುದು. ಯಾರಲ್ಲೇ ಕೊವಿಡ್ 19 ಕಂಡುಬಂದರೂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುವುದು. ಯಾರಲ್ಲಾದರೂ ನೆಗೆಟಿವ್​ ಬಂದರೂ ಕೂಡ ಅವರು ಏಳು ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್​ ಆಗಬೇಕು. ಕ್ವಾರಂಟೈನ್​ನ 5ನೇ ದಿನಕ್ಕೆ ಒಂದು ಆರ್​ಟಿಪಿಸಿಆರ್​ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ: Karnataka Weather Today: ಇಂದಿನಿಂದ 3 ದಿನ ಕರ್ನಾಟಕದಲ್ಲಿ ವ್ಯಾಪಕ ಮಳೆ; ಆಂಧ್ರ ಪ್ರದೇಶ, ಒಡಿಶಾದಲ್ಲಿ ಚಂಡಮಾರುತದ ಭೀತಿ

Published On - 7:34 am, Thu, 2 December 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!