AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಪೆಟ್ರೋಲ್​ ಬೆಲೆ ದೆಹಲಿಯಲ್ಲಿ ಮಾತ್ರ ಬದಲಾವಣೆ; ಬೆಂಗಳೂರಿನಲ್ಲಿ ಎಷ್ಟಿದೆ ಪೆಟ್ರೋಲ್​-ಡೀಸೆಲ್​ ಇಂದಿನ ದರ?

Fuel Rate Today: ಬೆಂಗಳೂರಿನಲ್ಲಿ ಕೂಡ ಪೆಟ್ರೋಲ್​-ಡೀಸೆಲ್​​ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.  ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 100.58 ರೂಪಾಯಿ ಇದ್ದು, ಡೀಸೆಲ್​ ದರ ಪ್ರತಿ ಲೀಟರ್​ಗೆ 85.01 ರೂಪಾಯಿ ಇದೆ. ಇದು ಕಳೆದ ಒಂದು ತಿಂಗಳಿಂದಲೂ ಹಾಗೇ ಇದೆ.

Petrol Price Today: ಪೆಟ್ರೋಲ್​ ಬೆಲೆ ದೆಹಲಿಯಲ್ಲಿ ಮಾತ್ರ ಬದಲಾವಣೆ; ಬೆಂಗಳೂರಿನಲ್ಲಿ ಎಷ್ಟಿದೆ ಪೆಟ್ರೋಲ್​-ಡೀಸೆಲ್​ ಇಂದಿನ ದರ?
ಸಾಂಕೇತಿಕ ಚಿತ್ರ
TV9 Web
| Edited By: |

Updated on:Dec 02, 2021 | 8:11 AM

Share

ದೇಶಾದ್ಯಂತ ಪೆಟ್ರೋಲ್​-ಡೀಸೆಲ್​ ಬೆಲೆಗಳಲ್ಲಿ ಇಂದು ಕೂಡ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯನ್ನು ಹೊರತುಪಡಿಸಿ ಉಳಿದೆಲ್ಲ ಮಹಾನಗರಗಳಲ್ಲೂ ಬೆಲೆ ಸ್ಥಿರವಾಗಿಯೇ ಇದೆ. ಕಳೆದ ಒಂದು ತಿಂಗಳಿಂದ ಇಂಧನಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗದೆ ಇರುವುದು ವಿಶೇಷವಾಗಿದೆ. ನಿನ್ನೆ ದೆಹಲಿ ಸರ್ಕಾರ ಪೆಟ್ರೋಲ್​ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್​) ಕಡಿತಗೊಳಿಸಿದೆ. ಹೀಗಾಗಿ ಅಲ್ಲಿನ ಪೆಟ್ರೋಲ್​ ಬೆಲೆ ಇಳಿಕೆಯಾಗಿದ್ದು ಬಿಟ್ಟರೆ, ಉಳಿದಂತೆ ಇನ್ಯಾವುದೇ ಪ್ರದೇಶದಲ್ಲಿ ಬದಲಾವಣೆಯಿಲ್ಲ. ದೆಹಲಿ ಸರ್ಕಾರ ನಿನ್ನೆ ಪೆಟ್ರೋಲ್​ ಮೇಲಿನ ವ್ಯಾಟ್​​ನ್ನು ಶೇ.30ರಿಂದ ಶೇ.19.4ಕ್ಕೆ ಇಳಿಸಿದೆ.  ಈ ಮೂಲಕ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 8 ರೂಪಾಯಿ ಕಡಿತಗೊಂಡಿದೆ.  ಅಲ್ಲಿಗೆ ದೆಹಲಿಯಲ್ಲಿ 103 ರೂ.ಇದ್ದ ಪೆಟ್ರೋಲ್​ ಬೆಲೆ 95 ರೂ.ಗೆ ಇಳಿಕೆಯಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಪ್ರತಿನಿತ್ಯವೆಂಬಂತೆ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಯಾಗುತ್ತಿತ್ತು. ಆದರೆ ದೀಪಾವಳಿಗೂ ಮೊದಲು ಕೇಂದ್ರ ಸರ್ಕಾರ ಈ ಇಂಧನಗಳ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಗುಡ್​ನ್ಯೂಸ್ ಕೊಟ್ಟಿತ್ತು. ಅದಾದ ಬಳಿಕ ಬಿಜೆಪಿ ಸರ್ಕಾರ ಇರುವ ಉಳಿದ ರಾಜ್ಯಗಳೂ ಕೂಡ ಪೆಟ್ರೋಲ್​ ಮೇಲಿನ ವ್ಯಾಟ್​ ಕಡಿತಗೊಳಿಸಿದವು. ಹೀಗಾಗಿ ಸದ್ಯ ಪೆಟ್ರೋಲ್​ ಬೆಲೆಯಲ್ಲಿ ಸದ್ಯಕ್ಕಂತೂ ಯಾವುದೇ ಬದಲಾವಣೆ ಆಗುತ್ತಿಲ್ಲ.

ಬೆಂಗಳೂರಲ್ಲಿ ಏನಿದೆ ಬೆಲೆ? ಬೆಂಗಳೂರಿನಲ್ಲಿ ಕೂಡ ಪೆಟ್ರೋಲ್​-ಡೀಸೆಲ್​​ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.  ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 100.58 ರೂಪಾಯಿ ಇದ್ದು, ಡೀಸೆಲ್​ ದರ ಪ್ರತಿ ಲೀಟರ್​ಗೆ 85.01 ರೂಪಾಯಿ ಇದೆ. ಇದು ಕಳೆದ ಒಂದು ತಿಂಗಳಿಂದಲೂ ಹಾಗೇ ಇದೆ. ದರದಲ್ಲಿ ಬದಲಾವಣೆಯಾಗಿಲ್ಲ. ಆದರೂ ಪೆಟ್ರೋಲ್​ ಬೆಲೆ 100 ರೂ.ಇದ್ದಿದ್ದು ವಾಹನ ಸವಾರರಿಗೆ ಹೊರೆಯೇ ಆಗಿದೆ. ಇನ್ನು ಮಂಗಳೂರಿನಲ್ಲಿ ಪೆಟ್ರೋಲ್​ ಬೆಲೆ 99.76 ರೂ, ಡೀಸೆಲ್​ ಬೆಲೆ 84.24 ರೂ. ಆಗಿದೆ. ಅಂತೆಯೇ ಮೈಸೂರಿನಲ್ಲಿ ಪೆಟ್ರೋಲ್​  100.08 ರೂ. ಮತ್ತು ಡೀಸೆಲ್​ 84.56 ರೂ.ಗೆ ಮಾರಾಟವಾಗುತ್ತಿದೆ.

ಇನ್ನುಳಿದಂತೆ ದೆಹಲಿಯಲ್ಲಿ ಲೀಟರ್ ಪೆಟ್ರೋಲ್​ ಬೆಲೆ 103.97 ರೂ. ಇದ್ದು, ಡೀಸೆಲ್​ ದರ 86.67 ರೂ.ಆಗಿದೆ. (ಡೀಸೆಲ್​ ಮೇಲಿನ ವ್ಯಾಟ್​ ಕಡಿಮೆ ಮಾಡಿಲ್ಲ). ಹಾಗೇ ಉಳಿದ ಪ್ರಮುಖ ಮಹಾನಗರಗಳಾದ ಮುಂಬೈನಲ್ಲಿ  ಪೆಟ್ರೋಲ್​ ದರ 109.98 ರೂ. ಮತ್ತು ಡೀಸೆಲ್​ 94.14 ರೂ. ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್​ 101.40 ರೂ., ಡೀಸೆಲ್​ 91.43 ರೂ., ಕೋಲ್ಕತ್ತದಲ್ಲಿ ಪೆಟ್ರೋಲ್​  104.67 ರೂ ಮತ್ತು ಡೀಸೆಲ್​ 89.79 ರೂ.ಇದೆ. ಒಟ್ಟಾರೆ ಯಾವ ಮಹಾನಗರಗಳಲ್ಲೂ ಇಂಧನ ದರ ಬದಲಾವಣೆಯಾಗಿಲ್ಲ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ.

ಇದನ್ನೂ ಓದಿ:

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.htm

Masik Shivratri: ಕಷ್ಟ ದೂರ ಮಾಡಿ ಸಂತೋಷ ತರುವ ಮಾಸಿಕ ಶಿವರಾತ್ರಿ ವ್ರತ ಆಚರಿಸುವುದು ಹೇಗೆ? ಮಹತ್ವ, ಪೂಜಾ ವಿಧಾನ ಏನು

Published On - 8:09 am, Thu, 2 December 21

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ