AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಬಿಎಸ್​ಇ 10ನೇ ತರಗತಿ ಪ್ರಶ್ನೆ ಪತ್ರಿಕೆ ವಿರುದ್ಧ ಪ್ರಿಯಾಂಕಾ ಗಾಂಧಿ, ನೆಟ್ಟಿಗರ ಕಿಡಿ; ಟ್ರೆಂಡ್ ಆಯ್ತು ಸ್ತ್ರೀನಿಂದಕ ಸಿಬಿಎಸ್​ಇ ಎಂಬ ಹ್ಯಾಷ್​ಟ್ಯಾಗ್​

ಸಿಬಿಎಸ್​ಇ ಪ್ರಶ್ನೆ ಪತ್ರಿಕೆಯ ಪ್ಯಾರಾಗ್ರಾಫ್​​ಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ #CBSEinsultswomen ಎಂಬ ಹ್ಯಾಷ್​ಟ್ಯಾಗ್​ ವಿಪರೀತ ವೈರಲ್ ಆಗುತ್ತಿದೆ.

ಸಿಬಿಎಸ್​ಇ 10ನೇ ತರಗತಿ ಪ್ರಶ್ನೆ ಪತ್ರಿಕೆ ವಿರುದ್ಧ ಪ್ರಿಯಾಂಕಾ ಗಾಂಧಿ, ನೆಟ್ಟಿಗರ ಕಿಡಿ; ಟ್ರೆಂಡ್ ಆಯ್ತು ಸ್ತ್ರೀನಿಂದಕ ಸಿಬಿಎಸ್​ಇ ಎಂಬ ಹ್ಯಾಷ್​ಟ್ಯಾಗ್​
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Dec 13, 2021 | 12:03 PM

Share

ದೆಹಲಿ: ಸಿಬಿಎಸ್​ಇ (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ) 10ನೇ ತರಗತಿ ಪ್ರಶ್ನೆ ಪತ್ರಿಕೆಯೊಂದು ಇದೀಗ ವಿವಾದ ಸೃಷ್ಟಿ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಳವಾಗಿ ಚರ್ಚೆಯಾಗುತ್ತಿದೆ. ಶನಿವಾರ ನಡೆದ ಇಂಗ್ಲಿಷ್​ ಪರೀಕ್ಷೆಯಲ್ಲಿ ಒಂದು ಪ್ಯಾರಾಗ್ರಾಪ್​​ನಲ್ಲಿ ಸ್ತ್ರೀ ಸ್ವಾತಂತ್ರ್ಯ ವಿರೋಧಿ ವಾಕ್ಯಗಳನ್ನು ಉಲ್ಲೇಖಿಸಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರಿಗೆ ನೀಡುವ ವಿಮೋಚನೆ (ಸ್ವಾತಂತ್ರ್ಯ) ಮಕ್ಕಳ ಮೇಲಿನ ಪಾಲಕರ ಅಧಿಕಾರ ನಾಶ ಮಾಡುತ್ತದೆ ಎಂಬುದನ್ನು ಜನರು ಗ್ರಹಿಸಿಕೊಳ್ಳಲು ಹಿಂದೆಬಿದ್ದಿದ್ದರು. ಪುರುಷನನ್ನು ಅವನ ಸ್ಥಾನದಿಂದ ಕೆಳಗಿಳಿಸುವಲ್ಲಿ ಮಹಿಳೆಯರು ತಮ್ಮನ್ನು ತಾವು ಕಳೆದುಕೊಂಡರು. ಆದರೆ ಮಹಿಳೆಯರು ತಮ್ಮ ಪತಿಯ ಮಾರ್ಗವನ್ನು ಅನುಸರಿಸುವ ಮೂಲಕ ಮಾತ್ರ ಕಿರಿಯರಿಂದ ವಿಧೇಯತೆಯನ್ನು ಗಳಿಸಬಹುದು ಎಂದು ಪ್ರಶ್ನೆಪತ್ರಿಕೆಯಲ್ಲಿ ಬರೆಯಲಾಗಿದೆ. ಒಟ್ಟಾರೆ ಒಂದು ಶತಮಾನದ ಹಿಂದೆ ಮನೆಯ ಯಜಮಾನನಾಗಿದ್ದ ಪುರುಷನಿಗೆ ಮಹಿಳೆ ಹೇಗೆ ಅಧೀನಳಾಗಿದ್ದಳು ಎಂಬುದು ಇದರ ಸಾರಾಂಶವಾಗಿದ್ದು, ಈ ಪ್ಯಾರಾಗ್ರಾಫ್​​ಗೆ ಸಿಕ್ಕಾಪಟೆ ವಿರೋಧ ವ್ಯಕ್ತವಾಗುತ್ತಿದೆ.  

ಈ ಮೂರು ವಿಭಾಗಗಳ ಪ್ಯಾಸೇಜ್​​ನ್ನು ಪ್ರಶ್ನೆ ಪತ್ರಿಕೆಯಲ್ಲಿ ಕೊಟ್ಟು ನಂತರ ಅದಕ್ಕೊಂದು ಸೂಕ್ತ ತಲೆ ಬರಹ ನೀಡಿ ಎಂದು ನಾಲ್ಕು ಆಯ್ಕೆಯನ್ನು ನೀಡಲಾಗಿದೆ. ಆ ಆಯ್ಕೆಗಳು ಹೀಗಿವೆ..1) ಮಕ್ಕಳಲ್ಲಿ ಅಶಿಸ್ತು ಹೆಚ್ಚಿದ್ದಕ್ಕೆ ಯಾರು ಜವಾಬ್ದಾರರು? 2)ಮನೆಯಲ್ಲಿ ಶಿಸ್ತು ಕುಸಿದಿದೆ 3)ಮನೆಯಲ್ಲಿ ಮಕ್ಕಳ ಮತ್ತು ಸೇವಕರ ಸ್ಥಾನ 4) ಮಗುವಿನ ಸೈಕಾಲಜಿ.  ಆದರೆ ಈ ಪ್ರಶ್ನೆ ಮಹಿಳೆಯರ ವಿರುದ್ಧವಾಗಿದೆ ಮತ್ತು ಸ್ತ್ರೀನಿಂದಕವಾಗಿದೆ. ಮಹಿಳಾ ಸ್ವಾತಂತ್ರ್ಯದಿಂದಲೇ ಮನೆಯಲ್ಲಿ, ಮಕ್ಕಳಲ್ಲಿ ಅಶಿಸ್ತು ಮೂಡುತ್ತಿದೆ ಎಂದು ಸಾರುವ ಪ್ರಯತ್ನವಾಗಿದೆ ಎಂಬುದು ಸದ್ಯದ ಆರೋಪ. ಇಡೀ ಪ್ರಶ್ನೆ ಪತ್ರಿಕೆಯನ್ನು ಶೇರ್​ ಮಾಡಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಇದು ನಂಬಲು ಸಾಧ್ಯವಿಲ್ಲ ! ಇಂಥ ಅಸಂಬದ್ಧ ವಿಚಾರಗಳನ್ನೆಲ್ಲ ಮಕ್ಕಳಿಗೆ ಕಲಿಸಲಾಗುತ್ತಿದೆಯೇ? ಬಿಜೆಪಿ ಸರ್ಕಾರದಕ್ಕೆ ಮಹಿಳೆಯರ ಮೇಲಿರುವ ವಿಮುಖ ದೃಷ್ಟಿಕೋನವನ್ನು ಈ ಪ್ರಶ್ನೆ ಸ್ಪಷ್ಟವಾಗಿ ತೋರಿಸುತ್ತಿದೆ. ಅದಿಲ್ಲದೆ ಇದ್ದರೆ ಸಿಬಿಎಸ್​ಇ ಪ್ರಶ್ನೆ ಪತ್ರಿಕೆಯಲ್ಲಿ ಇಂಥ ವಿಷಯಗಳು ಯಾಕೆ ಬರುತ್ತಿತ್ತು ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಟ್ರೆಂಡ್ ಆಗುತ್ತಿದೆ #CBSEinsultswomen   ಸಿಬಿಎಸ್​ಇ ಪ್ರಶ್ನೆ ಪತ್ರಿಕೆಯ ಪ್ಯಾರಾಗ್ರಾಫ್​​ಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ #CBSEinsultswomen ಎಂಬ ಹ್ಯಾಷ್​ಟ್ಯಾಗ್​ ವಿಪರೀತ ವೈರಲ್ ಆಗುತ್ತಿದೆ. ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಸ್ತ್ರೀದ್ವೇಷ ಮತ್ತು ಪ್ರತಿಗಾಮಿ ಅಭಿಪ್ರಾಯಗಳನ್ನು ಬಿತ್ತುತ್ತಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಅಸಹ್ಯ ಎಂದಿದ್ದಾರೆ. ಬಿಜೆಪಿ ಮತ್ತು ಆರ್​ಎಸ್​ಎಸ್​ ವಿರುದ್ಧ ಕಿಡಿಕಾರಿದ್ದಾರೆ. ಈ ಬೆನ್ನಲ್ಲೇ ಸಿಬಿಎಸ್​ಇ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ, ಸಿಬಿಎಸ್​ಇ 10ನೇ ತರಗತಿ ಇಂಗ್ಲಿಷ್​ ಪತ್ರಿಕೆಯಲ್ಲಿ ಇರುವ ಪ್ರಸ್ತುತ ಪ್ಯಾಸೇಜ್​ಗೆ ಗರಿಷ್ಠ ಮಟ್ಟದಲ್ಲಿ ಮಿಶ್ರಣ ಪ್ರತಿಕ್ರಿಯೆ ಬಂದಿದೆ. ಸಂಬಂಧಪಟ್ಟ ವಿಷಯ ತಜ್ಞರ ಗಮನಕ್ಕೂ ಇದು ಬಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಾವಣಗೆರೆಯ ನವೋದಯ ಶಾಲೆಯ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು, 4 ಕೊಠಡಿಗಳು ಸೀಲ್‌ಡೌನ್

Published On - 12:01 pm, Mon, 13 December 21