Children’s Day 2024 : ಮುಗ್ಧ ಮನಸ್ಸಿನ ಮಕ್ಕಳಿಗೆ ಈ ರೀತಿ ಶುಭಾಶಯ ಕೋರಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 11, 2024 | 11:58 AM

ಮುದ್ದು ಮಕ್ಕಳ ಮಾತು, ಆಟ ತುಂಟಾಟವನ್ನು ನೋಡುವುದೇ ಚಂದ. ಈ ಮಕ್ಕಳ ಜೊತೆಗೆ ಇದ್ದರೇ ಮನಸ್ಸಿನ ನೋವುಗಳೆಲ್ಲವೂ ದೂರವಾಗುತ್ತದೆ. ಹೀಗಾಗಿ ಪುಟಾಣಿ ಮಕ್ಕಳಿಗೆ ಮನಸ್ಸಿನ ನೋವನ್ನು ಮರೆಸಿ ಎಲ್ಲರ ಮುಖದಲ್ಲಿ ನಗು ತರಿಸುವ ಶಕ್ತಿಯಿದೆ. ಮುಗ್ಧ ಹಾಗೂ ನಿಷ್ಕಲ್ಮಷ ಮಕ್ಕಳಿಗಾಗಿ ಮೀಸಲಿರುವ ದಿನವೇ ನವೆಂಬರ್ 14. ಮಕ್ಕಳ ದಿನಾಚರಣೆಯಂದು ವ್ಯಾಟ್ಸಾಪ್‌, ಫೇಸ್‌ಬುಕ್‌, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಲು ಆಕರ್ಷಕ ಸಂದೇಶಗಳು ಇಲ್ಲಿದೆ.

Childrens Day 2024 : ಮುಗ್ಧ ಮನಸ್ಸಿನ ಮಕ್ಕಳಿಗೆ ಈ ರೀತಿ ಶುಭಾಶಯ ಕೋರಿ
ಸಾಂದರ್ಭಿಕ ಚಿತ್ರ
Follow us on

ಮಕ್ಕಳು ದೇವರಿಗೆ ಸಮಾನ. ಈ ಮಕ್ಕಳಲ್ಲಿ ಯಾವುದೇ ದ್ವೇಷ, ಅಸೂಯೆ ಭಾವನೆಯಿಲ್ಲ. ಆ ಪುಟಾಣಿ ಮಕ್ಕಳಲ್ಲಿರುವ ನಿಷ್ಕಲ್ಮಶವಾದ ನಗು ಹಾಗೂ ಮುಗ್ಧತೆಯನ್ನು ದೊಡ್ಡವರಲ್ಲಿ ಕಾಣಲು ಸಾಧ್ಯವಿಲ್ಲ. ನವೆಂಬರ್ 14 ಮಕ್ಕಳಿಗೆ ಸಂಭ್ರಮದ ದಿನ, ನೆಹರುರವರ ಜನ್ಮ ದಿನ. ಮಕ್ಕಳೊಂದಿಗೆ ಮಗುವಾಗುತ್ತಿದ್ದ ಮತ್ತು ಮಕ್ಕಳ ಬಗ್ಗೆ ಅಪಾರ ಒಲವಿದ್ದ ನೆಹರುರವರು ಅತ್ಯಂತ ಸಂತೋಷದಿಂದ ತಮ್ಮ ಜನ್ಮದಿನವನ್ನು ‘ಮಕ್ಕಳ ದಿನಾಚರಣೆ’ಯೆಂದು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಒಂದೊಳ್ಳೆ ಸಂದೇಶಗಳ ಮೂಲಕ ಶುಭಾಶಯ ಕೋರಬಹುದು.

  • ಮಕ್ಕಳು ಉದ್ಯಾನವನದಲ್ಲಿರುವ ಮೊಗ್ಗುಗಳಂತೆ. ಅವರನ್ನು ತುಂಬಾ ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ ಪೋಷಿಸಬೇಕು. ಅವರೇ ನಮ್ಮ ಮುಂದಿನ ಪ್ರಜೆಗಳು. ಮಕ್ಕಳ ದಿನಾಚರಣೆಯ ಶುಭಾಶಯಗಳು.
  • ಮಕ್ಕಳು ನಮ್ಮ ಉಜ್ವಲ ನಾಳೆಯ ಭರವಸೆಗಳನ್ನು ಹಾಗೂ ನಮ್ಮ ಸಂತೋಷದ ಭವಿಷ್ಯದ ಕನಸುಗಳನ್ನು ಹೊತ್ತಿದ್ದಾರೆ. ಪ್ರಪಂಚದಾದ್ಯಂತ ಮಕ್ಕಳಿಗೆ ಅತ್ಯಂತ ಆನಂದದಾಯಕ ದಿನವಾಗಲಿ. ಮಕ್ಕಳ ದಿನಾಚರಣೆಯ ಶುಭಾಶಯಗಳು.
  • ಪ್ರತಿಯೊಂದು ಮಗುವೂ ವಿಭಿನ್ನ ರೀತಿಯ ಹೂವುಗಳು ಮತ್ತು ಈ ಹೂವುಗಳೆಲ್ಲಾ ಒಟ್ಟಾಗಿ ಈ ಜಗತ್ತನ್ನು ಸುಂದರವಾದ ಉದ್ಯಾನವನ್ನಾಗಿ ಮಾಡುತ್ತಾರೆ. ಮಕ್ಕಳ ದಿನಾಚರಣೆಯ ಶುಭಾಶಯಗಳು.
  • ನಮ್ಮ ಮಕ್ಕಳ ಮುಗ್ಧತೆ ಮತ್ತು ಪರಿಶುದ್ಧತೆಯನ್ನು ಆಚರಿಸೋಣ. ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಮಕ್ಕಳು ಅಮೂಲ್ಯ ರತ್ನಗಳು. ಮಕ್ಕಳ ದಿನಾಚರಣೆಯ ಶುಭಾಶಯಗಳು.
  • ಮಕ್ಕಳು ಉಜ್ವಲ ಭವಿಷ್ಯ ಮತ್ತು ನಾಳೆಯ ಕನಸನ್ನು ಹೊತ್ತು ಸಾಗುತ್ತಾರೆ. ನಿಮ್ಮೆಲ್ಲಾ ಕನಸುಗಳು ನನಸಾಗಲು ನಾನು ಜೊತೆಗಿರುತ್ತೇನೆ. ಮಕ್ಕಳ ದಿನಾಚರಣೆಯ ಶುಭಾಶಯಗಳು.
  • ಎಲ್ಲಾ ಪುಟಾಣಿಗಳಿಗೂ ಸಂತೋಷ, ನಗು ಮತ್ತು ಅದ್ಭುತ ವ್ಯಕ್ತಿಗಳನ್ನಾಗಿ ರೂಪಿಸುವ ವಿಷಯಗಳಿಂದ ತುಂಬಿದ ದಿನವಾಗಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ