ರಾಜ್ಯದ ನೂತನ 9 ವಿಶ್ವವಿದ್ಯಾಲಯಗಳನ್ನು ವರ್ಚ್ಯುವಲ್ ಮೂಲಕ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
ನಾವು ಐಐಟಿ ಮಾದರಿಯಲ್ಲಿ ಕೆಐಟಿ ಮಾಡುತ್ತೇವೆ. ನಮ್ಮ ವಿದ್ಯಾರ್ಥಿಗಳು ಐಐಟಿ ಮುಂದೆ ನಿಲ್ಲೋದು ಬೇಡ. ನಮ್ಮ ಕೆಐಟಿಗಳು, ಐಐಟಿ ಮಾದರಿಯಲ್ಲಿ ನಿರ್ಮಾಣವಾಗಬೇಕು ಎಂಬುದು ನಮ್ಮ ಉದ್ದೇಶ. ಈ ಹಿನ್ನೆಲೆ ವಿಶ್ವದ ಬೇರೆ ಬೇರೆ ವಿಶ್ವವಿದ್ಯಾಲಯಗಳ ಜೊತೆ ನಾವು ಒಡಂಬಡಿಕೆ ಮಾಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತಿಳಿಸಿದರು.
ಬೆಂಗಳೂರು: ನಮ್ಮ ಸರ್ಕಾರ ಶಿಕ್ಷಣ (Education) ಹಾಗೂ ಆರೋಗ್ಯಕ್ಕೆ (Health) ಹೆಚ್ಚು ಒತ್ತು ನೀಡಿದೆ. ಬಜೆಟ್ (Budget) ನಲ್ಲಿ ಕೂಡ ಶೇ 12 ರಷ್ಟು ಶಿಕ್ಷಣ ಮತ್ತು ಆರೋಗ್ಯಕ್ಕೆ ಮೀಸಲಾಗಿಟ್ಟಿದ್ದೇವೆ. ಸಚಿವ ಅಶ್ವತ್ಥ್ ನಾರಾಯಣ (Ashwath Narayan) ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆ ಮೇಲಿರುತ್ತದೆ. ಒಬ್ಬ ಮುತ್ಸದ್ಧಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಅಶ್ವತ್ಥ್ ಉತ್ತಮ ಕೆಲಸ ಮಾಡಿದ್ದಾರೆ. ಅಶ್ವತ್ಥ್ ಕಾರಿಗೆ ಫಸ್ಟ್, ಸೆಕೆಂಡ್ ಗೇರ್ ಇಲ್ಲ, ಏನಿದ್ದರೂ ಟಾಪ್ ಗೇರ್ ಎಂದು ಸಚಿವ ಅಶ್ವತ್ಥ್ ನಾರಾಯಣ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹಾಡಿಹೊಗಳಿದರು.
ಬೆಂಗಳೂರಿನ ಜ್ಞಾನಜ್ಯೋತಿ ವಿಶ್ವವಿದ್ಯಾನಿಲಯದಿಂದ ಸಭಾಂಗಣದಿಂದ ವರ್ಚ್ಯುವಲ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯಾದ್ಯಂತ 9 ವಿಶ್ವವಿದ್ಯಾಲಯಗಳನ್ನು ಉದ್ಘಾಟಿಸಿದರು. ಮತ್ತು 7 ಇಂಜಿನಿಯರ್ ಕಾಲೇಜುಗಳ ಉನ್ನತೀಕರಣಕ್ಕೆ ಚಾಲನೆ ನೀಡಿದರು. ಚಾಮರಾಜನಗರ, ಮಂಡ್ಯ, ಬೀದರ್, ಕೊಡಗು, ಕೊಪ್ಪಳ, ಬಾಗಲಕೋಟೆ, ಹಾವೇರಿ, ಕೋಲಾರ ಮತ್ತು ರಾಯಚೂರಲ್ಲಿ ನೂತನ ವಿಶ್ವವಿದ್ಯಾಲಯಗಳು ತೆಲೆ ಎತ್ತಿವೆ.
ಇದನ್ನೂ ಓದಿ: 30 ಸೆಕೆಂಡುಗಳಲ್ಲಿ ಹಾಲಿನ ಕಲಬೆರಕೆ ಪತ್ತೆ ಹಚ್ಚುವ ಸಾಧನ; ಐಐಟಿ ಮದ್ರಾಸ್ ಸಂಶೋಧಕರು ಆವಿಷ್ಕಾರ
ಕಾರ್ಯಕ್ರಮದಲ್ಲಿ ಸೇರಿದ ವಿದ್ಯಾರ್ಥಿಗಳು ಜೋಷ್ ನೋಡಿ ಇದು ನಮ್ಮ ಯುವಕರು, ಮತ್ತು ಇದು ನಮ್ಮ ಯುವಕರ ಶಕ್ತಿ. ಕರ್ನಾಟಕದ ಭವ್ಯ ಭವಿಷ್ಯ ಬರೆಯುವ ದಿನ ಎಂದು ಸಿಎಂ ಬೊಮ್ಮಾಯಿ ಖುಷಿಪಟ್ಟರು.
ವಿಶ್ವವಿದ್ಯಾಲಯಗಳನ್ನು ಹೊಸದು ಮಾಡಿದ ಹಾಗೆ, ನಾವು ಐಐಟಿ ಮಾದರಿಯಲ್ಲಿ ಕೆಐಟಿ ಮಾಡುತ್ತೇವೆ. ನಮ್ಮ ವಿದ್ಯಾರ್ಥಿಗಳು ಐಐಟಿ ಮುಂದೆ ನಿಲ್ಲೋದು ಬೇಡ. ನಮ್ಮ ಕೆಐಟಿಗಳು, ಐಐಟಿ ಮಾದರಿಯಲ್ಲಿ ನಿರ್ಮಾಣವಾಗಬೇಕು ಎಂಬುದು ನಮ್ಮ ಉದ್ದೇಶ. ಈ ಹಿನ್ನೆಲೆ ವಿಶ್ವದ ಬೇರೆ ಬೇರೆ ವಿಶ್ವವಿದ್ಯಾಲಯಗಳ ಜೊತೆ ನಾವು ಒಡಂಬಡಿಕೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು. ಇನ್ನು ಕಾರ್ಯಕ್ರಮದಲ್ಲಿ ಸಚಿವರಾದ ಅಶ್ವತ್ಥ್ ನಾರಾಯಣ, ಮುರುಗೇಶ್ ನಿರಾಣಿ ಉಪಸ್ಥಿತರಿದ್ದರು.
ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಹೆಸರು ನಾಮಕರಣ
ಚಾಮರಾಜನಗರ ವಿಶ್ವವಿದ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಪುಟ್ಟರಂಗಶೆಟ್ಟಿ , ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ನೂತನ ಉಪಕುಲಪತಿ ಪ್ರೊ ಗಂಗಾಧರ್ ಮೊದಲಾದವರು ಭಾಗಿಯಾಗಿದ್ದರು. ಚಾಮರಾಜನಗರ ನೂತನ ವಿ.ವಿ.ಗೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೆಸರು ನಾಮಕರಣ ಮಾಡಬೇಕು. ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ನೂತನ ವಿ.ವಿ. ಉದ್ಘಾಟಿಸಿಬೇಕಿತ್ತು ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 am, Tue, 28 March 23