ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (COMEDK) ಇಂದು ಪದವಿಪೂರ್ವ ಪ್ರವೇಶ ಪರೀಕ್ಷೆ 2023 (UGET) ಪರೀಕ್ಷೆ 2023 ರ ನೋಂದಣಿ ಪ್ರಾರಂಭವಾಗಿದೆ. ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 24. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್-comedk.org ನಲ್ಲಿ ನೋಂದಾಯಿಸಿಕೊಳ್ಳಬಹುದು. ಕಾಮೆಡ್ ಕೆ ಯುಜಿಎಟಿ (COMEDK UGET) 2023 ಪರೀಕ್ಷೆ ಮೇ 28 ರಂದು ನಡೆಯಲಿದೆ. ಪರೀಕ್ಷೆಯ ಜೊತೆಗೆ ಆನ್‌ಲೈನ್ ಕೌನ್ಸೆಲಿಂಗ್ ಕೂಡ ಇರುತ್ತದೆ.
ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಭಾರತದ ಉತ್ತಮ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಪಡೆಯಲು ಬರೆಯುತ್ತಾರೆ. ಪರೀಕ್ಷೆಯ ಪ್ರವೇಶ ಪತ್ರವನ್ನು ಮೇ 18 ರಂದು ಬಿಡುಗಡೆ ಮಾಡಲಾಗುವುದು ಎಂದು ಅಧಿಕೃತ ಸೂಚನೆ ತಿಳಿಸಿದೆ.
ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಏಪ್ರಿಲ್ 26 ಮತ್ತು 29 ರ ನಡುವೆ ತಿದ್ದುಪಡಿ ಮಾಡಲು ಅವಕಾಶವಿದೆ. ತಾತ್ಕಾಲಿಕ ಉತ್ತರ ಕೀಯನ್ನು ಮೇ 30 ರಂದು ಬಿಡುಗಡೆ ಮಾಡಲಾಗುತ್ತದೆ ಮತ್ತು ಅಂತಿಮ ಉತ್ತರ ಕೀ ಜೂನ್ 6 ರಂದು ಲಭ್ಯವಿರುತ್ತದೆ. COMEDK 2023 ಫಲಿತಾಂಶವನ್ನು ಜೂನ್ 10 ರಂದು ಘೋಷಿಸಲಾಗುತ್ತದೆ.
ಅಧಿಕೃತ ಸೂಚನೆಯ ಪ್ರಕಾರ, ಒಮ್ಮೆ ಅರ್ಜಿ ನಮೂನೆಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದ ನಂತರ, ಅರ್ಜಿ ನಮೂನೆಯಲ್ಲಿ ನಮೂದಿಸಿದ ಡೇಟಾದಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ. ಅಭ್ಯರ್ಥಿಯು ಒಂದೇ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು, ಹಲವು ಅರ್ಜಿಗಳನ್ನು ಭರ್ತಿ ಮಾಡಿದರೆ ಅದನ್ನು ಪರಿಗಣಿಸುವುದಿಲ್ಲ. ಅಭ್ಯರ್ಥಿಯನ್ನು ಅನರ್ಹ ಎಂದು ಪರಿಗಣಿಸುವ ಸಾಧ್ಯತೆಯೂ ಇದೆ. ಅಭ್ಯರ್ಥಿ ಸರಿಯಾದ ಮಾಹಿತಿ ನೀಡದೆ ತಪ್ಪು ಮಾಹಿತಿ ನೀಡಿದರೆ ಅಥವಾ ಅಪೂರ್ಣ ಮಾಹಿತಿಯನ್ನು ನೀಡಿದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.