CUET UG 2023 ದಾಖಲಾತಿಯಲ್ಲಿ ಶೇ.41 ರಷ್ಟು ಹೆಚ್ಚಳ; 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ನೋಂದಣಿ- ಎಂ ಜಗದೀಶ್ ಕುಮಾರ್
ಯುಜಿಸಿ ಅಧ್ಯಕ್ಷ ಎಂ. ಜಗದೇಶ್ ಕುಮಾರ್ ಮಾತನಾಡಿ, 2023 ರ ಸಿಯುಇಟಿ ಯುಜಿ ಪರೀಕ್ಷೆಗೆ ಒಟ್ಟು 16.85 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ, ಕಳೆದ ವರ್ಷಕ್ಕೆ ಹೋಲಿಸಿದರೆ ನೋಂದಣಿ ಸಂಖ್ಯೆ 41% ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆಗೆ (CUET UG 2023) ಒಟ್ಟು 16.8 ಲಕ್ಷ ಅಭ್ಯರ್ಥಿಗಳು (Candidates) ಅರ್ಜಿ ಸಲ್ಲಿಸಿದ್ದಾರೆ, ಇದು ಕಳೆದ ವರ್ಷಕ್ಕಿಂತ ಸುಮಾರು 4 ಲಕ್ಷ ಹೆಚ್ಚಾಗಿದೆ. 2022 ರಲ್ಲಿ, CUET UG ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗೆ (National Level Entrance Exam) ಒಟ್ಟು 12.50 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ಅಧ್ಯಕ್ಷ ಎಂ. ಜಗದೇಶ್ ಕುಮಾರ್ (M. Jagadesh Kumar) ಅಧಿಕೃತ ಟ್ವೀಟ್ ಪ್ರಕಾರ, ಒಟ್ಟು 16.85 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 13.995 ಲಕ್ಷ ವಿದ್ಯಾರ್ಥಿಗಳು ಅರ್ಜಿ ಶುಲ್ಕ ಪಾವತಿಸಿ ಅರ್ಜಿ ನಮೂನೆ ಸಲ್ಲಿಸಿದ್ದಾರೆ.
CUET UG 2023 ರಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಪರೀಕ್ಷೆ ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ 41% ಹೆಚ್ಚಳವಾಗಿದೆ ಎಂಬುದನ್ನು UGC ಅಧ್ಯಕ್ಷರು ಹೈಲೈಟ್ ಮಾಡಿದ್ದಾರೆ.
ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC), ಅಧ್ಯಕ್ಷ, ಎಂ. ಜಗದೇಶ್ ಕುಮಾರ್ ಅವರು ಮಂಗಳವಾರ, ಏಪ್ರಿಲ್ 4, 2023 ರಂದು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ CUET UG 2023 ರಲ್ಲಿ 16.8 ಲಕ್ಷ ನೋಂದಣಿಯಲ್ಲಿ 13.995 ಲಕ್ಷ ವಿದ್ಯಾರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಕಳೆದ ವರ್ಷ 12.50 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರೆ, 9.9 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.
In 2022, UGC’s debut year of CUET-UG introduction, 12.50 lakh students registered, and 9.9 lakh students submitted their applications. In 2023 CUET-UG, a total of 16.85 lakh students registered.
— Mamidala Jagadesh Kumar (@mamidala90) April 4, 2023
CUET UG 2023
CUET UG ಅಪ್ಲಿಕೇಶನ್ ಫೆಬ್ರವರಿ 9 ರಿಂದ ಮಾರ್ಚ್ 30, 2023 ರವರೆಗೆ ಲಭ್ಯವಿತ್ತು. ಪರೀಕ್ಷೆಯು ಮೇ 21 ರಂದು ಪ್ರಾರಂಭವಾಗಲಿದೆ ಮತ್ತು ಮೇ ಎರಡನೇ ವಾರದಲ್ಲಿ ಪ್ರವೇಶ ಕಾರ್ಡ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಶಿಕ್ಷಣ ಸಚಿವಾಲಯ, (MoE) ಅಡಿಯಲ್ಲಿ2023-24 ರ ಶೈಕ್ಷಣಿಕ ಅಧಿವೇಶನಕ್ಕಾಗಿ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ನೀಡಲಾಗುವ ಯುಜಿ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯನ್ನು (ಸಿಯುಇಟಿ) ಪರಿಚಯಿಸಲಾಗುತ್ತಿದೆ.
ಇದನ್ನೂ ಓದಿ: ಈ ಶಾಲೆಯಲ್ಲಿ ಬೇಸಗೆ ರಜೆಯಲ್ಲಿ ಮಕ್ಕಳಿಗಲ್ಲ, ಪಾಲಕರಿಗೆ ಅಸೈನ್ಮೆಂಟ್! ಮತ್ತೆ ವೈರಲ್ ಆಗ್ತಿದೆ ಹಳೆಯ ಸಂದೇಶ
ಸಾಮಾನ್ಯ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆ (CUET) ದೇಶಾದ್ಯಂತ ಅಭ್ಯರ್ಥಿಗಳಿಗೆ ಸಾಮಾನ್ಯ ವೇದಿಕೆ ಮತ್ತು ಸಮಾನ ಅವಕಾಶಗಳನ್ನು ಒದಗಿಸುತ್ತದೆ. CUET 2024 ರ ಸುಮಾರಿಗೆ, 231 ಭಾಗವಹಿಸುವ ವಿಶ್ವವಿದ್ಯಾಲಯಗಳು ಈ ಪರೀಕ್ಷೆಯ ಮೂಲಕ UG ಕಾರ್ಯಕ್ರಮಗಳಿಗೆ ಪ್ರವೇಶವನ್ನು ನೀಡುತ್ತವೆ. CUET 2023 ರಲ್ಲಿ, 44 ಕೇಂದ್ರೀಯ ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿವೆ ಮತ್ತು UG ಕೋರ್ಸ್‌ಗಳಲ್ಲಿ ಪ್ರವೇಶವನ್ನು ನೀಡುತ್ತಿವೆ.