ದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮುಂದಿನ ವಾರ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ ಯುಜಿ 2023) ಫಲಿತಾಂಶವನ್ನು ಪ್ರಕಟಿಸಲಿದೆ. ಈ ಹಿಂದೆ ಆಗಸ್ಟ್ 2ನೇ ವಾರದಲ್ಲಿ ಪ್ರಕಟವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಜುಲೈ 15 ರ ಶನಿವಾರದೊಳಗೆ CUET UG ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು UGC ಅಧ್ಯಕ್ಷ ಎಂ ಜಗದೇಶ್ ಕುಮಾರ್ ತಿಳಿಸಿದ್ದಾರೆ. ಅಭ್ಯರ್ಥಿಗಳು ತಮ್ಮ CUET UG 2023 ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗಳಲ್ಲಿ (cuet.samarth.ac.in, nta.ac.in) ಪರಿಶೀಲಿಸಬಹುದು.
CUET UG 2023 ಸ್ಕೋರ್ಕಾರ್ಡ್ನ್ನು ಡೌನ್‌ಲೋಡ್ ಮಾಡಲು (cuet.samarth.ac.in, nta.ac.in) ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾದರೆ ತಮ್ಮ ಪ್ರಮುಖ ದಾಖಲೆಗಳನ್ನು ನೀಡಬೇಕಾಗುತ್ತದೆ. ಅರ್ಜಿ ಸಂಖ್ಯೆ, ಹುಟ್ಟಿದ ದಿನಾಂಕ ಕಡ್ಡಾಯವಾಗಿ ಬೇಕಾಗುತ್ತದೆ, ಡೌನ್‌ಲೋಡ್ ಮಾಡಲು, ಪ್ರಿಂಟ್ ಔಟ್ ತೆಗೆಯಲು ಇದರಲ್ಲಿ ಆಪ್ಷನ್ ನೀಡಿರುತ್ತಾರೆ.
ಇದನ್ನೂ ಓದಿ: CUET UG 2023 Results: ಜುಲೈ 15ರೊಳಗೆ CUET UG ಫಲಿತಾಂಶ, ಪರಿಷ್ಕೃತ ಕೀ ಉತ್ತರ ಬಿಡುಗಡೆ
1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ- cuet.samarth.ac.in
2. CUET UG 2023 ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ.
3. ಲಾಗ್-ಇನ್ ದಾಖಲೆ ಬಳಸಿ, ಅಪ್ಲಿಕೇಶನ್ ಸಂಖ್ಯೆ, ಹುಟ್ಟಿದ ದಿನಾಂಕ ಕಡ್ಡಾಯವಾಗಿ ಬೇಕು.
4. ಡೌನ್‌ಲೋಡ್ ಮಾಡುವ ಆಪ್ಷನ್ CUET UG 2023 ಸ್ಕೋರ್‌ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ.
5. CUET ಸ್ಕೋರ್‌ಕಾರ್ಡ್ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಈ ಹಿಂದೆ NTA, CUET UG 2023 ಪರೀಕ್ಷೆಯ ಕೀ ಉತ್ತರ ಬಿಡುಗಡೆ ಮಾಡಿತು ಮತ್ತು CUET UG ಕೀ ಉತ್ತರಕ್ಕೆ ಅಭ್ಯರ್ಥಿಗಳಿಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸಲು ಅವಕಾಶವನ್ನು ಒದಗಿಸಿತು. CUET UG 2023 ಸ್ಕೋರ್‌ಕಾರ್ಡ್ cuet.samarth.ac.in, nta.ac.in ನಲ್ಲಿ ಲಭ್ಯವಿರುತ್ತದೆ. CUET ಅಂಕಪಟ್ಟಿಯು ಅಭ್ಯರ್ಥಿಯ ಹೆಸರು, ಹುಟ್ಟಿದ ದಿನಾಂಕ, ರೋಲ್ ಸಂಖ್ಯೆ, ಪರೀಕ್ಷೆಯ ಪತ್ರಿಕೆಗಳು, ಅಂಕಗಳು, ಶೇಕಡಾವಾರುಗಳನ್ನು ಒಳಗೊಂಡಿರುತ್ತದೆ.
ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Sat, 8 July 23