AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CUET UG 2023 Results: ಜುಲೈ 15ರೊಳಗೆ CUET UG ಫಲಿತಾಂಶ, ಪರಿಷ್ಕೃತ ಕೀ ಉತ್ತರ ಬಿಡುಗಡೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ-ಪದವಿಪೂರ್ವ (CUET UG) ಪರೀಕ್ಷೆಗೆ ಸಂಬಂಧಸಿದಂತೆ ಪರಿಷ್ಕೃತ ತಾತ್ಕಾಲಿಕ ಕೀ ಉತ್ತರವನ್ನು ಬಿಡುಗಡೆ ಮಾಡಿದೆ.

CUET UG 2023 Results: ಜುಲೈ 15ರೊಳಗೆ CUET UG ಫಲಿತಾಂಶ, ಪರಿಷ್ಕೃತ ಕೀ ಉತ್ತರ ಬಿಡುಗಡೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Jul 03, 2023 | 10:59 AM

Share

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ-ಪದವಿಪೂರ್ವ (CUET UG) ಪರೀಕ್ಷೆಗೆ ಸಂಬಂಧಿಸಿದಂತೆ ಪರಿಷ್ಕೃತ ತಾತ್ಕಾಲಿಕ ಕೀ ಉತ್ತರವನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://cuet.samarth.ac.in/ ಗೆ ಭೇಟಿ ನೀಡುವ ಮೂಲಕ CUET UG ಪರಿಷ್ಕೃತ ಕೀ ಉತ್ತರ 2023 ಅನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. CUET (UG) – 2023ರ ಪರಿಷ್ಕೃತ ತಾತ್ಕಾಲಿಕ ಕೀ ಉತ್ತರ ಲಭ್ಯವಿದೆ.

ಈ ಹಿಂದೆ, NTA ಜೂನ್ 29, 2023 ರಂದು CUET UG ಕೀ ಉತ್ತರ ಬಿಡುಗಡೆ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಪರೀಕ್ಷಾ ಸಂಸ್ಥೆಯು 155 ಪ್ರಶ್ನೆಗಳನ್ನು ಕೈಬಿಟ್ಟಿದೆ. ಈ ವರ್ಷ, ಕಾಮನ್ ಯೂನಿವರ್ಸಿಟಿ ಪ್ರವೇಶ ಪರೀಕ್ಷೆ (CUET UG 2023) ಮೇ 21 ರಿಂದ ಜೂನ್ 23 ರವರೆಗೆ ನಡೆಯಿತು. ಸುಮಾರು 14,90,000 ಅಭ್ಯರ್ಥಿಗಳಿಗೆ ಭಾರತದಾದ್ಯಂತ 387 ನಗರಗಳು ಮತ್ತು 24 ನಗರಗಳಲ್ಲಿ ಒಂಬತ್ತು ಹಂತಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು.

CUET UG 2023 ಪರಿಷ್ಕೃತ ಉತ್ತರ ಕೀ: ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ಅಧಿಕೃತ ವೆಬ್‌ಸೈಟ್ cuet.samarth.ac.in ಗೆ ಭೇಟಿ ನೀಡಿ.

ಮುಖಪುಟದಲ್ಲಿ, ‘ಲಾಗಿನ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಅಪ್ಲಿಕೇಶನ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಪಿನ್‌ನಂತಹ ಲಾಗಿನ್ ದಾಖಲೆಯನ್ನು ನಮೂದಿಸಿ.

ನಿಮ್ಮ CUET UG ಪರಿಷ್ಕೃತ ಕೀ ಉತ್ತರ 2023 ನಿಮ್ಮ ಪರದೆಯಲ್ಲಿ ಕಾಣುತ್ತದೆ.

CUET ಕೀ ಉತ್ತರ 2023ನ್ನು ಡೌನ್‌ಲೋಡ್ ಮಾಡಿ ಮತ್ತು ದಾಖಲೆಗಾಗಿ ಒಂದು ಕಾಪಿ ಪ್ರಿಂಟ್​​ ತೆಗೆದುಕೊಳ್ಳಬಹುದು.

ಇದನ್ನೂ ಓದಿ: CUET UG 2023 Answer Key: ಆಕ್ಷೇಪಣೆ ಸಲ್ಲಿಸಲು ಇಂದು ಕೊನೆಯ ದಿನಾಂಕ

CUET UG 2023 ಉತ್ತರದ ಪ್ರಮುಖ ಆಕ್ಷೇಪಣೆ ದಿನಾಂಕಗಳು, ಶುಲ್ಕಗಳು

ಇನ್ನೂ ಕೀ ಉತ್ತರದ ಬಗ್ಗೆ ತೃಪ್ತಿ ಇಲ್ಲವೆಂದರೆ ಅಭ್ಯರ್ಥಿಗಳು ಪ್ರತಿ ಪ್ರಶ್ನೆಗೆ 200 ರೂಪಾಯಿ ಶುಲ್ಕವನ್ನು ಪಾವತಿಸುವ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಯಿತು. CUET UG ಕೀ ಉತ್ತರದ ವಿರುದ್ಧ ಆಕ್ಷೇಪಣೆಗಳನ್ನು ಎತ್ತುವ ಕೊನೆಯ ದಿನಾಂಕ ಜುಲೈ 1, 2023. ಸಂಸ್ಕರಣಾ ಶುಲ್ಕವನ್ನು ಸ್ವೀಕರಿಸದೆ ಯಾವುದೇ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಬೇರೆ ಯಾವುದೇ ಮಾಧ್ಯಮದ ಮೂಲಕ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.

ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:53 am, Mon, 3 July 23