ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಆನ್‌ಲೈನ್ ಮೋಡ್‌ನಲ್ಲಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET UG) 2023 ನೋಂದಣಿಯನ್ನು ಪ್ರಾರಂಭಿಸಿದೆ. ಅಭ್ಯರ್ಥಿಗಳು CUET UG ಯ ಅರ್ಜಿ ನಮೂನೆಯನ್ನು ಮಾರ್ಚ್ 12, 2023 ರವರೆಗೆ cuet.samarth.ac.in ನಲ್ಲಿ ಭರ್ತಿ ಮಾಡಬಹುದು. ಈ ಬಾರಿ, NTA CUET UG 2023 ಪರೀಕ್ಷೆಯ ಸ್ವರೂಪ, ನೋಂದಣಿ ಶುಲ್ಕಗಳು ಮತ್ತು ವಿದೇಶಿ ಪರೀಕ್ಷಾ ಕೇಂದ್ರಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಪ್ರಕಟಿಸಿದೆ. ಈ ಹಿಂದೆ, 13 ವಿದೇಶಿ ಕೇಂದ್ರಗಳಲ್ಲಿ CUET ಯುಜಿ ನಡೆಯುತಿತ್ತು, ಆದರೆ ಈ ವರ್ಷ (2023) ಅದನ್ನು 24 ಕ್ಕೆ ಹೆಚ್ಚಿಸಲಾಗಿದೆ.
ವೇಳಾಪಟ್ಟಿಯ ಪ್ರಕಾರ, CUET UG 2023 ಮೇ 21 ರಿಂದ 31 ರವರೆಗೆ ನಡೆಯಲಿದೆ. ಇದನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್‌ನಲ್ಲಿ 13 ಭಾಷೆಗಳಲ್ಲಿ ನಡೆಸಲಾಗುತ್ತದೆ – ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು.
ಸಿಟಿ ಕೋಡ್ | ದೇಶ | ನಗರ |
ZZ01 | ನೇಪಾಳ | ಭಾಗ್ಮತಿ |
ZZ02 | ಥೈಲ್ಯಾಂಡ್ | ಬ್ಯಾಂಗ್ಕಾಕ್ |
ZZ03 | ಬ್ರೆಜಿಲ್ | ಬ್ರೆಸಿಲಿಯಾ |
ZZ04 | ಸೌತ್ ಆಫ್ರಿಕಾ | ಕೇಪ್ ಟೌನ್ |
ZZ05 | ಶ್ರೀ ಲಂಕಾ | ಕೇೊಲಂಬೋ |
ZZ06 | ದೋಹ | ಕತಾರ್ |
ZZ07 | ಯುಎಇ | ದುಬಾಯ್ |
ZZ08 | ವಿಯೆಟ್ನಾಂ | ಹನೋಯಿ |
ZZ09 | ಹೊಂಗ್ ಕೊಂಗ್ | ಹೊಂಗ್ ಕೊಂಗ್ |
ZZ10 | ಇಂಡೋನೇಷ್ಯಾ | ಜಕಾರ್ತಾ |
ZZ11 | ಮಲೇಷ್ಯಾ | ಕೌಲಾ ಲಂಪುರ್ |
ZZ12 | ಕುವೈಟ್ ನಗರ | ಕುವೈಟ್ |
ZZ13 | ನೈಜೀರಿಯಾ | ಲಾಗೊಸ್ /ಅಬೂಜ |
ZZ14 | ಬಹರೇನ್ | ಮನಾಮ |
ZZ15 | ರಶಿಯಾ | ಮಾಸ್ಕೋ |
ZZ16 | ಓಮನ್ | ಮಸ್ಕಟ್ |
ZZ17 | ಕೆನಡಾ | ಒಟ್ಟಾವಾ |
ZZ18 | ಮಾರಿಷಸ್ | ರೆಡ್ಯೂಯಿತ್ |
ZZ19 | ಸೌದಿ ಅರೇಬಿಯಾ | ರಿಯಾದ್ ಪ್ರಾವಿನ್ಸ್ |
ZZ20 | ಯುಎಇ | ಶಾರ್ಜಾಹ್ |
ZZ21 | ಸಿಂಗಪೋರ್ | ಸಿಂಗಪೋರ್ |
ZZ22 | ಆಸ್ಟ್ರೇಲಿಯಾ | ಸಿಡ್ನಿ |
ZZ23 | ಆಸ್ಟ್ರಿಯಾ | ವಿಯೆನ್ನಾ |
ZZ24 | ಅಮೇರಿಕಾ | ವಾಷಿಂಗ್ಟನ್ ಡಿಸಿ |
CUET UG ಅರ್ಜಿ ನಮೂನೆ 2023 ಅನ್ನು ಭರ್ತಿ ಮಾಡುವಾಗ, ಅಭ್ಯರ್ಥಿಗಳು ಆದ್ಯತೆಯ ಕ್ರಮದಲ್ಲಿ ಎರಡು ನಗರಗಳನ್ನು ಆಯ್ಕೆ ಮಾಡಬೇಕಾಗುತ್ತದೆ. NTA ಯು ಆದ್ಯತೆಗೆ ಅನುಗುಣವಾಗಿ CUET ಕೇಂದ್ರಗಳನ್ನು ಹಂಚಲು ಪ್ರಯತ್ನಿಸುತ್ತದೆ. ಆದರೆ ಪರೀಕ್ಷಾ ಅಧಿಕಾರಿಗಳು CUET 2023 ರ ಪರೀಕ್ಷಾ ಕೇಂದ್ರವನ್ನು ಬದಲಾಯಿಸಬಹುದು ಅಥವಾ ರದ್ದುಗೊಳಿಸಬಹುದು. CUET UG 2023 ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಲು, ಈ ಹಂತಗಳನ್ನು ಅನುಸರಿಸಬೇಕು –
ಇದನ್ನೂ ಓದಿ: ಸಿಯುಇಟಿ ಪರೀಕ್ಷಾ ದಿನಾಂಕ 2023 ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Thu, 16 February 23