ಬಿಹಾರದ ದಿನಗೂಲಿಯ ಪುತ್ರ ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕಾಗಿ 2.5 ಕೋಟಿ ರೂ ಫೆಲೋಶಿಪ್ ಗಳಿಸಿದ ಕತೆಯಿದು!

| Updated By: ಸಾಧು ಶ್ರೀನಾಥ್​

Updated on: Jul 18, 2022 | 3:55 PM

ದಲಿತ ಸಮುದಾಯದವರಿಗೆ ಎಂದೇ ನಿವೃತ್ತ ಐಪಿಎಸ್ ಅಧಿಕಾರಿ ಜೆಕೆ ಸಿನ್ಹಾ ಸ್ಥಾಪಿಸಿದ ಶೋಷಿತ ಸಮುದಾಯದ ಕೇಂದ್ರದ ಸಿಬಿಎಸ್‌ಇ ಶಾಲೆಯಲ್ಲಿ ಪ್ರೇಮ್ ಕುಮಾರ್ 12ನೇ ತರಗತಿ ಪಾಸು ಮಾಡಿದ್ದಾರೆ. ಮುಂದೆ ಲಾಫಾ ಯೆಟ್ಟೆ ಕಾಲೇಜಿನಲ್ಲಿ, ಪ್ರೇಮ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳನ್ನು ಅಧ್ಯಯನ ಮಾಡಲು ಯೋಜಿಸಿದ್ದಾರೆ.

ಬಿಹಾರದ ದಿನಗೂಲಿಯ ಪುತ್ರ ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕಾಗಿ 2.5 ಕೋಟಿ ರೂ ಫೆಲೋಶಿಪ್ ಗಳಿಸಿದ ಕತೆಯಿದು!
ಬಿಹಾರದ ದಿನಗೂಲಿಯ ಪುತ್ರ ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕಾಗಿ 2.5 ಕೋಟಿ ರೂ ಫೆಲೋಶಿಪ್ ಗಳಿಸಿದ ಕತೆಯಿದು!
Follow us on

ಪಾಟ್ನಾ: ಆ ಕಡೆ ಶಾಲೆಗೆ ಹೋಗದ ಪೋಷಕರು, ಈ ಕಡೆ ಕಡುಬಡತನ… ಈ ಸನ್ನಿವೇಶದಲ್ಲಿ ಜನಿಸಿದ ಬಿಹಾರದ ಹುಡುಗ ಇದೀಗ ತನ್ನ 17ನೇ ವಯಸ್ಸಿನಲ್ಲಿ ಅಮೆರಿಕದ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗಕ್ಕಾಗಿ 2.5 ಕೋಟಿ ರೂ ಫೆಲೋಶಿಪ್ ಗಳಿಸಿದ ಕತೆಯಿದು!

ಯುಎಸ್​ಎ ಪೆನ್ಸಿಲ್ವೇನಿಯಾದ ಲಾಫಾ ಯೆಟ್ಟೆ ಕಾಲೇಜಿನಲ್ಲಿ (Pennsylvania Lafa yette College) ಇಂಜಿನಿಯರ್ ರಿಂಗ್ ಕಲಿಯಲು 2.5 ಕೋಟಿ ರೂಪಾಯಿ ಅಮೂಲ್ಯ ಮೌಲ್ಯದ ಡೈಯರ್ ಫೆಲೋಶಿಪ್ (Dyer Fellowship) ಅನ್ನು ಪಡೆದುಕೊಂಡಿದ್ದಾನೆ. ಆ ಪ್ರತಿಷ್ಠಿತ ಪರ್ಸ್ ಗಳಿಸಿದ ಬಿಹಾರ ರಾಜ್ಯದ ದಲಿತ ಸಮುದಾಯದ ಹುಡುಗ ಈ ಪ್ರೇಮ್​ ಕುಮಾರ್.

ಈತ ಈ ವರ್ಷ ಫೆಲೋಶಿಪ್ ಪಡೆದ, ವಿಶ್ವದಾದ್ಯಂತ ಕೇವಲ ಆರು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಕಟ್ಟುನಿಟ್ಟಾದ ಆಯ್ಕೆಯ ಮಾನದಂಡ ಹೇಗಿರುತ್ತದೆ ಅಂದ್ರೆ “ಪ್ರಪಂಚದ ಮೇಲೆ ಪ್ರಭಾವ ಬೀರುವಂತಹ ವಿಶ್ವಾಸ ಮತ್ತು ಸ್ವಯಂ ಪ್ರೇರಣೆ, ಜೊತೆಗೆ ಸಮಸ್ಯೆಗಳನ್ನು ಪರಿಹರಿಸಲು ಪಟ್ಟುಬಿಡದೆ ಸಾಧಿಸಬಲ್ಲ ಕೆಚ್ಚೆದೆ ” ಇರುವಂತಹ ಮೆರಿಟ್ ವಿದ್ಯಾರ್ಥಿಗಳಷ್ಟೇ ಇದನ್ನು ಸಾಧಿಸಬಲ್ಲರು.

ಪ್ರೇಮ್​ ಕುಮಾರ್ ಅಪ್ಪ ಗ್ರಾಮೀಣ ಪಾಟ್ನಾದ ಫುಲ್ವಾರಿ ಷರೀಫ್ ಸರ್ಕಲ್‌ನ ಗೋನ್‌ಪುರ ಗ್ರಾಮದರು. ದಿನಗೂಲಿ ಮಾಡಿ ಸಂಸಾರ ಸರಿದೂಗಿಸುತ್ತಿದ್ದಾರೆ. ಪ್ರೇಮ್​ ಕುಮಾರ್ ಇನ್ನು ನಾಲ್ಕು ವರ್ಷ ಕಾಲ ಲಾಫಾ ಯೆಟ್ಟೆ ಕಾಲೇಜಿನಲ್ಲಿ ವ್ಯಾಸಂಗ ಮಾಡಲಿದ್ದಾರೆ.

ಪ್ರೇಮ್ ಕುಮಾರ್ ಗ್ರಾಮೀಣ ಪಾಟ್ನಾದ ಗೋನ್‌ಪುರ ಗ್ರಾಮದ ದಿನಗೂಲಿಯವರ ಮಗ. ಪ್ರೇಮ್ ಸದಾ ಪ್ರತಿಕೂಲ ನೀರಿನಲ್ಲಿಯೇ ಈಜಿ ದಡಮುಟ್ಟಿದವರು. ಪ್ರೇಮ್ ಕುಮಾರ್ ತಮ್ಮ ಕುಟುಂಬದಲ್ಲಿ ಕಾಲೇಜು ಕ್ಯಾಂಪಸ್​​ ಪ್ರವೇಶಿಸಿದ ಮೊದಲ ಕುಡಿ.

“ನನ್ನ ತಂದೆ ಜಿತನ್ ಮಾಂಝಿ ಅವರಂತೆಯೇ ನಾನೂ ಅದೇ ದಿನಗೂಲಿ ಪ್ರಯಾಣವನ್ನು ಮುಂದುವರಿಸಬೇಕಿತ್ತು. ಹೊಲಗಳಲ್ಲಿ ಅಥವಾ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಅವರು ದುಡಿಯುತ್ತಿದ್ದರು. ನನ್ನ ಶಿಕ್ಷಣವನ್ನು ಮುಂದುವರಿಸಲು ನನಗೆ ಸಹಾಯ ಮಾಡಿದ ಮತ್ತು ನನ್ನಲ್ಲಿ ನನಗೆ ನಂಬಿಕೆಯನ್ನು ಮೂಡಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುವೆ. ಅವರಿಂದಲೇ ನಾನು ಇಂದು ಇಲ್ಲಿದ್ದೇನೆ. ನಾನು ಆಗಸ್ಟ್‌ನಲ್ಲಿ ಲಾಫಾ ಯೆಟ್ಟೆ ಕಾಲೇಜಿನಲ್ಲಿ ನನ್ನ ಅಧ್ಯಯನವನ್ನು ಪ್ರಾರಂಭಿಸುತ್ತೇನೆ”ಎಂದು ಪ್ರೇಮ್ ಹೇಳಿದ್ದಾರೆ.

ದಲಿತ ಸಮುದಾಯದವರಿಗೆ ಎಂದೇ ನಿವೃತ್ತ ಐಪಿಎಸ್ ಅಧಿಕಾರಿ ಜೆಕೆ ಸಿನ್ಹಾ ಸ್ಥಾಪಿಸಿದ ಶೋಷಿತ ಸಮುದಾಯದ ಕೇಂದ್ರದ ಸಿಬಿಎಸ್‌ಇ ಶಾಲೆಯಲ್ಲಿ ಪ್ರೇಮ್ ಕುಮಾರ್ 12ನೇ ತರಗತಿ ಪಾಸು ಮಾಡಿದ್ದಾರೆ. ಮುಂದೆ ಲಾಫಾ ಯೆಟ್ಟೆ ಕಾಲೇಜಿನಲ್ಲಿ, ಪ್ರೇಮ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳನ್ನು ಅಧ್ಯಯನ ಮಾಡಲು ಯೋಜಿಸಿದ್ದಾರೆ.

ಭಾರೀ ಮೊತ್ತದ ವಿದ್ಯಾರ್ಥಿ ವೇತನವು ಪುಸ್ತಕ ಖರೀದಿ ಮತ್ತು ಕಾಲೇಜು ಶುಲ್ಕ ಪಾವತಿ ಜೊತೆಗೆ ಆರೋಗ್ಯ ವಿಮೆ ಮತ್ತು ಪ್ರಯಾಣ ವೆಚ್ಚದಂತಹ ಇತರ ವೆಚ್ಚಗಳನ್ನು ಒಳಗೊಂಡಿರುತ್ತದೆ.