CBSE Result 2022: ಸಕಾಲದಲ್ಲಿಯೇ ಸಿಬಿಎಸ್ಇ ಫಲಿತಾಂಶ; ಧರ್ಮೇಂದ್ರ ಪ್ರಧಾನ್
ಈ ನಡುವೆ ದೇಶಾದ್ಯಂತ ಸಿಬಿಎಸ್ಇ ವಿದ್ಯಾರ್ಥಿಗಳು ಅಂತಿಮ ಫಲಿತಾಂಶದ ಅಂಕಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎನ್ನುವ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ದೆಹಲಿ: ಈ ವರ್ಷದ ಸಿಬಿಎಸ್ಇ 10 ಮತ್ತು 12ನೇ ತರಗತಿ ಫಲಿತಾಂಶಗಳನ್ನು (Central Board of Secondary Education – CBSE) ಸಕಾಲದಲ್ಲಿ ಪ್ರಕಟಿಸಲಾಗುವುದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೂನ್ 15ರವರೆಗೆ ಸಿಬಿಎಸ್ಇ ಪರೀಕ್ಷೆಗಳು ನಡೆಯುತ್ತಿದ್ದವು. ಪರೀಕ್ಷೆ ಮುಗಿದ ನಂತರ ಮೌಲ್ಯಮಾಪನ ಮತ್ತು ಫಲಿತಾಂಶ ಸಿದ್ಧಪಡಿಸಲು 45 ದಿನಗಳ ಕಾಲಾವಕಾಶ ಬೇಕು ಎಂದು ಅಧಿಕಾರಿಗಳು ಹೇಳಿದ್ದರು. ಎಲ್ಲ ಪ್ರಕ್ರಿಯೆಗಳೂ ನಿಗದಿತ ಕಾಲದಲ್ಲಿಯೇ ನಡೆಯುತ್ತಿವೆ. ಸಕಾಲದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು. ಇದೇ ತಿಂಗಳ ಕೊನೆಯಲ್ಲಿ ಸಿಬಿಎಸ್ಇ 10 ಮತ್ತು 12ನೇ ತರಗತಿಯ ಫಲಿತಾಂಶ ಪ್ರಕಟವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಈ ನಡುವೆ ದೇಶಾದ್ಯಂತ ಸಿಬಿಎಸ್ಇ ವಿದ್ಯಾರ್ಥಿಗಳು ಅಂತಿಮ ಫಲಿತಾಂಶದ ಅಂಕಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎನ್ನುವ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಟ್ವಿಟರ್ನಲ್ಲಿ best of either term results subject wise ಹ್ಯಾಷ್ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಫಲಿತಾಂಶ ಘೋಷಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿಯೇ ಸಿಬಿಎಸ್ಇ ಮಂಡಳಿಯು ‘ಪರೀಕ್ಷಾ ಸಂಗಮ್’ ಪೋರ್ಟಲ್ಗೆ ಚಾಲನೆ ನೀಡಿದೆ. ಫಲಿತಾಂಶಕ್ಕೆ ಸಂಬಂಧಿಸಿದ ಚಟುವಟಿಕೆಗಳು ಮತ್ತು ಪರೀಕ್ಷೆಗೆ ಬೇಕಿರುವ ಪರಾಮರ್ಶನ ಸಂಪನ್ಮೂಲಗಳನ್ನು ಒಳಗೊಂಡಿರುತ್ತದೆ.
ಈ ವರ್ಷ ಡಿಜಿಲಾಕರ್ ಮೂಲಕ ಡಿಜಿಟಲ್ ಅಂಕಪಟ್ಟಿಗಳನ್ನು ವಿತರಿಸಲು ಸಿಬಿಎಸ್ಇ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ವಿದ್ಯಾರ್ಥಿಗಳು https://t.co/pSvg3mGnPS ಲಿಂಕ್ ಕ್ಲಿಕ್ ಮಾಡಿ, ಅಗತ್ಯ ವಿವರ ಒದಗಿಸಿ ಡಿಜಿಲಾಕರ್ ಅಕೌಂಟ್ ಎನೇಬಲ್ ಮಾಡಿಕೊಳ್ಳಬೇಕಾಗುತ್ತದೆ.
#CBSE Classes X & XII results for 2022 are to be announced soon, DigiLocker platform has made a special set up for students to obtain their #digital marksheets.
Students visit the URL https://t.co/pSvg3mGnPS
Watch this video to learn how to make your #DigiLocker? account! pic.twitter.com/GHNlJCwC8I
— DigiLocker (@digilocker_ind) July 16, 2022
ಐಸಿಎಸ್ಇ ಫಲಿತಾಂಶ
ಐಸಿಎಸ್ಇ ಮಂಡಳಿಯು ನಿನ್ನೆ (ಜುಲೈ 17) 10ನೇ ತರಗತಿ ಫಲಿತಾಂಶ ಪ್ರಕಟಿಸಿತ್ತು. ಶೇ 99.8ರಷ್ಟು ಅಂಕ ಪಡೆದಿರುವ ನಾಲ್ವರು ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಹಂಚಿಕೊಂಡಿದ್ದಾರೆ. 34 ವಿದ್ಯಾರ್ಥಿಗಳು ಎರಡನೇ ರ‍್ಯಾಂಕ್ ಗಳಿಸಿದ್ದಾರೆ. ಈ ವರ್ಷದ ಒಟ್ಟಾರೆ ಫಲಿತಾಂಶ ಶೇ 99.97ರಷ್ಟು ಬಂದಿದೆ.
ಅಖಿಲ ಭಾರತ ಮಟ್ಟದಲ್ಲಿ 5ನೇ ರ‍್ಯಾಂಕ್ ಪಡೆದ 34 ವಿದ್ಯಾರ್ಥಿಗಳ ಪೈಕಿ ಬೆಂಗಳೂರಿನ ಐವರು ಇದ್ದಾರೆ. ಇವರೆಲ್ಲರೂ ಇಂಗ್ಲಿಷ್ ಮತ್ತು ಇತರ ನಾಲ್ಕು ವಿಷಯಗಳಲ್ಲಿ ಒಟ್ಟು 498 ಅಂಕಗಳನ್ನು ಪಡೆದಿದ್ದಾರೆ. ಕರ್ನಾಟಕದ ಒಟ್ಟಾರೆ ಐಸಿಎಸ್ಇ ಫಲಿತಾಂಶವು ಶೇ 99.99 ಇದೆ. 23,293 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಎಂಇಎಸ್ ಕಿಶೋರ ಕೇಂದ್ರ ಪಬ್ಲಿಕ್ ಸ್ಕೂಲ್ನ ಬಿ.ಎನ್.ವಿಭೂತಿ, ನ್ಯೂ ಹೊರೈಜಾನ್ ಪಬ್ಲಿಕ್ ಸ್ಕೂಲ್ನ ಎಸ್.ಸಂಧ್ಯಾ, ಕ್ಲಾರೆನ್ಸ್ ಪಬ್ಲಿಕ್ ಸ್ಕೂಲ್ನ ರಾಹುಲ್ ದತ್ತಾ, ಟ್ರಿಯೊ ವರ್ಲ್ಡ್ ಸ್ಕೂಲ್ನ ಆದಿ ಕೃಷ್ಣ, ಬೆಥನಿ ಹೈಸ್ಕೂಲ್ನ ನಿಹಾರ ಮರಿಯಮ್ ಓಮನ್ ರಾಷ್ಟ್ರಮಟ್ಟದಲ್ಲಿ 2ನೇ ರ‍್ಯಾಂಕ್ ಪಡೆದಿದ್ದಾರೆ.
Published On - 8:19 am, Mon, 18 July 22