ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಶಾಕ್ ನೀಡಿದ ಜ್ಞಾನಭಾರತಿ, ಬೆಂಗಳೂರು ನಗರ ವಿವಿ

| Updated By: ಗಣಪತಿ ಶರ್ಮ

Updated on: Jul 10, 2024 | 8:18 AM

ರಾಜ್ಯದಲ್ಲಿ ಪದವಿ ಹಾಗೂ ಸ್ನತಕೋತ್ತರ ಕಾಲೇಜುಗಳು ಆರಂಭಕ್ಕೂ ಮೊದಲೇ ಸಂಕಷ್ಟ ಎದುರಾಗಿದೆ. ಕಾಲೇಜು ವಿಶ್ವವಿದ್ಯಾಲಯಗಳ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ವಿದ್ಯಾರ್ಥಿಗಳಿಗೆ ಡಬ್ಬಲ್ ಶಾಕ್ ಸಿಕ್ಕಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಜ್ಞಾನಭಾರತಿ ವಿಶ್ವವಿದ್ಯಾಲಯ ಹಾಗೂ ನಗರ ವಿವಿ ಶುಲ್ಕ ಹೆಚ್ಚಳದ ಶಾಕ್ ನೀಡಿವೆ.

ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಶಾಕ್ ನೀಡಿದ ಜ್ಞಾನಭಾರತಿ, ಬೆಂಗಳೂರು ನಗರ ವಿವಿ
ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಶಾಕ್ ನೀಡಿದ ಜ್ಞಾನಭಾರತಿ, ಬೆಂಗಳೂರು ನಗರ ವಿವಿ
Follow us on

ಬೆಂಗಳೂರು, ಜುಲೈ 10: ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಪರದಾಡುವ ಸ್ಥಿತಿ ಇದೆ. ಇದರ ನಡುವೆ ಈಗ ಉನ್ನತ ಶಿಕ್ಷಣ ಪಡೆಯಲು ಕನಸು ಕಾಣುವ ವಿದ್ಯಾರ್ಥಿಗಳ ಜೇಬಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯ ಹಾಗೂ ಜ್ಞಾನಭಾರತಿ ವಿವಿ ಕೈಹಾಕಲು ಮುಂದಾಗಿವೆ. ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಬಿಗ್ ಶಾಕ್ ನೀಡಿವೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಕೋರ್ಸ್​​​ಗಳ ಶುಲ್ಕ ಶೇ 10 ರಷ್ಟು ಏರಿಕೆ ಮಾಡಲು ನಿರ್ಧರಿಸಿವೆ.

ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೆಂಗಳೂರು ನಗರ ಹಾಗೂ ಜ್ಞಾನಭಾರತಿ ಎರಡು ವಿಶ್ವವಿದ್ಯಾಲಯಗಳ ಶುಲ್ಕ ಹೆಚ್ಚಳ ಮಾಡಿ ಶಾಕ್ ನೀಡಿವೆ. ಬೆಂಗಳೂರಿನ ಎರಡು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೊರ್ಸ್​​ಗಳ ಶುಲ್ಕ ಶೇ 10 ಏರಿಕೆಮಾಡಿವೆ. ಇಂಜನಿಯರಿಂಗ್ ಹಾಗು ಮೆಡಿಕಲ್ ಶುಲ್ಕ ಏರಿಕೆ ಬಳಿಕ ಈಗ ವಿಶ್ವವಿದ್ಯಾಲಯಗಳಲ್ಲಿ ಪದವಿ ಶುಲ್ಕ ಏರಿಕೆಗೆ ಮುಂದಾಗಿವೆ. ಬಿಎ, ಬಿಕಾಂ, ಬಿಎಸ್​ಸಿ ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಕಳೆದ ವರ್ಷ ಇದ್ದ ಶುಲ್ಕಕ್ಕೆ ಶೇ 10ರಷ್ಟು ಏರಿಕೆ ಮಾಡಲಾಗಿದೆ. 2024-25 ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಹಾಗೂ ಯೂನಿವರ್ಸಿಟಿಗಳಲ್ಲಿ ಕನಿಷ್ಠ ಶೇ 10 ರಷ್ಟು ಶುಲ್ಕ ಏರಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಪಿಯುಸಿ ಮುಗಿಸಿ ಉನ್ನತ್ತ ಶಿಕ್ಷಣ ಪಡೆಯುವ ಕನಸು ಹೊತ್ತು ಪದವಿಗೆ ಬರುವ ವಿದ್ಯಾರ್ಥಿಗಳಿಗೆ ಈಗ ಆರ್ಥಿಕ ಹೊರೆ ಬೀಳಲಿದೆ. ಬಿಎ, ಬಿಕಾಂ, ಬಿಎಸ್​ಸಿ ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಕಳೆದ ವರ್ಷ ಇದ್ದ ಶುಲ್ಕಕ್ಕೆ ಶೇ 10ರಷ್ಟು ಏರಿಕೆಗೆ ಅವಕಾಶ ನೀಡಿದೆ.

ಪದವಿ ಶುಲ್ಕ ಹೆಚ್ಚಳದ ಬಗ್ಗೆ ಕುಲಪತಿಗಳು ಹೇಳುವುದೇನು?

ವಿಶ್ವವಿದ್ಯಾಲಯಗಳ ಆದಾಯ ಕೊರತೆಯ ಕಾರಣ ನೀಡಿ ಪ್ರಸಕ್ತ ವರ್ಷದಲ್ಲಿ ಶೇ 10ರಷ್ಟು ಶುಲ್ಕ ಏರಿಕೆ ಮಾಡಲು ಉನ್ನತ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಹೀಗಾಗಿ ವಿವಿಗಳು ಶುಲ್ಕ ಏರಿಕೆ ಮಾಡಿಕೊಂಡಿವೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಲಿಂಗರಾಜ್ ಗಾಂಧಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು, ಪೋಷಕರಿಂದ ಬೇಸರ

ಈಗಾಗಲೇ ವಿದ್ಯಾರ್ಥಿಗಳು ದಾಖಲಾತಿಗೆ ಮುಂದಾಗುತ್ತಿದ್ದಾರೆ. ಆದರೆ, ಶುಲ್ಕ ಏರಿಕೆ ನೋಡಿ ಪೋಷಕರು ಹಾಗೂ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಯುವನಿಧಿ ಹಣವನ್ನು ಶುಲ್ಕದ ಮೂಲಕ ವಸೂಲಿ ಮಾಡುತ್ತಿದೆಯೇ ಗ್ಯಾರಂಟಿ ಸರ್ಕಾರ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ವಿವಿ ಪದವಿ ಕೋರ್ಸ್​​ಗಳಿಗೆ ಹೆಚ್ಚಿದ ಬೇಡಿಕೆ

ಈ ವರ್ಷ ದಾಖಲೆಯ ಪಿಯು ಫಲಿತಾಂಶ ಬೆನ್ನಲ್ಲೇ ಸರ್ಕಾರಿ ವಿವಿಗಳಿಗೆ ಸಖತ್ ಬೇಡಿಕೆ ಸೃಷ್ಟಿಯಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯ ಹಾಗೂ ಜ್ಞಾನಭಾರತಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್​​ಗಳಿಗೆ ಬಹಳ ಬೇಡಿಕೆ ಕೇಳಿ ಬಂದಿದೆ. ರಾಜಧಾನಿಯ ಖಾಸಗಿ ಕಾಲೇಜುಗಳಲ್ಲಿ ಸೀಟ್​​​ಗೆ ಹೆಚ್ಚು ಬೇಡಿಕೆ ಕೇಳಿ ಬರ್ತಿದೆ. ಖಾಸಗಿ ಖಾಲೇಜುಗಳಲ್ಲಿ ಲಕ್ಷ ಲಕ್ಷ ಶುಲ್ಕ ಹಿನ್ನಲೆಯಲ್ಲಿ ಸರ್ಕಾರಿ ಕಾಲೇಜು ವಿವಿಗಳಕಡೆ ವಿದ್ಯಾರ್ಥಿಗಳು ಮನಸ್ಸು ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಹತ್ವದ ಘೋಷಣೆ: ಎಸ್​ಸಿ, ಎಸ್​ಟಿ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​ ನೀಡಿದ ಸಿಎಂ ಸಿದ್ದರಾಮಯ್ಯ

ಇನ್ನೊಂದಡೆ, ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ ಹಾಗೂ ನಗರ ವಿಶ್ವವಿದ್ಯಾಲಯದಲ್ಲಿ ಪದವಿ ಕೋರ್ಸ್​​ಗಳ ಹೆಚ್ಚುವರಿ 60 ಸೀಟ್​​ಗಳನ್ನ ನಿಗದಿಮಾಡಲಾಗಿದೆ. ವಿವಿಧ ಬೇಡಿಕೆ ಇರುವ ಕೋರ್ಸ್​​​ಗಳಿಗೆ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಹಾಗೂ ಪೊಷಕರ ಒತ್ತಾಯ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜ್ಞಾನಭಾರತಿ ವಿಶ್ವವಿದ್ಯಾಲಯ ಕುಲಪತಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ