ರಾಮನಗರ,ಅ.06: ‘ನಮ್ಮ ಜಿಲ್ಲೆಗೆ ಇಂದು ಸಂತೋಷದ ದಿನ. ಗ್ರಾಮೀಣ ಪ್ರದೇಶದಲ್ಲಿ ಸಿಎಸ್ಆರ್(CSR) ನಿಧಿ ಮೂಲಕ ರಾಜ್ಯದಲ್ಲಿ ಮಾದರಿ ಸರಕಾರಿ ಶಾಲೆ ಕಟ್ಟಬೇಕು ಎಂಬ ಉದ್ದೇಶ ಈಗ ಕುದೂರಿನ ಮೂಲಕ ನನಸಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ರಾಮನಗರದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ‘288 ಶೌಚಾಲಯ ನಿರ್ಮಿಸಿದ್ದ ಟಯೋಟ ಸಂಸ್ಥೆ, ಈಗ ಶಾಲೆಗಳಿಗಾಗಿ 16 ಕೋಟಿ ವೆಚ್ಚ ಮಾಡಲು ಮುಂದೆ ಬಂದಿದೆ. ಹೀಗಾಗಿ ಇಲ್ಲಿ ಐದು ಕೋಟಿ ವೆಚ್ಚದಲ್ಲಿ ಕೆಪಿಎಸ್ ಶಾಲೆ ನಿರ್ಮಾಣಗೊಳ್ಳಲಿದೆ ಎಂದರು.
ಇದೊಂದೆ ಅಲ್ಲ, ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯು ಇಂತಹ ಶಾಲೆಗಳು ತಲೆ ಎತ್ತಲಿವೆ. ಶಿಕ್ಷಣಕ್ಕಾಗಿ ಬೆಂಗಳೂರಿಗೆ ಓಡಾಡುವ ಪರದಾಟ ತಪ್ಪಿಸಲು ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ರಾಜ್ಯದಲ್ಲಿನ ಎಲ್ಲ ಕಾರ್ಖಾನೆಗಳು ಈ ವರ್ಷ ಎರಡು ಸಾವಿರ ಶಾಲೆ ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ಶಿಕ್ಷಕರ ಕೊರತೆಯನ್ನು ನಿಗಿಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಹೇಳಿದರು.
ಇದನ್ನೂ ಓದಿ:ಬೀದರ್: ಶಾಲೆ ಕಿರಿದಾದರೂ ಸಾಧನೆ ಹಿರಿದು: ಸರಕಾರಿ ಶಾಲೆಯ ಆವರಣದಲ್ಲಿ ಕಿರು ಉದ್ಯಾನವನ
ಇನ್ನು ಇದೇ ವೇಳೆ ರಾಮನಗರ ಉಸ್ತುವಾರಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತನಾಡಿ ‘
ಪ್ರತೀ ಗ್ರಾಮ ಪಂಚಾಯತಿ ಮಟ್ಟದಲ್ಲಿ ಉತ್ತಮ ಶಾಲೆ ಆಗಬೇಕು ಎಂದು ನಿನ್ನೆಯಷ್ಟೇ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದರು. ಇವತ್ತು ರಾಮನಗರ ಜಿಲ್ಲೆಯಲ್ಲಿ ಶಂಕುಸ್ಥಾಪನೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಪ್ರತೀ ಪಂಚಾಯತಿ ಮಟ್ಟದಲ್ಲಿ ಶಾಲೆ ಮಾಡುವ ಗುರಿ ಇದಾಗಿದೆ ಎಂದರು.
ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ನೋಡಿದ್ದೆ, ಅವರು ಉತ್ತಮ ಶಾಲೆ ಮಾಡೋದಾದ್ರೆ, ನಾವು ಯಾಕೆ ಮಾಡೋಕ್ಕಾಗಲ್ಲ ಅಂದುಕೊಂಡೆ. ಇವತ್ತು ಸಿಎಸ್ಆರ್ ಫಂಡ್ನಲ್ಲಿ ಮಾಡಲಾಗುತ್ತಿದೆ. ಇದೊಂದೆ ಅಲ್ಲ, ಇಡೀ ರಾಜ್ಯದಲ್ಲಿ ಈ ರೀತಿಯ ಹೈಟೆಕ್ ಶಾಲೆ ಮಾಡಲಾಗುತ್ತಿದೆ. ಇನ್ನು ನಾವು ಚುನಾವಣೆ ಮುಂಚೆ ಶಕ್ತಿ ಯೋಜನೆ ಹೇಳಿದಾಗ ಮಾಡ್ತಾರಾ? ಎನ್ನುವ ಮಾತು ಬಂದಿತ್ತು. ಸರ್ಕಾರ ಬಂದ 15 ದಿನಗಳಲ್ಲಿ ಶಕ್ತಿ ಯೋಜನೆ ಜಾರಿಗೆ ಬಂತು. ಇದುವರೆಗೂ 74 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ವಿರೋಧ ಪಕ್ಷಗಳು ಏನೇ ಹೇಳಿಕೊಳ್ಳಲಿ, ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ