ಬೀದರ್: ಶಾಲೆ ಕಿರಿದಾದರೂ ಸಾಧನೆ ಹಿರಿದು: ಸರಕಾರಿ ಶಾಲೆಯ‌ ಆವರಣದಲ್ಲಿ ಕಿರು ಉದ್ಯಾನವನ

Bidar News: ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಜನರೇ ಜಾಸ್ತಿ ಇರುವಾಗ ಬೀದರ್​​ ಜಿಲ್ಲೆಯ ಅದೊಂದು ಸರ್ಕಾರಿ ಶಾಲೆ ಮಾತ್ರ ಇತರೆ ಶಾಲೆಗಳಿಗೆ ಮಾದರಿ ಆಗಿದೆ. ಹಸಿರು ವಾತಾವರಣ, ನಲಿ-ಕಲಿ ಪ್ರಶಂಸೆ ಪ್ರಶಸ್ತಿ, ಹಸಿರು ಶಾಲೆಯೆಂಬ ಕೀರ್ತಿಗೆ ಪಾತ್ರವಾಗುವ ಮೂಲಕ ಶಹಬ್ಬಾಷ್ ಗಿರಿ ಪಡೆದಿದೆ.

ಬೀದರ್: ಶಾಲೆ ಕಿರಿದಾದರೂ ಸಾಧನೆ ಹಿರಿದು: ಸರಕಾರಿ ಶಾಲೆಯ‌ ಆವರಣದಲ್ಲಿ ಕಿರು ಉದ್ಯಾನವನ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
Follow us
ಸುರೇಶ ನಾಯಕ
| Updated By: ಗಂಗಾಧರ​ ಬ. ಸಾಬೋಜಿ

Updated on:Sep 20, 2023 | 9:43 PM

ಬೀದರ್​​, ಸೆಪ್ಟೆಂಬರ್​ 20: ಆ ಜಿಲ್ಲೆಯಲ್ಲಿ ಸರಕಾರಿ ಶಾಲೆ (government school) ಗಳೆಂದರೆ ಮೂಗು ಮುರಿಯುವ ಜನರೇ ಜಾಸ್ತಿ. ಆದರೆ ಆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಇತರ ಶಾಲೆಗಳಿಗೆ ಮಾದರಿಯಾಗುವಂತಿದೆ. ಹಸಿರು ವಾತಾವರಣ, ನಲಿಕಲಿ ಪ್ರಶಂಸೆ ಪ್ರಶಸ್ತಿ, ಹಸಿರು ಶಾಲೆಯೆಂಬ ಕೀರ್ತಿಗೆ ಪಾತ್ರವಾಗುವ ಮೂಲಕ ಶಹಬ್ಬಾಷ್ ಎನ್ನುವಂತಿದೆ. ಪ್ರಶಸ್ತಿ ಪುರಸ್ಕಾರಗಳು ನಮ್ಮನ್ನ ಹುಡುಕಿಕೊಂಡು ಬರಬೇಕೆ ಹೊರತು ನಾವು ಪ್ರಶಸ್ತಿಗಳನ್ನ ಹುಡುಕಿಕೊಂಡು ಹೋಗುವುದು ಆತ್ಮಸಾಕ್ಷಿಗೆ ವಿರುದ್ಧವಾಗುತ್ತದೆ. ಹೀಗಾಗಿ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನಲ್ಲಿಯೇ ಕಪ್ಪರಗಾಂವ ಪ್ರಾಥಮಿಕ ಶಾಲೆಗೆ ಒಂದು ಹೆಸರಿದೆ.

ಈ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ನಲಿ-ಕಲಿ ಮೂಲಕ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ರಾಜ್ಯ ಮಟ್ಟದ ನಲಿ ಕಲಿ ಪ್ರಶಸ್ತಿ ಬಾಚಿಕೊಂಡಿದ್ದು, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಉತ್ತಮ ಪರಿಸರ ಪ್ರಜ್ಞೆ ಮೂಡಿಸಲು ನೂರಾರು ವಿವಿಧ ತರಹದ ಸಸಿಗಳನ್ನು ನೆಡಲಾಗಿದೆ. ಶಾಲೆಯಲ್ಲಿ ಪ್ರಸಕ್ತ 53 ಮಕ್ಕಳು ಓದುತ್ತಿದ್ದು, ಶೇ.100 ಹಾಜರಿ ಇದೆ. ಇಲ್ಲಿ ಗಿಡ, ಮರಗಳನ್ನು ಮಕ್ಕಳಂತೆ ಆರೈಕೆ ಮಾಡಲಾಗುತ್ತಿದ್ದು, ಆ ಗಿಡಗಳ ಬುಡದಲ್ಲೇ ಮಕ್ಕಳು ಓದಿಕೊಳ್ಳುವುದು, ಬಿಸಿಯೂಟ ಸವಿಯುತ್ತಾರೆ. ಇನ್ನು ಮಕ್ಕಳ ಆಟವು ಹಸಿರು ಗಿಡದ ನೆರಳಿನಲ್ಲಿಯೇ ನಡೆಯುವುದರಿಂದ ಮಕ್ಕಳ ಉತ್ಸಾಹಕ್ಕೆ ಪ್ರೋತ್ಸಾಹ ಸಿಗುವಂತಿದೆ. ಮಕ್ಕಳು ಮನೆಯಲ್ಲಿ ಕೊಟ್ಟ ಚಿಲ್ಲರೆ ಕಾಸುಗಳನ್ನು ಬ್ಯಾಂಕ್ ರೀತಿ ಲೆಕ್ಕವಿಟ್ಟು ಅಗತ್ಯ ವಸ್ತುಗಳನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ: ನೂರಾರು ಕೋಟಿ ರೂ. ವೆಚ್ಚಮಾಡಿ ಕಾಲುವೆ ದುರಸ್ಥಿ‌: ಆದರೂ ಬರಲಿಲ್ಲ ನೀರು, ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ

ಶಾಲೆಯ ವಾತಾವರಣ ಮಕ್ಕಳಿಗೆ ಸಾಕಷ್ಟು ಖುಷಿಯನ್ನ ಕೊಡುತ್ತಿದೆ. ಇದರ ಜೊತೆಗೆ ಹಲವಾರು ಗಿಡಗಳನ್ನು ಬೆಳೆಸಲಾಗಿದ್ದು, ಅವುಗಳ ಆರೈಕೆಯನ್ನು ಮಕ್ಕಳೇ ವಹಿಸಿಕೊಂಡು ಬೆಳೆಸುತ್ತಿದ್ದಾರೆ. ಶಾಲಾ ಆವರಣದ ತುಂಬೆಲ್ಲಾ ಹೊಂಗೆ ಮರ, ಪೇರಲ, ನೇರಳೆ ಸೇರಿದಂತೆ ನಾನಾ ನಮೂನೆಯ ಜೌಷಧೀಯ ಸಸ್ಯಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಗಿಡಳಿವೆ.

ಶಾಲಾ ಆವರಣವನ್ನು ಕಂಡರೆ ಸರಕಾರಿ ಶಾಲೆಗಳು ಹೀಗೂ ಇರಬಹುದಾ? ಎಂದು ಅಚ್ಚರಿ ಮೂಡಿಸುವಂತಿದೆ. ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಲು, ಅವರಿಗೆ ಪರಿಸರದ ಬಗ್ಗೆ ಕಾಳಜಿ, ಆಸಕ್ತಿ ಮೂಡುವಂತೆ ಮಾಡುವ ಉದ್ದೇಶದಿಂದ ಹಾಗೂ ಶಾಲೆಯ ಆವರಣವನ್ನು ಉತ್ತಮ ಪರಿಸರವನ್ನಾಗಿ ಮಾಡಲು ಶಾಲೆಯ ಶಿಕ್ಷಕ ವರ್ಗದವರು ವಿದ್ಯಾರ್ಥಿಗಳೊಂದಿಗೆ ಸಸಿ ನೆಟ್ಟು ಗಿಡ ಬೆಳಿಸಿದ್ದಾರೆ. ಇದರಿಂದ ಮಕ್ಕಳು ಕೌಟುಂಬಿಕ ವಾತಾವರಣದಲ್ಲಿ ಕಲಿಯುವಂತಾಗಿದ್ದು, ಪೋಷಕರು ಸಂತೋಷದಿಂದ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ ಅಂತಾರೆ ಶಿಕ್ಷಕರು.

ಇದನ್ನೂ ಓದಿ: ಒಂದು ದಶಕದಿಂದ ವಾಸವಿದ್ದ 200 ಬಡ ಕುಟುಂಬಗಳಿಗೆ ಎದುರಾಯ್ತು ಮನೆ ಕಳೆದುಕೊಳ್ಳುವ ಭೀತಿ: ಒಕ್ಕಲೆಬ್ಬಿಸಲು ಮುಂದಾದ್ರಾ ಪ್ರಭಾವಿಗಳು?

ಈ ಶಾಲೆಯನ ಶಿಕ್ಷಕ ಮಾರ್ತಾಂಡ ಅವರು ಈ ವರ್ಷದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನ ಬಾಚಿಕೊಂಡಿದ್ದಾರೆ, ಇದು ಇವರ ಶಾಲೆಯ ಮೇಲೆ ಇಟ್ಟಿರುವ ಪ್ರೀತಿ ಮಕ್ಕಳ ಮೇಲೆ ಇಟ್ಟಿರುವ ಕಾಳಜಿಯಿಂದ ಈ ರಾಜ್ಯ ಮಟ್ಟದ ಪ್ರಶಸ್ತಿ ಇವರನ್ನ ಹುಡುಕಿಕೊಂಡು ಬಂದಿದೆ.

ಎತ್ತರದ ವಿಶಾಲ ಪ್ರದೇಶದಲ್ಲಿರುವ ಕಪ್ಪರಗಾಂವ ಶಾಲೆ ಹಚ್ಚ ಹಸಿರಿನ ಪರಿಸರ ಹೊತ್ತು ನಿಂತಿದೆ. ಶಾಲೆಯ ಒಳ ಹೋಗುತ್ತಲೇ ತೊಟದೊಳಗೆ ಹೋದಂತಹ ಅನುಭವವಾಗುತ್ತದೆ. ಶಾಲೆ ನಮ್ಮ ಮನೆ ಇದ್ದಂತೆ ಎಂಬ ಭಾವನೆಯಿಂದ ಇಲ್ಲಿನ ಶಿಕ್ಷಕರು ನೂರಾರು ಸಸಿಗಳನ್ನು ನೆಟ್ಟು ಪೋಷಿಸಿರುವುದರಿಂದ ಸರಕಾರಿ ಶಾಲೆಯೊಂದು ಮಾದರಿ ಎನ್ನುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:42 pm, Wed, 20 September 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್