ಒಂದು ದಶಕದಿಂದ ವಾಸವಿದ್ದ 200 ಬಡ ಕುಟುಂಬಗಳಿಗೆ ಎದುರಾಯ್ತು ಮನೆ ಕಳೆದುಕೊಳ್ಳುವ ಭೀತಿ: ಒಕ್ಕಲೆಬ್ಬಿಸಲು ಮುಂದಾದ್ರಾ ಪ್ರಭಾವಿಗಳು?
ಬೀದರ್ ನಗರದ ಹೊವಲಯದಲ್ಲಿರುವ ಗೊರನಳ್ಳಿ ಬಳಿ ಸರಕಾರ ಬಡವರಿಗಾಗಿ ಸುಮಾರು 12 ವರ್ಷದ ಹಿಂದೆ ಸುಮಾರು ಇನ್ನೂರು ಮನೆಗಳನ್ನ ಕಟ್ಟಿಕೊಟ್ಟಿದ್ದರು. ಆದರೆ ಈಗ ಮನೆಯಲ್ಲಿ ವಾಸಿಸುವ ಜನರಿಗೆ ತೊಂದರೆ ಶುರುವಾಗಿದೆ. ಅದಕ್ಕೆ ಪ್ರಮುಖವಾಗಿ ಆಶ್ರಯ ಮನೆಗಳ ಸುತ್ತಮುತ್ತಲೂ ಲೇಔಟ್ಗಳು ನಿರ್ಮಾಣವಾಗಿದ್ದು, ಒಂದೊಂದು ಸೈಟ್ಗೆ 30 ಲಕ್ಷದವರೆಗೆ ಮಾರಾಟವಾಗುತ್ತಿವೆ. ಹೀಗಾಗಿ ವಾಸವಿದ್ದವರನ್ನ ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ.
ಬೀದರ್, ಸೆಪ್ಟೆಂಬರ್ 18: ಅವರೆಲ್ಲ ಕಳೆದೊಂದು ದಶಕದಿಂದ ಅಲ್ಲಿನ ಆಶ್ರಯ ಮನೆ (homes) ಯಲ್ಲಿ ವಾಸವಾಗಿದ್ದಾರೆ. ಈಗ ಏಕಾಏಕಿ ಅಕ್ರಮ ನಿವಾಸಿಗಳೆಂಬ ಹಣೆಪಟ್ಟಿಕಟ್ಟಿ ನೂರಾರು ಕುಟುಂಬದವರನ್ನ ಮನೆಯಿಂದ ಹೊರಹಾಕುವ ಹುನ್ನಾರ ನಡೆಯುತ್ತಿದೆ. ಹತ್ತು ವರ್ಷದಿಂದ ಸುಮ್ಮನಿದ್ದು, ಈಗ ಅಕ್ರಮವಾಗಿ ವಾಸಿಸುತ್ತಿದ್ದಾರೆಂದು ಅವರನ್ನ ಮನೆಯಿಂದ ಹೊರಹಾಕಲು ಕೆಲವರು ಮುಂದಾಗಿದ್ದು ನಿವಾಸಿಗಳ ಆಕ್ರೋಶ ಹೆಚ್ಚಿಸುವಂತೆ ಮಾಡಿದೆ.
ಬೀದರ್ ನಗರದ ಹೊವಲಯದಲ್ಲಿರುವ ಗೊರನಳ್ಳಿ ಬಳಿ ಸರಕಾರ ಬಡವರಿಗಾಗಿ ಸುಮಾರು 12 ವರ್ಷದ ಹಿಂದೆ ಸುಮಾರು ಇನ್ನೂರು ಮನೆಗಳನ್ನ ಕಟ್ಟಿಕೊಟ್ಟಿದ್ದರು. ಆದರೆ ಸರಕಾರ ಮನೆಗಳನ್ನ ಕಟ್ಟಿತು ಆದರೆ ಫಲಾನುಭವಿಗಳನ್ನ ಆಯ್ಕೆ ಮಾಡಿದೆ ಹಾಗೆ ಬಿಟ್ಟರು. ಆದರೆ ಕಾಲಕಳೆದಂತೆ ಒಬ್ಬಬ್ಬರಾಗಿಯೇ ಸೂರು ಇಲ್ಲದ ಬಡವರು ಪಾಳು ಬಿಳುತ್ತಿದ್ದ ಮನೆಯಲ್ಲಿ ಬಂದು ವಾಸಮಾಡತೊಡಗಿದರು. ಅದಕ್ಕೆ ಜಿಲ್ಲಾಧಿಕಾರಿಗಳು, ನಗರಸಭೆಯ ಅಧಿಕಾರಿಗಳು, ಸ್ಥಳೀಯ ಶಾಸಕರು ಕೂಡ ಮನೆಯಿಲ್ಲದ ಬಡವರು ಉಳಿದ್ದಿದ್ದಾರೆಂದು ಹಾಗೆ ಸುಮ್ಮನಿದ್ದರು.
ಆದರೆ ಈಗ ಈ ಮನೆಯಲ್ಲಿ ವಾಸಿಸುವ ಜನರಿಗೆ ತೊಂದರೆ ಶುರುವಾಗಿದೆ. ಅದಕ್ಕೆ ಪ್ರಮುಖವಾದ ಕಾರಣ ಈ ಆಶ್ರಯ ಮನೆಗಳು ಇರುವ ಸುತ್ತಮುತ್ತಲೂ ಲೇಔಟ್ಗಳು ನಿರ್ಮಾಣವಾಗಿದ್ದು, ಒಂದೊಂದು ಸೈಟ್ಗೆ 30 ಲಕ್ಷದವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ಹತ್ತಾರು ವರ್ಷದಿಂದ ವಾಸವಿದ್ದವರನ್ನ ಒಕ್ಕಲೆಬ್ಬಿಸಿ ಇಲ್ಲಿನ ಮನೆಗಳನ್ನ ಜಾಗವನ್ನು ಮಾರಾಟ ಮಾಡಬೇಕು ಎಂದು ಕೆಲವು ಪ್ರಭಾವಿಗಳು ಬಂದು ಇಲ್ಲಿನ ಜನರನ್ನ ಹೆದರಿಸುತ್ತಿದ್ದಾರೆ.
ಇದನ್ನೂ ಓದಿ: ಚಿತ್ರಕಲಾ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳಿಂದ ನೈಸರ್ಗಿಕ ಗಣಪತಿ ತಯಾರಿಕೆ: ಮಾರಾಟದೊಂದಿಗೆ ಜನರಲ್ಲಿ ಜಾಗೃತಿ
ನೀವು ವಾಸಿಸುವ ಮನೆ ನಮ್ಮದಿದೆ ನೀವು ಜಾಗಾ ಖಾಲಿ ಮಾಡಿ ಎಂದು ಗುಂಪು ಗುಂಪಾಗಿ ಬರುವ ತಂಡ ಇವನ್ನನ ಹೆದರಿಸುವ ಕೆಲಸ ಮಾಡುತ್ತಿದೆ. ಈ ಹೆದರಿಸುವ ಗ್ಯಾಂಗ್ ಜೊತೆಗೆ ನಗರಸಭೆಯ ಕೆಲವು ಅಧಿಕಾರಿಗಳು ಕೈ ಜೋಡಿಸಿದ್ದು ಇಲ್ಲಿ ವಾಸಿಸುವ ಜನರಿಗೆ ಭಯ ಶುರುವಾಗಿದ್ದು ಜಿಲ್ಲಾಧಿಕಾರಿಗಳೇ ನಮಗೆ ವಾಸ ಮಾಡಲು ಅನುಮತಿಯನ್ನ ಕೊಟ್ಟಿದ್ದಾರೆ. ಜೊತೆಗೆ ಇಲ್ಲಿ ವಾಸ ಮಾಡಲು ಹಕ್ಕುಪತ್ರವನ್ನ ಕೆಲವರಿಗೆ ನೀಡಿದ್ದಾರೆ. ಆದರೆ ಏಕಾಏಕಿ ಕೆಲವರು ಬಂದು ನಮಗೆ ಜಾಗಾ ಖಾಲಿ ಮಾಡಿ ಎಂದು ಬೆದರಿಸುತ್ತಿದ್ದಾರೆ. ಪ್ರಾಣ ಬಿಟ್ಟೇವು ಮನೆಯನ್ನ ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ಇಲ್ಲಿನ ನಿವಾಸಿಗಳು ಪಟ್ಟು ಹಿಡಿದ್ದಿದ್ದಾರೆ.
ಇಲ್ಲಿನ ಮನೆಗಳು ನಿರ್ಮಾಣವಾಗಿ 14 ವರ್ಷಗಳೇ ಕಳೆದಹೋಗಿದ್ದರು, ಇಲ್ಲಿನ ಮನೆಗಳನ್ನ ಜಿಲ್ಲಾಡಳಿತ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಿಲ್ಲ. ಹೀಗಾಗಿ ಹತ್ತು ವರ್ಷದ ಹಿದೇಯಷ್ಠೇ ಪಾಳು ಬಿದ್ದಮನೆಗಳನ್ನ ಬಡವರು ಅಕ್ರಮವಾಗಿ ವಾಸ ಮಾಡಲು ಆರಂಭಿಸಿ ಹತ್ತು ವರ್ಷಗಳೆ ಉರುಳಿ ಹೋಗಿದೆ. ಜಿಲ್ಲಾಡಳಿತವೂ ಕೂಡ ಇಲ್ಲಿ ವಾಸಮಾಡುವ ಬಡವರಿಗೆ ಇದೇ ಮನೆಯನ್ನ ಕೊಡುವುದಾಗಿ ಹೇಳಿ ಇಲ್ಲಿಯೇ ನೀವು ಇರಿ ನಿಮಗೆ ಎಲ್ಲಾ ಸೌಲಭ್ಯವನ್ನ ಕಲ್ಪಿಸಿಕೊಡುತ್ತೆವೆಂದು ಹೇಳಿದ್ದರು.
ಕಳೆದ 4 ವರ್ಷದ ಹಿಂದೆ ಇಲ್ಲಿ ವಾಸ ಮಾಡುವ ಸುಮಾರು 75 ಕುಟುಂಬಕ್ಕೆ ಮನೆಯ ಹಕ್ಕು ಪತ್ರ ನೀಡಿದ್ದರಿಂದ ಫಲಾನುಭವಿಗಳು ಇಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ಇಲ್ಲಿ ಕಟ್ಟಿರುವ ಮನೆಗಳು ಬಡವರಿಗಾಗಿಯೇ ಮನೆಗಳಿಲ್ಲದೆ ಬೀದಿಯಲ್ಲಿ ವಾಸ ಮಾಡುವ ಕುಟುಂಬಗಳಿಗೆ ಸೂರು ಕಲ್ಪಿಸಬೇಕು ಅನ್ನುವ ಉದ್ದೇಶದಿಂದ ಇಲ್ಲಿ ಮನೆಗಳನ್ನ ಕಟ್ಟಲಾಗಿದೆ. ನಾವು ಬೀದಿಯಲ್ಲಿ ಸೂರಿಲ್ಲದೆ ಬದುಕುತ್ತಿದ್ದೇವೆ ನಾವು ಇಲ್ಲಿ ವಾಸ ಮಾಡುವುದರಿಂದ ಯಾರಿಗೇನು ನಷ್ಟವಾಗುತ್ತಿಲ್ಲ. ಆದರೆ ಕೆಲವರು ಬಂದು ನಮ್ಮನ್ನ ಹೆದರಿಸಿ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ರಕ್ಷಣೆ ಕೊಡಿ ಜೊಗತೆಗೆ ಸರಕಾರ ನಮ್ಮ ಸಮಸ್ಯೆಯನ್ನ ಅರ್ಥಮಾಡಿಕೊಂಡು ನಮಗೆ ಇಲ್ಲಿ ವಾಸ ಮಾಡಲು ಅನುವು ಮಾಡಿಕೊಡಬೇಕು.
ಇದನ್ನೂ ಓದಿ: ಬೆಂಗಳೂರು ಸಂಪರ್ಕಗಷ್ಟೇ ಸೀಮಿತವಾದ ಬೀದರ್ ಏರ್ ಪೋರ್ಟ್: ಹೊರ ರಾಜ್ಯಕ್ಕೆ ಹಾರಾಟ ನಿರೀಕ್ಷೆ ಹುಸಿ
ಇಲ್ಲವಾದರೆ ನಮಗೆ ಬೇರೆ ಕಡೆಗೆ ಜಾಗ ತೋರಿಸಿದರೆ ಅಲ್ಲಿ ಗುಡಿಲು ಕಟ್ಟಿಕೊಂಡು ಬದುಕುತ್ತೇವೆ ದಯವಿಟ್ಟು ನಮ್ಮನ್ನ ಇಲ್ಲಯೇ ಬದುಕಲು ಬಿಡಿ ಎಂದು ಇಲ್ಲಿ ವಾಸಿಸುವ ಜನರು ಸರಕಾರಕ್ಕೆ ಕೇಳಿಕೊಳ್ಳುತ್ತಿದ್ದಾರೆ. ಇನ್ನೂ ಎಲ್ಲಾ ಧರ್ಮದ ಕಡುಬಡವರೆ ಇಲ್ಲಿ ವಾಸಮಾಡುತ್ತಿದ್ದಾರೆ ಕೂಲಿ ಕೆಲಸಕ್ಕೆ ಹೋಗದೇ ನೀರು ತರುವ ಕೆಲಸವನ್ನ ಮಾಡುವುದು ಇಲ್ಲಿ ಅನಿವಾರ್ಯವಾಗಿದೆ. ಇನ್ನೂ ಮಕ್ಕಳು ಶಾಲೆಯಿಂದ ಬಂದು ಓದಿಕೊಳ್ಳಬೇಕೆಂದರೆ ಕರೆಂಟ್ ಇಲ್ಲಿದೆ ಇರುವುದು ಸಾಕಷ್ಟು ಸಮಸ್ಯೆಯಾಗುತ್ತಿದೆ ಮಕ್ಕಳು ಹೀಗಾಗಿ ಶಾಲೆಯಲ್ಲಿ ನಪಾಸ್ ಆಗುತ್ತಿದ್ದಾರೆ ನಮಗೆ ಕುಡಿಯುವ ನೀರು ಮತ್ತು ಕರೆಂಟ್ ಕೊಡಿ ಎಂದು ಇಲ್ಲಿನ ವಾಸಿಗಳು ಜಿಲ್ಲಾಡಳಿತಕ್ಕೆ ವಿನಂತಿ ಮಾಡಿಕೊಳ್ಳುತ್ತಿದ್ದಾರೆ.
ಕಳೆದ ಹತ್ತು ವರ್ಷದಿಂದ ವಾಸವಿದ್ದವರನ್ನ ಏಕಾಏಕಿ ಅಲ್ಲಿಂದ ಖಾಲಿ ಮಾಡಿಸಲು ಕಾರಣ ಏನು ಅನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ. ಒಂದು ವೇಳೆ ಅಕ್ರಮವಾಗಿ ಅಲ್ಲಿ ಜನರು ವಾಸವಾಗಿದ್ದರೇ ಹತ್ತು ವರುಷದಿಂದ ಅವರನ್ನ ಖಾಲಿ ಯಾಕೇ ಮಾಡಿಸಲಿಲ್ಲ ಅನ್ನೋ ಪ್ರಶ್ನೇ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.