ಬೆಂಗಳೂರು ಸಂಪರ್ಕಗಷ್ಟೇ ಸೀಮಿತವಾದ ಬೀದರ್ ಏರ್ ಪೋರ್ಟ್: ಹೊರ ರಾಜ್ಯಕ್ಕೆ ಹಾರಾಟ ನಿರೀಕ್ಷೆ ಹುಸಿ

ಒಂದು ದಶಕದ ಹೋರಾಟದ ಬಳಿಕ ಎರಡು ರಾಜ್ಯದ ಗಡೀ ಹಂಚಿಕೊಂಡಿರುವ ಬೀದರ್​ನಲ್ಲಿ ಎರಡೂವರೆ ವರ್ಷದ ಹಿಂದೆ ಅಂದರೆ 2020 ರ ಫೇಬ್ರವರಿ 7 ರಂದು ರಾಜ್ಯದ ಅಂದಿನ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಆಗಮಿಸಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಬೇಡಿಕೆ ಹೆಚ್ಚುತ್ತಿದೆ ಆದರೇ ವಿಮಾನ ಹಾರಾಟದಲ್ಲಿ ಪದೇ ಪದೇ ಕೈಕೊಡುವುದು ವ್ಯಥೆಯ ಉಂಟಾಗುತ್ತಿರುವುದು ಗ್ರಾಹಕರಿಗೆ ಇದರಿಂದ ಕಷ್ಟವಾಗುತ್ತಿದೆ.

ಬೆಂಗಳೂರು ಸಂಪರ್ಕಗಷ್ಟೇ ಸೀಮಿತವಾದ ಬೀದರ್ ಏರ್ ಪೋರ್ಟ್: ಹೊರ ರಾಜ್ಯಕ್ಕೆ ಹಾರಾಟ ನಿರೀಕ್ಷೆ ಹುಸಿ
ಬೀದರ್ ಏರ್ ಪೋರ್ಟ್
Follow us
ಸುರೇಶ ನಾಯಕ
| Updated By: ಗಂಗಾಧರ​ ಬ. ಸಾಬೋಜಿ

Updated on:Sep 11, 2023 | 9:06 PM

ಬೀದರ್​​, ಸೆಪ್ಟೆಂಬರ್​ 11: ಮೂರುವರೆ ವರ್ಷದ ಹಿಂದೆ ಗಡಿ ಜಿಲ್ಲೆ ಬೀದರ್​ನಿಂದ (Bidar airport) ರಾಜ್ಯದ ರಾಜಧಾನಿ ಬೆಂಗಳೂರಿಗೆ ವಿಮಾನ ಹಾರಾಟ ಆರಂಭಿಸಿತು. ಇದು ಸಹಜವಾಗಿಯೇ ಗಡೀ ಜಿಲ್ಲೆ ಜನರ ಖುಷಿಗೂ ಕೂಡಾ ಕಾರಣವಾಗಿತ್ತು, ಆದರೆ ಆರಂಭವಾದ ಮೂರುವರೆ ವರ್ಷದಲ್ಲಿ ಟ್ರೂಜೇಟ್ ವಿಮಾನ ಹಾರಟ ಸ್ಥಗಿತಗೊಳಿಸಿತು, ನಂತರ ಆರಂಭವಾದ ಸ್ಟಾರ್ ಏರ್ ವೇಸ್ ವಿಮಾನವು ಕೂಡಾ ಕೈ ಕೊಡುತ್ತಿದ್ದು, ಪ್ರಯಾಣಿಕರನ್ನ ಹೈರಾಣು ಮಾಡಿದೆ.

ಒಂದು ದಶಕದ ಹೋರಾಟದ ಬಳಿಕ ಎರಡು ರಾಜ್ಯದ ಗಡೀ ಹಂಚಿಕೊಂಡಿರುವ ಬೀದರ್ ನಲ್ಲಿ ಎರಡೂವರೆ ವರ್ಷದ ಹಿಂದೆ ಅಂದ್ರೆ 2020 ರ ಫೇಬ್ರವರಿ 7 ರಂದು ರಾಜ್ಯದ ಅಂದಿನ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಆಗಮಿಸಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಕಲ್ಯಾಣ ಕರ್ನಾಟಕ ಭಾಗದ ದಶಕಗಳ ಕನಸಿಗೆ ರೆಕ್ಕೆ ಪುಕ್ಕ ಬಂದು ಮೂರುವರೆ ವರ್ಷವೇ ಕಳೆದಿದೆ. ಬಡವರು ಸಹ ವಿಮಾನ ಪ್ರಯಾಣ ಮಾಡಲಿ ಅನ್ನೋ ಉದ್ದೇಶದಿಂದ‌ ಕೇಂದ್ರ ಸರ್ಕಾರ ಉಡಾನ್ ಯೋಜನೆ ಜಾರಿಗೆ ತಂದು ಹಲವಾರು, ಅಡ ತಡೆಗಳ ನಡುವೆಯೋ ಗಡಿನಾಡಿನಲ್ಲಿ ವಿಮಾನ ನಿಲ್ದಾಣ ಹಾರಾಟ ನಡೆಸಿತ್ತು.

ಇದನ್ನೂ ಓದಿ: ಬೀದರ್​: ಆರೋಗ್ಯ ಕೇಂದ್ರಕ್ಕೆ ಬಾರದೆ ಚಕ್ಕರ್​ ಹಾಕಿದ ವೈದ್ಯರು, ಚಿಕ್ಕಪುಟ್ಟ ಚಿಕಿತ್ಸೆಗೂ ಜಿಲ್ಲಾಸ್ಪತ್ರೆ ಮೊರೆ ಹೋದ ಗ್ರಾಮಸ್ಥರು

ವಿಮಾನ ಹಾರಾಟ ನಡೆಸಿ ಮೂರುವರೆ ವರ್ಷ ಕಳೆಯಿತು ಆರಂಭದಲ್ಲಿ ಟ್ರೂಜೆಟ್ ವಿಮಾನ ಒಂದೂವರೆ ವರ್ಷಗಳ ಕಾಲ ಬೆಂಗಳೂರು ಬೀದರ್ ಗೆ ಹಾರಾಟ ನಡೆಸಿ ಶಾಸ್ವತವಾಗಿ ಬಂದ್ ಆಯಿತು. ನಂತರ ಬೀದರ್ ನಿಂದಾ ಬೆಂಗಳೂರಿಗೆ ಸ್ಟಾರ್ ವಿಮಾನ ಬೀದರ್ ನಿಂದ ಬೆಂಗಳೂರು, ಬೆಂಗಳೂರಿನಿಂದ ಬೀದರ್ ಗೆ ವಿಮಾನ ಹಾರಾಟ ನಡೆಸಲು ಆರಂಭಿಸಿತು. ಆದರೆ ಈಗ ಸ್ಟಾರ್ ಏರ್ ವೇಸ್ ವಿಮಾನವೂ ಕೂಡಾ ಪದೆ ಪದೆ ಕೈ ಕೊಡುತ್ತಿದ್ದು ಟಿಕೇಟ್ ಬುಕ್ ಮಾಡಿದವರಿಗೆ ನಿರಾಸೆಯುಂಟಾಗುತ್ತಿದ್ದು ತಮ್ಮ ಕೆಲಸ ಕಾರ್ಯಗಳನ್ನ ಮುಂದೂಡಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದ್ದು ಜಿಲ್ಲಾಡಳಿತದ ವಿರುದ್ಧ ಇಲ್ಲಿನ ಪ್ರಜ್ಞಾವಂತ ಜನರು ಆಕ್ರೊಶ ವ್ಯಕ್ತ ಪಡಿಸುತ್ತಿದ್ದಾರೆ.

ಬೀದರ್​ನಲ್ಲಿ ವಿಮಾನ ಹಾರಾಟ ಆರಂಭವಾದಾಗಿನಿಂದಲೂ ಹೆಮ್ಮಾರಿ ಕೋವಿಡ್ ನಂತಹ ಸೋಂಕಿನ ನಡುವೆಯೂ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಬೇಡಿಕೆ ಹೆಚ್ಚುತ್ತಿದೆ ಆದರೇ ವಿಮಾನ ಹಾರಾಟದಲ್ಲಿ ಪದೇ ಪದೇ ಕೈಕೊಡುವುದು ವ್ಯಥೆಯ ಉಂಟಾಗುತ್ತಿರುವುದು ಗ್ರಾಹಕರಿಗೆ ಇದರಿಂದ ಕಷ್ಟವಾಗುತ್ತಿದೆ. ಹೀಗಾಗಿ ಜಿಲ್ಲೆಯ ಜನರು ಅನಿವಾರ್ಯವಾಗಿ ಕಲಬುರ್ಗಿ ಅಥವಾ ಹೈದ್ರಾಬಾದ್ ಗೆ ಹೋಗಿ ವಿಮಾನದ ಮೂಲಕ ಬೆಂಗಳೂರಿಗೆ ಹೋಗವಂತಾ ಸ್ಥಿತಿಯಿಲ್ಲಿ ಉಂಟಾಗಿದೆ.

ಪಕ್ಕದ ಕಲಬುರ್ಗಿಯಿಂದ ದಿನಕ್ಕೆ ಐದಾರು ವಿಮಾನಗಳು ಹಾರಾಟ ಮಾಡುತ್ತಿವೆ. ಜೊತೆಗೆ ಅನ್ಯ ರಾಜ್ಯಕ್ಕೂ ಕೂಡಾ ಇಲ್ಲಿಂದ ವಿಮಾನ ಹಾರಾಟ ಮಾಡುತ್ತಿದೆ ಆದರೇ ಬೀದರ್ನಲ್ಲಿ ಮಾತ್ರ ಇದ್ದ ಒಂದೆ ಒಂದು ವಿಮಾನವೂ ಕೂಡಾ ಹಾರಾಟ ನಡೆಸದೆ ಇರೋದು ಜಿಲ್ಲೆಯ ಜನರ ಅಸಮಾಧಾನ ಹೆಚ್ಚುವಂತೆ ಮಾಡಿದೆ. ಬಡವರು ಸಹ ವಿಮಾನ ಪ್ರಯಾಣ ಮಾಡಲಿ ಅನ್ನೋ ಉದ್ದೇಶದಿಂದ‌ ಕೇಂದ್ರ ಸರ್ಕಾರ ಉಡಾನ್ ಯೋಜನೆ ಜಾರಿಗೆ ತಂದಿದೆ.

ಇದನ್ನೂ ಓದಿ: ದಂಡ ಕಟ್ಟುತ್ತಿದ್ದಾರೆಯೇ ಹೊರತು ಸಂಚಾರಿ ನಿಯಮ ಪಾಲಿಸದ ಸವಾರರು: 8 ತಿಂಗಳಲ್ಲಿ 2 ಕೋಟಿ ರೂ ಸಂಗ್ರಹ

ಅಡ ತಡೆಗಳ ನಡುವೆಯೋ ಗಡಿನಾಡಿನಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆ ಗೊಂಡು ಮೂರುವರೆ ವರ್ಷ ಕಳಿತು. ಅಷ್ಟರಲ್ಲಿಯೇ ಟ್ರೂಜೇಟ್ ವಿಮಾನ ಹಾರಾಟ ನಿಲ್ಲಿಸಿದೆ, ಇದಾದನಂತರ ಸ್ಟಾರ್ ಏರ್ ವೇಸ್ ವಿಮಾನ ಹಾರಾಡುತ್ತಲ್ಲಿತ್ತು ಆದರೆ ಈಗ ಸ್ಟಾರ್ ಏರ್ ವೇಸ್ ಕೂಡಾ ಪದೇ ಪದೇ ಕೈ ಕೊಡುತ್ತಿದ್ದು ಗ್ರಾಹಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನೂ ವಿಚಾರ ಬಗ್ಗೆ ಬೀದರ್ ಜಿಲ್ಲಾಧಿಕಾರಿಯವರನ್ನ ಕೇಳಿದರೆ ಪ್ರಯಾಣಿಕರ ಕೊರತೆಯಿಂದ ವಿಮಾನ ಹಾರಾಟದಲ್ಲಿ ವ್ಯಥೆಯವಾಗುತ್ತಿದೆ ವಿಮಾನ ಕಂಪನಿಯ ಜೊತೆಗೆ ಮಾತುಕತೆ ನಡೆಸಿ ಸಮಸ್ಯೆಯ ಬಗ್ಗೆ ತಿಳಿದುಕೊಂಡು ಸಮಸ್ಯೆ ಬಗೆಹರಿಸುವ ಮಾತುಗಳನ್ನ ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ..

ಬೀದರ್ ನಾಗರಿಕ ವಿಮಾನ ಯಾನಕ್ಕೆ ಹಿಡಿದ ಗ್ರಹನ ಬಿಡುವ ಲಕ್ಷಣ ಗೋಚರಿಸುತ್ತಿಲ್ಲ. ಬಿಜೆಪಿ ಸರಕಾರ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿದಂತೆ ಬೀದರ್ ನಿಂದ ವಿಮಾನ ಹಾರೋಡೋಕೆ ಆರಂಭ ಮಾಡಿತು. ಆದರೆ ಒಂದೆ ವಿಮಾನ ಹಾರಾಟಕ್ಕೆ ಸಿಮೀತಗೊಳಿಸಲಾಗಿದ್ದು ಇಷ್ಟೇಕ್ಕೆನಾ ವಿಮಾನ ನಿಲ್ದಾಣ ನಮಗೆ ಬೇಕಾಗಿತ್ತಾ ಅಂತಾ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಪಕ್ಕದ ಕಲಬುರ್ಗಿಯಲ್ಲಿ ಬೆಂಗಳೂರು ಕಲಬುರಗಿ ಗೆ ಮೂರರಿಂದ ನಾಲ್ಕು ವಿಮಾನ ಹಾಗೂ ದೆಹಲಿ, ತಿರುಪತಿ ಸೇರಿದಂತೆ ಗೋವಾ ರಾಜ್ಯಗಳಿಗೂ ವಿಮಾನ ಹಾರಾಟ ನಡೆಸುತ್ತಿದೆ. ಕಲಬುರಗಿ ಸಂಸದರಿಗೆ ಇರುವ ಹುಮ್ಮಸು ಬೀದರ್ ಸಂಸದರಿಗೆ ಯಾಕೆ ಇಲಾ ಎನ್ನುವ ಮಾತುಗಳು ಕೇಳಿ ಬಂದಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:37 pm, Mon, 11 September 23