ದಂಡ ಕಟ್ಟುತ್ತಿದ್ದಾರೆಯೇ ಹೊರತು ಸಂಚಾರಿ ನಿಯಮ ಪಾಲಿಸದ ಸವಾರರು: 8 ತಿಂಗಳಲ್ಲಿ 2 ಕೋಟಿ ರೂ ಸಂಗ್ರಹ
ಬೀದರ್ ಜಿಲ್ಲೆಯಲ್ಲಿ ಹೆಲ್ಮೆಟ್ ಹಾಕಿಕೊಂಡು ಓಡಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಹಾಗಾಗಿ ಪೊಲೀಸರು ಜನವರಿ 1 ರಿಂದ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಆಗಷ್ಟ್ 30 ರವೆಗೆ 64 ಸಾವಿರದ 7 ನೂರಾ 55 ಕೇಸ್ ದಾಕಲಿಸಿ, 2 ಕೋಟಿ 46 ಲಕ್ಷ 29 ಸಾವಿರದ 9 ನೂರು ರೂಪಾಯಿ ಹಣವನ್ನ ದಂಡದಲ್ಲಿ ವಸೂಲಿ ಮಾಡಿದ್ದೇವೆಂದು ಎಸ್ಪಿ ಹೇಳುತ್ತಿದ್ದಾರೆ.
ಬೀದರ್, ಸೆಪ್ಟೆಂಬರ್ 9: ಸಂಚಾರಿ ನಿಯಮ (traffic rules) ಪಾಲಿಸಿ ಸಾವು ತಪ್ಪಿಸಿ ಎಂದು ಆ ಜಿಲ್ಲೆಯ ಪೊಲೀಸರು ಹತ್ತಾರು ಜಾಗೃತಿ ಕಾರ್ಯಕ್ರಮಗಳನ್ನ ಮಾಡಿದರು. ಆದರೆ ವಾಹನ ಸವಾರರು ಮಾತ್ರ ಪೊಲೀಸರ ಮನವಿಗೆ ಸ್ಫಂದಿಸುತ್ತಿಲ್ಲ. ಸಂಚಾರಿ ನಿಯಮ ಪಾಲಿಸದ ಬೈಕ್, ಕಾರು ಚಾಲಕರಿಗೆ ಭರ್ಜರಿ ದಂಡ ಹಾಕುತ್ತಿದ್ದು, ಸರಕಾರಕ್ಕೆ ಲಕ್ಷಾಂತರ ರೂಪಾಯಿ ಆದಾಯ ಹರಿದು ಬರುತ್ತಿದೆ. ಬೀದರ್ ಜಿಲ್ಲೆಯಲ್ಲಿ ಹೆಲ್ಮೇಟ್ ಹಾಕಿಕೊಂಡು ಓಡಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿತ್ತು, ಬೈಕ್ ಅಫಘಾತದಲ್ಲಿ ಸಾವನಪ್ಪುತ್ತಿರುವರ ಸಂಖ್ಯೆಯಲ್ಲಿಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಬಹುತೇಕರು ಹೆಲ್ಮೇಟ್ ಹಾಕಿದೆಯೇ ಸಾವನಪ್ಪಿದ್ದು ವೈದ್ಯರ ಪೋಸ್ಟ್ ಮಾರ್ಟಮ್ನಿಂದ ಗೊತ್ತಾಗಿದೆ. ಈ ವಿಚಾರವನ್ನ ಗಂಭಿರವಾಗಿ ಪರಿಗಣಿಸಿದ ಎಸ್ಪಿ ಚನ್ನಬಸವಣ್ಣ ಎಸ್.ಎಲ್. ಬೀದರ್ ಪೊಲೀಸರಿಗೆ ಕಡಕ್ ವಾರ್ನಿಕ್ ಮಾಡಿದರು. ಯಾರೇ ಆಗಿಲೇ ಶೀಟ್ ಬೆಲ್ಟ್ ಹಾಗೂ ಬೈಕ್ ಸವಾರರು ಹೆಲ್ಮೇಟ್ ಧರಸದೆ ವಾಹನ ಬೈಕ್ ಓಡಿಸಿದರೇ ದಂಡ ಹಾಕಿ ಪದೇ ಪದೇ ಸಿಕ್ಕಿ ಹಾಕಿಕೊಂಡರೆ ಅವರ ಲೈಸೆನ್ಸ್ ರದ್ದು ಮಾಡುವಂತೆ ಆದೇಶ ಮಾಡಿದ್ದಾರೆ. ಪೊಲೀಸರು ಜನವರಿ 1 ರಿಂದ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು ಆಗಷ್ಟ್ 30 ರವೆಗೆ 64 ಸಾವಿರದ 7 ನೂರಾ 55 ಕೇಸ್ ದಾಕಲಿಸಿ, 2 ಕೋಟಿ 46 ಲಕ್ಷ 29 ಸಾವಿರದ 9 ನೂರು ರೂಪಾಯಿ ಹಣವನ್ನ ದಂಡದಲ್ಲಿ ವಸೂಲಿ ಮಾಡಿದ್ದೇವೆಂದು ಎಸ್ಪಿ ಹೇಳುತ್ತಿದ್ದಾರೆ.
ಇದನ್ನೂ ಓದಿ: ಬೀದರ್: ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ, ಇತಿಹಾಸ ಪ್ರಸಿದ್ಧ ಶಿವನ ದೇವಸ್ಥಾನ ಮುಳುಗಡೆ
ಶಿಟ್ ಬೆಲ್ಟ್ ಹಾಗೂ ಹೆಲ್ಮೆಟ್ ಧರಸದೇ ಓಡಾಡುವಂತೆ ಸಂಚಾರಿ ನೀಯಮ ಪಾಲನೆ ಮಾಡುವಂತೆ ಹತ್ತಾರು ಸಲ ಜಾಗೃತಿ ಕಾರ್ಯಕ್ರಮವನ್ನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಒಂದು ತಿಂಗಳುಗಳ ಕಾಲ ಸಂಚಾರಿ ನೀಯಮ ಪಾಲನೆ ಮಾಡದೆ ಹೆಲ್ಮಟ್ ಹಾಕದೆ ಓಡಾಡುವವರನ್ನ ದಂಡದ ಬದಲಾಗಿ ಅದೆ ಹಣದಲ್ಲಿ ಹೆಲ್ಮೇಟ್ ಕೊಡುವುದರ ಮೂಲಕ ಹೆಲ್ಮಟ್ ಹಾಕಿಕೊಂಡು ಓಡಾಡಿ ಎಂದು ಜಾಗೃತಿ ಮೂಡಿಸಿದ್ದಾರೆ ಇದರ ಜೊತೆಗೆ ಪ್ರತಿನಿತ್ಯ ಹೆಲ್ಮೆಟ್ ಧರಸಿಕೊಂಡು ಬೈಕ್ ಸವಾರಿ ಮಾಡುವುದರಿಂದ ಅಪಘಾತ ಸಂಭವಿಸಿದಲ್ಲಿ ಹೆಲ್ಮೆನಿಂದಾಗುವ ಅನೂಕೂಲದ ಬಗ್ಗೆ ಯುವಕರಲ್ಲಿ ಜಾಗೃತಿಯನ್ನ ಮೂಡಿಸಲಾಗುತ್ತಿದೆ.
ಪ್ರತಿ ಕಾಲೇಜು ಹಾಗೂ ಗ್ರಾಮೀಣ ಪ್ರದೇಶಕ್ಕೂ ತೆರಳಿ ಯುವಕರಲ್ಲಿ ಯುವಕರ ತಂದೆ ತಾಯಿಗಳಿಲ್ಲಿ ಹೆಲ್ಮೆಟ್ ಬಗ್ಗೆ ಹರಿವೂ ಮೂಡಿಸುವ ಕೆಲಸ ದಿನನಿತ್ಯ ನಡೆಯುತ್ತಿದೆ. ಇನ್ನೂ ಪ್ರತಿ ಕಾಲೇಜಿಗೂ, ಶಾಲೆಗಳಿಗೂ ಹೋಗಿ ನಮ್ಮ ಟ್ರಾಪೀಕ್ ಪೊಲೀಸರು ಹೆಲ್ಮೇಟ್ ಬಗ್ಗೆ ಜಾಗೃತಿ ಮೂಡಿಸಿ ಅದರಿಂದಾಗುವ ಪ್ರಯೋಜನದ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಿದರು ಕೂಡಾ ಹೆಲ್ಮೆಟ್ ಹಾಕದೇ ರೋಡಿಗಿಳಿಯುತ್ತಿರುವವ ಬೈಕ್ ಸವಾರರಿಗೆ ದಂಡ ಕಟ್ಟುತ್ತಿದ್ದೇವೆ ಇದರ ಜೊತೆಗೆ ಪದೇ ಪದೇ ಹೆಲ್ಮೇಟ್ ಹಾಕದೇ ದಂಡ ಕಟ್ಟುತ್ತಿದ್ದರೇ ಅಂತವರನ್ನ ಗುರುತಿಸಿ ಅವರ ಲೈಸೆನ್ಸ್ ಕ್ಯಾನಸಲ್ ಮಾಡಿಸುತ್ತೆ.
ಇದನ್ನೂ ಓದಿ: ಕಳೆದ ಎರಡು ದಿನಗಳಿಂದ ಬೀದರ್ನಲ್ಲಿ ನಿರಂತರ ಮಳೆ; ಕಷ್ಟ ಪಟ್ಟು ಬೆಳೆದ ಬೆಳೆ ನೀರುಪಾಲು
ಇನ್ನೂ ದಂಡ ಹಾಕುವ ಉದ್ದೇಶ ದಂಡಕ್ಕೆ ಹೆದರಿಯಾದರೂ ಹೆಲ್ಮೆಟ್ ಹಾಕಿಕೊಂಡು ಓಡಾಡಲಿ ಅನ್ನೋ ಉದ್ದೇಶವೇ ಹೊರತು ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ ಎಂದು ಎಸ್ಪಿ ಹೇಳುತ್ತಿದ್ದು, ಸಾರ್ವಜನಿಕರು ಕೂಡಾ ಪೊಲೀಸರ ಜೊತೆಗೆ ಕೈ ಜೋಡಿಸಿದ್ದು ಹೆಲ್ಮೇಟ್ ಹಾಕಿಕೊಂಡು ಓಡಾಡುತ್ತಿದ್ದು ಎಸ್ಪಿ ನಿರ್ದಾರಕ್ಕೆ ಇಲ್ಲಿನ ಜನರ ಶಬ್ಬಾಶ್ ಹೇಳುತ್ತಿದದ್ದಾರೆ.
ಗಡೀ ಜಿಲ್ಲೆ ಬೀದರನಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು ಪ್ರತಿದಿನ ದ್ವಿಚಕ್ರ ಸವಾರರನ್ನ ತಡೆದು ದಂಡ ಕಟ್ಟುವುದರ ಮುಖಾಂತರ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನೂ ಖುದ್ದು ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಮ್ಮ ಇಲಾಖೆಯ ಅಧಿಕಾರಿಗಳಿಗೆ ದಂಡ ಕಟ್ಟಿಸಿಕೊಂಡಿದ್ದು ಮಾದರಿಯಾಗಿದ್ದಾರೆ. ಈ ವರ್ಷದಲ್ಲಿ 165 ಅಪಘಾತಗಳಲ್ಲಿ ಅತಿ ಹೆಚ್ಚು ಜನರು ಹೆಲ್ಮೆಟ್ ಇಲ್ಲದರಿಂದ ಸಾವನ್ನಪ್ಪುತ್ತಿದ್ದು ಅದಕ್ಕಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಕಡ್ಡಾಯಗೊಳಿಸಿದ್ದು ಸಾರ್ವಜನಿಕರು ಕೂಡ ಸಹಕರಿಸಬೇಕೇಂದು ಕೇಳಿಕೊಳ್ಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:10 pm, Sat, 9 September 23