Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದ ಎರಡು ದಿನಗಳಿಂದ ಬೀದರ್​ನಲ್ಲಿ ನಿರಂತರ ಮಳೆ; ಕಷ್ಟ ಪಟ್ಟು ಬೆಳೆದ ಬೆಳೆ ನೀರುಪಾಲು

ಗಡಿ ಜಿಲ್ಲೆ ಬೀದರ್​ನಲ್ಲಿ ಕಳೆದ ಎರಡು ದಿನದಿಂದ ನಿರಂತರ ಮಳೆ ಸುರಿಯುತ್ತಿದೆ. ಈಗ ಸುರಿಯುತ್ತಿರುವ ಮಳೆ ಕೆಲವು ರೈತರಿಗೆ ವರವಾಗಿದ್ದರೆ. ಇನ್ನೂ ಕೆಲವು ರೈತರಿಗೆ ಶಾಪವಾಗಿ ಪರಿಣಮಿಸಿದೆ. ಕಟಾವಿಗೆ ಬಂದಿದ್ದ ಹೆಸರು ಮೊಳಕೆಯೊಡೆಯುವ ಭೀತಿ ರೈತರಿಗೆ ಎದುರಾಗಿದೆ. ಆದರೆ ಉದ್ದು, ಸೋಯಾ ಬೆಳೆ ಬೇಳೆದ ರೈತರಿಗೆ ಮಳೆ ಅವಶ್ಯಕತೆಯಿತ್ತು. ಈಗ ಮೆಳೆ ಸುರಿದಿದ್ದು ಬಾಡುತ್ತಿದ್ದ ಬೆಳೆಗೆ ಜೀವ ಕಳೆ ಬಂದಿದೆ.

ಕಳೆದ ಎರಡು ದಿನಗಳಿಂದ ಬೀದರ್​ನಲ್ಲಿ ನಿರಂತರ ಮಳೆ; ಕಷ್ಟ ಪಟ್ಟು ಬೆಳೆದ ಬೆಳೆ ನೀರುಪಾಲು
ಕಂಗಾಲಾದ ರೈತ
Follow us
ಸುರೇಶ ನಾಯಕ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 05, 2023 | 7:18 PM

ಬೀದರ್​, ಸೆ.05: ಎರಡು ದಿನದಿಂದ ಸುರಿದ ಮಳೆಗೆ ಹೆಸರು ಬೆಳೆದ ರೈತರ (Farmer) ಕಂಗಾಲಾಗಿದ್ದಾರೆ. ಹೆಸರು ಕಾಳು ಮೊಳಕೆಯೊಡೆಯುವ ಭೀತಿ ರೈತರನ್ನ ಕಾಡುತ್ತಿದೆ. ಆದರೆ, ಮಳೆಯಾಗದ್ದಕ್ಕೆ ಬಾಡುತ್ತಿದ್ದ ಉದ್ದು, ಸೋಯಾ ಬೆಳೆಗೆ ಜೀವ ಕಳೆ ಬಂದಿದೆ. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಕೆಲವು ರೈತರ ಮೊಗದಲ್ಲಿ ನಗು ಮೂಡಿದ್ದು, ಇನ್ನೂ ಕೆಲವು ರೈತರ ನಗು ಕಸಿದುಕೊಂಡಿದೆ. ಹೌದು, ಬೀದರ್ (Bidar) ಜಿಲ್ಲೆಯ ಭಾಲ್ಕಿ ತಾಲೂಕಿನ ಕೋಸಂ ಗ್ರಾಮದಲ್ಲಿ ಇನ್ನೇರಡು ದಿನದಲ್ಲಿ ಹೆಸರು ಬೆಳೆಯನ್ನು ಕಟಾವು ಮಾಡುಬೇಕು ಎಂದುಕೊಂಡಿದ್ದ ರೈತ ಕಂಗಾಲಾಗಿದ್ದಾನೆ.

ಏಕಾಏಕಿ ಎರಡು ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇನ್ನೂ ಎರಡು ದಿನ ಮಳೆಯಾಗುವ ಮೂನ್ಸುಚನೆ ಇದ್ದು, ರೈತನಿಗೆ ದಿಕ್ಕೆ ತೋಚದಂತಾಗಿದೆ. ಬೀದರ್ ಜಿಲ್ಲೆಯ ನಾಲ್ಕು ಲಕ್ಷ ಐವತ್ತು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅದರಲ್ಲಿ 2 ಲಕ್ಷ 75 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಸೋಯಾಬಿನ್ ಬಿತ್ತನೆಯಾಗಿದ್ದರೆ, ಹೆಸರು 1 ಲಕ್ಷ 25 ಸಾವಿರ ಹೇಕ್ಟರ್ ನಷ್ಟು ಬಿತ್ತನೆಯಾಗಿದೆ. ಇನ್ನು ಹೆಸರು ಬೆಳೆ ಕಟಾವಿಗೆ ಬಂದಿದ್ದು, ಶೇಕಡಾ 10 ರಷ್ಟು ರೈತರು ಹೆಸರು ಬೆಳೆಯನ್ನು ರಾಸಿ ಮಾಡಿದ್ದಾರೆ.

ಇದನ್ನೂ ಓದಿ:ವಿಜಯನಗರ ಜಿಲ್ಲೆಯಲ್ಲಿ ಮಳೆಗೆ 80ಕ್ಕೂ ಹೆಚ್ಚು ಮನೆ ಕುಸಿತ; ನದಿ ಪಾತ್ರದ 22 ಗ್ರಾಮಗಳ ಜನರ ಸ್ಥಳಾಂತರಕ್ಕೆ ಸೂಚನೆ

ಇನ್ನೂ ಶೇಕಡಾ 90 ರಷ್ಟು ರೈತರು ಇನ್ನೊಂದು ವಾರದಲ್ಲಿ ಹೆಸರು ರಾಸಿ ಮಾಡುವವರಿದ್ದರು. ಆದರೆ, ಈಗ ಕಟಾವಿಗೆ ಬಂದಿದ್ದ ಸಮಯದಲ್ಲಿ ಏಕಾಏಕಿ ಮಳೆ ಸುರಿದ ಪರಿಣಾಮದಿಂದ ಹೆಸರು ಬೆಳೆ ನಾಶವಾಗುವ ಭೀತಿ ರೈತರನ್ನ ಕಾಡುತ್ತಿದೆ. ಇನ್ನೇರಡು ದಿನ ಹಾಗೇ ಮಳೆ ಸುರಿದರೆ ಹೆಸರು ಕಾಳು ಮೊಳಕೆಯೊಡೆದು ಬಿತ್ತನೆ ಮಾಡಿದ ಖರ್ಚು ಕೂಡ ಬರುವುದಿಲ್ಲ ಎಂದು ರೈತರು ಅವಲತ್ತುಕೊಳ್ಳುತ್ತಿದ್ದಾರೆ.

ಒಂದು ವಾರ ಸತತ ಮಳೆ; ಕೊಚ್ಚಿಕೊಂಡು ಹೋಗಿದ್ದ ಸೋಯಾ ಬಿನ್​ ಬೆಳೆ

ತಿಂಗಳ ಹಿಂದೆಯೂ ಜಿಲ್ಲೆಯಲ್ಲಿ ಒಂದು ವಾರಸತತವಾಗಿ ಮಳೆಯಾಗಿತ್ತು. ಆ ಸಮಯದಲ್ಲಿ ಉದ್ದು, ಸೋಯಾ ಬಿನ್ ಬೆಳೆ ಸತತ ಮಳೆಯಿಂದಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಸತತ ಮಳೆಯಿಂದಾಗಿ ಹೊಲದಲ್ಲಿ ನೀರು ನಿಂತುಕೊಂಡು ಉದ್ದು, ಸೋಯಾ ಬೆಳೆ ಹಳದಿ ಬಣ್ಣಕ್ಕೆ ತಿರುಗಿಕೊಂಡು ಶೇಕಡಾ 20 ರಷ್ಟು ಬೆಳೆ ಆರಂಭದಲ್ಲಿಯೇ ಹಾಳಾಗಿತ್ತು. ನಂತರ ಒಂದು ತಿಂಗಳ ಕಾಲ ಮಳೆ ಸುರಿಯದೆ ಇದ್ದುದ್ದರಿಂದ ಉದ್ದು, ಸೋಯಾ ಬೆಳೇ ಬಾಡಿತ್ತು. ಕೆಲವೂ ರೈತರು ನೀರು ಬಿಟ್ಟು ಬಾಡುತ್ತಿದ್ದ ಉದ್ದು ಸೋಯಾ ಬೆಳೆಯನ್ನು ಕಾಪಾಡಿಕೊಂಡಿದ್ದರು.

ಇದನ್ನೂ ಓದಿ:ಡಿಕೆ ಶಿವಕುಮಾರ್ ಮನಸ್ಥಿತಿಯ ನಾಯಕರಿಂದ ರಾಜ್ಯ ಕಷ್ಟಕ್ಕೆ ಸಿಲುಕಿದೆ; ರೈತ ಮುಖಂಡ ನಂಜುಂಡೇಗೌಡ ವಾಗ್ದಾಳಿ

ಈ ಬಾರಿ ಬೀದರ್ ಜಿಲ್ಲೆಯ ರೈತರ ಸ್ಥಿತಿ ಶೋಚನೀಯವಾಗಿದೆ. ಸೋಯಾ, ಅವರೆ, ಉದ್ದು ಜೋಳ, ಬೆಳೆಗಾರರ ಪರಿಸ್ಥಿತಿ ಸಂಪೂರ್ನವಾಗಿ ಹದೆಗಿಟ್ಟಿದ್ದು, ಮತ್ತೆ ಸಾಲದ ಸುಳಿಯಲ್ಲಿ ಸಿಲುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವಾರು ವರ್ಷಗಳಿಂದ ಸೋಯಾ, ಉದ್ದು ಬೆಳೆಯನ್ನೇ ನಂಬಿಕೊಂಡಿದ್ದ ರೈತರಿಗೆ ಬರಸಿಡಿಲಿನಂತೆ ಬಂದ ಮಳೆ, ರೈತರ ಬದುಕನ್ನು ಬರ್ಬಾದ್ ಮಾಡಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ