AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​: ಆರೋಗ್ಯ ಕೇಂದ್ರಕ್ಕೆ ಬಾರದೆ ಚಕ್ಕರ್​ ಹಾಕಿದ ವೈದ್ಯರು, ಚಿಕ್ಕಪುಟ್ಟ ಚಿಕಿತ್ಸೆಗೂ ಜಿಲ್ಲಾಸ್ಪತ್ರೆ ಮೊರೆ ಹೋದ ಗ್ರಾಮಸ್ಥರು

ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕಾಗಿದ್ದ ಆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ರೋಗಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ದೂರದ ಊರುಗಳಿಂದ ಚಿಕಿತ್ಸೆಗೆಂದು ದಾಖಲಾಗುವ ಅದೇಷ್ಟೋ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಅನಿವಾರ್ಯತೆ ಎದುರಾಗಿದೆ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಆಸ್ಪತ್ರೆಗೆ ಬಾರದೆ ಕೆಲಸಕ್ಕೆ ಹಾಜರಿ ಹಾಕಿ ಮನೆಗೆ ಹೋಗುತ್ತಿದ್ದಾರೆ. ಹೀಗಾಗಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ಬೀದರ್​: ಆರೋಗ್ಯ ಕೇಂದ್ರಕ್ಕೆ ಬಾರದೆ ಚಕ್ಕರ್​ ಹಾಕಿದ ವೈದ್ಯರು, ಚಿಕ್ಕಪುಟ್ಟ ಚಿಕಿತ್ಸೆಗೂ ಜಿಲ್ಲಾಸ್ಪತ್ರೆ ಮೊರೆ ಹೋದ ಗ್ರಾಮಸ್ಥರು
ಬೀದರ್​
ಸುರೇಶ ನಾಯಕ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Sep 10, 2023 | 8:36 PM

Share

ಬೀದರ್​, ಸೆ.10: ಆರೋಗ್ಯ ಕೇಂದ್ರ (Health Center) ಕ್ಕೆ ಬಾರದ ವೈದ್ಯರು, ಚಿಕ್ಕಪುಟ್ಟ ಚಿಕಿತ್ಸೆಗೂ ಜಿಲ್ಲಾಸ್ಪತ್ರೆಗೆ ಹೋಗೋ ಅನಿವಾರ್ಯ ಗ್ರಾಮಸ್ಥರದ್ದು, ಹೌದು, ಗ್ರಾಮೀಣ ಜನರಿಗೆ ಅನುಕೂಲವಾಗಲೆಂದು ಆಯ್ದ ಕೆಲವು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರವನ್ನು ಸರಕಾರ ತೆರೆದಿದೆ. ಈ ಮೂಲಕ ಖಾಯಿಲೆ ಬಿದ್ದರೆ, ಅಪಘಾತಗಳಾದರೆ, ಹೆರಿಗೆ ನೋವು ಕಾಣಿಸಿಕೊಂಡರೆ ತಕ್ಷಣಕ್ಕೆ ಚಿಕಿತ್ಸೆ ಸಿಗಲಿ ಎನ್ನುವ ಉದ್ದೇಶದಿಂದ ಇಲ್ಲಿ ಆಸ್ಪತ್ರೆಗಳನ್ನ ತೆರೆದಿದೆ. ಸುಸ್ಸಜ್ಜಿತ ಕಟ್ಟಡ, ಆ್ಯಂಬುಲೆನ್ಸ್ ಸೌಲಭ್ಯ, ಎಲ್ಲಾ ಚಿಕಿತ್ಸೆಗೂ ಬೇಕಾದ ವೈದ್ಯಕೀಯ ಉಪಕರಣಗಳು, ಸಿಬ್ಬಂದಿಗಳು, ನರ್ಸ್ ಗಳು, ನುರಿತ ವೈದ್ಯರನ್ನ ನೇಮಕ ಮಾಡಿದೆ. ಆದರೆ, ಗ್ರಾಮೀಣ ಭಾಗದ ಜನರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರ ಚಿಕಿತ್ಸೆ ಸಿಗುತ್ತಿಲ್ಲ.

15 ಹಳ್ಳಿಗಳ ಸುಮಾರು 35 ಸಾವಿರ ಜನರಿಗೆ ಆರೋಗ್ಯ ಸೇವೆ ಕಲ್ಪಿಸಬೇಕಿದ್ದ ಬೀದರ್ ತಾಲೂಕಿನ ಬಗದಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಹಲವು ಕಾಯಿಲೆಗಳಿಂದ ಸೊರಗಿದೆ. ಆಪರೇಷನ್ ಥಿಯೇಟರ್ ಇದ್ದರೂ ಶಸ್ತ್ರ ಚಿಕಿತ್ಸಾ ತಜ್ಞರಿಲ್ಲ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ಎಂಬಿಬಿಎಸ್ ವೈದ್ಯರು ಇರುವುದರಿಂದ ಅವರು ಹಾಜರಿ ಹಾಕಿ ಮೆನೆಗೆ ಹೋಗಿರುತ್ತಾರೆ. ಹೀಗಾಗಿ ಇಲ್ಲಿಗೆ ಚಿಕಿತ್ಸೆಗೆ ಬರುವ ರೋಗಿಗಳು ಸಾಕಷ್ಟು ಸಮಸ್ಯೆಯನ್ನ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಆಸ್ಪತ್ರೆಯಲ್ಲಿ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ, ಸಿಬ್ಬಂದಿ ಬಂಧನ

ಬೀದರ್ ಜಿಲ್ಲೆಯಲ್ಲಿ 52 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 8 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 4 ಸಾರ್ವಜನಿಕ ಆರೋಗ್ಯ ಕೇಂದ್ರಗಳಿವೆ. ಜಿಲ್ಲೆಯಲ್ಲಿರುವ ಶೆಕಡಾ 40 ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಚಿಕಿತ್ಸೆಗೆಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗುತ್ತಿರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಯ ಕಡೆಗೆ ರೋಗಿಗಳು ಮುಖ ಮಾಡುವಂತಹ ಸ್ಥಿತಿಯುಂಟಾಗಿದೆ. ಆರೋಗ್ಯ ಇಲಾಖೆ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಉತ್ತಮ ಗುಣಮಟ್ಟದ ಕಟ್ಟಡಗಳಿದ್ದರೂ, ಅಲ್ಲಿಗೇ ವೈದ್ಯರು ಬಾರದೇ ಇರುವುದರಿಂದ ಕೆಲವು ಕಟ್ಟಡಗಳು ಹಾಳಾಗಿದ್ದು, ಅನೈತಿಕ ಚಟುವಟಿಕೆಯ ಸ್ಥಾನಗಳಾಗಿವೆ.

ಇನ್ನೂ ಕೆಲವೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯಾರಂಭಗೊಂಡು ದಶಕಗಳು ಕಳೆದರು, ಇಲ್ಲಿ ನುರಿತ ವೈದ್ಯರನ್ನ, ನರ್ಸಗಳನ್ನ ನೇಮಕಮಾಡಿಲ್ಲ. ಹೀಗಾಗಿ ರೋಗಿಗಳಿಗೆ ಸಿಗಬೇಕಾದ ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅವ್ಯವಸ್ಥೆಯ ಆಗರವಾಗುತ್ತಿವೆ. ಇನ್ನು ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಕಾಟ್​ಗಳು ಮತ್ತು ಹಾಸಿಗೆಗಳು ಧೂಳುತ್ತಿನ್ನುತ್ತಿದೆ. ಸಿಬ್ಬಂದಿ ಕೊರತೆ ಇದ್ದು, ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ ವಿಭಾಗಕ್ಕೆ ಸಿಬ್ಬಂದಿಗಳು ಬೇಕಾಗಿದೆ. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನುರಿತ ತಜ್ಜ ವೈದ್ಯರ ಸಮಸ್ಯೆ ಇದ್ದು ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ.

ಇದನ್ನೂ ಓದಿ:‘ಗಾಯಾಳುನ ಆಸ್ಪತ್ರೆಗೆ ಸೇರಿಸಿ ಬಂದಿದ್ದೇನೆ, ಇದರಲ್ಲಿ ನನ್ನ ತಪ್ಪಿಲ್ಲ’; ಸ್ಪಷ್ಟನೆ ನೀಡಿದ ಹಾಸ್ಯನಟ ಚಂದ್ರಪ್ರಭ

ಇನ್ನು ಹೆರಿಗೆಗೆಂದು ಬರುವ ಹೆಣ್ಣು ಮಕ್ಕಳಿಗೆ ಕುಡಿಯುವ ನೀರಿನಿಂದ ಹಿಡಿದು ಸ್ನಾನ ಮಾಡಲು ಕೂಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀರಿನ ಸಮಸ್ಯೆ ಇದೆ. ಜೊತೆಗೆ ಹೆರಿಗೆಯಾದ ಹೆಣ್ಣು ಮಕ್ಕಳಿಗೆ ಬಿಸಿನೀರು ಪೂರೈಸುವ ವಾಟರ್ ಹೀಟರ್​ಗಳು ಕೂಡ ಕೆಟ್ಟು ಹೋಗಿದ್ದು, ಬೀಸಿ ನೀರು ಬೇಕಾದರೇ ರೋಗಿಗಳು ಹೊರಗಡೆಯಿಂದ ತರುವಂತಾ ಸ್ಥಿತಿ ಇಲ್ಲಿದೆ. ಬಡ ರೋಗಿಗಳಿಗೆ ಅನೂಕೂಲವಾಗಲಿ ಎಂದು ಸರಕಾರ ಆಯ್ದ ಕೆಲ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆದಿದೆ. ಆದರೆ, ಅದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು ರೋಗಿಗಳ ಬದುಕಿನ ಜೊತೆಗೆ ಚಲ್ಲಾಟವಾಡುತ್ತಿವೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ