ಚಿತ್ರಕಲಾ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳಿಂದ ನೈಸರ್ಗಿಕ ಗಣಪತಿ ತಯಾರಿಕೆ: ಮಾರಾಟದೊಂದಿಗೆ ಜನರಲ್ಲಿ ಜಾಗೃತಿ
ಬೀದರ್ನ ಕುಂಬಾರವಾಡಾದ ಬ್ಯಾಂಕ್ ಕಾಲೋನಿಯ ದಿವ್ಯಾ ಮಠ ಹಾಗೂ ಯೋಗೇಶ್ ಚಿತ್ರಕಲಾ ವಿದ್ಯಾರ್ಥಿಗಳು ಕಾಜೇಜು ಹಾಗೂ ತಮ್ಮ ಮನೆಯಲ್ಲಿಯೇ ಪರಿಸರ ಸ್ನೇಹಿ ಗಣೇಶನನ್ನ ತಯಾರಿಸಿದ್ದಾರೆ. ಕಲಿಕೆಯ ಜೊತೆಗೆ ನೈಸರ್ಗಿಕ ಗಣೇಶನನ್ನ ಜನರು ಮನೆಯಲ್ಲಿ ಪೂಜಿಸಲಿ ಅನ್ನೋ ದೃಷ್ಠಿಯಿಂದ ಶಿಕ್ಷಕರು ಗಣಪತಿಗಳನ್ನು ತಯಾರಿಸುತ್ತಾರೆ.
ಬೀದರ್, ಸೆಪ್ಟೆಂಬರ್ 13: ಸೆ. 19 ರಂದು ಎಲ್ಲರ ಮನೆಯಲ್ಲೂ ಗಣೇಶ ಹಬ್ಬ (Ganesh Chaturthi) ಸಂಭ್ರಮ ಶುರುವಾಗಲಿದೆ. ತರಹೇವಾರಿ ಗಣೇಶ ಮೂರ್ತಿಗಳು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿವೆ. ಆದರೆ ಪರಿಸರ ಸ್ನೇಹಿ ಗಣಪತಿ ಪೂಜಿಸುವರ ಸಂಖ್ಯೆ ಕಡಿಮೆಯಾಗುತ್ತಿದ್ದಾರೆ. ಇದನ್ನ ಮನಗಂಡ ಚಿತ್ರಕಲಾ ಶಿಕ್ಷಕರು, ವಿದ್ಯಾರ್ಥಿಗಳು ತಾವೇ ನೈಸರ್ಗಿಕ ಮಣ್ಣಿನ ಗಣೇಶನನ್ನು ತಯಾರಿಸುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಬೀದರ್ನ ಕುಂಬಾರವಾಡಾದ ಬ್ಯಾಂಕ್ ಕಾಲೋನಿಯ ದಿವ್ಯಾ ಮಠ ಹಾಗೂ ಯೋಗೇಶ್ ಚಿತ್ರಕಲಾ ವಿದ್ಯಾರ್ಥಿಗಳು ಕಾಜೇಜು ಹಾಗೂ ತಮ್ಮ ಮನೆಯಲ್ಲಿಯೇ ಪರಿಸರ ಸ್ನೇಹಿ ಗಣೇಶನನ್ನ ತಯಾರಿಸಿದ್ದಾರೆ. ಕಲಿಕೆಯ ಜೊತೆಗೆ ನೈಸರ್ಗಿಕ ಗಣೇಶನನ್ನ ಜನರು ಮನೆಯಲ್ಲಿ ಪೂಜಿಸಲಿ ಅನ್ನೋ ದೃಷ್ಠಿಯಿಂದ ಶಿಕ್ಷಕರು ಗಣಪತಿಗಳನ್ನು ತಯಾರಿಸುತ್ತಾರೆ. ಇವರು ತಯಾರಿಸುವ ಗಣಪತಿಗಳಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಸಿಗುವ ಕೆಂಪು ಮಣ್ಣನ್ನ ತೆಗೆದುಕೊಂಡು ಬಂದು ಅದನ್ನು ಹದಮಾಡಿಕೊಂಡು ಅದರಲ್ಲಿರುವ ಕಲ್ಲುಗಳನ್ನ ತೆಗೆದು ಮಣ್ಣನ್ನ ಒಣಗಿಸಿ ಪುಡಿ ಮಾಡಿ ಗಣಪತಿ ಮೂರ್ತಿಯನ್ನ ತಯಾರಿಸುತ್ತಾರೆ.
ಇದನ್ನೂ ಓದಿ: Ganesh Chaturthi; ಗಣೇಶ ಚತುರ್ಥಿ ಹಬ್ಬಕ್ಕೆ ಸಿದ್ಧತೆ ಜೋರು; ಬೆಳಗಾವಿಯ ಮಾರುಕಟ್ಟೆಯಲ್ಲಿ ಭರ್ಜರಿ ವಹಿವಾಟು
ಇನ್ನೊಂದು ವಿಶೇಷವೆಂದರೆ ಇವರು ತಯಾರಿಸುವ ಮಣ್ಣಿನ ಗಣಪತಿಗೆ ಬಣ್ಣವನ್ನೇ ಹಚ್ಚುವುದಿಲ್ಲ, ಕೇವಲ ಕಣ್ಣು, ಕೊರಳಿಗೆ ಮಾತ್ರ ಬಣ್ಣವನ್ನ ಹಚುವುದರಿಂದ ಇವರು ತಯಾರಿಸುವ ಗಣಪತಿ ಅಪ್ಪಟ ನೈರ್ಗಿಕವವಾಗಿರುವುದರಿಂದ ಇವರು ತಯಾರಿಸವ ಗಣಪತಿಗೆ ಭಾರೀ ಬೇಡಿಕೆ ಇದೆ. ನೀರಿನಲ್ಲಿ ಹಾಕಿದ ಕೂಡಲೇ ಕರಗುವ ಗಣೇಶ ಜನರು ಗಣಪತಿಯನ್ನ ವಿಸರ್ಜನೆಯ ಸಮಯದಲ್ಲಿ ತಮ್ಮ ಮನೆಯಲ್ಲಿಯೇ ವಿಸರ್ಜನೆ ಮಾಡಿ ಆ ನೀರು ಹಾಗೂ ಮಣ್ಣನ್ನ ತುಳಸಿಗಿಡ ನೇಟ್ಟರೇ ಒಳ್ಳೆಯದಾಗುತ್ತದೆ ಎಂದು ದಿವ್ಯಾ ಮಠ ಹೇಳಿದ್ದಾರೆ.
ಇಲ್ಲಿ ತಯಾರಿಸುವ ಗಣಪತಿಗಳನ್ನ ಜೇಡಿಮಣ್ಣನ್ನು ಬಳಸಿ 7 ಇಂಚಿನಿಂದ 19 ಇಂಚಿನ ಗಣಪತಿಯನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಪರಿಸರಕ್ಕೆ ಪೂರಕವಾಗಿರಲಿ ಎಂಬ ಕಾರಣಕ್ಕೆ ಬಣ್ಣವನ್ನೂ ಕೂಡಾ ಬಳಸಲಾಗಿಲ್ಲ. ಗ್ರಾಹಕರು ಆರ್ಡರ್ ಮಾಡಿದರೇ ಸಾಕು ಅವರ ಬೇಡಿಕೆಗೆ ತಕ್ಕಂತೆ ಇಲ್ಲಿ ಗನಪಣನ್ನ ತಯಾರಿಸಿ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಮನೆ-ಮನೆಗೆ ತಲುಪಿಸುತ್ತಾರೆ. ಗಣೇಶ ವಿಗ್ರಹ ತಯಾರಿಕೆಯಲ್ಲಿ ಪ್ರಾವಿಣ್ಯತೆ ಹೊಂದಿರುವ ಇವರು ಗ್ರಾಹಕರಿಗೆ ರುಚಿಸುವ ರೀತಿಯಲ್ಲಿಯೇ ಗಣೇಶನನ್ನ ತಯಾರಿಸಿ ಅವರಿಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಇವರು ತಯಾರಿಸುವ ಗಣೇಶನಿಗೆ ಬೇಡಿಕೆ ಜಾಸ್ತಿ.
ಗಣೇಶನ ವಿಗ್ರಹ ತಯಾರಿಸುವಲ್ಲಿ ಇವರ ಮನೆಯವರು, ಚಿತ್ರಕಲಾ ವಿದ್ಯಾರ್ಥಿಗಳು ಸಹಕಾರ ನೀಡುತ್ತಾರೆ. ನೈಸರ್ಗಿಕವಾಗಿ ಸಿಗುವ ಮಣ್ಣಿನಿಂದ ತಯಾರಿಸಿದ ಗಣಪನನ್ನ ಪೂಜಿಸಿ ಪರಿಸರ ಕಾಪಾಡಿ ಎಂದು ತಾವೇ ಗಣಪನ್ನನ್ನ ತಯಾರಿಸಿ ಕಡಿಮೆ ಬೆಲೆಗೆ ಕೊಂಡುಕೊಳ್ಳಿ ಎಂದು ಜನರ ಮನೆ ಬಾಗಿಲಿಗೆ ಹೋದರು ಗ್ರಾಹಕರು ಮಣ್ಣಿನ ಗನಪನನ್ನ ಪೂಜಿಸಲು ಇಷ್ಟಪಡುತ್ತಿಲ್ಲ. ಆದರೇ ಚಿತ್ರ ಕಲಾ ಮಹಾವಿದ್ಯಾಲಯದ ಟೀಚರ್ ಗಳು ಪರಿಸರ ಕಾಳಜಿ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇದನ್ನೂ ಓದಿ: Ganesha Chaturthi 2023: ಗೌರಿಪುತ್ರನಿಗೆ ಪ್ರಿಯವಾದ ಹಣ್ಣುಗಳಾವುವು? ಇದರಿಂದ ಆರೋಗ್ಯ ಪ್ರಯೋಜನಗಳೇನು?
ಶೃದ್ಧಾ ಭಕ್ತಿಯ ಹಬ್ಬದ ಅಬ್ಬರದಲ್ಲಿ ನಾವು ಪರಿಸರ ಕಾಳಜಿಯನ್ನು ಮರೆಯುತ್ತಿದ್ದವೇ. ಆದರೆ ಹಬ್ಬದ ಜೊತೆಯಲ್ಲಿ ನಮಗೆ ನಮ್ಮ ಜವಾಬ್ದಾರಿ ನೆನಪಿಸುವ ಪ್ರಯತ್ನಕ್ಕೆ ಈ ಶಿಕ್ಷಕರು ಮುನ್ನುಡಿ ಬರೆದಿದ್ದಾರೆ. ಇನ್ನೂ ಇತ್ತಿಚಿನ ದಿನಗಳಲ್ಲಿ ಜೇಡಿ ಮಣ್ಣಿನ ಗಣಪತಿಗಳಿಗೆ ಬೇಡಿಕೆ ಹೆಚ್ಚುತ್ತಿದೆಯಾದದರೂ ನಿರಿಕ್ಷೇಯಷ್ಟು ಬೇಡಿಕೆ ಇಲ್ಲ ಕೆಲವರು ಮಾತ್ರ ಮಣಿನಿಂದ ತಯಾರಿಸಿ ಗಣಪನ್ನನ ಬಳಸುತ್ತಾರೆ ಉತ್ತಮ ಪರಿಸರಕ್ಕಾಗಿ ಮಣಿನಿಂದ ತಯಾರಿಸಿದ ಗಣಪನನ್ನ ಬಳಸಿ ಎಂದು ಎಂದು ಪ್ರಚಾರ್ಯರು ಹೇಳುತ್ತಿದ್ದಾರೆ.
ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪತಿಯ ಅಂದ-ಚಂದಕ್ಕೆ ಮಾರುಹೋಗುತ್ತಿರುವ ಜನರು ಪರಿಸರದ ಬಗ್ಗೆ ಕಾಳಜಿ ಮಾಡುತ್ತಿಲ್ಲ ಅನ್ನೋ ನೋವು ಸಾಕಷ್ಟೂ ಜನರನ್ನ ಕಾಡುತ್ತಿದೆ. ನೈಸರ್ಗಿಕವಾಗಿ ಸಿಗುವ ಮಣ್ಣಿನಿಂದ ತ್ಯಯಾರಿಸಿದ ಗಣಪನನ್ನ ಪೂಜಿಸಿ ಪರಿಸರ ಕಾಪಾಡಿ ಎಂದು ತಾವೇ ಗಣಪನ್ನನ್ನ ತಯಾರಿಸಿ ಕಡಿಮೆಬೆಲೆಗೆ ಕೊಂಡು ಕೊಳ್ಳಿ ಎಂದು ಜನರ ಮನೆ ಬಾಗಿಲಿಗೆ ಹೋದರು ಗ್ರಾಹಕರು ಮಣ್ಣಿನ ಗನಪನನ್ನ ಪೂಜಿಸಲು ಕೆಲವರು ಇಷ್ಟ ಪಟ್ಟರೇ ಕೆಲವರು ಇಷ್ಟಪಡುತ್ತಿಲ್ಲ.
ಶೃದ್ಧಾ ಭಕ್ತಿಯ ಹಬ್ಬದ ಅಬ್ಬರದಲ್ಲಿ ನಾವು ಪರಿಸರ ಕಾಳಜಿಯನ್ನು ಮರೆಯುತ್ತಿದ್ದವೇ. ಆದರೆ ಹಬ್ಬದ ಜೊತೆಯಲ್ಲಿ ನಮಗೆ ನಮ್ಮ ಜವಾಬ್ದಾರಿ ನೆನಪಿಸುವ ಪ್ರಯತ್ನಕ್ಕೆ ಈ ಕಲಾವಿದ ಮುನ್ನುಡಿ ಬರೆದಿದ್ದಾರೆ. ಮತ್ಯಾಕೆ ತಡ ನೀವು ನಿಮ್ಮ ಮನೆಗೆ ಪರಿಸರ ಸ್ನೇಹಿ ಜೇಡಿಮಣ್ಣಿನ ಗಣಪನನ್ನು ಬುಕ್ ಮಾಡಿ ಮನೆಗೆ ತೆಗೆದುಕೊಂಡು ಹೋಗಿ ಪೂಜಿಸಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:15 pm, Wed, 13 September 23