Bagalkot century school: ಶತಮಾನೋತ್ಸವದ ಅಂಚಿನಲ್ಲಿ ಮೇಲ್ಛಾವಣಿ ಕುಸಿದು, ಮಕ್ಕಳಿಗೆ ಆಕಾಶ ದರ್ಶನ ಭಾಗ್ಯ! ಇದು ಸರಕಾರಿ ಮಾದರಿ ಶಾಲೆ

ಮೇಲ್ಛಾವಣಿ ಕುಸಿದು ಆಕಾಶ ದರ್ಶನ ಭಾಗ್ಯ! ಕೊಠಡಿಯೊಳಗೆ ವಿದ್ಯಾರ್ಥಿಗಳ ಬದಲು ಹಂಚು ಕಟ್ಟಿಗೆ. ಇದು ಬಾಗಲಕೋಟೆ ‌ಜಿಲ್ಲೆ ಇಳಕಲ್ ತಾಲ್ಲೂಕಿನ ಗುಡೂರು ಸರಕಾರಿ ಗಂಡು ಮಕ್ಕಳ‌ ಮಾದರಿ ಶಾಲೆ! ಸರಕಾರಿ ಶಾಲೆ ಅಂದರೆ ಯಾಕೆ ಜನ ನಿರ್ಲಕ್ಷ್ಯ ಮಾಡ್ತಾರೆ ಅನ್ನೋದಕ್ಕೆ ಇಂತಹ ಸ್ಥಿತಿಯೇ ಕಾರಣ ಅಂದರೆ ತಪ್ಪಿಲ್ಲ.

Bagalkot century school: ಶತಮಾನೋತ್ಸವದ ಅಂಚಿನಲ್ಲಿ ಮೇಲ್ಛಾವಣಿ ಕುಸಿದು, ಮಕ್ಕಳಿಗೆ ಆಕಾಶ ದರ್ಶನ ಭಾಗ್ಯ! ಇದು ಸರಕಾರಿ ಮಾದರಿ ಶಾಲೆ
ಬಾಗಲಕೋಟೆ ‌ಜಿಲ್ಲೆ: ಇದು ಸರಕಾರಿ ಮಾದರಿ ಶಾಲೆ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on:Aug 02, 2023 | 9:55 AM

ಅದು ಸುಮಾರು ೧೫೬ ವರ್ಷದ ಹಳೆ ಶಾಲೆ. ಶತಮಾನೋತ್ಸವ ಶಾಲೆ ಆದ ಕಾರಣ ಆ ಶಾಲೆ‌ ಮೇಲೆ ಜನರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಅಭಿಮಾನ. ಆದರೆ ಅಂತಹ ಶಾಲೆಯ ಐದು ಕೊಠಡಿಗಳ‌ ಮೇಲ್ಛಾವಣಿ ನೆಲಕಚ್ಚಿದೆ. ಇತ್ತೀಚೆಗೆ ನಿರಂತರ ಸುರಿದ ಮಳೆ ಗಾಳಿಗೆ ಮೇಲ್ಛಾವಣಿ ಸಂಪೂರ್ಣ ಕುಸಿದಿದ್ದು, ಆಕಾಶ ಕಾಣುತ್ತಿದೆ. ಕೊಠಡಿಗಳು, ಮೂಲಭೂತ ಸೌಲಭ್ಯ ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಮೇಲ್ಛಾವಣಿ ಸಂಪೂರ್ಣ ಕುಸಿದು (roof collapse) ಆಕಾಶ ದರ್ಶನ, ಕೊಠಡಿಯೊಳಗೆ ವಿದ್ಯಾರ್ಥಿಗಳ (students) ಬದಲು ಹಂಚು ಕಟ್ಟಿಗೆ. ಹೊರಗಡೆ ವಿದ್ಯಾರ್ಥಿಗಳಿಗೆ ಪಾಠ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ‌ಜಿಲ್ಲೆ ಇಳಕಲ್ ತಾಲ್ಲೂಕಿನ ಗುಡೂರು (ilkal, gudur) ಸರಕಾರಿ ಗಂಡು ಮಕ್ಕಳ‌ ಶಾಲೆಯಲ್ಲಿ. ಸರಕಾರಿ ಶಾಲೆ (Bagalkot century school) ಅಂದರೆ ಯಾಕೆ ಜನರು ನಿರ್ಲಕ್ಷ್ಯ ಮಾಡ್ತಾರೆ ಅನ್ನೋದಕ್ಕೆ ಇಂತಹ ಸ್ಥಿತಿಯೇ ಕಾರಣ ಅಂದರೆ ತಪ್ಪಿಲ್ಲ.

ಇದು ಗೂಡೂರು ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ‌ ಮಾದರಿ ಶಾಲೆ. ೧೮೬೭ ರಲ್ಲಿ ನಿರ್ಮಾಣವಾದ ಶತಮಾನೋತ್ಸವ ಶಾಲೆ. ಶಾಲೆಯ ಐದು ಕೊಠಡಿಗಳ ಸ್ಥಿತಿ ನೋಡಿದರೆ ಸರಕಾರಿ ಶಾಲೆಯ ದುಃಸ್ಥಿತಿ ಅರ್ಥವಾಗುತ್ತದೆ. ಶತಮಾನದ ಶಾಲೆಯಲ್ಲಿ ಒಟ್ಟು ಐದು ಕೊಠಡಿಗಳಿದ್ದುಎಲ್ಲವೂ ಶಿಥಿಲಾವಸ್ಥೆಗೆ ತಲುಪಿವೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಸುರಿದ ಮಳೆ ಗಾಳಿಗೆ ಎಲ್ಲ ಕೊಠಡಿಗಳ‌ ಮೇಲ್ಛಾವಣಿಯೇ ಕುಸಿದು ಬಿದ್ದಿದೆ.

ಹಂಚು ಕಟ್ಟಿಗೆಗಳು ಎಲ್ಲವೂ ಕೊಠಡಿಗಳಲ್ಲಿ ತುಂಬಿಕೊಂಡಿವೆ. ಅಂದು ಅದೃಷ್ಟವಶಾತ್ ವಿದ್ಯಾರ್ಥಿಗಳು ಪಕ್ಕದ ಬೇರೆ ಕೊಠಡಿಯಲ್ಲಿ ಇದ್ದ ಕಾರಣ ಆಗುವ ಅನಾಹುತ ತಪ್ಪಿದೆ. ಹಳೆ ಕೊಠಡಿಗಳ ಭಯದಲ್ಲಿರುವ ವಿದ್ಯಾರ್ಥಿಗಳು ಅಂದು ನಾವು ಆ ಕೊಠಡಿಯಲ್ಲಿಯೇ ಇದ್ದಿದ್ದರೆ ಉಳಿಯುತ್ತಾನೇ ಇರಲಿಲ್ಲ. ಈಗಲೂ ಆಟ ಆಡೋದಕ್ಕೆ ಭಯ ಆಗ್ತಿದೆ. ಜೊತೆಗೆ ಕಂಬೈಂಡ್ ಆಗಿ ಕೂರಿಸಿ ಪಾಠ ಮಾಡೋದರಿಂದ ಪಾಠ ಅರ್ಥ ಆಗ್ತಿಲ್ಲ. ನಮಗೆ ಹೊಸ ಕಟ್ಟಡ ಕಟ್ಟಿಸಿ ಕೊಡಿ ಅಂತಿದ್ದಾರೆ.

ಗೂಡೂರು ಗ್ರಾಮದ ಈ ಶಾಲೆ ೧೮೬೭ ರಲ್ಲಿ ನಿರ್ಮಾಣವಾಗಿದೆ. ಇಲ್ಲಿ ೧ ರಿಂದ ೮ ನೇ ತರಗತಿ ಇದ್ದು ೩೧೦ ವಿದ್ಯಾರ್ಥಿಗಳು ಕನ್ನಡ ಮಾದ್ಯಮದಲ್ಲಿ ಓದುತ್ತಿದ್ದಾರೆ. ಇನ್ನು ಇಲ್ಲಿ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆ ಕೂಡ ಇದ್ದು, ಒಂದರಿಂದ ಮೂರರವರೆಗೆ ಇಂಗ್ಲೀಷ್ ಮಾಧ್ಯಮದಲ್ಲಿ ೮೫ ಜನ ವಿದ್ಯಾರ್ಥಿಗಳಿದ್ದಾರೆ. ಇಂತಹ ಮಾದರಿ ಶಾಲೆಯಲ್ಲಿ ಕೊಠಡಿ ಸಮಸ್ಯೆ ಎದುರಾಗಿದೆ.

ಇದನ್ನೂ ಓದಿ: Karnataka Gruha Jyothi Scheme: ಗೃಹ ಜ್ಯೋತಿ ಯೋಜನೆಯಡಿ ಸೊನ್ನೆ ಕರೆಂಟ್ ಬಿಲ್ ಕೊಟ್ಟಿದ್ದಕ್ಕೆ ಬೆಳಗಾವಿ ಮಹಿಳೆ ಫುಲ್ ಖುಷ್!

ಶಾಲೆಗೆ ಒಟ್ಟು ಹದಿನಾಲ್ಕು ಕೊಠಡಿಗಳ ಅವಶ್ಯಕತೆಯಿದೆ. ಆದರೆ ಒಂಬತ್ತು ಕೊಠಡಿ ಮಾತ್ರವಿದ್ದು ಇನ್ನು ಐದು ಕೊಠಡಿಗಳ ಅವಶ್ಯವಿದೆ. ಕೊಠಡಿ ಕೊರತೆ ಕಾರಣ ಕಂಬೈಂಡ್ ಹಾಗೂ ಮೈದಾನದಲ್ಲಿ ವೇದಿಕೆಯಲ್ಲಿ ಪಾಠ ಮಾಡಲಾಗುತ್ತಿದೆ. ಶಾಲೆಗೆ ಶಿಕ್ಷಕರು ಕೂಡ ಬೇಕಾಗಿದೆ. ಇದೆಲ್ಲದರ ಜೊತೆಗೆ ಶೌಚಾಲಯ, ಕಂಪೌಂಡ್ ಅಗತ್ಯವಿದ್ದು ಶತಮಾನೋತ್ಸವ ಶಾಲೆಗೆ ಕಾಯಕಲ್ಪ ಕಲ್ಪಿಸಬೇಕಿದೆ. ಕೊಠಡಿ ಬಗ್ಗೆ ಶಿಕ್ಷಕರು ‌ಮೇಲಾಧಿಕಾರಿಗಳ‌ ಗಮನಕ್ಕೆ ತಂದಿದ್ದು, ಆದಷ್ಟು ಬೇಗ ಹೊಸ ಕೊಠಡಿ, ಕಂಪೌಂಡ್, ಶೌಚಾಲಯ ನಿರ್ಮಿಸಿಕೊಡಬೇಕೆಂದು ಶಿಕ್ಷಕರು ಕೂಡ ಮನವಿ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಶತಮಾನೋತ್ಸವ ಶಾಲೆ ಸ್ಥಿತಿ ಅಧೋಗತಿಗೆ ತಲುಪಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಸುಸಜ್ಜಿತ ಕೊಠಡಿ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಬೇಕಿದೆ.

ಬಾಗಲಕೋಟೆ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:54 am, Wed, 2 August 23

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು