
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಿರಂತರ ಬೆಳವಣಿಗೆ ನಡೆಯುತ್ತಿರುವ ಈ ಯುಗದಲ್ಲಿ, ಬೆಂಗಳೂರು ನಗರದ ಈಸ್ಟ್ ಪಾಯಿಂಟ್ ಶಿಕ್ಷಣ ಸಂಸ್ಥೆಗಳು ದೂರದೃಷ್ಟಿಯ ನಾಯಕತ್ವ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಮಾನವೀಯ ಸೇವೆಯ ಪ್ರತೀಕವಾಗಿ ಹೊರಹೊಮ್ಮಿದೆ. ಬೆಂಗಳೂರು ನಗರದ ಪೂರ್ವಭಾಗದಲ್ಲಿರುವ ಬಿದರಹಳ್ಳಿಯ 100 ಎಕರೆಗಿಂತ ಅಧಿಕ ವಿಸ್ತಾರವಿರುವ ಈಸ್ಟ್ ಪಾಯಿಂಟ್ ‘ಜ್ಞಾನ ಪ್ರಭಾ’ ಕ್ಯಾಂಪಸ್, ಹಚ್ಚ ಹಸಿರು ನಿಸರ್ಗದ ಮಧ್ಯೆ ನವೀನತೆ ಮತ್ತು ಶಾಂತತೆಯ ಸಮನ್ವಯವಿರುವ ಶೈಕ್ಷಣಿಕ ಅನುಭವವನ್ನು ನೀಡುತ್ತದೆ.
ಈಸ್ಟ್ ಪಾಯಿಂಟ್ ಗುಂಪು ಸಂಸ್ಥೆಗಳು (EPGI) —NMC, NAAC, NBA, RGUHS, VTU, BNU, PCI, AICTE, INC, KNC ಮತ್ತು ಇನ್ನೂ ವಿವಿಧ ವಿಶ್ವವಿದ್ಯಾಲಯ ಮತ್ತು ಇತರ ಸಂಸ್ಥೆಗಳ ಅನುಮೋದನೆಗಳನ್ನು ಹೊಂದಿದೆ. ಈ ಅನುಮೋದನೆಗಳು ನಮ್ಮ ಅಧ್ಯಾಪನ ಗುಣಮಟ್ಟವನ್ನು ಮಾನ್ಯಗೊಳಿಸುವುದಲ್ಲದೆ, ಜಾಗತಿಕ ಮಾನ್ಯತೆ ಹೊಂದಿರುತ್ತದೆ. ಈಸ್ಟ್ ಪಾಯಿಂಟ್ ಸಂಸ್ಥೆಗಳು ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳಾದ AWS Academy, Infosys Springboard, Salesforce, Cisco Networking Academy, Oracle Academy, Texas Instruments, VMware IT Academy, ARM University Program, Workato, Medini, ಮತ್ತು UI Path ನೊಂದಿಗೆ ಆದುನಿಕ ತಂತ್ರಜ್ಞಾನದ ಸಾಫ್ಟ್ವೇರ್ ಪ್ಲಾಟ್ಫಾರ್ಮ್ ನಲ್ಲಿ ಕೆಲಸ ಮಾಡುವ ಅವಕಾಶವನ್ನ ನೀಡುತ್ತಿದೆ. ಈ ಪ್ರಮಾಣಪತ್ರಗಳು ಮತ್ತು ಭಾಗಿತ್ವಗಳು ಮುಖ್ಯವಾಗಿ ಹೆಚ್ಚಿನ ಅಧ್ಯಯನ ಮತ್ತು ಉದ್ಯೋಗಗಳಿಗೆ ದ್ವಾರಗಳನ್ನು ತೆರೆಯುತ್ತವೆ. ಇದು ನಮ್ಮ ವಿದ್ಯಾರ್ಥಿಗಳಲ್ಲಿ ಕಂಪನಿಗಳಿಗೆ, ಬೇಕಾಗಿರುವ ಅನುಭವವನ್ನ ನೀಡುತ್ತದೆ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ.
ಭಾರತದ ವಿವಿಧ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಬಂದ 10,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಆತಿಥ್ಯ ನೀಡುವ ಈಸ್ಟ್ ಪಾಯಿಂಟ್, ಶಾಲಾ ಶಿಕ್ಷಣದಿಂದ ಉನ್ನತ ಪಿಎಚ್.ಡಿ.ವರೆಗೆ ಸುದೀರ್ಘ ಶೈಕ್ಷಣಿಕ ಪಯಣವನ್ನೇ ನೀಡುತ್ತದೆ. ಎಂಜಿನಿಯರಿಂಗ್, ಮೆಡಿಕಲ್ ಸೈನ್ಸಸ್, ಮ್ಯಾನೇಜ್ಮೆಂಟ್, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ಅಲೈಡ್ ಹೆಲ್ತ್ ಸೈನ್ಸಸ್, ಪಿಯು ಮತ್ತು ಶಾಲಾ ಶಿಕ್ಷಣದ ಕ್ಷೇತ್ರಗಳಲ್ಲಿ ಈ ಸಂಸ್ಥೆ ಶಿಕ್ಷಣ ನೀಡುತ್ತಿದ್ದು, ಜೀವನಪೂರ್ತಿ ಕಲಿಕೆಯ ಗಮ್ಯಸ್ಥಾನವಾಗಿದೆ.
ಈಸ್ಟ್ ಪಾಯಿಂಟ್‌ನ ನಿಜವಾದ ಶಕ್ತಿ ಅದರ ಅತ್ಯುತ್ತಮ ಅಧ್ಯಾಪಕರು. ಬಹುತೇಕ ಬೋಧಕರಿಗೆ ಪಿಎಚ್.ಡಿ. ಪದವಿಗಳಿದ್ದು, ಅವರಿಗೆ ಶೈಕ್ಷಣಿಕ, ಸಂಶೋಧನೆ ಹಾಗೂ ಉದ್ಯಮದಲ್ಲಿ ಪರಿಪಕ್ವ ಅನುಭವವಿದೆ. ಅವರು ಬೋಧಕರಷ್ಟೇ ಅಲ್ಲ, ನವೀನ ಚಿಂತಕರು ಮತ್ತು ಮಾರ್ಗದರ್ಶಕರೂ ಹೌದು. ಇವರ ಮಾರ್ಗದರ್ಶನವು ವಿದ್ಯಾರ್ಥಿಗಳನ್ನು ಚಿಂತನೆಗೆ, ನೈತಿಕವಾಗಿ ನಡೆಯಲು ಮತ್ತು ಧೈರ್ಯದಿಂದ ಮುನ್ನಡೆಯಲು ಸಜ್ಜುಗೊಳಿಸುತ್ತದೆ. ಬೆಂಗಳೂರು ನಗರದಲ್ಲಿ ಶ್ರೇಷ್ಠ ಶಿಕ್ಷಣ ನೀಡುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈಸ್ಟ್ ಪಾಯಿಂಟ್, ಯಶಸ್ವಿ ಭವಿಷ್ಯದ ಕನಸು ಕಟ್ಟುವ ವಿದ್ಯಾರ್ಥಿಗಳ ಆಯ್ಕೆಯ ಸ್ಥಳವಾಗಿದೆ.
ಈಸ್ಟ್ ಪಾಯಿಂಟ್ ನ ತರಬೇತಿ ಮತ್ತು ನೇಮಕಾತಿ ವಿಭಾಗವು ತರಬೇತಿ, ಉದ್ಯಮ ಸಂಬಂಧಿತ ಸಂವಾದಗಳು, ಇಂಟರ್ನ್‌ಶಿಪ್‌ಗಳು, ನೇಮಕಾತಿ ಅಭಿಯಾನಗಳ ಮೂಲಕ ವಿದ್ಯಾಭ್ಯಾಸ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
ಈಸ್ಟ್ ಪಾಯಿಂಟ್ ನಲ್ಲಿ ಇನ್ಕ್ಯೂಬೇಶನ್ ಬೆಂಬಲ, ಮಾರ್ಗದರ್ಶನ ಕಾರ್ಯಕ್ರಮಗಳು ಮತ್ತು ಕೈಗಾರಿಕಾ ಸಹಕಾರಗಳ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಕಲ್ಪನೆಗಳನ್ನು ಯಶಸ್ವಿ ವ್ಯವಹಾರಗಳಲ್ಲಿ ಪರಿವರ್ತಿಸಲು ಅಗತ್ಯ ಸಂಪನ್ಮೂಲಗಳನ್ನು ನೀಡಲಾಗುತ್ತದೆ.
“ಆಕಾಂಕ್ಷಿ ಎಂಜಿನಿಯರ್‌ನಿಂದ ಜಾಗತಿಕ ಉದ್ಯಮಿಯಾಗುವ ನನ್ನ ಪ್ರಯಾಣವು ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿಯಲ್ಲಿ ಪ್ರಾರಂಭವಾಯಿತು” ಎಂದು ಚೀನಾದ ಗುವಾಂಗ್ಕ್ಸಿ ರಾಮ್‌ವೇ ನ್ಯೂ ಎನರ್ಜಿ ಕಾರ್ಪ್ ಲಿಮಿಟೆಡ್‌ನ ಕಂಟ್ರಿ ಹೆಡ್ (ಭಾರತ) ಶ್ರೀ ಶ್ರೀಧರ್ ಪಾಂಡೆ ಹೇಳುತ್ತಾರೆ. “ಕಾಲೇಜು ನನ್ನ ಕುತೂಹಲವನ್ನು ಬೆಳೆಸಿತು, ಶಿಸ್ತು ಮೂಡಿಸಿತು ಮತ್ತು ನನಗೆ ಅಗತ್ಯವಿದ್ದ ತಾಂತ್ರಿಕ ಆಧಾರದನ್ನು ಒದಗಿಸಿತು. ಸಹಾಯಕವಾದ ಶಿಕ್ಷಕರು, ಸಂಶೋಧನೆಯನ್ನು ಆಧರಿಸಿದ ವಾತಾವರಣ ಮತ್ತು ಆವಿಷ್ಕಾರದ ಮೇಲೆ ಧ್ಯಾನವು ನನಗೆ ಸೀಮೆಗಳೆಲ್ಲಾ ಮೀರಿ ಚಿಂತಿಸುವ ಪ್ರೇರಣೆಯನ್ನು ನೀಡಿತು ಮತ್ತು ನಾನು ಎನರ್ಜಿ-ಟೆಕ್ ಉದ್ಯಮದಲ್ಲಿ ಮುನ್ನಡೆಯಲು ಆತ್ಮವಿಶ್ವಾಸ ನೀಡಿತು.”
ಎಸ್. ವಿ. ಪ್ರಮೋದ್ ಗೌಡ (ಸಿಇಒ, ಈಸ್ಟ್ ಪಾಯಿಂಟ್ ಶಿಕ್ಷಣ ಸಂಸ್ಥೆಗಳು)
ಎಸ್. ವಿ. ಪ್ರಮೋದ್ ಗೌಡ, ಸಿಇಒ, ಈಸ್ಟ್ ಪಾಯಿಂಟ್ ಶಿಕ್ಷಣ ಸಂಸ್ಥೆಗಳು:
“ರೋಗಿಗಳ ಆರೈಕೆ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿ ನವೀಕರಣ ತರಲು Clinical Leadership ಅತ್ಯಗತ್ಯವಾಗಿದೆ ಎಂಬ ನಂಬಿಕೆಯಲ್ಲಿ ನಾವು ಈ ಕ್ಷೇತ್ರದಲ್ಲಿ ಮುಂದುವರಿದಿದ್ದೇವೆ. ಈಸ್ಟ್ ಪಾಯಿಂಟ್‌ನಲ್ಲಿ ನಾವು ಅನುಕಂಪಭರಿತ ಮತ್ತು ಪರಿಣತಿಯುಳ್ಳ ವೈದ್ಯರನ್ನು ರೂಪಿಸಲು ಸಂಶೋಧನೆ, ಪ್ರಾಯೋಗಿಕ ಶಿಕ್ಷಣ ಮತ್ತು ರೋಗಿಕೇಂದ್ರಿತ ಆರೈಕೆಗೆ ಆದ್ಯತೆ ನೀಡುತ್ತೇವೆ.”
ಎಸ್. ವಿ. ರಾಜೀವ್ ಗೌಡ, ಸಿಇಒ, ಈಸ್ಟ್ ಪಾಯಿಂಟ್ ಶಿಕ್ಷಣ ಸಂಸ್ಥೆಗಳು
ಎಸ್. ವಿ. ರಾಜೀವ್ ಗೌಡ, ಸಿಇಒ, ಈಸ್ಟ್ ಪಾಯಿಂಟ್ ಶಿಕ್ಷಣ ಸಂಸ್ಥೆಗಳು:
“ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳು ಪ್ರಗತಿಗೆ ಮಾರ್ಗದರ್ಶನ ನೀಡುತ್ತವೆ ಎಂಬ ನಂಬಿಕೆಯಿಂದ, ನಾವು ಶಿಕ್ಷಣ, ಆರೋಗ್ಯಸೇವೆ ಮತ್ತು ಉದ್ಯಮಶೀಲತೆಯ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಬದ್ಧರಾಗಿದ್ದೇವೆ.
ಭವಿಷ್ಯವನ್ನು ರೂಪಿಸಲು ಅಗತ್ಯವಿರುವ ಪ್ರತಿಭೆ ಮತ್ತು ತಂತ್ರಜ್ಞಾನ ನಮ್ಮ ಬಳಿ ಇದೆ. ಈಸ್ಟ್ ಪಾಯಿಂಟ್‌ನಲ್ಲಿ, ಇವುಗಳ ಸಮನ್ವಯದೊಂದಿಗೆ ಭವಿಷ್ಯ ನಿರ್ಮಾಣದ ದಿಕ್ಕಿನಲ್ಲಿ ಮುಂದುವರೆಯುತ್ತಿದ್ದೇವೆ.”
ಇದನ್ನೂ ಓದಿ: 65 ನೇ ವಯಸ್ಸಿನಲ್ಲಿ ಮೊಮ್ಮಗನೊಂದಿಗೆ 10 ನೇ ತರಗತಿ ಪರೀಕ್ಷೆ ಬರೆದು ಪಾಸ್ ಆದ ಅಜ್ಜಿ
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ