ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಸಂಜೆ ಇಂಜಿನಿಯರಿಂಗ್ ಕಾಲೇಜುಗಳು ಕ್ಲೋಸ್ ಆಗಲಿದೆ. AICTE ಆದೇಶದಂತೆ ರಾಜ್ಯದ 12 ಸಂಜೆ ಕಾಲೇಜು ಬಂದ್ ಆಗಲಿದೆ. ಆಲ್ ಇಂಡಿಯಾ ಕೌನ್ಸೆಲಿಂಗ್ ಫಾರ್ ಟೆಕ್ನಿಕಲ್ ಎಜುಕೇಷನ್ ಆದೇಶದಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸಂಜೆ ಕಾಲೇಜುಗಳು ಬಂದ್ ಆಗಲಿದೆ ಎಂದು ಹೇಳಲಾಗಿದೆ. ರೆಗ್ಯುಲರ್ ಕಾಲೇಜು ಜತೆ ಸಂಜೆ ಕಾಲೇಜುಗಳ ಸಂಯೋಜನೆ ಮಾಡಲಾಗುತ್ತದೆ. ಮುಂದೆ ಸಂಜೆ ಕಾಲೇಜುಗಳಲ್ಲಿ 5, 6, 7, 8ನೇ ಸೆಮಿಸ್ಟರ್‌ಗೆ ಮಾತ್ರ ಕ್ಲಾಸ್ ನಡೆಸಲಾಗುವ ಬಗ್ಗೆ ತಿಳಿಸಲಾಗಿದೆ.
ಸಂಜೆ ಇಂಜಿನಿಯರಿಂಗ್ ಕಾಲೇಜು ಕ್ಲೋಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಡಿಪ್ಲೊಮಾ ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾದಂತಾಗಿದೆ. ಇಂಜಿನಿಯರಿಂಗ್ ಶಿಕ್ಷಣದ ಗುಣಮಟ್ಟದ ಮೇಲೆ ಪ್ರಭಾವ ಹಾಗೂ ಈ ಸಂಜೆಗಳ ಖರ್ಚು ದುಬಾರಿ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. 2020-21ನೇ ಶೈಕ್ಷಣಿಕ ವರ್ಷದಿಂದಲೇ ಸಂಜೆ ಕಾಜೇಜುಗಳು ಕ್ಲೋಸ್ ಆಗಲಿದೆ. ರಾಜ್ಯದ 12 ಇಂಜಿನಿಯರಿಂಗ್ ಕಾಲೇಜುಗಳ ಬಂದ್ ಗೆ ಸೂಚನೆ ನೀಡಲಾಗಿದೆ.
ಬಂದ್ ಆಗಲಿರುವ ಸಂಜೆ ಎಂಜಿನಿಯರಿಂಗ್ ಕಾಲೇಜುಗಳ ವಿವರ ಹೀಗಿದೆ:
– ಬಿಎಂಎಸ್ ಸಂಜೆ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು
– ಎಸ್ ಕೆಎಸ್ ಜೆಟಿಐ ಬೆಂಗಳೂರು
– ಯುವಿಸಿಇ ಸಂಜೆ ಕಾಲೇಜು, ಬೆಂಗಳೂರು
– ಜೈನ್ ಕಾಲೇಜು ಎಂಜಿನಿಯರಿಂಗ್, ಬೆಳಗಾವಿ
– ಕೆ.ಎಲ್.ಎಸ್ ಗೋತೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳಗಾವಿ
– ಬಿಎಲ್ ಡಿಇ ಎಎಸ್ ವಿ.ಪಿ ಡಾ.ಪಿ.ಜಿ ಹಳಕಟ್ಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ವಿಜಯಪುರ
– ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಟೆಕ್ನಾಲಜಿ
– ಎ.ಶ್ಯಾಮರಾವ್ ಫೌಂಡೇಷನ್, ಶ್ರೀನಿವಾಸ್ ಸ್ಕೂಲ್ ಆಫ್ ಎಂಜಿನಿಯರಿಂಗ್
– ಪಿ.ಎ.ಕಾಲೇಜು ಆಫ್ ಎಂಜಿನಿಯರಿಂಗ್, ಮಂಗಳೂರು
– ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
– ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು
– ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು, ಮಂಗಳೂರು
ಇದನ್ನೂ ಓದಿ: ಕ್ರೀಡಾ ಚಟುವಟಿಕೆ ನಡೆಸದೆ ಕ್ರೀಡಾ ನಿಧಿ ಶುಲ್ಕ ಸಂಗ್ರಹಕ್ಕೆ ಮುಂದಾದ ಸಾರ್ವಜನಿಕ ಶಿಕ್ಷಣ ಇಲಾಖೆ, ಪೋಷಕರ ಆಕ್ರೋಶ
ಇದನ್ನೂ ಓದಿ: ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಪಿಠೋಪಕರಣಗಳ ವ್ಯವಸ್ಥೆ ಮಾಡಿ: ಹೆಚ್ಡಿ ರೇವಣ್ಣ