Kannada News Education governor thawar chand gehlot appoints New Vice-Chancellors For Karnataka's five universities
ಕರ್ನಾಟಕದ ಐದು ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿಗಳನ್ನು ನೇಮಿಸಿ ರಾಜ್ಯಪಾಲ ಆದೇಶ
ಕರ್ನಾಟಕ ಐದು ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿಗಳನ್ನು ನೇಮಕವಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿವಿಗಳಿಗೆ ಹೊಸ ಕುಲಪತಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಹಾಗಾದ್ರೆ, ಯಾವೆಲ್ಲಾ ವಿಶ್ವವಿದ್ಯಾಲಯಕ್ಕೆ ಯಾರು ಕುಲಪತಿಯಾಗಿದ್ದಾರೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಮಾರ್ಚ್ 05): ಕರ್ನಾಟಕ ವಿವಿಧ ವಿಶ್ವವಿದ್ಯಾಲಯಗಳಿಗೆ (University) ನೂತನ ಕುಲಪತಿಗಳನ್ನು(Vice-Chancellors) ನೇಮಕ ಮಾಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (governor thawar chand gehlot) ಅವರು ಆದೇಶ ಹೊರಡಿಸಿದ್ದಾರೆ. ಮಂಗಳೂರು, ಬಾಗಲಕೋಟೆ ತೋಟಗಾರಿಕಾ ವಿವಿ, ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಬೆಳಗಾವಿ ರಾಣಿ ಚೆನ್ನಮ್ಮ ವಿವಿ, ಕುವೆಂಪು ವಿಶ್ವವಿದ್ಯಾಯಲಗಳಿಗೆ ಹೊಸ ಕುಲಪತಿಗಳನ್ನು ನೇಮಿಸಲಾಗಿದೆ.