ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಮುಖ್ಯ ಆಯ್ಕೆಪಟ್ಟಿ ಪ್ರಕಟ

|

Updated on: Mar 08, 2023 | 5:47 PM

15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8) ನೇಮಕಾತಿ -2022ರ 1:1 ಮುಖ್ಯ ಆಯ್ಕೆ ಪಟ್ಟಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಮುಖ್ಯ ಆಯ್ಕೆಪಟ್ಟಿ ಪ್ರಕಟ
ಪ್ರಾತಿನಿಧಿಕ ಚಿತ್ರ
Image Credit source: eedina.com
Follow us on

ಬೆಂಗಳೂರು: 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8) ನೇಮಕಾತಿ -2022ರ 1:1 ಮುಖ್ಯ (15,000 Graduate Primary School Teachers Recruitment) ಆಯ್ಕೆ ಪಟ್ಟಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಟ್ವೀಟ್​ ಮೂಲಕ ಮಾಹಿತಿ ನೀಡಿದೆ. ರಾಜ್ಯ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೊಸದಾಗಿ ಸಿದ್ಧಪಡಿಸಲಾದ 1:1 ಆಯ್ಕೆ ಪಟ್ಟಿಯು ಇಲಾಖೆಯ ವೆಬ್‌ಸೈಟ್‌ನಲ್ಲಿ ಸದ್ಯ ಲಭ್ಯವಿದೆ.

ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 1:1 ಅನುಪಾತದಲ್ಲಿ ‘ತಾತ್ಕಾಲಿಕ ಆಯ್ಕೆ’ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಆದರೆ ಇತರೆ ಹಿಂದುಳಿದ ವರ್ಗಗಳ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಂಬಂಧ ಇಲಾಖೆಯ ನಿಯಮ ಗೊಂದಲಕ್ಕೆ ಕಾರಣವಾಗಿದ್ದ ಹಿನ್ನಲೆ ಒಂದಷ್ಟು ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಪರಿಣಾಮ, ಜನವರಿ 30ರಂದು ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಮಾಡಿ ಆದೇಶ ಹೊರಡಿಸಲಾಗಿತ್ತು. ಸದ್ಯ ಮುಖ್ಯ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: Second PUC Exam 2023: ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ; ಸಿದ್ಧತೆ ಬಗ್ಗೆ ಸಚಿವ ಬಿಸಿ ನಾಗೇಶ್ ಹೇಳಿದ್ದಿಷ್ಟು

ಅನುದಾನಿತ ಶಾಲಾ ಶಿಕ್ಷಕರ ಖಾಯಮಾತಿಗಾಗಿ ಸಿಎಂಗೆ ಮನವಿ

ಅನುದಾನಿತ ಶಾಲಾ ಶಿಕ್ಷಕರ ಖಾಯಂ ನೇಮಕಾತಿ ಮಾಡುವಂತೆ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಶಿಕ್ಷಕರು ಮನವಿ ಸಲ್ಲಿಸಿದ್ದಾರೆ. ನಮ್ಮ ಕೆಲಸವನ್ನು ಖಾಯಂ ಮಾಡದಿದ್ದರೆ ವಿಧಾನಸೌಧದ ಮುಂದೆಯೇ ವಿಷ ಕುಡಿಯುತ್ತೇವೆ ಎಂದ ಮನವಿ ಸಲ್ಲಿಸುವಾಗ ಶಿಕ್ಷಕರು ಕಣ್ಣೀರು ಹಾಕಿದ್ದಾರೆ.

ಅಳಲು ತೊಡಿಕೊಂಡ ಶಿಕ್ಷಕ

ಶಿಕ್ಷಕ ಪ್ರಭು ಮಾತನಾಡಿ, 1985 ರಿಂದ 95 ವರೆಗೆ ಸಾಲಿನಲ್ಲಿರುವವರಿಗೆ ಅನುದಾನ ಕೊಡಬೇಕಿತ್ತು. 2018 ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆದಂತಹ ಸಂದರ್ಭದಲ್ಲಿ ಸರ್ಕಾರದ ಕಡಿತದಲ್ಲಿರುವ ಶಾಲೆಗಳನ್ನ ಮಾತ್ರ ಒಳಪಡಿಸಿದ್ದರು. ನಮ್ಮ ಶಾಲೆಗಳು ಬಾಕಿ ಉಳಿದಿದ್ದವು.  ಉಳಿದ 177 ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಿದರು ಎಂದರು.

ಇದನ್ನೂ ಓದಿ: CMAT 2023 Registration: ಸಿಎಂಎಟಿ ನೋಂದಣಿ ದಿನಾಂಕ ವಿಸ್ತರಣೆ, ಇಲ್ಲದೆ ಸಂಪೂರ್ಣ ಮಾಹಿತಿ

576 ಶಿಕ್ಷಕರ ಭವಿಷ್ಯ ಪ್ರಶ್ನೆಯಾಗಿದ್ದು, ಚುನಾವಣಾ ನೀತಿ ಜಾರಿ ಒಳಗಡೆ ಸರ್ಕಾರಿ ಇದನ್ನ ಮಾಡಿಕೊಡಬೇಕು,
ಇಲ್ಲವೆಂದರೆ ನಾವು ನಮ್ಮ ಊರಿಗೆ ಹೋಗುವುದಿಲ್ಲ. ಸಿಎಂ ಮುಂದೆಯೇ ವಿಷ ಕುಡಿಯುತ್ತೇವೆ ಎಂದು ಅಳಲು ತೊಡಿಕೊಂಡರು.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:32 pm, Wed, 8 March 23