UPSC Study Tips: ಕೋಚಿಂಗ್ ಗೆ ಲಕ್ಷಗಟ್ಟಲೇ ಖರ್ಚು ಮಾಡದೇ ಯುಪಿಎಸ್​ಸಿ ಪರೀಕ್ಷೆಗೆ ಸ್ವಯಂ ಸಿದ್ಧತೆ ಹೇಗೆ? ಇಲ್ಲಿವೆ ಟಿಪ್ಸ್

ಯುಪಿಎಸ್​ಸಿ ಪರೀಕ್ಷೆಗೆ ಕೋಚಿಂಗ್ ಗೆ ಲಕ್ಷಗಟ್ಟಲೇ ಖರ್ಚು ಮಾಡದೇ ಸ್ವಯಂ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು? ಇಲ್ಲಿವೆ ಕೆಲ ಟಿಪ್ಸ್​ಗಳು

UPSC Study Tips: ಕೋಚಿಂಗ್ ಗೆ ಲಕ್ಷಗಟ್ಟಲೇ ಖರ್ಚು ಮಾಡದೇ ಯುಪಿಎಸ್​ಸಿ ಪರೀಕ್ಷೆಗೆ ಸ್ವಯಂ ಸಿದ್ಧತೆ ಹೇಗೆ? ಇಲ್ಲಿವೆ ಟಿಪ್ಸ್
Follow us
TV9 Web
| Updated By: Digi Tech Desk

Updated on:Feb 02, 2023 | 9:09 AM

ದೇಶದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆ ಪ್ರಮುಖವಾದದ್ದು, ಪ್ರತಿ ವರ್ಷ ಆಯೋಗ ನಡೆಸುವ ಈ ಪರೀಕ್ಷೆಯಲ್ಲಿ ಲಕ್ಷಾಂತರ ಆಕಾಂಕ್ಷಿಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಾರೆ. ಮೂರು ಹಂತಗಳಲ್ಲಿ ನಡೆಯುವ ಈ ಪರೀಕ್ಷೆ ಎರಡನೇ ಹಂತವೇ ಮುಖ್ಯ ಪರೀಕ್ಷೆ. ಇದು ನಿರ್ಣಾಯಕ ಹಂತವೂ ಹೌದು. UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೆಲವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋಚಿಂಗ್, ತರಬೇತಿ ಪಡೆದುಕೊಳ್ಳುತ್ತಾರೆ. ಇನ್ನು ಕೋಚಿಂಗ್ ಇಲ್ಲದೇ ಯುಪಿಎಸ್​ಸಿ ಪಾಸ್ ಮಾಡಬಹುದು. ಅದು ಹೇಗೆ ಅಂತೀರಾ? ಇಲ್ಲಿವೆ ನೋಡಿ ಕೆಲ ಟಿಪ್ಸ್.

ನಿಯಮಿತ ಅಭ್ಯಾಸ

ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಕೇಳಲಾದ ಹೆಚ್ಚಿನ ಪ್ರಶ್ನೆಗಳು ಅಭಿಪ್ರಾಯ ಆಧಾರಿತವಾಗಿರುವುದರಿಂದ, ಆಕಾಂಕ್ಷಿಗಳು ತಮ್ಮ ಉತ್ತರಗಳನ್ನು ಸಂಬಂಧಿತ ಉದಾಹರಣೆಗಳೊಂದಿಗೆ ಉತ್ತರಿಸುವ ಅಗತ್ಯವಿದೆ. ಆದ್ದರಿಂದ ಆಕಾಂಕ್ಷಿಗಳು ಪ್ರಸ್ತುತ ಘಟನೆಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಅಭ್ಯರ್ಥಿಗಳು ತಮ್ಮ ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ಚಿಂತನೆಯನ್ನು ಬಲಪಡಿಸಿಕೊಳ್ಳಲು ಪ್ರತಿದಿನ ಪತ್ರಿಕೆಗಳನ್ನು ಓದುವುದು ಸಹ ಮುಖ್ಯವಾಗಿದೆ. ಇದರ ಜೊತೆಗೆ ಪುಸ್ತಕಗಳನ್ನು ಓದಬೇಕು.

ಮೊದಲು ನಿಮ್ಮ ಪಠ್ಯಕ್ರಮವನ್ನು ತಿಳಿದುಕೊಳ್ಳಿ

ಮೊದಲು ನಿಮ್ಮ ಪಠ್ಯಕ್ರಮವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಪಠ್ಯಕ್ರಮದ ಸಂಪೂರ್ಣ ತಿಳುವಳಿಕೆಯನ್ನು ಹೊಂದಿರುವುದು ಅತ್ಯಂತ ಮಹತ್ವದ್ದಾಗಿದೆ. ನೀವು ಹತ್ತಿರದ ಯಾವುದೇ ಸ್ಟೇಷನರಿಯಿಂದ ಸಿಲಬಸ್ ಪುಸ್ತಕವನ್ನು ಖರೀದಿಸಬಹುದು. ಆದ್ರೆ, UPSC ಯ ಪಠ್ಯಕ್ರಮವು ವಿಶಾಲವಾಗಿದೆ. ಹಾಗಾಗಿ ಯುಪಿಎಸ್ಸಿ ಪಠ್ಯಕ್ರಮವನ್ನು ನಿಮ್ಮ ಮಾರ್ಗಸೂಚಿಯಾಗಿ ಪರಿಗಣಿಸಿ ಮತ್ತು ಅದರ ಅನುಸಾರ ಅಧ್ಯಯನ ಮಾಡಬೇಕು. ಆದ್ದರಿಂದ ಫಸ್ಟ್ ಪಠ್ಯಕ್ರಮವನ್ನು ತಿಳಿದುಕೊಳ್ಳುವುದು ಮುಖ್ಯ.

ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಬೇಕು

ಯುಪಿಎಸ್ಸಿಯ ಪ್ರಾಥಮಿಕ ಪರೀಕ್ಷೆಯ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಬೇಕು. ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳ ಪ್ರಕಾರಗಳನ್ನು ಅರ್ಥಮಾಡಿಕೊಳ್ಳಿ. ಈ ಮೂಲಕ ನಿಮ್ಮ ಪರೀಕ್ಷೆ ತಯಾರಿ ಹೇಗಿದೆ ಎಂಬ ಬಗ್ಗೆ ಸಿದ್ಧತೆ ಮಾಡಿಕೊಳ್ಳಿ. ಇದು ಆತ್ಮವಿಶ್ವಾಸ ಹೆಚ್ಚಿಸುತ್ತದೆ. ನಮಗೆ ನಾವೇ ಟೆಸ್ಟ್ ಮಾಡಿಕೊಂಡಂತೆ ಆಗುತ್ತದೆ. ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳು ಬರುತ್ತವೆ ನಮ್ಮ ಸಿದ್ಧತೆ ಹೇಗಿರಬೇಕು ಎಂಬ ಉಪಾಯ ತಿಳಿಯುತ್ತದೆ.

ಆನ್‌ಲೈನ್ ವೀಡಿಯೊಗಳು

ನೀವು ಯಾವುದೇ ಕೋಚಿಂಗ್‌ಗೆ ಹಾಜರಾಗದಿದ್ದರೆ, UPSC ಪರೀಕ್ಷೆಯ ಮೂಲಕ ಪಡೆಯಲು ಉತ್ತಮ ಮಾರ್ಗವೆಂದರೆ ಆನ್‌ಲೈನ್ ವೀಡಿಯೊಗಳನ್ನು ವೀಕ್ಷಿಸುವುದು. ಈ ವೀಡಿಯೊಗಳಿಂದ ನಿಮಗೆ ಅನಾನುಕೂಲವಾಗಿದ್ದರೆ ಅಥವಾ ಅವುಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಿದ್ದರೆ, ಹತ್ತಿರದ ಯಾವುದೇ ಕೋಚಿಂಗ್ ಸೆಂಟರ್‌ಗೆ ಭೇಟಿ ನೀಡಿ ಪುಸ್ತಕಗಳನ್ನ ಪಡೆದುಕೊಂಡು ಅಗತ್ಯವಿರುವ ವಿವರಗಳನ್ನು ಪಡೆದುಕೊಳ್ಳುವುದು ನೀವು ಮಾಡಬಹುದಾದ ಅತ್ಯುತ್ತಮ ಕೆಲಸ.

NCERT ಯೊಂದಿಗೆ ನಿಮ್ಮ ಸಿದ್ಧತೆಯನ್ನು ಪ್ರಾರಂಭಿಸಿ. NCERT ಪುಸ್ತಕಗಳು ಸ್ಥಿರವಾಗಿ ಅಧ್ಯಯನ ಪ್ರಾರಂಭಿಸಲು ಉತ್ತಮ ಜ್ಞಾನದ ಮೂಲವಾಗಿದೆ.

ಉತ್ತರ ಬರೆಯುವ ಕೌಶಲ್ಯ

ನಿಮ್ಮ ಉತ್ತರಗಳನ್ನು ನೀವು ಹೇಗೆ ಪ್ರಸ್ತುತಪಡಿಸುತ್ತೀರಿ ಎಂಬುದು ನಿಮ್ಮ ಒಟ್ಟಾರೆ ಅಂಕಗಳ ಮೇಲೆ ನಿಜವಾಗಿಯೂ ಪರಿಣಾಮ ಬೀರುತ್ತದೆ. ನಿಮ್ಮ ಉತ್ತರ ಬರೆಯುವ ಕೌಶಲ್ಯವನ್ನು ಹೆಚ್ಚಿಸಲು ಉತ್ತಮ ಮಾರ್ಗವೆಂದರೆ ನಿಯಮಿತವಾಗಿ ಉತ್ತರಗಳನ್ನು ಬರೆಯುವುದನ್ನು ಅಭ್ಯಾಸ ಮಾಡುವುದು. ಉತ್ತರ ಬರೆಯುವುದು ನಿಮ್ಮ ಅಭ್ಯಾಸವಾದ ನಂತರ, ಗೊಂದಲವನ್ನು ಸೃಷ್ಟಿಸದೆಯೇ ಗುಣಾತ್ಮಕ ಉತ್ತರಗಳನ್ನು ರೂಪಿಸಲು ನಿಮಗೆ ಸುಲಭವಾಗುತ್ತದೆ. NCERT ಯ ಹಿಂಭಾಗದಲ್ಲಿ ಅನೇಕ ಪ್ರಶ್ನೆಗಳಿವೆ, ನೀವು ಪುಸ್ತಕದ ಸಹಾಯವಿಲ್ಲದೆ ಪ್ರತಿದಿನ ಅಭ್ಯಾಸ ಮಾಡಬೇಕು. ಉತ್ತರವನ್ನು ಹೇಗೆ ಬರೆಯಬೇಕು ಎಂಬುದರ ಕುರಿತು ಇದು ನಿಮಗೆ ತಿಳುವಳಿಕೆಯನ್ನು ನೀಡುತ್ತದೆ.

ಸಮಯ ಹೊಂದಾಣಿಕೆ

ದಿನ ಪೂರ್ತಿ ಓದುತ್ತಾ ಕೂತರೆ ಓದು ತಲೆಗೆ ಹತ್ತುವುದು ಕಷ್ಟ. ಸಾಮಾನ್ಯ ವಿಷಯಕ್ಕೆ ಹೆಚ್ಚು ಸಮಯ ಕೊಡುವ ಬದಲು ಮೊದಲು ಯಾವ ಯಾವ ವಿಷಯಕ್ಕೆ ಎಷ್ಟು ಸಮಯ ಕೊಡಬೇಕು ಎಂದು ಒಂದು ಟೈಮ್ ಟೇಬಲ್ ಸಿದ್ಧ ಮಾಡಿಕೊಂಡು ನಿಮಗೆ ಸುಲಭವಾದ ವಿಷಯಕ್ಕೆ ಕಡಿಮೆ ಸಮಯ ನೀಡಿ ಕಷ್ಟ ಎನಿಸುವ ವಿಷಯಕ್ಕೆ ಹೆಚ್ಚಿನ ಸಮಯ ನೀಡಿ ಎಲ್ಲವನ್ನೂ ಸಮವಾಗಿ ನಿಭಾಯಿಸಿ.

ಪುನರಾವರ್ತನೆ

ಇದು ಪ್ರತಿಯೊಬ್ಬರೂ ಮಾಡಬೇಕಾದ ಅತಿ ಮುಖ್ಯವಾದ ಅಂಶ. ಮೊದಲು ಪ್ರಿಲಿಮಿನರಿ ಪರೀಕ್ಷೆ ಬರುತ್ತೆ. ಬಳಿಕ ಮೇನ್ಸ್ ಎಕ್ಸಾಂ ಬರುತ್ತದೆ. ನಾವು ಒಂದು ಗಂಟೆ ಓದಿದರೂ ಅದನ್ನು ಪುನರಾವರ್ತಿಸಬೇಕು. ಇಂದು ಓದಿದನ್ನೋ ನಾಳೆಯೂ ಪುನರಾವರ್ತನೆ ಮಾಡುವುದರಿಂದ ಆ ವಿಷಯಗಳು ಬೇಗ ಮರೆಯುವುದಿಲ್ಲ. ನೆನಪಿನಲ್ಲಿರುತ್ತದೆ. ಓದಿದ್ದನ್ನು ಬರೆಯುವ ಅಭ್ಯಾಸ ಉತ್ತಮ. ಇದರಿಂದ ನಿಮ್ಮ ಬರವಣಿಗೆ ಸ್ಕಿಲ್ ಕೂಡ ಉತ್ತಮವಾಗುತ್ತದೆ. ನೀವು ಒಂದು ವಿಷಯವನ್ನು ಅಧ್ಯಯನ ಮಾಡಿದ ನಂತರ ಪ್ರತಿ 7 ದಿನಗಳಿಗೊಮ್ಮೆ ಅದನ್ನು ಮರು ಪುನರಾವರ್ತನೆ ಮಾಡಿ. ಇದು ಪರೀಕ್ಷೆಯ ದೃಷ್ಟಿಯಲ್ಲೂ ಸಹ ಉತ್ತಮ ಅಭ್ಯಾಸ.

Published On - 6:03 pm, Wed, 1 February 23