ICAI CA January Exam: ಐಸಿಎಐ ಸಿಎ ಜನವರಿಯ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಕಡೆಯ ದಿನ; ಸಂಪೂರ್ಣ ಮಾಹಿತಿ ಇಲ್ಲಿದೆ

| Updated By: shivaprasad.hs

Updated on: Dec 19, 2021 | 5:10 PM

ICAI CA Exam: ಐಸಿಎಐ ಸಿಎಯ ಜನವರಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದು (ಡಿಸೆಂಬರ್ 19) ಕೊನೆಯ ದಿನಾಂಕವಾಗಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ? ಪರೀಕ್ಷೆಗಳು ಯಾವಾಗ? ಈ ಕುರಿತ ಮಾಹಿತಿ ಇಲ್ಲಿದೆ.

ICAI CA January Exam: ಐಸಿಎಐ ಸಿಎ ಜನವರಿಯ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಕಡೆಯ ದಿನ; ಸಂಪೂರ್ಣ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ನವದೆಹಲಿ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) 2021ರ ಜನವರಿಯ ಸಿಎ (CA) ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದು (ಡಿಸೆಂಬರ್ 19) ಕೊನೆಯ ದಿನವಾಗಿದೆ. ಡಿಸೆಂಬರ್ 17ರಂದು ಸಿಎ ಪರೀಕ್ಷೆಗೆ ಅರ್ಜಿ ಭರ್ತಿ ಮಾಡಲು ಮತ್ತೆ ಅವಕಾಶ ನೀಡಿ, ಎರಡು ದಿನಗಳನ್ನು ನೀಡಲಾಗಿತ್ತು. ಅದು ಇಂದಿಗೆ ಮುಕ್ತಾಯವಾಗಲಿದೆ. ಐಸಿಎಐ ಸಿಎ- ಜನವರಿ ಪರೀಕ್ಷೆಯು 2022ರ ಜನವರಿ 8ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ಸಿಎಯ ಇನ್ಫಾರ್ಮೇಶನ್ ಸಿಸ್ಟಮ್ ಆಡಿಟ್ ಹಾಗೂ ಅಸೆಸ್​ಮೆಂಟ್ ಟೆಸ್ಟ್​​ಗಳಿಗೆ ಅರ್ಜಿ ಸಲ್ಲಿಸಲು ಈ ಸಾಲಿನಲ್ಲಿ ಇದು ಕೊನೆಯ ಅವಕಾಶವಾಗಿದೆ.

ICAI CA 2022 ಜನವರಿ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ? ಮಾಹಿತಿ ಇಲ್ಲಿದೆ

ಹಂತ 1: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ (ICAI ) ಅಧಿಕೃತ ವೆಬ್‌ಸೈಟ್‌ icai.org ಗೆ ಭೇಟಿ ನೀಡಿ.

ಹಂತ 2: ಮುಖಪುಟದಲ್ಲಿ ಲಭ್ಯವಿರುವ ‘ಪ್ರಮುಖ ಪ್ರಕಟಣೆಗಳು’ ವಿಭಾಗಕ್ಕೆ ಹೋಗಿ.

ಹಂತ 3: ಅದರಲ್ಲಿ ‘Re-opening of Online Filling up of Examination Application Forms for Chartered Accountants – Information Systems Audit, Assessment Test, 8th January 2022. – (16-12-2021)’ ಈ ಲಿಂಕ್ ಓಪನ್ ಮಾಡಿ.

ಹಂತ 4: ಲಾಗ್ ಇನ್ ಮಾಡಲು ಸದಸ್ಯತ್ವ ಸಂಖ್ಯೆ, ISA ನೋಂದಣಿ ಸಂಖ್ಯೆ ಮತ್ತು ಭದ್ರತಾ ಪಿನ್ ಅನ್ನು ನಮೂದಿಸಿ.

ಹಂತ 5: ಅರ್ಜಿ ನಮೂನೆಯನ್ನು ಭರ್ತಿ ಮಾಡಿ

ಹಂತ 6: ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅರ್ಜಿ ಶುಲ್ಕವನ್ನು ಪಾವತಿಸಿ.

ಹಂತ 7: ‘ಸಲ್ಲಿಸು’ ಕ್ಲಿಕ್ ಮಾಡಿ

ಹಂತ 8: ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಯಾವುದೇ ಹೆಚ್ಚಿನ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

‘ICAI CA January Exam 2022’ ಪ್ರಮುಖ ದಿನಾಂಕಗಳು ಇಲ್ಲಿವೆ:
ಅರ್ಜಿ ಸಲ್ಲಿಸಲು ಕೊನೆಯ ದಿನ: ಡಿಸೆಂಬರ್ 19, 2021

ಹಾಲ್​ ಟಿಕೆಟ್ ಲಭ್ಯವಾಗುವ ದಿನಾಂಕ: ಡಿಸೆಂಬರ್ 24, 2021

ಪರೀಕ್ಷೆಯ ದಿನಾಂಕ: ಜನವರಿ 8, 2022

ಪರೀಕ್ಷೆಯು ಮೂರು ಗಂಟೆಗಳವರೆಗೆ ಇರುತ್ತದೆ. ಫಾರ್ಮ್ ಅನ್ನು ಸಲ್ಲಿಸುವ ಮೊದಲು ಅಭ್ಯರ್ಥಿಗಳು ರೂ 2,000 ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಭ್ಯರ್ಥಿಗಳು ಮಾಸ್ಟರ್/ವೀಸಾ/ಮೆಸ್ಟ್ರೋ ಕ್ರೆಡಿಟ್/ಡೆಬಿಟ್ ಕಾರ್ಡ್, ರುಪೇ/ಭೀಮ್ UPI, ಅಥವಾ ನೆಟ್‌ಬ್ಯಾಂಕಿಂಗ್ ಅನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಬೇಕು. ದೇಶದಾದ್ಯಂತ 80 ಸ್ಥಳಗಳಲ್ಲಿ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ:

Job Alert: ಬ್ಯಾಂಕ್ ಆಫ್ ಬರೋಡಾದಲ್ಲಿದೆ ವಿವಿಧ ಉದ್ಯೋಗಾವಕಾಶ; ಸಂಪೂರ್ಣ ಮಾಹಿತಿ ಇಲ್ಲಿದೆ

Indian Air Force 2021: ಭಾರತೀಯ ವಾಯುಪಡೆಯ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಹಿತಿ ಇಲ್ಲಿದೆ