ICSE ISC 2021 Result 2021: ಸಿಐಎಸ್ಸಿಇ 10 ಮತ್ತು 12ನೇ ತರಗತಿಗಳ ಪರೀಕ್ಷೆ ಫಲಿತಾಂಶ ಪ್ರಕಟ; ರಿಸಲ್ಟ್ ನೋಡುವ ವಿಧಾನ ಹೀಗಿದೆ..
CICSE ಅಧಿಕೃತ ವೆಬ್ಸೈಟ್ಗಳಾದ www.cisce.org and results.cisce.org. ನಲ್ಲಿ ಇಂದು ಮಧ್ಯಾಹ್ನ 3ಗಂಟೆಗೆ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಈ ವೆಬ್ಸೈಟ್ಗೆ ಹೋಗುವ ಮೂಲಕ ಅಥವಾ ಎಸ್ಎಂಎಸ್ ಮೂಲಕವೂ ಫಲಿತಾಂಶ ಪಡೆಯಬಹುದು.
ದೆಹಲಿ: ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷೆಗಳ ಮಂಡಳಿ (CISCE) 10 ನೇ ತರಗತಿ (ICSE) ಮತ್ತು 12ನೇ ತರಗತಿ (ISC) ಪರೀಕ್ಷೆಗಳ ಫಲಿತಾಂಶವನ್ನು ಅದರ ಅಧಿಕೃತ ವೆಬ್ಸೈಟ್ಗಳಾದ www.cisce.org and results.cisce.org. ನಲ್ಲಿ ಇಂದು ಮಧ್ಯಾಹ್ನ 3ಗಂಟೆಗೆ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಈ ವೆಬ್ಸೈಟ್ಗೆ ಹೋಗುವ ಮೂಲಕ ಅಥವಾ ಎಸ್ಎಂಎಸ್ ಮೂಲಕವೂ ಫಲಿತಾಂಶ ಪಡೆಯಬಹುದು ಎಂದು ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿಯಾಗಿರುವ ಗೆರಿ ಅರಾಥೂನ್ ಶುಕ್ರವಾರವೇ ತಿಳಿಸಿದ್ದರು.
ಕೋಷ್ಟಕ ದಾಖಲಾತಿಗಳನ್ನು ಕರಿಯರ್ಸ್ ಪೋರ್ಟಲ್ (Careers Portal)ಗಳ ಮೂಲಕ ಶಾಲೆಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು. ಆಯಾ ಶಾಲೆಗಳು ಈ ಕರಿಯರ್ಸ್ ಪೋರ್ಟಲ್ನಲ್ಲಿ ಪ್ರಿನ್ಸಿಪಲ್ಗಳ ಲಾಗಿನ್ ಐಡಿ, ಪಾಸ್ವರ್ಡ್ ಬಳಸಿ, ಪಡೆಯಬಹುದಾಗಿದೆ ಎಂದೂ ಅವರು ಹೇಳಿದ್ದರು.
ಫಲಿತಾಂಶ ತಿಳಿಯುವ ವಿಧಾನ ಇಲ್ಲಿದೆ.. 1.ಮೊದಲು results.cisce.org. ಗೆ ಭೇಟಿ ನೀಡಿ 2. ಅಲ್ಲಿ ಕಾಣಿಸುವ Results 2021ಲಿಂಕ್ ಮೇಲೆ ಕ್ಲಿಕ್ ಮಾಡಿ 3. ICSE (Class X) ಎಂಬಲ್ಲಿ ಕ್ಲಿಕ್ ಮಾಡಿ 4. ಅಲ್ಲಿ ನಿಮ್ಮ ತರಗತಿ, ಐಡಿ, ಇಂಡೆಕ್ಸ್ ನಂಬರ್ ಹಾಗೂ ಅಟೋ ಜನರೇಟೆಡ್ ಕೋಡ್ಗಳನ್ನು ನಮೂದಿಸಿ..ಸಬ್ಮಿಟ್ ಮಾಡಿದರೆ ಫಲಿತಾಂಶ ಕಾಣಿಸುತ್ತದೆ. 12ನೇ ತರಗತಿಯ ಫಲಿತಾಂಶವನ್ನೂ ಹೀಗೇ ನೋಡಬಹುದಾಗಿದೆ.
ಇದನ್ನೂ ಓದಿ: ಯಾದಗಿರಿ: ಕಷ್ಟಕಾಲದಲ್ಲಿ ಒದಗದ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸಂತ್ರಸ್ತರ ತೀವ್ರ ಆಕ್ರೋಶ
CSE ISC 2021 Result 2021 declared today and Here is process how to check scores