ಇತ್ತೀಚಿನ ನವೀಕರಣಗಳ ಪ್ರಕಾರ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಪಾಟ್ನಾ ತನ್ನ ಎಂಟೆಕ್ (MTech) ಕಾರ್ಯಕ್ರಮಗಳಿಗೆ ಆನ್‌ಲೈನ್ (Online) ಮೋಡ್‌ನಲ್ಲಿ 15 ವಿಭಿನ್ನ ವಿಶೇಷತೆಗಳಲ್ಲಿ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಎರಡು ವರ್ಷಗಳ ತಂತ್ರಜ್ಞಾನ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್-iitp.ac.in ಮೂಲಕ ನೋಂದಾಯಿಸಿಕೊಳ್ಳಬಹುದು. ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು (ಯಾವುದೇ IIT ಯಿಂದ ಕನಿಷ್ಠ CPI 8.0 ಹೊಂದಿರುವ ಸ್ನಾತಕೋತ್ತರ ಪದವಿ ಹೊಂದಿರುವವರು ಹೊರತುಪಡಿಸಿ) GATE ನೋಂದಣಿ ಸಂಖ್ಯೆ ಮತ್ತು COAP ನೋಂದಣಿ ಸಂಖ್ಯೆಯನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗುತ್ತದೆ.
IIT ಪಾಟ್ನಾ ನೀಡುವ ವಿವಿಧ MTech ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವ ಆಸಕ್ತ ಅಭ್ಯರ್ಥಿಗಳು ಪ್ರಮುಖ ದಿನಾಂಕಗಳನ್ನು ಇಲ್ಲಿ ಪರಿಶೀಲಿಸಬಹುದು.
ಐಐಟಿ ಪಾಟ್ನಾದಲ್ಲಿ ಎಂಟೆಕ್ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ಕಾಮನ್ ಆಫರ್ ಅಡ್ಮಿಷನ್ ಪೋರ್ಟಲ್ (ಸಿಒಎಪಿ) ಪೋರ್ಟಲ್‌ಗೆ ನೋಂದಾಯಿಸಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಭ್ಯರ್ಥಿಗಳು ಸೂಚಿಸಿದ ಹಂತಗಳನ್ನು ಅನುಸರಿಸಬಹುದು.
ಇದನ್ನೂ ಓದಿ: ಬೇರೊಬ್ಬ ವಿದ್ಯಾರ್ಥಿ ಹೆಸರಲ್ಲಿ SSLC ಪರೀಕ್ಷೆ ಬರೆಯುತ್ತಿದ್ದ ಮತ್ತೋರ್ವ ಅಪ್ರಾಪ್ತ ಬಾಲಕ: ಪೋಲಿಸ್ ವಶಕ್ಕೆ
ಮಾಹಿತಿ ಕರಪತ್ರದ ಪ್ರಕಾರ, ಈ ವರ್ಷ COAP ಪೋರ್ಟಲ್ ಮೂಲಕ ಗೇಟ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಆಧರಿಸಿ ಆಯ್ಕೆಯನ್ನು ಮಾಡಲಾಗುತ್ತದೆ.