AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಇಇ ಮೇನ್ 2023: ಸೆಷನ್ 1 ಆನ್ಸರ್ ಕೀಯ ಆಕ್ಷೇಪಣೆ ನೋಂದಾಯಿಸಲು ಇಂದು ಕೊನೆಯ ದಿನಾಂಕ

ಜೆಇಇ ಮೇನ್ 2023 ಉತ್ತರ ಕೀ https://jeemain.nta.nic.in/ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಉತ್ತರ ಕೀ ಚಾಲೆಂಜ್ ವಿಂಡೋ ಇಂದು ಸಂಜೆ 7:50 ಕ್ಕೆ ಮುಚ್ಚುತ್ತದೆ.

ಜೆಇಇ ಮೇನ್ 2023: ಸೆಷನ್ 1 ಆನ್ಸರ್ ಕೀಯ ಆಕ್ಷೇಪಣೆ ನೋಂದಾಯಿಸಲು ಇಂದು ಕೊನೆಯ ದಿನಾಂಕ
ಜೆಇಇ ಮೇನ್ 2023 ಸೆಷನ್ 1 ಉತ್ತರ ಕೀImage Credit source: Hindustan
TV9 Web
| Edited By: |

Updated on:Feb 04, 2023 | 4:52 PM

Share

ಜನವರಿ 2023 ರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೇನ್ ಆನ್ಸರ್ ಕೀಯ ಆಕ್ಷೇಪಣೆ ನೋಂದಾಯಿಸಲು ಇಂದು (ಸಂಜೆ 7:50) ಕೊನೆಯ ದಿನ. ಜನವರಿ 24 – ಫೆಬ್ರವರಿ 1 ರ ನಡುವೆ ನಡೆದ ಜೆಇಇ ಮೇನ್ 2023 ಸೆಷನ್ 1 ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಪ್ರತಿ ಪ್ರಶ್ನೆಗೆ 200 ರೂ ಮರುಪಾವತಿಸಲಾಗದ ಶುಲ್ಕವನ್ನು ಪಾವತಿಸುವ ಮೂಲಕ ಆನ್ಸರ್ ಕೀ ಆಕ್ಷೇಪಣೆಗೆ ನೋಂದಾಯಿಸಬಹುದು . jeemain.nta.nic.in ವೆಬ್‌ಸೈಟ್ ಪೇಪರ್ 1 ಬಿಇ, ಬಿಟೆಕ್ ಪೇಪರ್ ಮತ್ತು ಪೇಪರ್ 2 ಬಿಪ್ಲಾನಿಂಗ್ ಮತ್ತು ಬಿಆರ್ಚ್ ಪೇಪರ್‌ಗಳಿಗೆ ಜೆಇಇ ಮುಖ್ಯ ಆನ್ಸರ್ ಕೀಯನ್ನು ಕೂಡ ಒದಗಿಸುತ್ತಿದೆ.

ಈ ವರ್ಷ, 9 ಲಕ್ಷಕ್ಕೂ ಹೆಚ್ಚು ಅರ್ಜಿದಾರರು ಜೆಇಇ ಮೇನ್ ಸೆಷನ್ 1 ಗೆ ನೋಂದಾಯಿಸಿಕೊಂಡಿದ್ದರು ಅದರಲ್ಲಿ 95.8% ರಷ್ಟು ಹಾಜರಾತಿ ದಾಖಲಾಗಿದೆ. ಅದರಲ್ಲಿ 8.6 ಲಕ್ಷ ಜನರು ಪೇಪರ್ 1 ಬಿಇ , ಬಿಟೆಕ್ ಮತ್ತು 0.46 ಲಕ್ಷ ಪೇಪರ್ 2 ಬಿಆರ್ಚ್ ಮತ್ತು ಬಿಪ್ಲಾನಿಂಗ್ ಗೆ ನೋಂದಾಯಿಸಿಕೊಂಡಿದ್ದರು. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಪ್ರೋವಿಷಿನಲ್ ಜೆಇಇ 2023 ಸೆಷನ್ 2 ಆನ್ಸರ್ ಕೀಯ ಆಕ್ಷೇಪಣೆ ನೋಂದಣಿ ಮಾಡಬಹುದು. ಜೆಇಇ ಮೇನ್ 2023 ಸೆಷನ್ 2 ಆನ್ಸರ್ ಕೀಯನ್ನು ಪರಿಶೀಲಿಸಲು ಅಭ್ಯರ್ಥಿಗಳು, ಜೆಇಇ ಮೇನ್ ಅಪ್ಲಿಕೇಶನ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಪಾಸ್‌ವರ್ಡ್‌ನ ಬಳಸಬೇಕು.

ಜೆಇಇ ಮೇನ್ ಫಲಿತಾಂಶವನ್ನು ಆಕ್ಷೇಪಣೆ ನೋಂದಣಿಗಳನ್ನ ಪರಿಗಣಿಸಿದ ನಂತರ ನೀಡಲಾಗುತ್ತದೆ. ಜೆಇಇ ಮೇನ್ 2023 ಸೆಷನ್ 1 ಫಲಿತಾಂಶವನ್ನು ಫೆಬ್ರವರಿ 6 ರಂದು ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಜೆಇಇ ಮೇನ್ 2023 ಸೆಷನ್ 1 ಅಪ್ಲಿಕೇಶನ್ ಅರ್ಹತೆ ಮತ್ತು ವರ್ಗದ ಸ್ಟೇಟ್ ಕೋಡ್ ಅನ್ನು ತಿದ್ದುಪಡಿ ಮಾಡಲು NTA ಅಪ್ಲಿಕೇಶನ್ ಕರೆಕ್ಷನ್ ವಿಂಡೋ ತೆರೆದಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ – jeemain.nta.nic.in ನಲ್ಲಿ ಕೋಡ್ ಅನ್ನು ಮಾರ್ಪಡಿಸಲು ಸಾಧ್ಯವಾಗುತ್ತದೆ. ತಿದ್ದುಪಡಿಗಳನ್ನು ಮಾಡಲು ಕೊನೆಯ ದಿನಾಂಕ ಫೆಬ್ರವರಿ 5 (ಸಂಜೆ 5:00 )

Published On - 2:58 pm, Sat, 4 February 23

Follow Us
TV9 Web
TV9 Web

TV9 Kannada

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು