ಇಂದು 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಹಾಗೆಯೇ ಉಡುಪಿ ಜಿಲ್ಲೆಗೆ 2 ನೇ ಸ್ಥಾನ, ಕೊಡಗಿಗೆ 3ನೇ ಸ್ಥಾನ, ಉತ್ತರ ಕನ್ನಡ 4ನೇ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ 9ನೇ ಸ್ಥಾನದಲ್ಲಿದ್ದರೆ, ಬೆಂಗಳೂರು ದಕ್ಷಿಣ ಜಿಲ್ಲೆ 10ನೇ ಸ್ಥಾನದಲ್ಲಿದೆ. ಬೆಂಗಳೂರು ಉತ್ತರ ಜಿಲ್ಲೆ 11ನೇ ಸ್ಥಾನದಲ್ಲಿದೆ.
ಕಳೆದ ಬಾರಿಯಂತೆ ಈ ಬಾರಿ ಕೂಡ ಈ ಬಾರಿ ದಕ್ಷಿಣ ಕನ್ನಡ (95.34%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (95.24%) ಎರಡನೇ ಸ್ಥಾನ ಪಡೆದಿದೆ. ಕೊಡಗು (90.55%) ತೃತೀಯ ಸ್ಥಾನ ಪಡೆದಿದೆ. ಯಾದಗಿರಿ ಕೊನೆಯ ಸ್ಥಾನ ಪಡೆದಿದೆ. ಉತ್ತರ ಕನ್ನಡ 90%, ವಿಜಯಪುರ 85%, ಚಿಕ್ಕಮಗಳೂರು 83% ಫಲಿತಾಂಶ ಪಡೆದಿದೆ.
ಮತ್ತಷ್ಟು ಓದಿ: Karnataka 2nd PUC Result 2023: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಚೆಕ್ ಮಾಡಲು ಲಿಂಕ್ ಇಲ್ಲಿದೆ..
ವಾಣಿಜ್ಯ ವಿಭಾಗದಲ್ಲಿ ಅನನ್ಯಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಅವರು 600 ಕ್ಕೆ 600 ಅಂಕಗಳನ್ನು ಪಡೆದಿದ್ದಾರೆ. ಅವರು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 600ಕ್ಕೆ 598 ಅಂಕಗಳನ್ನು ಗಳಿಸುವ ಮೂಲಕ ಶಿವಮೊಗ್ಗದ ಪಿಯು ಕಾಲೇಜಿನ ಡಿ.ಎನ್., ಅನ್ವಿತಾ ಎರಡನೇ ಸ್ಥಾನದಲ್ಲಿದ್ದಾರೆ.
ವಾಣಿಜ್ಯ ವಿಭಾಗ-600ಕ್ಕೆ 596 ಅಂಕ ಪಡೆದ ಛಾಯಾ ರವಿಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ. ಕಲಾ ವಿಭಾಗದಲ್ಲಿ ತಬಸ್ಸುಮ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 600ಕ್ಕೆ 593 ಅಂಕಗಳನ್ನು ತಬಸುಮ್ ಪಡೆದಿದ್ದಾರೆ.
ತಬಸುಮ್, ಬೆಂಗಳೂರಿನ ಜಯನಗರ NMKRV ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಕಲಾ ವಿಭಾಗ-600ಕ್ಕೆ 592 ಅಂಕ ಪಡೆದ ಜಿ.ಎಲ್.ಖುಷನಾಯ್ಕ್ ಎರಡನೇ ಸ್ಥಾನದಲ್ಲಿದ್ದಾರೆ. ಕಲಾ ವಿಭಾಗ-600ಕ್ಕೆ 592 ಅಂಕ ಪಡೆದಿರುವ ಡಡ್ಡಿ ಕರಿಬಸಮ್ಮ ಮೂರನೇ ಸ್ಥಾನದಲ್ಲಿದ್ದಾರೆ.
ಯಾವ ಜಿಲ್ಲೆಗೆ ಯಾವ ಸ್ಥಾನ?
1.ದಕ್ಷಿಣ ಕನ್ನಡ((95.34%)
2.ಉಡುಪಿ(95.24%)
3.ಕೊಡಗು (90.55%)
4.ಉತ್ತರ ಕನ್ನಡ (90%)
5.ವಿಜಯಪುರ (84.69%)
6. ಚಿಕ್ಕಮಗಳೂರು(83.28%)
7. ಹಾಸನ(83.14 %)
8. ಶಿವಮೊಗ್ಗ (83.13%)
9. ಬೆಂಗಳೂರು ಗ್ರಾಮಾಂತರ(83.04%)
10.ಬೆಂಗಳೂರು ದಕ್ಷಿಣ(82.03%)
11.ಬೆಂಗಳೂರು ಉತ್ತರ(82.25%)
12. ಚಾಮರಾಜನಗರ (81.82%)
13.ಮೈಸೂರು (79.89%)
14.ಕೋಲಾರ (79.02%)
15. ಬಾಗಲಕೋಟೆ (78.79%)
16. ಚಿಕ್ಕೋಡಿ (78.76%)
17. ರಾಮನಗರ (78.12%)
18. ಬೀದರ್ (78%)
19. ಚಿಕ್ಕಬಳ್ಳಾಪುರ (77.77 %)
20. ಮಂಡ್ಯ (77.47%)
21. ದಾವಣಗೆರೆ (75.72%)
22. ಕೊಪ್ಪಳ (74.08%)
23. ತುಮಕೂರು (74.05%)
24. ಹಾವೇರಿ (74.13%)
25. ಬೆಳಗಾವಿ (73.98%)
26. ಧಾರವಾಡ (73.54%)
27. ಬಳ್ಳಾರಿ (69.55%)
28. ಚಿತ್ರದುರ್ಗ (69.5%)
29. ಕಲಬುರಗಿ (69.37%)
30 ಗದಗ (66.91%)
31. ರಾಯಚೂರು (66.21%)
32. ಯಾದಗಿರಿ( 62.98%)
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:37 am, Fri, 21 April 23