AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI’s Dark Side: ಹುಶಾರ್​…. ಮಕ್ಕಳಿಗೆ ಕಂಡ ಕಂಡ ಹಾಗೆ ಚಾಟ್​ ಜಿಪಿಟಿ ಬಳಸಲು ಬಿಡಬೇಡಿ; ಪ್ರಾಣಕ್ಕೆ ಕುತ್ತು ತರಬಹುದು!

ಇಂದಿನ ಎಐ ಯುಗದಲ್ಲಿ ಚಾಟ್‌ಜಿಪಿಟಿ ಬಳಕೆ ಯುವಜನರಲ್ಲಿ ಹೆಚ್ಚಾಗುತ್ತಿದೆ. ಮನುಷ್ಯನ ಭಾವನೆಗಳನ್ನು ಅರ್ಥಮಾಡಿಕೊಳ್ಳುವಂತೆ, ಪ್ರತಿಯೊಂದು ಮಾತಿಗೂ ಪ್ರತಿಕ್ರಿಯೆ ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಅಮೆರಿಕದಲ್ಲಿ ಚಾಟ್‌ಜಿಪಿಟಿ ಸಲಹೆ ಪಡೆದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ಚರ್ಚೆಯಾಗುತ್ತಿದೆ. ಈ ಬಗ್ಗೆ ಉದ್ಯಮಿ ಎಲಾನ್ ಮಸ್ಕ್ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದು, ಸದ್ಯ ವ್ಯಾಪಕವಾಗಿ ಹರಿದಾಡುತ್ತಿದೆ.

AI's Dark Side: ಹುಶಾರ್​.... ಮಕ್ಕಳಿಗೆ ಕಂಡ ಕಂಡ ಹಾಗೆ ಚಾಟ್​ ಜಿಪಿಟಿ ಬಳಸಲು ಬಿಡಬೇಡಿ; ಪ್ರಾಣಕ್ಕೆ ಕುತ್ತು ತರಬಹುದು!
ಕೃತಕ ಬುದ್ಧಿಮತ್ತೆ ಬಳಕೆ
ಅಕ್ಷತಾ ವರ್ಕಾಡಿ
|

Updated on: Jan 29, 2026 | 1:01 PM

Share

ಇದು ಎಐ ಯುಗ. ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೃತಕ ಬುದ್ಧಿಮತ್ತೆ (AI) ಬಳಕೆಯಾಗುತ್ತಿದೆ. ಅದರಲ್ಲೂ ಎಐ ಆಧಾರಿತ ಟೂಲ್ ಆಗಿರುವ ಚಾಟ್ ಜಿಪಿಟಿ ಯುವಜನತೆಯನ್ನು ಹೆಚ್ಚಾಗಿ ತನ್ನತ್ತ ಸೆಳೆಯುತ್ತಿದೆ. ಮನುಷ್ಯನ ಭಾವನೆಗಳನ್ನು ಅರ್ಥಮಾಡಿಕೊಳ್ಳುವಂತೆ, ಪ್ರತಿಯೊಂದು ಮಾತಿಗೂ ಪ್ರತಿಕ್ರಿಯೆ ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಒಳ್ಳೆಯದಿರಲಿ ಅಥವಾ ಕೆಟ್ಟದಿರಲಿ, ಚಾಟ್ ಜಿಪಿಟಿಯೊಂದಿಗೆ ಮುಕ್ತವಾಗಿ ಮಾತನಾಡಿ ಅದು ನೀಡುವ ಸಲಹೆಗಳನ್ನು ಅನುಸರಿಸುವವರು ಹೆಚ್ಚಾಗುತ್ತಿದ್ದಾರೆ. ಈ ಪ್ರವೃತ್ತಿ ವಿಶೇಷವಾಗಿ ಯುವ ಪೀಳಿಗೆಯಲ್ಲಿ ಹೆಚ್ಚು ಕಾಣಿಸುತ್ತಿದೆ.

ಇದೇ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಚಾಟ್ ಜಿಪಿಟಿಯ ಸಲಹೆಗಳನ್ನು ಕೇಳಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಎಲಾನ್ ಮಸ್ಕ್ ಅವರು ತಮ್ಮ ಅಧಿಕೃತ ಟ್ವಿಟರ್ (X) ಖಾತೆ @elonmusk ನಲ್ಲಿ ಒಂದು ಪೋಸ್ಟ್ ಅನ್ನು ರೀಟ್ವೀಟ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೇಲಿನ ವಿಡಿಯೋದಲ್ಲಿ, ತಾಯಿಯೊಬ್ಬರು ತಮ್ಮ ಟೀನೇಜ್ ಮಗನ ಸಾವಿಗೆ ಚಾಟ್ ಜಿಪಿಟಿಯೇ ಕಾರಣ ಎಂದು ಆರೋಪಿಸುತ್ತಾರೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ತನ್ನ ಮಗ, ತನ್ನ ಭಾವನೆಗಳನ್ನು ಚಾಟ್ ಜಿಪಿಟಿಯ ಮುಂದೆ ಹಂಚಿಕೊಂಡಿದ್ದ. ಆದರೆ ಆತನ ನಕಾರಾತ್ಮಕ ಆಲೋಚನೆಗಳನ್ನು ತಡೆಯುವ ಬದಲು, ಚಾಟ್ ಜಿಪಿಟಿ ಅವುಗಳನ್ನು ಪ್ರೋತ್ಸಾಹಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಪ್ರಾಣ ತೆಗೆಯುವ ವಿಧಾನಗಳ ಬಗ್ಗೆ ಸಹ ಚಾಟ್ ಜಿಪಿಟಿ ಸಲಹೆ ನೀಡಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಘಟನೆ ಬಳಿಕ, ಮಕ್ಕಳು ಮತ್ತು ಯುವಕರು ಎಐ ಟೂಲ್‌ಗಳನ್ನು ಬಳಸುವ ಬಗ್ಗೆ ಆತಂಕಗಳು ಹೆಚ್ಚಾಗಿವೆ.

ಇದನ್ನೂ ಓದಿ: 100 ರೂ. ಡಿಸ್ಕೌಂಟ್​​ಗಾಗಿ ಫ್ರೀ ಎಂಟರ್ಟೈನ್ಮೆಂಟ್’: ಛೀ.. ಈ ಯುವತಿಯರು ಮಾಡಿದ ಕೆಲಸ ನೋಡಿ

ಮಕ್ಕಳು ಚಾಟ್ ಜಿಪಿಟಿ ಬಳಸುತ್ತಿದ್ದರೆ ಪೋಷಕರು ಎಚ್ಚರ ವಹಿಸುವುದು ಅತ್ಯಗತ್ಯ:

ಚಾಟ್ ಜಿಪಿಟಿಯನ್ನು ಮಕ್ಕಳು ತಮ್ಮ ಅಧ್ಯಯನ, ಭಾಷಾ ಅಭ್ಯಾಸ, ಸಾಮಾನ್ಯ ಜ್ಞಾನ ಹಾಗೂ ಸೃಜನಶೀಲ ಬರವಣಿಗೆ ಮುಂತಾದ ಉತ್ತಮ ಉದ್ದೇಶಗಳಿಗೆ ಬಳಸಬಹುದು. ಆದರೆ ಇದು ಪೋಷಕರ ಮೇಲ್ವಿಚಾರಣೆಯೊಂದಿಗೆ ನಡೆಯಬೇಕು. ಚಿಕ್ಕ ಮಕ್ಕಳನ್ನು ಒಬ್ಬಂಟಿಯಾಗಿ ಬಳಸಲು ಬಿಡದೇ, ಅವರು ಏನು ಕೇಳುತ್ತಿದ್ದಾರೆ, ಯಾವ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಾರೆ ಎಂಬುದನ್ನು ಗಮನಿಸುವುದು ಮುಖ್ಯ. ಅತಿಯಾದ ಅವಲಂಬನೆ ತಪ್ಪಿಸಲು ಬಳಕೆಗೆ ಸಮಯ ಮಿತಿಯನ್ನೂ ನಿಗದಿಪಡಿಸಬೇಕು.

ಅತ್ಯಂತ ಮುಖ್ಯವಾಗಿ, ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಅವರನ್ನು ಸ್ನೇಹಿತರಂತೆ ನೋಡಿಕೊಂಡು, ಮುಕ್ತವಾಗಿ ಮಾತನಾಡುವ ವಾತಾವರಣವನ್ನು ನಿರ್ಮಿಸಬೇಕು. ಮಕ್ಕಳ ಸಮಸ್ಯೆಗಳನ್ನು ಆಲಿಸುವುದು ಮತ್ತು ಅವರ ಮನಸ್ಸಿನ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯ ಎಂದು ಮನೋವೈದ್ಯರು ಸಲಹೆ ನೀಡುತ್ತಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ
ಕುಡಿದ ಮತ್ತಲ್ಲಿ ಅಪಘಾತ ಮಾಡಿ ನಟ ಮಯೂರ್ ಪಟೇಲ್ ಹೇಳಿದ್ದೇನು?
ಕುಡಿದ ಮತ್ತಲ್ಲಿ ಅಪಘಾತ ಮಾಡಿ ನಟ ಮಯೂರ್ ಪಟೇಲ್ ಹೇಳಿದ್ದೇನು?