‘100 ರೂ. ಡಿಸ್ಕೌಂಟ್ಗಾಗಿ ಫ್ರೀ ಎಂಟರ್ಟೈನ್ಮೆಂಟ್’: ಛೀ.. ಈ ಯುವತಿಯರು ಮಾಡಿದ ಕೆಲಸ ನೋಡಿ
ಸೋಷಿಯಲ್ ಮೀಡಿಯಾ ವ್ಯೂಸ್ ಗಾಗಿ ಯುವತಿಯರು ಕ್ಯಾಬ್ ಚಾಲಕನಿಗೆ ರಿಯಾಯಿತಿ ಪಡೆಯಲು "ಉಚಿತ ಮನರಂಜನೆ" ನೀಡುವ ವಿಡಿಯೋ ವೈರಲ್ ಆಗಿದೆ. ಈ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇವಲ ವೈರಲ್ ಆಗಲು ಇಂತಹ ನೈತಿಕತೆಯಿಲ್ಲದ ವರ್ತನೆಗಳು ಸಮಾಜಕ್ಕೆ ಹಾನಿಕರ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಸೇವಾ ವಲಯದ ಕಾರ್ಮಿಕರ ಘನತೆಗೆ ಧಕ್ಕೆ ತರುವ ಇಂತಹ ಕೃತ್ಯಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎಂಬ ಹುಚ್ಚುತನದಿಂದ, ಮುಗ್ದ ಜನರ ಮನಸ್ಸಿಗೆ ನೋವು ಮಾಡುವ ಕೆಲಸಗಳು ನಡೆಯುತ್ತಿದೆ. ಇದರಿಂದ ವೈಯಕ್ತಿಕ ವಿಚಾರಗಳಿಗೆ ಧಕ್ಕೆಯಾಗುತ್ತಿದೆ. ಇದೀಗ ಇಲ್ಲೊಂದು ವಿಡಿಯೋ ಭಾರೀ ವೈರಲ್ ಆಗಿದೆ. ಯುವತಿ ವರ್ತನೆಗೆ ಭಾರೀ ಅಕ್ರೋಶಗಳು ವ್ಯಕ್ತವಾಗಿದೆ, ಇದೀಗ ಈ ಬಗ್ಗೆ ಸರ್ಕಾರಗಳು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅನೇಕ ನೆಟ್ಟಿಗರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕುಂದನ್ ಪಟೇಲ್ ಎಂಬುವವರು (cab driver video) ಹಂಚಿಕೊಂಡಿರುವ ಈ ವಿಡಿಯೋ ಸದ್ಯ ದೊಡ್ಡ ಮಟ್ಟದ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಇಬ್ಬರು ಯುವತಿಯರು ಕ್ಯಾಬ್ ಚಾಲಕನೊಂದಿಗೆ ಬಾಡಿಗೆ ವಿಚಾರವಾಗಿ ಚರ್ಚಿಸುತ್ತಿರುವುದು ಕಂಡುಬರುತ್ತದೆ. ಕೇವಲ 100 ರೂ. ಡಿಸ್ಕೌಂಟ್ (ರಿಯಾಯಿತಿ) ಪಡೆಯಲು ಅವರು ಚಾಲಕನಿಗೆ “ಫ್ರೀ ಎಂಟರ್ಟೈನ್ಮೆಂಟ್” (ಉಚಿತ ಮನರಂಜನೆ) ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಕೇವಲ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಅಥವಾ ‘ವ್ಯೂಸ್’ (Views) ಪಡೆಯಲು ಯುವತಿಯರು ಈ ರೀತಿ ವರ್ತಿಸಿದ್ದಾರೆಯೇ? ಎಂಬ ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಕೇಳಿದ್ದಾರೆ. ಇಂತಹ ವರ್ತನೆಗಳು ಚಾಲಕರ ಮೇಲೆ ಎಂತಹ ಪ್ರಭಾವ ಬೀರುತ್ತವೆ ಮತ್ತು ಇದು ಸಾಮಾಜಿಕ ನೈತಿಕತೆಗೆ ಎಷ್ಟು ಸರಿ ಎಂಬ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಚಾರಕ್ಕಾಗಿ ಇಂತಹ ಕೆಟ್ಟ ವರ್ತನೆಗಳನ್ನು ತೋರುವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅನೇಕರು ಇದನ್ನು “ಲಜ್ಜೆಗೆಟ್ಟ ವರ್ತನೆ” ಎಂದು ಕರೆದಿದ್ದಾರೆ ಮತ್ತು ಶಿಸ್ತುಕ್ರಮಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A video circulating on social media shows girls allegedly offering “free entertainment” to a cab driver in exchange for a ₹100 discount on the fare. The clip, originally shared by Kundan Patel, has triggered widespread debate about boundaries, consent, exploitation, and the… pic.twitter.com/SAwlH4WLBZ
— ShoneeKapoor (@ShoneeKapoor) January 27, 2026
ದಿನವಿಡೀ ಕಷ್ಟಪಟ್ಟು ದುಡಿಯುವ ಕ್ಯಾಬ್ ಚಾಲಕರನ್ನು ಇಂತಹ ಹಾಸ್ಯಾಸ್ಪದ ಅಥವಾ ಮುಜುಗರದ ಸನ್ನಿವೇಶಗಳಿಗೆ ಸಿಲುಕಿಸುವುದು ತಪ್ಪು ಎಂಬ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇನ್ನು ಕೆಲವು ಜನರು ಇದು ಕೇವಲ ಸೋಷಿಯಲ್ ಮೀಡಿಯಾ ರೀಲ್ಸ್‌ಗಾಗಿ ಮಾಡಲಾದ ‘ಪ್ರಾಂಕ್’ ಎಂದು ಹೇಳಿದ್ದಾರೆ. ಒಂದು ವೇಳೆ ಹುಡುಗಿಯರಿಗೆ ಹೀಗೆ ಮಾಡಿದ್ರೆ ಏನಾಗುತ್ತಿತ್ತು. ಇಲ್ಲಿ ಕೂಡ ಲಿಂಗ ತಾರತಾಮ್ಯ ಇದೆ. ಪೊಲೀಸರು ಕೂಡ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ. ಮಹಿಳೆಯರಿಗೆ ಹೀಗೆ ಆದ್ರೆ ಪೊಲೀಸರೇ ಸ್ವತಃ ದೂರು ದಾಖಲಾಗುತ್ತಿತ್ತು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ತನ್ನ ಅಜ್ಜಿಗೆ ವಿಡಿಯೋ ಗೇಮ್ ಆಡುವುದು ಹೇಗೆಂದು ಹೇಳಿಕೊಟ್ಟ ಮೊಮ್ಮಗಳು
ಇನ್ನು ಈ ಪೋಸ್ಟ್ ಗೆ ಎಕ್ಸ್ ಖಾತೆಯಲ್ಲಿ @ShoneeKapoor ಎಂಬುವವರು ಹೇಳಿಕೆಯೊಂದನ್ನು ನೀಡಿದ್ದಾರೆ. ಕ್ಯಾಬ್ ಚಾಲಕರು ಅಥವಾ ಯಾವುದೇ ಸೇವಾ ವಲಯದ ಕಾರ್ಮಿಕರು ಸಾರ್ವಜನಿಕ ಸೇವೆಯಲ್ಲಿರುವವರು. ಅವರನ್ನು ವೈಯಕ್ತಿಕ ಲಾಭಕ್ಕಾಗಿ ಅಥವಾ ಅಗ್ಗದ ಮನರಂಜನೆಗಾಗಿ ಬಳಸಿಕೊಳ್ಳುವುದು ಅವರ ವೃತ್ತಿ ಮತ್ತು ಘನತೆಗೆ ಮಾಡುವ ಅವಮಾನ. ಸಾರ್ವಜನಿಕ ಸ್ಥಳಗಳು ಎಂದಿಗೂ ಇಂತಹ “ಬಾರ್ಗೇನಿಂಗ್ ಟೂಲ್ಸ್” ಆಗಬಾರದು. ಇಂತಹ ಘಟನೆಗಳು ಸಮಾಜದಲ್ಲಿ ಜವಾಬ್ದಾರಿಯುತ ನಡವಳಿಕೆಯ ಅಗತ್ಯತೆಯನ್ನು ಸಾರುತ್ತವೆ. ಕೇವಲ ‘ವ್ಯೂಸ್’ಗಾಗಿ ಗೌರವ ಮತ್ತು ಜವಾಬ್ದಾರಿಯನ್ನು ಬಲಿ ಕೊಡುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Wed, 28 January 26
