Viral: ತನ್ನ ಅಜ್ಜಿಗೆ ವಿಡಿಯೋ ಗೇಮ್ ಆಡುವುದು ಹೇಗೆಂದು ಹೇಳಿಕೊಟ್ಟ ಮೊಮ್ಮಗಳು
ಕಲಿಕೆ ಎನ್ನುವುದು ನಿರಂತರ, ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಇಳಿ ವಯಸ್ಸಿನಲ್ಲಿ ಹೊಸ ಹೊಸ ವಿಷಯಗಳತ್ತ ಆಸಕ್ತಿ ತೋರುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತಿದೆ ಈ ಪೋಟೋ. 77 ವರ್ಷದ ವೃದ್ಧ ಮಹಿಳೆಗೆ ಮೊಮ್ಮಗಳು ವಿಡಿಯೋ ಗೇಮ್ ಆಡುವುದು ಹೇಗೆಂದು ಕಲಿಸುತ್ತಿದ್ದು, ಈ ಹೃದಯಸ್ಪರ್ಶಿ ಪೋಟೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಮೊಮ್ಮಕ್ಕಳಿಗೆ ಅಜ್ಜ ಅಜ್ಜಿಯಂದಿರೆಂದರೆ (grandparents) ಹೆಚ್ಚು ಅಚ್ಚು ಮೆಚ್ಚು. ಅಪ್ಪ ಅಮ್ಮಂದಿರಿಗಿಂತ ಹೆಚ್ಚಾಗಿ ಹಿರಿ ಜೀವಗಳ ಜತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಇದೀಗ ಅಜ್ಜಿ ಹಾಗೂ ಮೊಮ್ಮಗಳ ವಿಡಿಯೋ ವೈರಲ್ ಆಗಿದೆ. ನಾಗ್ಪುರದ ವ್ಯಕ್ತಿಯೊಬ್ಬರು (Nagpur man) ತನ್ನ ಮಗಳು 77 ವರ್ಷದ ಹರೆಯದ ತಾಯಿಗೆ ವಿಡಿಯೋ ಗೇಮ್ ಆಡುವುದು ಹೇಗೆಂದು ಕಲಿಸುತ್ತಿದ್ದಾಳೆ ಎನ್ನುವ ಪೋಸ್ಟ್ ಹಂಚಿಕೊಂಡಿದ್ದಾರೆ. ಅಜ್ಜಿಯ ಕುತೂಹಲವು ಈ ಪೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ಪೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಮೈಂಡ್ ಎಕ್ಸ್‌ವೇಟರ್ (@MindExcavator) ಹೆಸರಿನ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ನಾಗ್ಪುರದ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ತಮ್ಮ ಮಗಳು ತನ್ನ 77 ವರ್ಷದ ತಾಯಿಗೆ ಟಿವಿ ಪರದೆಯಲ್ಲಿ ವೀಡಿಯೊ ಗೇಮ್ ಹೇಗೆ ಆಡಬೇಕೆಂದು ತಾಳ್ಮೆಯಿಂದ ಕಲಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಶೀರ್ಷಿಕೆಯಲ್ಲಿ ನನ್ನ ಮಗಳು ನನ್ನ 77 ವರ್ಷದ ತಾಯಿಗೆ ಮನರಂಜನೆಗೆ ವಿಡಿಯೋ ಗೇಮ್‌ಗಳನ್ನು ಆಡಲು ಕಲಿಸುತ್ತಿದ್ದಾಳೆ. ಈ ಪ್ರೀತಿ ಹಾಗೂ ಕಾಳಜಿ ಶಾಂತ ಭಾಷೆಯಾಗಿದೆ. ನಾನು ಕ್ಲಿಕಿಸಿದಾಗ ನನ್ನ ಹೃದಯವು ತುಂಬಾ ತುಂಬಿ ತುಳುಕುತ್ತದೆ ಎಂದು ಬರೆಯಲಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ
My daughter teaching my 77 year old mother to play video games just to keep her entertained…
This love is the quiet language of care and my heart is so full as I sneak a click.❤️ pic.twitter.com/ERnxUeQEHT
— Brain Nibbler (@MindExcavator) January 26, 2026
ಈ ಫೋಟೋದಲ್ಲಿ ಮೊಮ್ಮಗಳು ಅಜ್ಜಿಗೆ ವೀಡಿಯೊ ಗೇಮ್ ಹೇಗೆ ಆಡಬೇಕೆಂದು ಹೇಳಿಕೊಡುತ್ತಿರುವುದನ್ನು ಕಾಣಬಹುದು. ಮೊಮ್ಮಗಳು ಮಾರ್ಗದರ್ಶನ ನೀಡುತ್ತಿದ್ದು, ಅಜ್ಜಿಯು ಟಿವಿ ಪರೆದೆಯನ್ನು ಅತ್ಯಂತ ಕುತೂಹಲದಿಂದ ನೋಡುತ್ತಿರುವುದನ್ನು ನೀವಿಲ್ಲಿ ಕಾಣಬಹುದು.
ಇದನ್ನೂ ಓದಿ: ಅಜ್ಜ ಅಜ್ಜಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿ ದುಬೈಗೆ ಕರೆದೊಯ್ದ ಮೊಮ್ಮಗ
ಈ ಪೋಸ್ಟ್ ಹತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಅಜ್ಜಿ ಮತ್ತು ಮೊಮ್ಮಗಳ ನಡುವಿನ ಬಾಂಧವ್ಯಕ್ಕೆ ಇದುವೇ ಸಾಕ್ಷಿ ಎಂದಿದ್ದಾರೆ. ಇನ್ನೊಬ್ಬರು, ಅಮೂಲ್ಯ ಕ್ಷಣಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿದ್ದೀರಿ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Wed, 28 January 26
