Video: ಅಜ್ಜ ಅಜ್ಜಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿ ದುಬೈಗೆ ಕರೆದೊಯ್ದ ಮೊಮ್ಮಗ
ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೆಯಾದ್ರು ವಿಮಾನದಲ್ಲಿ ಪ್ರಯಾಣಿಸಬೇಕು, ಆ ಅನುಭವ ಹೇಗಿರುತ್ತದೆ ಎಂದು ನೋಡಬೇಕು ಎಂಬ ಆಸೆಯಿರುತ್ತದೆ. ಆದರೆ ಈ ಆಸೆ ಈಡೇರುವುದು ಕಡಿಮೆಯೇ. ಆದರೆ ಇಲ್ಲೊಬ್ಬ ಮೊಮ್ಮಗ ಅಜ್ಜ ಅಜ್ಜಿಯನ್ನು ವಿಮಾನ ಹತ್ತಿಸಿ ವಿದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ತಾನು ಚೆನ್ನಾಗಿ ಓದಿ, ಒಂದೊಳ್ಳೆ ಉದ್ಯೋಗ ಪಡೆದುಕೊಂಡು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಮ್ಮ ಅಪ್ಪ, ಅಜ್ಜ, ಅಜ್ಜಿಯೊಂದಿಗೆ (grand parents) ಊರು ಸುತ್ತಬೇಕು. ಅವರ ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸಬೇಕು ಹೀಗೆ ಸಾವಿರಾರು ಕನಸುಗಳನ್ನು ಕಂಡಿರುತ್ತಾರೆ. ಆ ಕನಸುಗಳು ನನಸಾಗುವ ಘಳಿಗೆ ಬಂದರೆ ಹೇಗಿರುತ್ತೆ ಎಂದು ನೀವು ಒಮ್ಮೆಯಾದ್ರೂ ಊಹಿಸಿದ್ದೀರಾ. ಆದರೆ ಈ ಹಿರಿಜೀವಗಳು ಮೊಮ್ಮಗನಿಂದಾಗಿ (grandson) ವಿಮಾನ ಹತ್ತುವಂತಾಗಿದೆ. ಹೌದು, ಮೊಮ್ಮಗನು ತನ್ನ ಅಜ್ಜಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದಿದ್ದು ಈ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರ ಕಣ್ಣು ತುಂಬಿಬಂದಿದೆ.
ಅಂಕಿತ್ ಬಿಗ್ ಮೌತ್ (ankitranabigmouth) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಯುವಕನೊಬ್ಬನು ತನ್ನ ಅಜ್ಜ ಅಜ್ಜಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿ ದುಬೈಗೆ ಕರೆದುಕೊಂಡಿರುವ ದೃಶ್ಯವನ್ನು ನೀವಿಲ್ಲಿ ನೋಡಬಹುದು. ಈ ವಿಡಿಯೋದ ಶೀರ್ಷಿಕೆಯಲ್ಲಿ ದಾದಿಜೀ ಕಿ ಫಸ್ಟ್ ಫ್ಲೈಟ್ ಎಂದು ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಅಜ್ಜ ಅಜ್ಜಿಯ ಮೊದಲ ವಿಮಾನ ಪ್ರಯಾಣದ ಭಾವುಕ ಕ್ಷಣದ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ವೃದ್ಧ ದಂಪತಿಯೂ ತನ್ನ ಮೊಮ್ಮಗನ ಜೊತೆ ವಿಮಾನದಲ್ಲಿ ಏರ್‌ಪೋರ್ಟ್‌ಗೆ ತೆರಳಿ ಅಲ್ಲಿಂದ ವಿಮಾನ ಪ್ರಯಾಣಿಸಿ ದುಬೈಗೆ ಹೋಗುವುದನ್ನು ಕಾಣಬಹುದು. ಈ ಹಿರಿಜೀವಗಳು ವಿಮಾನ ಹಾರಾಟ ಸೇರಿದಂತೆ ದುಬೈನಲ್ಲಿ ಕಳೆಯುವ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಪ್ರಯಾಣ ಎಷ್ಟು ಖುಷಿ ತಂದಿದೆ ಎನ್ನುವುದಕ್ಕೆ ಅಜ್ಜ ಅಜ್ಜಿಯ ಮೊಗದಲ್ಲಿನ ನಗುವೇ ಸಾಕ್ಷಿಯಾಗಿದೆ.
ಇದನ್ನೂ ಓದಿ: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ವೃದ್ಧ ವ್ಯಕ್ತಿ
ಈ ವಿಡಿಯೋ 3 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇಂತಹ ಮೊಮ್ಮಗನನ್ನು ಪಡೆದ ನೀವೇ ಧನ್ಯ ಎಂದಿದ್ದಾರೆ. ಇನ್ನೊಬ್ಬರು, ಅಜ್ಜ ಅಜ್ಜಿಯ ಮೊಗದಲ್ಲಿನ ಖುಷಿ ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅನೇಕ ಜನರಿಗೆ ವಿಮಾನದಲ್ಲಿನ ಪ್ರಯಾಣ ಕನಸಿನ ಮಾತು. ಈ ದೃಶ್ಯ ನೋಡಿ ಕಣ್ಣಲ್ಲಿ ನೀರು ಬಂತು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
