AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6 ಅಡಿ ಉದ್ದದ ಹಾವನ್ನು ಹಿಡಿದು ಆಟವಾಡುತ್ತಿದ್ದ ವೃದ್ಧನ ಕತೆ ಏನಾಯ್ತು?

6 ಅಡಿ ಉದ್ದದ ಹಾವನ್ನು ಹಿಡಿದು ಆಟವಾಡುತ್ತಿದ್ದ ವೃದ್ಧನ ಕತೆ ಏನಾಯ್ತು?

ಸುಷ್ಮಾ ಚಕ್ರೆ
|

Updated on: Jan 16, 2026 | 10:37 PM

Share

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ವೀಡಿಯೊಗಳು ಕೆಲವೊಮ್ಮೆ ಆಘಾತಕಾರಿಯಾಗಿರುತ್ತವೆ. ಇದೀಗ ಆಘಾತಕಾರಿ ವೀಡಿಯೊವೊಂದು ಕಾಣಿಸಿಕೊಂಡಿದ್ದು, ಇದರಲ್ಲಿ ಒಬ್ಬ ವೃದ್ಧ ವ್ಯಕ್ತಿ 6 ಅಡಿ ಉದ್ದದ ವಿಷಪೂರಿತ ಹಾವಿನೊಂದಿಗೆ ಹುಡುಗಾಟವಾಡುವುದನ್ನು ನೋಡಬಹುದು. ಆತನ ಈ ನಾಟಕ ಆ ವೃದ್ಧನ ಜೀವವನ್ನು ಬಲಿ ತೆಗೆದುಕೊಂಡಿತು.

ನವದೆಹಲಿ, ಜನವರಿ 16: ವೃದ್ಧನೊಬ್ಬ 6 ಅಡಿ ಉದ್ದದ ವಿಷಪೂರಿತ ಹಾವನ್ನು ಕೈಯಲ್ಲಿ ಹಿಡಿದು ಜನರೆದುರು ಹುಡುಗಾಟವಾಡುತ್ತಿದ್ದರು. ಆಗ ಆ ಹಾವು (Snake) 3 ಬಾರಿ ಆ ವ್ಯಕ್ತಿಗೆ ಕಚ್ಚಿದೆ. ಆದರೂ ಆ ವೃದ್ಧ ಹಾವನ್ನು ಕೆಳಗೆ ಬಿಡಲಿಲ್ಲ. ಅದನ್ನು ತಮ್ಮ ಕುತ್ತಿಗೆಯ ಸುತ್ತ ಹಿಡಿದುಕೊಂಡು ಜನರಿಂದ ಫೋಟೋ ತೆಗೆಸಿಕೊಳ್ಳುತ್ತಲೇ ಇದ್ದರು. ಕೊನೆಗೆ ಆ ಹಾವಿನ ವಿಷ ಮೈ ಪೂರ್ತಿ ಆವರಿಸಿಕೊಳ್ಳುತ್ತಿದ್ದಂತೆ ನಿತ್ರಾಣರಾದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದರು. ಹಾವಿನೊಂದಿಗೆ ಆ ವೃದ್ಧ ಇರುವ ವೈರಲ್ ವಿಡಿಯೋ ಇಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ