AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 3 ಚಿರತೆ ಮರಿಗಳ ಜನನ; ದೇಶದಲ್ಲಿ ಚೀತಾಗಳ ಸಂಖ್ಯೆ 38ಕ್ಕೆ ಏರಿಕೆ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 3 ಚಿರತೆ ಮರಿಗಳ ಜನನ; ದೇಶದಲ್ಲಿ ಚೀತಾಗಳ ಸಂಖ್ಯೆ 38ಕ್ಕೆ ಏರಿಕೆ

ಸುಷ್ಮಾ ಚಕ್ರೆ
|

Updated on: Feb 18, 2026 | 5:12 PM

Share

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದ ಚೀತಾ ಗಾಮಿನಿಗೆ 3 ಮರಿಗಳು ಜನಿಸಿವೆ. ಈ ವಿಷಯವನ್ನು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಘೋಷಿಸಿದ್ದಾರೆ. ಇದು ಭಾರತದ ಚೀತಾ ಮರುಪರಿಚಯ ಕಾರ್ಯಕ್ರಮಕ್ಕೆ ಪ್ರಮುಖ ಮೈಲಿಗಲ್ಲು ಎಂದು ಕರೆದಿದ್ದಾರೆ. ಪ್ರಾಜೆಕ್ಟ್ ಚೀತಾ ಪ್ರಾರಂಭವಾದ ನಂತರ ಭಾರತದಲ್ಲಿ ಜನಿಸಿದ ಒಂಬತ್ತನೇ ಯಶಸ್ವಿ ಚಿರತೆ ಮರಿ ಇದು. ಬದುಕುಳಿದ ಭಾರತೀಯ ಮೂಲದ ಮರಿಗಳ ಸಂಖ್ಯೆ 27ಕ್ಕೆ ಏರಿದೆ. ಭಾರತದ ಒಟ್ಟು ಚಿರತೆ ಸಂಖ್ಯೆ ಈಗ 38ರಷ್ಟಿದೆ.

ಶಿವಪುರಿ, ಫೆಬ್ರವರಿ 18: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದ ಚೀತಾ ಗಾಮಿನಿಗೆ 3 ಮರಿಗಳು ಜನಿಸಿವೆ. ಈ ವಿಷಯವನ್ನು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಘೋಷಿಸಿದ್ದಾರೆ. ಇದು ಭಾರತದ ಚೀತಾ (Cheetah) ಮರುಪರಿಚಯ ಕಾರ್ಯಕ್ರಮಕ್ಕೆ ಪ್ರಮುಖ ಮೈಲಿಗಲ್ಲು ಎಂದು ಕರೆದಿದ್ದಾರೆ. ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ ಭೂಪೇಂದರ್ ಯಾದವ್, ಭಾರತಕ್ಕೆ ದಕ್ಷಿಣ ಆಫ್ರಿಕಾದ ಚೀತಾಗಳ ಆಗಮನವಾಗಿ 3 ವರ್ಷವಾಗಿದೆ. ಈಗ ಎರಡನೇ ಬಾರಿಗೆ ತಾಯಿಯಾಗಿರುವ ಗಾಮಿನಿ 3 ಮರಿಗಳಿಗೆ ಜನ್ಮ ನೀಡಿದ್ದಾರೆ. ಇದು ಉದ್ಯಾನವನದ ಬೆಳೆಯುತ್ತಿರುವ ಚೀತಾಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ.

ಪ್ರಾಜೆಕ್ಟ್ ಚೀತಾ ಪ್ರಾರಂಭವಾದ ನಂತರ ಭಾರತದಲ್ಲಿ ಜನಿಸಿದ ಒಂಬತ್ತನೇ ಯಶಸ್ವಿ ಚಿರತೆ ಮರಿ ಇದು. ಬದುಕುಳಿದ ಭಾರತೀಯ ಮೂಲದ ಮರಿಗಳ ಸಂಖ್ಯೆ 27ಕ್ಕೆ ಏರಿದೆ. ಭಾರತದ ಒಟ್ಟು ಚಿರತೆ ಸಂಖ್ಯೆ ಈಗ 38ರಷ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ