AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುನೋ ನ್ಯಾಷನಲ್ ಪಾರ್ಕ್​​ನಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಭಾರತೀಯ ಚೀತಾ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರತೀಯ ಮೂಲದ ಹೆಣ್ಣು ಚೀತಾವೊಂದು 5 ಮರಿಗಳಿಗೆ ಜನ್ಮ ನೀಡಿದೆ. ಈ ಚೀತಾ ಮಾರ್ಚ್ 2023ರಲ್ಲಿ ನಮೀಬಿಯಾದ ಚೀತಾ ಜ್ವಾಲಾಗೆ ಜನಿಸಿತು. ಇದೀಗ 5 ಮರಿಗಳ ಜನನವು ದೇಶದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಚಿರತೆ ಮರುಪರಿಚಯ ಕಾರ್ಯಕ್ರಮಕ್ಕೆ ಹೊಸ ಉತ್ತೇಜನ ನೀಡಿದೆ. ಮುಖಿಗೆ ಈಗ 33 ತಿಂಗಳು. ಭಾರತೀಯ ಮೂಲದ ಚೀತಾಗೆ 5 ಮರಿಗಳು ಹುಟ್ಟಿರುವ ಸಂಗತಿಯ ಬಗ್ಗೆ ಸಿಎಂ ಮೋಹನ್ ಯಾದವ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಕುನೋ ನ್ಯಾಷನಲ್ ಪಾರ್ಕ್​​ನಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಭಾರತೀಯ ಚೀತಾ
Cheetah In Kuno National Park
ಸುಷ್ಮಾ ಚಕ್ರೆ
|

Updated on: Nov 20, 2025 | 9:19 PM

Share

ನವದೆಹಲಿ, ನವೆಂಬರ್ 20: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಭಾರತದಲ್ಲಿ ಜನಿಸಿದ ಮುಖಿ ಎಂಬ ಹೆಣ್ಣು ಚೀತಾ 5 ಮರಿಗಳಿಗೆ ಜನ್ಮ ನೀಡಿದೆ. ಇದರಿಂದ ನ್ಯಾಷನಲ್ ಪಾರ್ಕ್ ತುಂಬ ಸಂತಸ ಮನೆಮಾಡಿದೆ. ಏಕೆಂದರೆ, ಮುಖಿ ಹುಟ್ಟಿದ ಕೂಡಲೆ ತನ್ನ ತಾಯಿಯಿಂದ ಬೇರ್ಪಟ್ಟಿತ್ತು. ಈ ಚೀತಾವನ್ನು ಕುನೋ ನ್ಯಾಷನಲ್ ಪಾರ್ಕ್ ಅರಣ್ಯಾಧಿಕಾರಿಗಳು ಬೆಳೆಸಿದ್ದರು. ಭಾರತದಲ್ಲೇ ಜನಿಸಿದ ಈ ಹೆಣ್ಣು ಚೀತಾ ಇದೀಗ 5 ಮರಿಗಳಿಗೆ ಜನ್ಮ ನೀಡಿದೆ.

ಈ ಬಗ್ಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಕೂಡ ಎಕ್ಸ್​ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಅಳಿವಿನಂಚಿಗೆ ತಲುಪಿರುವ ಚೀತಾ ಸಂತತಿಯನ್ನು ಹೆಚ್ಚಿಸಬೇಕೆಂದು ಹಲವು ಪ್ರಯತ್ನಗಳು ನಡೆಯುತ್ತಿವೆ. ಇದೀಗ 5 ಚೀತಾ ಮರಿಗಳು ಜನಿಸಿರುವುದು ಚೀತಾಗಳನ್ನು ಭಾರತದ ಕಾಡುಗಳಿಗೆ ಮತ್ತೆ ಮರುಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಉತ್ತೇಜನ ಸಿಕ್ಕಂತಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Video: ನಾಯಿಯಲ್ಲ ಅಕ್ಕಾ ಅದು ಚಿರತೆ, ಕಾಲಿಗೆ ಹಗ್ಗ ಕಟ್ಟಿ ಮನೆಯ ಹೊರಗೆ ಕೂರಿಸಿದ ಮಹಿಳೆ

ಭಾರತದಲ್ಲಿ ಜನಿಸಿದ ಚಿರತೆಗಳಲ್ಲಿ ಮುಖಿ ಮಾತ್ರ ಬದುಕುಳಿದಿದೆ. ಚಿರತೆಗಳನ್ನು ದೇಶದಲ್ಲಿ ಮತ್ತೆ ಕಾಡಿನಲ್ಲಿ ಪರಿಚಯಿಸುವ ಭಾರತದ ಮಹತ್ವಾಕಾಂಕ್ಷೆಯ ಯೋಜನೆಗೆ ಈ ಮರಿಗಳ ಜನನವು ಖಂಡಿತವಾಗಿಯೂ ಉತ್ತೇಜನ ನೀಡಿದೆ.

ಮುಖಿ ಮಾರ್ಚ್ 29, 2023ರಂದು ನಮೀಬಿಯಾದ ಚೀತಾ ಜ್ವಾಲಾಗೆ ಭಾರತದಲ್ಲಿ ಜನಿಸಿದಳು. ಆದರೆ, ಹವಾಮಾನ ಪರಿಸ್ಥಿತಿಗಳು ಸೇರಿದಂತೆ ಹಲವಾರು ಕಾರಣಗಳಿಂದ ಆಕೆಯ ಜೊತೆಗೆ ಹುಟ್ಟಿದ್ದ ಇತರೆ 3 ಚೀತಾಗಳು ಬದುಕುಳಿಯಲಿಲ್ಲ. ಮುಖಿ ಮಾತ್ರ ಬದುಕುಳಿದಿದ್ದಳು. ಭಾರತದ ಬೇಸಿಗೆಯ ತೀವ್ರ ಶಾಖದಿಂದಾಗಿ ಅವಳ 3 ಒಡಹುಟ್ಟಿದವರು ಸಾವನ್ನಪ್ಪಿದ್ದರು. ಅಂದಿನಿಂದ ಅರಣ್ಯ ಇಲಾಖೆಯ ಸಿಬ್ಬಂದಿಯೇ ಆಕೆಯ ಆರೈಕೆ ಮಾಡುತ್ತಿದ್ದರು. ಇದೀಗ ಆಕೆ 5 ಮಕ್ಕಳ ತಾಯಿಯಾಗಿದ್ದಾಳೆ. ಈ ಮುಖಿಯ ಪಾರ್ಟನರ್ ಅಂದರೆ ಆ 5 ಮಕ್ಕಳ ತಂದೆ ಕೂಡ ಭಾರತೀಯ ಮೂಲದ ಚೀತಾ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ