ತಾಜ್ಮಹಲ್ ಎದುರು ಹೆಂಡತಿಯೊಂದಿಗೆ ಫೋಟೋಗೆ ಪೋಸ್ ನೀಡಿದ ಡೊನಾಲ್ಡ್ ಟ್ರಂಪ್ ಮಗ
ಡೊನಾಲ್ಡ್ ಟ್ರಂಪ್ ಅವರ ಮಗನ ಭೇಟಿಯ ಹಿನ್ನೆಲೆಯಲ್ಲಿ ತಾಜಮಹಲ್ ಸುತ್ತ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲಲ್ಲಿ ಅನೇಕ ಅಮೇರಿಕನ್ ಏಜೆನ್ಸಿಗಳ ಅಮೇರಿಕನ್ ಭದ್ರತಾ ಏಜೆಂಟ್‌ಗಳನ್ನು ಸಹ ನಿಯೋಜಿಸಲಾಗಿತ್ತು. ತಾಜಮಹಲ್ಗೆ ಸಾಮಾನ್ಯ ಸಂದರ್ಶಕರಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ತಾಜ್ ಮಹಲ್ನ ಫೋಟೋ ಪಾಯಿಂಟ್‌ಗಳಲ್ಲಿ ಒಂದಾಗಿರುವ ಐಕಾನಿಕ್ ಡಯಾನಾ ಬೆಂಚ್‌ನಲ್ಲಿ ಕುಳಿತು ಅವರು ಫೋಟೋ ಕ್ಲಿಕ್ಕಿಸಿಕೊಂಡರು.
ಆಗ್ರಾ, ನವೆಂಬರ್ 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ತನ್ನ ಪತ್ನಿ ಮತ್ತು ವಿಐಪಿ ತಂಡದೊಂದಿಗೆ ಬೃಹತ್ ಭದ್ರತೆಯ ನಡುವೆ ವಿಶ್ವ ಪ್ರಸಿದ್ಧ ತಾಜಮಹಲ್ಗೆ ಭೇಟಿ ನೀಡಿದ್ದಾರೆ. ಇಂದು ಬೆಳಗ್ಗೆ ಡೊನಾಲ್ಡ್ ಟ್ರಂಪ್ ಜೂನಿಯರ್ ಗುರುವಾರ ಆಗ್ರಾಕ್ಕೆ ತೆರಳಿ ತಾಜ್ ಮಹಲ್‌ಗೆ ಭೇಟಿ ನೀಡಿದರು. ಈ ಹಿಂದೆ 2018ರಲ್ಲೂ ಅವರು ತಾಜಮಹಲ್ಗೆ ಭೇಟಿ ನೀಡಿದ್ದರು. ಇದು ಅವರ 2ನೇ ಭೇಟಿ. ಇಂದು ಅವರು ತಮ್ಮ ಹೆಂಡತಿಯ ಜೊತೆ ತಾಜಮಹಲ್ ಎದುರು ಕುಳಿತು ಫೋಟೋಗೆ ಪೋಸ್ ನೀಡಿದರು. ತಾಜ್ ಮಹಲ್ನ ಫೋಟೋ ಪಾಯಿಂಟ್‌ಗಳಲ್ಲಿ ಒಂದಾಗಿರುವ ಐಕಾನಿಕ್ ಡಯಾನಾ ಬೆಂಚ್‌ನಲ್ಲಿ ಕುಳಿತು ಅವರು ಫೋಟೋ ಕ್ಲಿಕ್ಕಿಸಿಕೊಂಡರು.
ಡೊನಾಲ್ಡ್ ಟ್ರಂಪ್ ಅವರ ಮಗನ ಭೇಟಿಯ ಹಿನ್ನೆಲೆಯಲ್ಲಿ ತಾಜಮಹಲ್ ಸುತ್ತ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲಲ್ಲಿ ಅನೇಕ ಅಮೇರಿಕನ್ ಏಜೆನ್ಸಿಗಳ ಅಮೇರಿಕನ್ ಭದ್ರತಾ ಏಜೆಂಟ್‌ಗಳನ್ನು ಸಹ ನಿಯೋಜಿಸಲಾಗಿತ್ತು. ತಾಜಮಹಲ್ಗೆ ಸಾಮಾನ್ಯ ಸಂದರ್ಶಕರಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

