ಶಾಲಾ ವಿದ್ಯಾರ್ಥಿಗಳ ಶೂ, ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆ, ಕೊಂಚ ಹಣ ಕಡಿತಗೊಳಿಸಿದ ರಾಜ್ಯ ಸರ್ಕಾರ

|

Updated on: Jun 27, 2023 | 12:57 PM

2023-24ನೇ ಸಾಲಿನ ವಿದ್ಯಾರ್ಥಿಗಳ ಶೂ ಹಾಗೂ ಸಾಕ್ಸ್​ ಖರೀದಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದ್ರೆ, ಹಣದಲ್ಲಿ ಕೊಂಚ ಕಡಿತಗೊಳಿಸಿದೆ.

ಶಾಲಾ ವಿದ್ಯಾರ್ಥಿಗಳ ಶೂ, ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆ, ಕೊಂಚ ಹಣ ಕಡಿತಗೊಳಿಸಿದ ರಾಜ್ಯ ಸರ್ಕಾರ
ವಿಧಾನಸೌಧ
Follow us on

ಬೆಂಗಳೂರು: 2023-24ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಕರ್ನಾಟಕದಲ್ಲಿ ಶಾಲೆಗಳು ಪ್ರಾರಂಭವಾಗಿವೆ.  ಈ ಹಿನ್ನೆಲೆಯಲ್ಲಿ ಮಕ್ಕಳ (Students) ಶೂ, ಸಾಕ್ಸ್(Shoe And Socks) ಖರೀದಿಗೆ ಕರ್ನಾಟಕ ಸರ್ಕಾರ(Karnataka government) ಇಂದು (ಜೂನ್ 27) ಆದೇಶ ಹೊರಡಿಸಿದೆ. ಆದ್ರೆ, ವಿದ್ಯಾರ್ಥಿಗಳ ಶೂ, ಸಾಕ್ಸ್ ಖರೀದಿ ಹಣ ಕಡಿತ ಮಾಡಿದೆ. ಬರೋಬ್ಬರಿ 7 ಕೋಟಿ ರೂ. ಅನುದಾನ ಕಡಿತ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಅಂದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 2022-23ನೇ ಸಾಲಿನಲ್ಲಿ ಶೂ, ಸಾಕ್ಸ್ ಖರೀದಿಗೆ 132 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಆದ್ರೆ, ಇದೀಗ ಕಾಂಗ್ರೆಸ್ ಸರ್ಕಾರ 2023-24ನೇ ಸಾಲಿನಲ್ಲಿ 125 ಕೋಟಿ ರೂ. ಬಿಡುಗಡೆಗೊಳಿಸಿದೆ.

ಇದನ್ನೂ ಓದಿ: 1 ರಿಂದ 10 ಕ್ಲಾಸ್ ವಿದ್ಯಾರ್ಥಿಗಳ ಸ್ಕೂಲ್​ ಬ್ಯಾಗ್​ ಭಾರ ತಗ್ಗಿಸುವಂತೆ ಆದೇಶ: ಬ್ಯಾಗ್ ತೂಕ ಎಷ್ಟಿರಬೇಕು? ಇಲ್ಲಿದೆ ವಿವರ

BJP ಅವಧಿಯಲ್ಲಿ ಶೂಗೆ ನಿಗದಿ ಮಾಡಿದ್ದ ದರವೇ ಈ ವರ್ಷವೂ ಫಿಕ್ಸ್ ಆಗಿದ್ದು, ಕಳೆದ ವರ್ಷದ ದರದಲ್ಲೇ ಶೂ, ಸಾಕ್ಸ್ ಖರೀದಿ ಮಾಡುವಂತೆ ಸೂಚನೆ ನೀಡಲಾಗಿದೆ. 1ರಿಂದ 10ನೇ ತರಗತಿ ಮಕ್ಕಳಿಗೆ 1 ಜತೆ ಶೂ, 2 ಜತೆ ಸಾಕ್ಸ್ ಖರೀದಿಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರside  ಸೂಚನೆ  ಸೂಚಿಸಿದ್ದು, 1ರಿಂದ 5ನೇ ತರಗತಿ ಪ್ರತಿ ವಿದ್ಯಾರ್ಥಿಗಳ ಶೂ, ಸಾಕ್ಸ್​ ಖರೀದಿಗೆ 265 ರೂ., 6-8ನೇ ತರಗತಿ ವಿದ್ಯಾರ್ಥಿಗಳ ಶೂ, ಸಾಕ್ಸ್​ ಖರೀದಿಗೆ 295 ರೂ., 9-10ನೇ ತರಗತಿ ವಿದ್ಯಾರ್ಥಿಗಳ ಶೂ, ಸಾಕ್ಸ್​ ಖರೀದಿಗೆ 325 ರೂ. ನಿಗದಿ ಮಾಡಲಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ