ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ 2022ರ ಫಲಿತಾಂಶವು ಇಂದು ಪ್ರಕಟವಾಗಿದ್ದು, ಶಿಕ್ಷಣ ಸಚಿವ ಬಿಸಿ ನಾಗೇಶ್ ಸುದ್ದಿಗೋಷ್ಠಿ ಆರಂಭಿಸಿದ್ದಾರೆ. ಮೂರು ದಿನಗಳ ಹಿಂದೆಯೇ ಫಲಿತಾಂಶ ಪ್ರಕಟಿಸಬೇಕಿತ್ತು, ಆದರೆ ಸಿಇಟಿ ಪರೀಕ್ಷೆ ನಡೆಯುತ್ತಿದ್ದ ಕಾರಣ ಫಲಿತಾಂಶವನ್ನು ಸ್ವಲ್ಪ ತಡವಾಗಿ ಪ್ರಕಟಿಸಲಾಗಿದೆ ಎಂದರು.
ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿಕೊಂಡಿದ್ದರು, 6,83,563 ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಿದ್ದರು. 81 ಮೌಲ್ಯ ಮಾಪನ ಕೇಂದ್ರ ಮಾಡಿದ್ದೇವೆ, ಕಡಿಮೆ ದಿನದಲ್ಲಿ ಫಲಿತಾಂಶ ನೀಡುತ್ತಿದ್ದೇವೆ, ಒಟ್ಟು 61.88 % ತೇರ್ಗಡೆಯಾಗಿದ್ದಾರೆ ವಿಜ್ಞಾನ ವಿಭಾಗದಲ್ಲಿ ಸಿಮ್ರಾನ್ ಶೇಷರಾವ್ Nmrk ಜಯನಗರ ಕಾಲೇಜಿನವರಾಗಿದ್ದು 600ಕ್ಕೆ 598 ಅಂಕ ಗಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ.
ಶೇ.61.88 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ.
ಉತ್ತೀರ್ಣ ಪ್ರಮಾಣ:
ಬಾಲಕಿಯರು: ಶೇ.68.72
ಬಾಲಕರು: ಶೇ.55.226,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
4,22,966 ವಿದ್ಯಾರ್ಥಿಗಳು ಉತ್ತೀರ್ಣ.
ಪೂರಕ ಪರೀಕ್ಷೆ ದಿನಾಂಕವನ್ನು ಈ ತಿಂಗಳಾಂತ್ಯಕ್ಕೆ ಪ್ರಕಟಿಸಲಾಗುವುದು.#PUCResults
— B.C Nagesh (@BCNagesh_bjp) June 18, 2022
ಈ ಬಾರಿ ಪಿಯು ಪರೀಕ್ಷೆಯಲ್ಲಿ 61.88ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ, ಈ ವರ್ಷ 5,99,794 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಪಿಯುಸಿ ಪರೀಕ್ಷೆಯಲ್ಲಿ 4,02,697 ಮಕ್ಕಳು ಉತ್ತೀರ್ಣರಾಗಿದ್ದಾರೆ ಹೆಚ್ಚು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದರು.
ಪ್ರತಿ ಬಾರಿಯಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ, ಈ ಬಾರಿ ಗ್ರಾಮಾಂತರದಲ್ಲಿ ಫಲಿತಾಂಶ ಉತ್ತಮವಾಗಿದೆ, ನಗರಪ್ರದೇಶದಲ್ಲಿ 61.78, ಗ್ರಾಮಾಂತರ 62.18ರಷ್ಟಿದೆ.
ದಕ್ಷಣಕನ್ನಡ ಜಿಲ್ಲೆಗೆ ಮೊದಲ ಸ್ಥಾನ, ಉಡುಪಿ 2ನೇ ಸ್ಥಾನ, ವಿಜಯಪುರ 3ನೇ ಸ್ಥಾನ, ಬೆಂಗಳೂರು ದಕ್ಷಣ 4ನೇ ಸ್ಥಾನ, ಉತ್ತರ ಕನ್ನಡ 5ನೇ ಸ್ಥಾನ, ಚಿತ್ರದುರ್ಗ ಕೊನೆಯ ಸ್ಥಾನ ಲಭಿಸಿದೆ.
3,37,006 ಬಾಲಕಿಯರ ಪೈಕಿ 2,31,586 ಮಕ್ಕಳು ತೇರ್ಗಡೆಹೊಂದಿದ್ದಾರೆ, ಒಟ್ಟು 68.72%ರಷ್ಟು ಬಾಲಕಿಯರು ಪಾಸ್ ಆಗಿದ್ದಾರೆ. 3,46,557 ಬಾಲಕರಲ್ಲಿ 1,91,380 ಮಕ್ಕಳು ಉತ್ತೀರ್ಣರಾಗಿದ್ದಾರೆ . 55.22% ಮಂದಿ ಬಾಲಕರು ಉತ್ತೀರ್ಣರಾಗಿದ್ದಾರೆ. ಕನ್ನಡದಲ್ಲಿ 563 ಮಕ್ಕಳು ನೂರಕ್ಕೆ ನೂರರಷ್ಟು ಅಂಕವನ್ನು ಗಳಿಸಿದ್ದಾರೆ.
ದಕ್ಷಿಣ ಕನ್ನಡವು ಶೇ.88.02ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದ್ದರೆ , ಚಿತ್ರದುರ್ಗ ಶೇ. 49.31 ರಷ್ಟು ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ, ಪಿಯುಸಿಯಲ್ಲಿ 91106 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಲ್ಲಿ ಉತ್ತೀರ್ಣರಾಗಿದ್ದಾರೆ, ಗಣಿತದಲ್ಲಿ 14,200 ವಿದ್ಯಾರ್ಥಿಗಳು ಔಟ್ ಆಫ್ ಔಟ್ಗಳಿಸಿದ್ದಾರೆ, ಇಂಗ್ಲಿಷ್ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ ಗಳಿಸಿದ್ದಾರೆ.
ಫಲಿತಾಂಶದ ಬಗ್ಗೆ ಅನುಮಾನವಿದ್ದರೆ ಸ್ಕ್ಯಾನ್ ಕಾಪಿ ಪಡೆಯಬಹುದು, ಇಂದಿನಿಂದ ಜೂನ್ 30ರವರೆಗೆ ಅವಕಾಶ ಇರುತ್ತದೆ. ಪ್ರತಿ ವಿಷಯದ ಸ್ಕ್ಯಾನ್ ಕಾಪಿಗೆ 530 ರೂ. ಶುಲ್ಕವಿರುತ್ತದೆ. ಸ್ಕ್ಯಾನ್ ಕಾಪಿ ಪಡೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು ಎಂದರು.
ರಾಜ್ಯದಲ್ಲಿ ಒಟ್ಟು 56 ಕಾಲೇಜು 100% ರಷ್ಟು ಫಲಿತಾಂಶ ಪಡೆದಿದೆ, 04 ಸರ್ಕಾರಿ ಪದವಿ ಪೂರ್ವ ಕಾಲೇಜು, 02 ಅನುದಾನಿತ ಪದವಿ ಪೂರ್ವ ಕಾಲೇಜು , 50 ಅನುದಾನ ರಹಿತ ಪದವಿ ಪೂರ್ವ ಕಾಲೇಜು ಶೇ.100ರಷ್ಟು ಫಲಿತಾಂಶ ಗಳಿಸಿವೆ ಎಂದು ಮಾಹಿತಿ ನೀಡಿದರು.
ಕಲಾ ವಿಭಾಗದಲ್ಲಿ ಶ್ವೇತಾ ಭೀಮಶಂಕರ ಬೈರಗೊಂಡ ಬಳ್ಳಾರಿ 600-594 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಹಾಗೆಯೇ ಸಹನಾ ಇಂದು ಪಿಯು ಕಾಲೇಜು ಕೊಟ್ಟುರು ಅವರೂ ಕೂಡ 594 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಾನವ್ ವಿನಯ ಕೇಜ್ರಿವಾಲ್ , ಜೈನ್ ಪಿಯು ಕಾಲೇಜಿನ ವಿದ್ಯಾರ್ಥಿ 596 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ.
ಗ್ರೇಸ್ ಮಾರ್ಕ್ 6086 ಮಕ್ಕಳಿಗೆ ನೀಡಲಾಗಿದೆ, ಕನ್ನಡದಲ್ಲಿ 563 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ ಗಳಿಸಿದ್ದಾರೆ. ಸೈನ್ಸ್ ವಿಭಾಗದಲ್ಲಿ ಸಿಮ್ರಾನ್ ಶೇಷರಾವ್ 600ಕ್ಕೆ 598 ಅಂಕಗಳನ್ನು ಗಳಿಸಿದ್ದಾರೆ. ಮೊಹಮ್ಮದ್ ರಫೀಕ್ 600ಕ್ಕೆ 598 ಅಂಕ ಗಳಿಸಿದ್ದಾರೆ. ಸಾಯಿ ಚಿರಾಗ್ 600ಕ್ಕೆ 598 ಅಂಕ ಪಡೆದಿದ್ದಾರೆ, ಶ್ರೀಕೃಷ್ಣ ಪೇಜತಾಯ 600ಕ್ಕೆ 598 ಅಂಕ ಪಡೆದಿದ್ದಾರೆ.
Published On - 11:28 am, Sat, 18 June 22