Karnataka 2nd PUC District Rankings List 2022: ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ, ಚಿತ್ರದುರ್ಗಕ್ಕೆ ಕೊನೆಯ ಸ್ಥಾನ
ಕರ್ನಾಟಕ ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶ 2022: 2021-22ನೇ ಸಾಲಿನ PUC ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಕ್ರಮವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಪಡೆದುಕೊಂಡಿವೆ.
ಬೆಂಗಳೂರು: ಕರ್ನಾಟಕ 2nd ಪಿಯುಸಿ ಫಲಿತಾಂಶ 2022: ಕರ್ನಾಟಕ ಪಿಯು ಬೋರ್ಡ್ 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು, ದಕ್ಷಣಕನ್ನಡ ಜಿಲ್ಲೆ(ಶೇ.88.02) ಮೊದಲ ಸ್ಥಾನ ಪಡೆದುಕೊಂಡಿದೆ. ಅಲ್ಲದೆ ಪಕ್ಕದ ಜಿಲ್ಲೆ ಉಡುಪಿ 2ನೇ ಸ್ಥಾನ ಪಡೆದುಕೊಂಡಿದ್ದು, ವಿಜಯಪುರ 3ನೇ ಸ್ಥಾನ, ಬೆಂಗಳೂರು ದಕ್ಷಣ 4ನೇ ಸ್ಥಾನ, ಉತ್ತರ ಕನ್ನಡ 5ನೇ ಸ್ಥಾನ, ಚಿತ್ರದುರ್ಗ ಜಿಲ್ಲೆ (ಶೇ.49.31) ಕೊನೆಯ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ: Karnataka 2nd PUC Result 2022: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ದಕ್ಷಿಣ ಕನ್ನಡ ಶೇ.88.02, ಉಡುಪಿ ಶೇ.86.38, ವಿಜಯಪುರ ಶೇ.77.14, ಬೆಂಗಳೂರು ದಕ್ಷಿಣ ಶೇ.76.24, ಉತ್ತರ ಕನ್ನಡ ಶೇ.74.33, ಕೊಡಗು ಶೇ.73.22, ಬೆಂಗಳೂರು ಉತ್ತರ ಶೇ.72.01, ಶಿವಮೊಗ್ಗ ಶೇ.70.14, ಚಿಕ್ಕಮಗಳೂರು ಶೇ.69.42, ಬಾಗಲಕೋಟೆ ಶೇ.68.69, ಚಿಕ್ಕೋಡಿ ಶೇ.68, ಬೆಂಗಳೂರು ಗ್ರಾಮಾಂತರ ಶೇ.67.86, ಹಾಸನ ಶೇ.67.28, ಹಾವೇರಿ ಶೇ.66.64, ಧಾರವಾಡ ಶೇ.65.66, ಚಿಕ್ಕಬಳ್ಳಾಪುರ ಶೇ.64.49, ಮೈಸೂರು ಶೇ.64.45, ಚಾಮರಾಜನಗರ ಶೇ.63.02, ದಾವಣಗೆರೆ ಶೇ.62.72, ಕೊಪ್ಪಳ ಶೇ.62.04, ಬೀದರ್ ಶೇ.60.78, ಗದಗ ಶೇ.60.63, ಯಾದಗಿರಿ ಶೇ.60.59, ಕೋಲಾರ ಶೇ.60.41, ರಾಮನಗರ ಶೇ.60.22, ಬೆಳಗಾವಿ ಶೇ.59.88, ಕಲಬುರಗಿ ಶೇ.59.17, ತುಮಕೂರು ಶೇ.58.90, ಮಂಡ್ಯ ಶೇ.58.77, ರಾಯಚೂರು ಶೇ.57.93, ಬಳ್ಳಾರಿ ಶೇ.55.48, ಚಿತ್ರದುರ್ಗ ಶೇ.49.31 ಫಲಿತಾಂಶ ಪಡೆದುಕೊಂಡಿದೆ.
ಕಳೆದ ಎಪ್ರಿಲ್ 23 ರಿಂದ ಮೇ 18ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. ಈ ಪೈಕಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು ದಾಖಲಾಗಿದ್ದರು. ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕಲಾ ವಿಭಾಗಕ್ಕೆ 2,28,167 ಮಂದಿ, ವಾಣಿಜ್ಯ ವಿಭಾಗಕ್ಕೆ 2,45,519 ಮಂದಿ ಮತ್ತು ವಿಜ್ಞಾನ ವಿಭಾಗದಲ್ಲಿ 2,10,569 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:41 am, Sat, 18 June 22