Karnataka 2nd PUC Toppers List 2022: ದ್ವಿತೀಯ ಪಿಯುಸಿ ಫಲಿತಾಂಶ; ಶ್ವೇತಾ, ಸಹನಾ ಕಲಾ ವಿಭಾಗದಲ್ಲಿ, ಮಾನವ್ ವಿನಯ್ ವಾಣಿಜ್ಯದಲ್ಲಿ, ಸೀಮ್ರಾನ್ ವಿಜ್ಞಾನದಲ್ಲಿ ಕರ್ನಾಟಕಕ್ಕೆ ಪ್ರಥಮ
Karnataka 2nd PUC Toppers List 2022: ಕರ್ನಾಟಕ ಪಿಯು ಬೋರ್ಡ್ 2021-2022ನೇ ಸಾಲಿನ ಇಂದು (ಜೂನ್ 18) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಶ್ವೇತಾ ಭೀಮಶಂಕರ, ಸಹನಾ ಅವರು ಕಲಾ ವಿಭಾಗದಲ್ಲಿ, ಮಾನವ ವಿನಯ್ ಸೇರಿದಂತೆ ನಾಲ್ವರು ವಾಣಿಜ್ಯ ವಿಭಾಗದಲ್ಲಿ ಹಾಗೂ ಸೀಮ್ರಾನ್ ಶೇಷರಾವ್ ಸೇರಿದಂತೆ ನಾಲ್ವರು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕರ್ನಾಟಕ 2nd ಪಿಯುಸಿ ಫಲಿತಾಂಶ 2022: 2021-2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಇಂದು (ಜೂನ್ 18) ಪ್ರಕಟಗೊಂಡಿದ್ದು, ಶೇ.61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಂದರೆ 4,02,697 ಮಕ್ಕಳು ಪಾಸ್ ಆಗಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿಯ ಶ್ವೇತಾ ಭೀಮಶಂಕರ ಬೈರಗೊಂಡ ಮತ್ತು ಕೊಟ್ಟೂರಿನ ಸಹನಾ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಾನವ ವಿನಯ ಕೇಜ್ರಿವಾಲ್ ಹಾಗೂ ವಿಜ್ಞಾನ ವಿಭಾಗದಲ್ಲಿ ಸೀಮ್ರಾನ್ ಶೇಷರಾವ್ ಅವರು ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮಲ್ಲೇಶ್ವರದ ಪಿಯೂ ಬೋರ್ಡ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಬಿ.ಸಿ.ನಾಗೇಶ್ ಅವರು ಟಾಪರ್ಸ್ಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಶ್ವೇತಾ ಭೀಮಶಂಕರ ಹಾಗೂ ಸಹನಾ ಅವರು 600ರಲ್ಲಿ 594 ಅಂಕಗಳನ್ನು, ಮಾನವ ವಿನಯ ಅವರು 596 ಅಂಕಗಳನ್ನು ಹಾಗೂ ಸೀಮ್ರಾನ್ ಅವರು 598 ಅಂಕಗಳನ್ನು ಪಡೆದಿದ್ದಾರೆ.
ಕಳೆದ ಎಪ್ರಿಲ್ 23 ರಿಂದ ಮೇ 18ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. ಈ ಪೈಕಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು ನೋಂದಾಯಿಸಿಕೊಂಡಿದ್ದರು. ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕಲಾ ವಿಭಾಗಕ್ಕೆ 2,28,167 ಮಂದಿ, ವಾಣಿಜ್ಯ ವಿಭಾಗಕ್ಕೆ 2,45,519 ಮಂದಿ ಮತ್ತು ವಿಜ್ಞಾನ ವಿಭಾಗದಲ್ಲಿ 2,10,569 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಗಣಿತದಲ್ಲಿ 14ಸಾವಿರ ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್
ಗಣಿತದಲ್ಲಿ 14,200 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದು, ಇಂಗ್ಲಿಷ್ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ ಹಾಗೂ ಕನ್ನಡದಲ್ಲಿ 563 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ ಲಭಿಸಿದೆ.
ವಾಣಿಜ್ಯ ವಿಭಾಗದ ಟಾಪರ್ಸ್ಗಳು
ನೀಲು ಸಿಂಗ್ 600ಕ್ಕೆ 596 ಅಂಕ
ಆಕಾಶ್ ದಾಸ್ಗೆ 600ಕ್ಕೆ 596 ಅಂಕ
ನೇಹಾ.ಬಿ.ಆರ್ 600ಕ್ಕೆ 596 ಅಂಕ
ಮಾನವ ವಿನಯ್ ಕೇಜ್ರಿವಾಲ್ 600ಕ್ಕೆ 596 ಅಂಕ
ವಿಜ್ಞಾನ ವಿಭಾಗದ ಟಾಪರ್ಸ್ಗಳು
ಸಿಮ್ರಾನ್ ಶೇಷರಾವ್ 600ಕ್ಕೆ 598 ಅಂಕ
ಇಲಂ ಮೊಹಮ್ಮದ್ ರಫೀಕ್ 600ಕ್ಕೆ 598 ಅಂಕ
ಸಾಯಿ ಚಿರಾಗ್ 600ಕ್ಕೆ 598 ಅಂಕ
ಶ್ರೀಕೃಷ್ಣ ಪೇಜತಾಯ 600ಕ್ಕೆ 598 ಅಂಕ
ಟಾಪರ್ ಜೊತೆ ಸಚಿವರ ಮಾತುಕತೆ
ವಿಜ್ಞಾನ ವಿಭಾಗದ ಟಾಪರ್ ಸಿಮ್ರನ್ ಶೇಷರಾವ್ ಅವರಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದರು. ಫಲಿತಾಂಶ ಪ್ರಕಟಗೊಂಡಿದೆ, ಈ ಫಲಿತಾಂಶ ನೀವು ನಿರೀಕ್ಷಿಸಿದ್ದೀರಾ? ಮುಂದೇನು ಮಾಡಬೇಕೆಂದಿದ್ದೀರಿ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿದರು. ನಂತರ ವಾಣಿಜ್ಯ ವಿಭಾಗದ ಟಾಪರ್ಸ್ಗಳಾದ ಆಕಾಶ್ ದಾಸ್, ನೇಹಾ ವಿದ್ಯಾರ್ಥಿಗಳ ಜೊತೆಯೂ ದೂರವಾಣಿ ಕರೆ ಮೂಲಕ ಮಾತನಾಡಿ ಅಭಿನಂದಿಸಿದ್ದಾರೆ.
ಹೆಚ್ಚಿನ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:52 am, Sat, 18 June 22