Career Guidance: ದ್ವಿತೀಯ ಪಿಯುಸಿ ನಂತರ ಮುಂದಿನ ಆಯ್ಕೆ ಏನು? ಮಾಹಿತಿ ಇಲ್ಲಿದೆ

ಕರ್ನಾಟಕ ಪಿಯು ಬೋರ್ಡ್‌ 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು ಪಿಯು ನಂತರ ವಿದ್ಯಾರ್ಥಿಗಳು ಮುಂದೆ ಉನ್ನತ ವ್ಯಸಾಂಗದ ಬಗ್ಗೆ ಚಿಂತಿಸುತ್ತಿದ್ದರೆ, ಆ ಕುರಿತು ಮಾಹಿತಿ ಇಲ್ಲಿದೆ.

Career Guidance: ದ್ವಿತೀಯ ಪಿಯುಸಿ ನಂತರ ಮುಂದಿನ ಆಯ್ಕೆ ಏನು? ಮಾಹಿತಿ ಇಲ್ಲಿದೆ
ದ್ವಿತೀಯ ಪಿಯುಸಿ ನಂತರ ಮುಂದೇನು ಇಲ್ಲದೆ ಉತ್ತರ
Follow us
TV9 Web
| Updated By: ವಿವೇಕ ಬಿರಾದಾರ

Updated on:Jun 18, 2022 | 3:04 PM

ಬೆಂಗಳೂರು: ಕರ್ನಾಟಕ ಪಿಯು ಬೋರ್ಡ್‌ (Karnataka PU Board) 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ (2nd PUC Result) ಪ್ರಕಟಿಸಿದ್ದು, ವಿಜ್ಞಾನ ವಿಭಾಗದಲ್ಲಿ (Science) ನಾಲ್ವರು, ವಾಣಿಜ್ಯ (Commerce)  ವಿಭಾಗದಲ್ಲಿ ನಾಲ್ವರು ಹಾಗೂ ಕಲಾ (Arts) ವಿಭಾಗದಲ್ಲಿ ಇಬ್ಬರು ಅತ್ಯಧಿಕ ಅಂಕಗಳನ್ನು ಪಡೆದು ಟಾಪರ್ಸ್​ಗಳಾಗಿ ಹೊರಹೊಮ್ಮಿದ್ದಾರೆ. ಈಗ ಪಿಯುಸಿ ನಂತರ ವಿದ್ಯಾರ್ಥಿಗಳು ಮುಂದೆ ಉನ್ನತ ವ್ಯಸಾಂಗದ ಬಗ್ಗೆ ಚಿಂತಿಸುತ್ತಿದ್ದರೆ, ಆ ಕುರಿತು ಮಾಹಿತಿ ಇಲ್ಲಿದೆ.

PUC ಸೈನ್ಸ್​​ ನಂತರ ಇಂಜಿನೀಯರಿಂಗ್ (Engineering)  ಮಾಡಲು ಬಯಸುವ ವಿದ್ಯಾರ್ಥಿಗಳು ಕೇವಲ ಸಿವಿಲ್​, ಮೆಕ್ಯಾನಿಕಲ್​​​, ಕಂಪ್ಯೂಟರ್​​​ ಸೈನ್ಸ್​​, ಎಲೆಕ್ಟ್ರಾನಿಕ್​​​ ಮತ್ತು ಕಮ್ಯುನಿಕೇಷನ್​​​ ವಿಭಾಗದಲ್ಲಿ ಮಾತ್ರ ಇಂಜಿನಿಯರಿಂಗ್​​ ಮಾಡಬಹುದು ಎಂದು ತಿಳಿದಿದ್ದರೆ ಅದು ತಪ್ಪು ಕಲ್ಪನೆ. ಕರ್ನಾಟಕದಲ್ಲಿ ಬರೋಬ್ಬರಿ 30 ಇಂಜಿನಿಯರಿಂಗ್​​ ವಿಭಾಗಗಳಿವೆ. ಹೌದು ಅವೆಲ್ಲದರ ಮಾಹಿತಿ ಇಲ್ಲಿದೆ.

1. ಏರೊನೊಟಿಕಲ್​​ ಇಂಜಿನಿಯರಿಂಗ್ 2. ಏರೋಸ್ಪೇಸ್​ ಇಂಜಿನಿಯರಿಂಗ್ 3. ಆಟೋಮೊಬೈಲ್​​ ಇಂಜಿನಿಯರಿಂಗ್ 4. ಬಯೋಮೆಡಿಕಲ್​​ ಇಂಜಿನಿಯರಿಂಗ್ 5.ಬಯೋಟೆಕ್ನಾಲಜಿ ಇಂಜಿನಿಯರಿಂಗ್ 6. ಸೆರಮಿಕ್​​ ಇಂಜಿನಿಯರಿಂಗ್ 7. ಕೆಮಿಕಲ್​​ ಇಂಜಿನಿಯರಿಂಗ್ 8. ಸಿವಿಲ್​​ ಇಂಜಿನಿಯರಿಂಗ್ 9. ಕಮ್ಯುಮಿಕೇಶನ್ಸ್​​ ಇಂಜಿನಿಯರಿಂಗ್ 10. ಕಂಪ್ಯೂಟರ್​​ ಸೈನ್ಸ್​​ ಇಂಜಿನಿಯರಿಂಗ್ 11. ಕಂಸ್ಟ್ರಕ್ಷನ್​​​ ಇಂಜಿನಿಯರಿಂಗ್ 12. ಎಲೆಕ್ಟ್ರಾನಿಕ್ಸ್​​ ಮತ್ತು ಕಮ್ಯುನಿಕೆಶನ್​ ​​​ ಇಂಜಿನಿಯರಿಂಗ್ 13. ಎಲೆಕ್ಟ್ರಾನಿಕ್ಸ್​​ ಇಂಜಿನಿಯರಿಂಗ್ 14. ಎನ್​​ವಿರೊನ್​​ಮೆಂಟಲ್​​ ಇಂಜಿನಿಯರಿಂಗ್ 15. ಇಂಡಸ್ಟ್ರಿಯಲ್​​ ಇಂಜಿನಿಯರಿಂಗ್ 16. Marine ಇಂಜಿನಿಯರಿಂಗ್ 17 ಮೆಕ್ಯಾನಿಕಲ್​​ ಇಂಜಿನಿಯರಿಂಗ್ 18. Mechatronics ಇಂಜಿನಿಯರಿಂಗ್ 19 Metallurgical ಇಂಜಿನಿಯರಿಂಗ್ 20 Mining ಇಂಜಿನಿಯರಿಂಗ್ 21. ಪೆಟ್ರೋಲಿಯಂ ಇಂಜಿನಿಯರಿಂಗ್ 22. ಪವರ್​​ ಇಂಜಿನಿಯರಿಂಗ್ 23. ಪ್ರೊಡಕ್ಷನ್​​ ಇಂಜಿನಿಯರಿಂಗ್ 24. ರೊಬೋಟಿಕ್ಸ್​​ ಇಂಜಿನಿಯರಿಂಗ್ 25. Structural ಇಂಜಿನಿಯರಿಂಗ್ 26. ಟೆಲಿಕಮ್ಯುನಿಕೇಶನ್​ ಇಂಜಿನಿಯರಿಂಗ್ 27. ಟೆಕ್ಸ್​​ಟೈಲ್​​ ಇಂಜಿನಿಯರಿಂಗ್ 28. ಟೂಲ್​ ಇಂಜಿನಿಯರಿಂಗ್ 29. ಟ್ರಾಂನ್ಸಪೋರ್ಟ್​ ಇಂಜಿನಿಯರಿಂಗ್ 30. ಎಲೆಕ್ಟ್ರಿಕಲ್ಸ್​​ ಇಂಜಿನಿಯರಿಂಗ್

ಈ 30 ವಿಭಾಗಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿಗೆ ಯಾವುದು ಹತ್ತಿರವೋ ಆ ವಿಭಾಗದಲ್ಲಿ ಇಂಜಿನಿಯರಿಂಗ್​​ ಪದವಿ ಪಡೆಯಬಹದು. ಈ ಇಂಜಿನಿಯರಿಂಗ್​​ ಓದಲು ಈಗ ಹಲವಾರು ಬ್ಯಾಂಕ್​​ಗಳು ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಶೈಕ್ಷಣಿಕ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ನೀಡುತ್ತವೆ. ಇದರ ಉಪಯೋಗ ಮಾಡಿಕೊಳ್ಳಬಹದು. ಇಂಜಿನಿಯರಿಂಗ್​​ ಪದವಿ ಪಡೆಯಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. CET ಮತ್ತು JET ಎಂಬ ಸ್ಫರ್ಧಾತ್ಮಕ ಪರೀಕ್ಷೆಗಳ ಮೂಲಕ ಇಂಜಿನಿಯರಿಂಗ್​ ಪದವಿಗೆ ವಿದ್ಯಾರ್ಥಿ ವೇತನದ ಮೂಲಕ ಉನ್ನತ ಸಂಸ್ಥೆಗಳಲ್ಲಿ ವ್ಯಾಸಂಗ ಪಡೆಯಬಹುದಾಗಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಇದೀಗ ಹಲವಾರು ಡಿಜಿಟಲ್​​ ವೇದಿಕೆಗಳು ಉಚಿತವಾಗಿಯೇ ತರಬೇತಿ ನೀಡುತ್ತಿದೆ. Unacademy, Aakash byju’s, Grade up ಮತ್ತು youtube ಗಳಂತಹ ಸಾಮಾಜಿಕ ವೇದಿಕೆಗಳನ್ನು ಇಲ್ಲಿ ನೀವಯ ಬಳಸಿಕೊಳ್ಳಬಹದುದಾಗಿದೆ.

ಪದವಿಯ ನಂತರ ಮುಂದೆ ಉದ್ಯೋಗ ಹೇಗೆ ಎಂಬ ಚಿಂತೆ ಬೇಡ. ಬಹುತೇಕ ಕಾಲೇಜುಗಳಿಂದಲೇ ಉದ್ಯೋಗವಕಾಶವನ್ನು ನೀಡಲಾಗುತ್ತದೆ. ಅಲ್ಲಿ ಬರುವ ಅವಕಾಶಗಳು ಇಷ್ಟವಾಗದೇ ಇದ್ದಲ್ಲಿ ಬೆಂಗಳೂರಿನಲ್ಲಿ ವಾರಕ್ಕೆ ಅಂದಾಜು 3-4 ಬಾರಿ ವಾಕ್​​-ಇನ್​ (walk-in) ಅಥವಾ ಆಫ್​​ ಕ್ಯಾಂಪಸ್​ (off Campus) ಇಂಟರ್​​ವ್ಯೂವ್​​​ಗಳನ್ನು ನಡೆಸುತ್ತಾರೆ. ಇಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಇರಲಿವೆ. ನಿಮಗಿಚ್ಚೆಯ ಉದ್ಯೋಗವನ್ನು ನೀವು ಪಡೆಯಬಹುದು. ಇಲ್ಲಿ ಪದವಿಯ ನಂತರ ಉನ್ನತ ಶಿಕ್ಷಣ ಮುಂದುವರೆಸಲು ಇಚ್ಚಿಸುವ ವಿದ್ಯಾರ್ಥಿಗಳು PG-CET ಮತ್ತು GATE ಪರೀಕ್ಷೆಗಳನ್ನು ಬರೆದು ರಾಜ್ಯದ ಮತ್ತು ದೇಶದ IITಗಳಲ್ಲಿ ಮತ್ತು ಉನ್ನತ ಸಂಸ್ಥೆಗಳಲ್ಲಿ ವಿದ್ಯಾರ್ಥಿವೇತನ ಸಮೇತ ವ್ಯಾಸಂಗ ಮಾಡಬಹದು.​

ಪವಿತ್ರಾ ಡಿ ಕೋಲಾರ ಲೇಖಕಿ, ಸವಿಲ್​​ ಇಂಜಿನಿಯರ್​​

Published On - 2:35 pm, Sat, 18 June 22

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ