Karnataka 2nd PUC Result 2022 Live: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.61.88 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, 91,106 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್
ಕರ್ನಾಟಕ 2nd ಪಿಯುಸಿ ಫಲಿತಾಂಶ 2022 Live: ನೀವು ವೆಬ್ ಸೈಟ್‌ನಲ್ಲಿ ಫಲಿತಾಂಶವನ್ನು ವೀಕ್ಷಿಸಬೇಕಾದರೆ ಪದವಿ ಪುರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ kseeb.kar.nic.in, pue.kar.nic.in ಅಥವಾ karresults.nic.in ವೆಬ್ ಸೈಟ್‌ಗಳಿಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆಯಬಹುದಾಗಿದೆ.
Karnataka PUC 2 Result 2022 Live Updates: ಕರ್ನಾಟಕ 2nd ಪಿಯುಸಿ ಫಲಿತಾಂಶ 2022: ಇಂದು (ಜೂನ್ 18) ದ್ವಿತೀಯ ಪಿಯುಸಿ ಫಲಿತಾಂಶ (Karnataka 2nd PUC Result 2022) ಪ್ರಕಟವಾಗಿದೆ. ಬೆಳಗ್ಗೆ 11 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ಅವರು ಬೆಂಗಳೂರಿನ ಪಿಯು ಬೋರ್ಡ್‌ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ kseeb.kar.nic.in, pue.kar.nic.in ಅಥವಾ www.karresults.nic.in ಗೆ ಭೇಟಿ ನೀಡಿ ಫಲಿತಾಂಶ ಪಡೆಯಬಹುದಾಗಿದೆ.
ಏ.23ರಿಂದ ಮೇ 18ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು. ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ನಡೆದಿದ್ದ ಪಿಯು ಪರೀಕ್ಷೆ ನಡೆದಿತ್ತು.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ.
ಶೇ.61.88 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ.
ಉತ್ತೀರ್ಣ ಪ್ರಮಾಣ: ಬಾಲಕಿಯರು: ಶೇ.68.72 ಬಾಲಕರು: ಶೇ.55.22
6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
4,22,966 ವಿದ್ಯಾರ್ಥಿಗಳು ಉತ್ತೀರ್ಣ.
ಪೂರಕ ಪರೀಕ್ಷೆ ದಿನಾಂಕವನ್ನು ಈ ತಿಂಗಳಾಂತ್ಯಕ್ಕೆ ಪ್ರಕಟಿಸಲಾಗುವುದು.#PUCResults
— B.C Nagesh (@BCNagesh_bjp) June 18, 2022
ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಇಂಗ್ಲೀಷ್ನಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಜೂನ್ 18ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
LIVE NEWS & UPDATES
-
Karnataka 2nd PUC Result 2022 Live: ನಂಗೆ ಇಷ್ಟೊಂದು ಮಾಕ್ಸ್೯ ಬರುತ್ತೆ ಅಂತ ಅಂದುಕೊಂಡಿರಲಿಲ್ಲ
ಹುಬ್ಬಳ್ಳಿ: ನಂಗೆ ಇಷ್ಟೊಂದು ಮಾಕ್ಸ್೯ ಬರುತ್ತೆ ಅಂತ ನಾನ್ ಅಂದುಕೊಂಡಿರಲಿಲ್ಲ ಎಂದು ಟಿವಿ 9ಗೆ ಮೂರನೇ ರ್ಯಾಂಕ್ ವಿದ್ಯಾರ್ಥಿನಿ ಸಾನಿಕಾ ಹೇಳಿಕೆ ನೀಡಿದ್ದಾಳೆ. ನಮ್ಮ ಪ್ರಾಧ್ಯಾಪಕರು, ಎಲ್ಲಾ ಸ್ಟಾಪ್ ಸಹಾಯದಿಂದ ಈ ರ್ಯಾಂಕ್ ದೊರೆತಿದೆ. ಬಹಳ ಖುಷಿಯಾಗುತ್ತಿದೆ. ನಾನು ಮುಂದು ಲಾ ಓದಬೇಕಂದಿದ್ದೆನೆ ಎಂದಳು. ಮಗಳ ಸಾಧನೆ ನಂಗೆ ಹೆಮ್ಮೆ ಅನಿಸ್ತಿದೆ. ನಂಗೆ ನೀರಿಕ್ಷೆ ಇತ್ತು, ರಿಸಲ್ಟ್ ಚೆನ್ನಾಗಿ ಬರುತ್ತೆ ಅಂತ. ಆದ್ರೆ ಇಷ್ಟೊಂದು ದೊಡ್ಡ ಮಟ್ಟದ ರಿಸಲ್ಟ್ ತುಂಬಾ ಹ್ಯಾಪಿ ತಂದಿದೆ. ಸಾನಿಕಾ ಸಾಧನೆ ನಮ್ಮ ಕಾಲೇಜಿನ ಕೀರ್ತಿ ಹೆಚ್ಚಿಸಿದೆ ಎಂದು ಸಾನಿಕ ಪೋಷಕರು ಹೇಳಿದರು.
-
Karnataka 2nd PUC Result 2022 Live: ಉಡುಪಿಯ ಭವ್ಯ ನಾಯಕ್ ರಾಜ್ಯಕ್ಕೆ ದ್ವಿತೀಯ
ಉಡುಪಿ: ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಉಡುಪಿಯ ಭವ್ಯ ನಾಯಕ್ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಪ್ಪಳ ಮಾರಾಟ ಮಾಡುವವರ ಪುತ್ರಿ ಸೈನ್ಸ್ನಲ್ಲಿ 600 ರಲ್ಲಿ 597 ಅಂಕ ಪಡೆದಿದ್ದಾರೆ. ಪುತ್ತೂರಿನ ನಿವಾಸಿಯಾದ ಭವ್ಯ ನಾಯಕ್, ನಾರಾಯಣ ಉಮಾ ನಾಯಕ್ ದಂಪತಿ ಪುತ್ರಿ. ಹಪ್ಪಳ ಮಾರಾಟ ಮಾಡಿ ತಂದೆ ನಾರಾಯಣ ನಾಯಕ್ ಮಗಳನ್ನ ಓದಿಸಿದ್ದಾರೆ. ಸಿಇಟಿ ಬರೆದಿದ್ದೇನೆ ಭವಿಷ್ಯದಲ್ಲಿ ಇಂಜಿನಿಯರ್ ಆಗುವ ಆಸೆ ವ್ಯಕ್ತಪಡಿಸಿದ ಭವ್ಯ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.
-
Karnataka 2nd PUC Result 2022 Live: ಕಾಮರ್ಸ್ನಲ್ಲಿ ರಾಜ್ಯಕ್ಕೆ ಫಸ್ಟ್ ರ‍್ಯಾಂಕ್ ಬಂದ ರೈತನ ಮಗಳು
ಚಿಕ್ಕಬಳ್ಳಾಪುರ: ಕಾಮರ್ಸ್ನಲ್ಲಿ ರಾಜ್ಯಕ್ಕೆ ಫಸ್ಟ್ ರ‍್ಯಾಂಕ್ ಬಂದ ರೈತನ ಮಗಳು. ಅಗಲಗುರ್ಕಿ ಬಿ.ಜಿ.ಎಸ್ ಶಾಲೆಯ ವಿದ್ಯಾರ್ಥಿನಿ ಬಿ.ಆರ್ ನೇಹಾ 596 ಅಂಕಗಳನ್ನು ಪಡೆದು ರಾಜ್ಯಕ್ಕೆ ಫಸ್ಟ್ ರ‍್ಯಾಂಕ್ ಬಂದಿದ್ದಾಳೆ. ಕನ್ನಡ 97, ಇಂಗ್ಲಿಷ್ 100, ಅಕೌಂಟೇನ್ಸ್ 99, ಎಕನಾಮಿಕ್ಸ್ 100, ಬ್ಯೂಜಿನೇಸ್ 100, ಕಂಪ್ಯೂಟರ್ ಸೈನ್ಸ್ 100 ಅಂಕಗಳನ್ನು ಪಡೆದಿದ್ದಾಳೆ. ಬಿ.ಆರ್ ನೇಹಾ ತಂದೆ ರಾಮಸ್ವಾಮಿ, ತಾಯಿ ಪದ್ಮಾವತಿ ಮಗಳಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಮದ ನಿವಾಸಿ. ಶಾಲಾ ಆಡಳಿತ ಮಂಡಳಿಯಿಂದ ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಲಾಗಿದೆ.
Karnataka 2nd PUC Result 2022 Live: ಶಿವರಾಜ್ ಸಾಧನೆಗೆ ವ್ಯಾಪಕ ಮೆಚ್ಚುಗೆ
ಗದಗ: 600 ಅಂಕಕ್ಕೆ 593 ಅಂಕಗಳನ್ನು ಪಡೆಯುವ ಮೂಲಕ ಕಲಾ ವಿಭಾಗದಲ್ಲಿ ಶಿವರಾಜ್ ಡಿ ಉತ್ತಮ ಸಾಧನೆ ಮಾಡಿದ್ದಾರೆ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನೆರೇಗಲ್ ಅನ್ನದಾನೇಶ್ವರ ಪಿಯು ಕಾಲೇಜು ವಿದ್ಯಾರ್ಥಿ. ಸದ್ಯ ತುಮಕೂರಿನಲ್ಲಿ ಶಿವರಾಜ್ ಕೂಲಿ ಕೆಲಸ ಮಾಡುತ್ತಿದ್ದು, ಶಿವರಾಜ್ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Karnataka 2nd PUC Result 2022 Live: ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದ ರಾಮನಗರ ಜಿಲ್ಲೆಯ ವಿದ್ಯಾರ್ಥಿನಿ
ರಾಮನಗರ: ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ 595 ಅಂಕ ಪಡೆದ ಪವಿತ್ರ ಕೆ. ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದಾಳೆ. ಜಿಲ್ಲೆಯ ಮಾಗಡಿ ಪಟ್ಟಣದ ಬಿಜಿಎಸ್ ಪಿಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು, ತಂದೆ ಕುಮಾರ್, ತಾಯಿ ಗೀತಾ ದಂಪತಿಯ ಮಗಳು.
Karnataka 2nd PUC Result 2022 Live: ಟಾಪರ್ಗಳ ಜೊತೆ ಶಿಕ್ಷಣ ಸಚಿವರ ಮಾತು
ಬೆಂಗಳೂರು: 598/600 ಅಂಕ ಪಡೆದ ವಿಜ್ಞಾನ ವಿಭಾಗದ ಟಾಪರ್ ಸಿಮ್ರನ್ ಶೇಷರಾವ್ಗೆ ಶಿಕ್ಷಣ ಸಚಿವ ನಾಗೇಶ್ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ. RV ಪಿಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಮುಂದೆ ಏನ್ಮಾಡ್ಬೇಕು ಅಂತ ಅದುಕೊಂಡಿದ್ದೀರಿ. ಈ ಫಲಿತಾಂಶ ನಿರೀಕ್ಷೆ ಮಾಡಿದ್ರಾ ಎಂದು ಕೇಳಿದರು. ವಾಣಿಜ್ಯ ಟಾಪರ್ಗಳಾದ ಆಕಾಶ್ ದಾಸ್, ನೇಹಾ ಜೊತೆಗೆ ಶಿಕ್ಷಣ ಸಚಿವರು ಮಾತನಾಡಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
Karnataka 2nd PUC Result 2022 Live: ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಇಬ್ಬರೂ ವಿದ್ಯಾರ್ಥಿಗಳು ಟಾಪರ್
ವಿಜಯನಗರ: ಕಲಾ ವಿಭಾಗದ ಶ್ವೇತಾ ಭೀಮಾಶಂಕರ ಭೈರಗೊಂಡ ಮೊದಲ ರ್ಯಾಂಕ್ ಪಡೆದರೆ ಮಡಿವಾಳರ ಸಹನಾ ಎರಡನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಟಾಪರ್ ಬಂದಿದ್ದಾರೆ. ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರೋ ಇಂದು ಪಿಯು ಕಾಲೇಜ್ನ ಇಬ್ಬರು ವಿದ್ಯಾರ್ಥಿಗಳು 594 ಅಂಕಗಳನ್ನು ಪಡೆದುಕೊಂಡಿದ್ದಾರೆ. ಮಕ್ಕಳಿಗೆ ಸಿಹಿ ತಿನಿಸಿ ಆಡಳಿತ ಮಂಡಳಿ ಸಂಭ್ರಮಾಚರಣೆ ಮಾಡಿದೆ.
Karnataka 2nd PUC Result 2022 Live: ವಾಣಿಜ್ಯ ವಿಭಾಗದಲ್ಲಿ 6 ನೇ ಸ್ಥಾನ ಪಡೆದ ತುಮಕೂರಿನ ವಿದ್ಯಾರ್ಥಿನಿ
ತುಮಕೂರು: ವಿದ್ಯಾವಾಹಿನಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಹನ ವಾಣಿಜ್ಯ ವಿಭಾಗದಲ್ಲಿ 6 ನೇ ಸ್ಥಾನ ಪಡೆದುಕೊಂಡಿದ್ದಾರೆ. ನಗರದ ಕುವೆಂಪು ನಗರದ ರಮೇಶ್, ಶಶಿಕಲಾ ದಂಪತಿಯ ಮಗಳಾಗಿರುವ ಸಹನ. ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 595 ಅಂಕ ಪಡೆದಿದ್ದಾರೆ.
Karnataka 2nd PUC Result 2022 Live: ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಹುಬ್ಬಳ್ಳಿ ಹುಡುಗಿ
ಹುಬ್ಬಳ್ಳಿ: ಎಸ್ಜೆಎಂವಿಎಸ್ ಕಾಲೇಜಿನ ಸಾನಿಕಾ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಾಳೆ. ವಿದ್ಯಾರ್ಥಿನಿ ರ್ಯಾಂಕ್ಗೆ ಕಾಲೇಜಿನಲ್ಲಿ ಸಂತಸಗೊಂಡಿದ್ದಾರೆ.
Karnataka 2nd PUC Result 2022 Live: 91,106 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಗ್ರಾಮಾಂತರ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿದೆ. ನಗರಪ್ರದೇಶದಲ್ಲಿ 61.78 ರಷ್ಟಿದ್ದು, ಗ್ರಾಮಾಂತರ 62.18ರಷ್ಟಿದೆ. ಪಿಯುಸಿಯಲ್ಲಿ 91106 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ಲ್ಲಿ ಪಾಸಾಗಿದ್ದಾರೆ.
Karnataka 2nd PUC Result 2022 Live: ಸೈನ್ಸ್ ವಿಭಾಗದಲ್ಲಿ ನಾಲ್ವರು ವಿದ್ಯಾರ್ಥಿಗಳು ಟಾಪರ್
ಸೈನ್ಸ್ ವಿಭಾಗದಲ್ಲಿ ನಾಲ್ವರು ವಿದ್ಯಾರ್ಥಿಗಳು ಟಾಪರ್ ಆಗಿದ್ದಾರೆ. 600ಕ್ಕೆ 598 ಅಂಕ ಪಡೆದ ಸಿಮ್ರಾನ್ ಶೇಷರಾವ್, ಇಲಂ ಮೊಹಮ್ಮದ್ ರಫೀಕ್ 600ಕ್ಕೆ 598 ಅಂಕ, ಸಾಯಿ ಚಿರಾಗ್ 600ಕ್ಕೆ 598 ಅಂಕ, ಶ್ರೀಕೃಷ್ಣ ಪೇಜತಾಯ 600ಕ್ಕೆ 598 ಅಂಕ ಪಡೆದುಕೊಂಡಿದ್ದಾರೆ.
Karnataka 2nd PUC Result 2022 Live: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ. ಶೇ.61.88 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ.
ಶೇ.61.88 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ.
ಉತ್ತೀರ್ಣ ಪ್ರಮಾಣ: ಬಾಲಕಿಯರು: ಶೇ.68.72 ಬಾಲಕರು: ಶೇ.55.22
6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
4,22,966 ವಿದ್ಯಾರ್ಥಿಗಳು ಉತ್ತೀರ್ಣ.
ಪೂರಕ ಪರೀಕ್ಷೆ ದಿನಾಂಕವನ್ನು ಈ ತಿಂಗಳಾಂತ್ಯಕ್ಕೆ ಪ್ರಕಟಿಸಲಾಗುವುದು.#PUCResults
— B.C Nagesh (@BCNagesh_bjp) June 18, 2022
Karnataka 2nd PUC Result 2022 Live: ರಾಜ್ಯದಲ್ಲಿ ಒಟ್ಟು 56 ಕಾಲೇಜು 100% ರಿಸಲ್ಟ್
ರಾಜ್ಯದಲ್ಲಿ ಒಟ್ಟು 56 ಕಾಲೇಜು 100% ರಿಸಲ್ಟ್ ಬಂದಿದ್ದು, ಸರ್ಕಾರಿ ಪದವಿ ಪೂರ್ವ ಕಾಲೇಜು 04, ಅನುದಾನಿತ ಪದವಿ ಪೂರ್ವ ಕಾಲೇಜು 02, ಅನುದಾನ ರಹಿತ ಪದವಿ ಪೂರ್ವ ಕಾಲೇಜು 50
Karnataka 2nd PUC Result 2022 Live: ಫಲಿತಾಂಶ ಟಪರ್
ಫಲಿತಾಂಶ ಟಪರ್ ಕಲಾ- ಶ್ವೇತಾ ಭೀಮಶಂಕರ ಬೈರಗೊಂಡ ಬಳ್ಳಾರಿ – 600-594
ಕಲಾ ಸಹನಾ ಇಂದು ಪಿಯು ಕಾಲೇಜು ಕೊಟ್ಟುರು 594
ವಾಣಿಜ್ಯ
ಮಾನವ ವಿನಯ ಕೇಜ್ರಿವಾಲ್ ಜೈನ್ ಪಿಯು ಕಾಲೇಜು 596
Karnataka 2nd PUC Result 2022 Live: ರಿಸಲ್ಟ್ ಬಗ್ಗೆ ಅನುಮಾನವಿದ್ರೆ ಸ್ಕ್ಯಾನ್ ಕಾಪಿ ಪಡೆಯಬಹುದು
ರಿಸಲ್ಟ್ ಬಗ್ಗೆ ಅನುಮಾನವಿದ್ರೆ ಸ್ಕ್ಯಾನ್ ಕಾಪಿ ಪಡೆಯಬಹುದು. ಇಂದಿನಿಂದ ಜೂನ್ 30ರವರೆಗೆ ಅವಕಾಶ ಇರುತ್ತೆ. ಪ್ರತಿ ವಿಷಯದ ಸ್ಕ್ಯಾನ್ ಕಾಪಿಗೆ 530 ರೂ. ಶುಲ್ಕವಿರುತ್ತೆ. ಸ್ಕ್ಯಾನ್ ಕಾಪಿ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸಚಿವ ನಾಗೇಶ್ ಹೇಳಿದರು.
Karnataka 2nd PUC Result 2022 Live: ಕನ್ನಡದಲ್ಲಿ 563 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ
2021-22ನೇ ಸಾಲಿನ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಇಂಗ್ಲಿಷ್ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ ಪಡೆದುಕೊಂಡಿದ್ದು, ಕನ್ನಡದಲ್ಲಿ 563 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ ಪಡೆದುಕೊಂಡಿದ್ದಾರೆ.
Karnataka 2nd PUC Result 2022 Live: ಗಣಿತದಲ್ಲಿ 14,200 ವಿದ್ಯಾರ್ಥಿಗಳು ಔಟ್ ಆಫ್ ಔಟ್
2021-22ನೇ ಸಾಲಿನ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಗಣಿತ ವಿಷಯದಲ್ಲಿ 14,200 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಮಾಡಿದ್ದಾರೆ.
Karnataka 2nd PUC Result 2022 Live: ಹೆಚ್ಚು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತೇರ್ಗಡೆ
ಹೆಚ್ಚು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಈ ಭಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಗ್ರಾಮಾಂತರ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿದೆ. ನಗರಪ್ರದೇಶದಲ್ಲಿ 61.78, ಗ್ರಾಮಾಂತರ 62.18ರಷ್ಟಿದೆ. ಪಿಯುಸಿಯಲ್ಲಿ 91106 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಆಗಿದ್ದಾರೆ.
3,37,006 ಬಾಲಕಿಯರ ಪೈಕಿ 2,31,586 ಮಕ್ಕಳು ಪಾಸ್ – 68.72%.
3,46,557 ಬಾಲಕರಲ್ಲಿ 1,91,380 ಮಕ್ಕಳು ಪಾಸ್ – 55.22%
ಬಾಲಕಿಯರು – 68.72%
ಬಾಲಕರು – 55.22
Karnataka 2nd PUC Result 2022 Live: ದಕ್ಷಣಕನ್ನಡ ಜಿಲ್ಲೆಗೆ ಮೊದಲ ಸ್ಥಾನ
ದಕ್ಷಣಕನ್ನಡ ಜಿಲ್ಲೆಗೆ ಮೊದಲ ಸ್ಥಾನ ಪಡೆದುಕೊಂಡಿದ್ದು, ಉಡುಪಿ 2ನೇ ಸ್ಥಾನ, ವಿಜಯಪುರ 3ನೇ ಸ್ಥಾನ, ಬೆಂಗಳೂರು ದಕ್ಷಣ 4ನೇ ಸ್ಥಾನ, ಉತ್ತರ ಕನ್ನಡ 5ನೇ ಸ್ಥಾನ, ಚಿತ್ರದುರ್ಗ ಕೊನೆಯ ಸ್ಥಾನ ಪಡೆದುಕೊಂಡಿದೆ. ಈ ಭಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ.
Karnataka 2nd PUC Result 2022 Live: ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ
ಈ ಬಾರಿ ಹೆಚ್ಚು ಸೈನ್ಸ್ ವಿದ್ಯಾರ್ಥಿಗಳು ಪಾಸ್ ಆಗಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ. ಈ ಬಾರಿ ಗ್ರಾಮಾಂತರದಲ್ಲಿ ಫಲಿತಾಂಶ ಉತ್ತಮವಾಗಿದೆ. ನಗರಪ್ರದೇಶದಲ್ಲಿ 61.78, ಗ್ರಾಮಾಂತರ 62.18ರಷ್ಟಿದೆ.
Karnataka 2nd PUC Result 2022 Live: ಶಿಕ್ಷಣ ಸಚಿವ ಬಿಸಿ ನಾಗೇಶ್ ರಿಂದ ಸುದ್ದಿಗೋಷ್ಠಿ ಆರಂಭ
ಶಿಕ್ಷಣ ಸಚಿವ ಬಿಸಿ ನಾಗೇಶ್ರಿಂದ ಸುದ್ದಿಗೋಷ್ಠಿ ಆರಂಭವಾಗಿದ್ದು, ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ರು. 6,83,563 ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಿದ್ರು. 81 ಮೌಲ್ಯ ಮಾಪನ ಕೇಂದ್ರ ತೆರೆಯಲಾಗಿತ್ತು. ಕಡಿಮೆ ದಿನದಲ್ಲಿ ಫಲಿತಾಂಶ ನೀಡ್ತಾ ಇದ್ದೀವಿ. ಒಟ್ಟು 61.88 % ತೇರ್ಗಡೆಯಾಗಿದ್ದಾರೆ. ಹೆಚ್ಚು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
Karnataka 2nd PUC Result 2022 Live: 2021-22ನೇ ಸಾಲಿನ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ
2021-22ನೇ ಸಾಲಿನ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಪಿಯು ಪರೀಕ್ಷೆಯಲ್ಲಿ 61.88ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಈ ವರ್ಷ ಪಿಯುಸಿ ಪರೀಕ್ಷೆಯಲ್ಲಿ 4,02,697 ಮಕ್ಕಳು ಪಾಸ್ ಆಗಿದ್ದಾರೆ. ಈ ವರ್ಷ 5,99,794 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
Karnataka 2nd PUC Result 2022 Live: ಸಚಿವ ಬಿ.ಸಿ ನಾಗೇಶ್ ಅವರಿಂದ ವಿದ್ಯಾರ್ಥಿಗಳಿಗೆ ಕಿವಿ ಮಾತು
ವಿದ್ಯಾರ್ಥಿಗಳು ಫಲಿತಾಂಶ ನೋಡಿ ನಿರಾಶಗೊಳಗಾಗಬಾರದು. ಈ ಪರೀಕ್ಷೆಯೊಂದೆ ನಿಮ್ಮ ಭವಿಷ್ಯವನ್ನು ನಿರ್ಧಾರ ಮಾಡಲ್ಲ. ಹಾಗಾಗಿ ಯಾರು ಕೂಡ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬಾರದು.
Karnataka 2nd PUC Result 2022 Live: ಮರುಮೌಲ್ಯಮಾಪನ ಪ್ರಕ್ರಿಯೆ
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ನಂತರ, ವಿದ್ಯಾರ್ಥಿಗಳು ತಮ್ಮ PUC II ಪರೀಕ್ಷೆಯ ಫಲಿತಾಂಶದ ಮರುಮೌಲ್ಯಮಾಪನಕ್ಕೆ ಸಹ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಪಿಯು ಬೋರ್ಡ್ ದ್ವಿತೀಯ ಪಿಯುಸಿ ತರಗತಿಗೆ ಸಂಬಂಧಿಸಿದ ವಿವರಗಳನ್ನು ಮಂಡಳಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ.
Karnataka 2nd PUC Result 2022 Live: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಹೀಗೂ ನೋಡಬಹುದು
ವಿದ್ಯಾರ್ಥಿಗಳು ತಮ್ಮ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2022ನ್ನು SMS ಮೂಲಕ ಪಡೆಯಬಹುದಾಗಿದೆ. ಫಲಿತಾಂಶನ್ನು SMS ಮೂಲಕ ಪರಿಶೀಲಿಸುವ ಹಂತಗಳು ಹೀಗಿದೆ. SMSನ್ನು ಫಾರ್ಮ್ಯಾಟ್‌ನಲ್ಲಿ ಟೈಪ್ ಮಾಡಿ – KAR12<ಸ್ಪೇಸ್>ನೋಂದಣಿ ಸಂಖ್ಯೆ ನಮೂದಿಸಿ 56263 ಗೆ SMS ಕಳುಹಿಸಿ. ವಿದ್ಯಾರ್ಥಿಗಳು ಅದೇ ಮೊಬೈಲ್ ಸಂಖ್ಯೆಯಲ್ಲಿ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2022ನ್ನು ಪಡೆಯಬಹುದಾಗಿದೆ.
Karnataka 2nd PUC Result 2022 Live: ಫಲಿತಾಂಶ 12 ಗಂಟೆ ನಂತರ karresults.nic.In ನಲ್ಲಿ ನೋಡಬಹುದು
ದ್ವಿತೀಯ ಪಿಯು ಫಲಿತಾಂಶವನ್ನು ಇಲಾಖೆಯ ವೆಬ್ಸೈಟ್ನಲ್ಲಿ https://t.co/j1ntn8hcEF ನೋಡಬಹುದು. ಇಂದು ಮಧ್ಯಾಹ್ನ 12 ಗಂಟೆಯಿಂದ ಫಲಿತಾಂಶ ಲಭ್ಯವಾಗಲಿದೆ. ಶುಭವಾಗಲಿ. #PUCResults
— B.C Nagesh (@BCNagesh_bjp) June 18, 2022
Karnataka 2nd PUC Result 2022 Live: ವಿದ್ಯಾರ್ಥಿಗಳ ಅಂಕಿಅಂಶ ಹೀಗಿದೆ
ಕರ್ನಾಟಕ ಪರೀಕ್ಷಾ ಫಲಿತಾಂಶ 2022 Karresults.nic.in ಮತ್ತು Pue.kar.nic.in ಅಂಕಿಅಂಶಗಳಲ್ಲಿ ಹೀಗಿದೆ.
ನೋಂದಾಯಿತ ವಿದ್ಯಾರ್ಥಿಗಳ ಸಂಖ್ಯೆ (ನಿಯಮಿತ): 6,00,519
ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ (ಪುನರಾವರ್ತನೆ): 61,808
ನೋಂದಾಯಿತ ವಿದ್ಯಾರ್ಥಿಗಳ ಸಂಖ್ಯೆ (ಖಾಸಗಿ): 21,928
Karnataka 2nd PUC Result 2022 Live: ಫಲಿತಾಂಶವನ್ನ ಈ ವೆಬ್‌ಸೈಟ್‌ಗಳಲ್ಲಿ ಚೇಕ್ ಮಾಡಬಹುದು
ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಇಂದು ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಈ ಕೆಳಗೆ ನೀಡಿದ ವೆಬ್‌ಸೈಟ್‌ಗಳಲ್ಲಿ ತಮ್ಮ ರಿಸಲ್ಟ್ ನೋಡಬಹುದು.
karresults.nic.in
result.dkpucpa.com
kseeb.kar.nic.in
pue.kar.nic.in
Karnataka 2nd PUC Result 2022 Live: ದ್ವಿತೀಯ ಪಿಯು ಫಲಿತಾಂಶಕ್ಕೆ ಕೌಂಟ್ ಡೌನ್
ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಇಂದು ಸುದ್ದಿಗೋಷ್ಠಿ ಮೂಲಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಫಲಿತಾಂಶ ಪ್ರಕಟಿಸಲಿದ್ದಾರೆ. ಪಿಯು ಫಲಿತಾಂಶ 11:30ರ ನಂತರ ವಿಧ್ಯಾರ್ಥಿಗಳ ಕೈ ಸೇರಲಿದ್ದು, ಮಧ್ಯಾಹ್ನ 12 ಗಂಟೆ ನಂತರ ಇಲಾಖೆಯ karresults.nic.in ವೆಬ್ನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಜೊತೆಗೆ ಮಧ್ಯಾಹ್ನ ಆಯಾ ಶಾಲೆಗಳಲ್ಲೂ ಮತ್ತು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್‌ಎಂಎಸ್ ಮೂಲಕ ಕೂಡ ಫಲಿತಾಂಶ ಪಡೆಯಬಹುದಾಗಿದೆ.
Karnataka 2nd PUC Result 2022 Live: ಯಾರು ಮತ್ತು ಯಾವಾಗ ಫಲಿತಾಂಶಗಳನ್ನು ಪ್ರಕಟಿಸುತ್ತಾರೆ?
ಇಂದು ಬೆಳಗ್ಗೆ 11:30ಕ್ಕೆ ಪಿಯುಸಿ ಮಂಡಳಿಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ವಿದ್ಯಾರ್ಥಿಗಳು ಮಧ್ಯಾಹ್ನದ ನಂತರ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.
ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿದ ಫಲಿತಾಂಶಗಳು ತಾತ್ಕಾಲಿಕವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಶಾಲೆಗಳಿಂದ ತಮ್ಮ ಮೂಲ ಅಂಕಪಟ್ಟಿಗಳನ್ನು ಪಡೆದುಕೊಳ್ಳಬೇಕಾಗುತ್ತದೆ
Karnataka 2nd PUC Result 2022 Live: 2021ರ ದ್ವಿತೀಯ ಪಿಯುಸಿ ಫಲಿತಾಂಶದ ಅಂಕಿಅಂಶ
2021ರಲ್ಲಿ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವನ್ನು ಜುಲೈ 20 ರಂದು ಪ್ರಕಟಿಸಲಾಗಿತ್ತು. ಒಟ್ಟು 2,239 ವಿದ್ಯಾರ್ಥಿಗಳು 600 ರಲ್ಲಿ 600 ಅಂಕಗಳನ್ನು ಗಳಿಸಿದ್ದಾರೆ.
Karnataka 2nd PUC Result 2022 Live: ಪರೀಕ್ಷೆಯಲ್ಲಿ ತೇರ್ಗಡೆಯಾಗಲು, ಪ್ರತಿ ವಿಷಯದಲ್ಲಿ ಕನಿಷ್ಠ 35 ಶೇಕಡಾ ಅಂಕ ಖಡ್ಢಾಯ
2nd PUC ಪರೀಕ್ಷೆಯಲ್ಲಿ ತೇರ್ಗಡೆಯಾಗಲು, ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಕನಿಷ್ಠ 35 ಶೇಕಡಾ ಅಂಕಗಳನ್ನು ಗಳಿಸಬೇಕು. ಕರ್ನಾಟಕ ಪಿಯುಸಿ ಬೋರ್ಡ್ ಪರೀಕ್ಷೆಗಳಿಗೆ 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶ 2022 ಅಂಕಪಟ್ಟಿಯನ್ನು ಫಲಿತಾಂಶಗಳೊಂದಿಗೆ ಇಂದು ಬಿಡುಗಡೆ ಮಾಡಲಿದೆ.
ಈ ಬಾರಿ ಯಾವುದೇ ವಿದ್ಯಾರ್ಥಿ ಡಿಬಾರ್ ಆಗಿಲ್ಲ
ರಾಜ್ಯಾದ್ಯಂತ ಈ ಬಾರಿ ಯಾವುದೇ ಪರೀಕ್ಷಾ ಅಕ್ರಮ, ಅವ್ಯವಹಾರ ನಡೆದಿಲ್ಲ. ಯಾವುದೇ ವಿದ್ಯಾರ್ಥಿಯು ಡಿಬಾರ್ ಆಗಿಲ್ಲ ಮತ್ತು ಯಾವುದೇ ವಿದ್ಯಾರ್ಥಿಗಳು ಕೋವಿಡ್ ಸೋಂಕು ದೃಡಪಟ್ಟಿಲ್ಲ ಎಂದು ಪಿಯು ಬೋರ್ಡ್ ತಿಳಿಸಿದೆ.
ಬೇರೆ ಬೇರೆ ಭಾಷೆಯ ವಿಷಯಗಳಿಗೆ ಗೈರು ಹಾಜರಾದ ವಿದ್ಯಾರ್ಥಿಗಳು
ತಮಿಳು ವಿಷಯದ ದ್ವಿತೀಯ ಪಿಯು ಪರೀಕ್ಷೆಗೆ 286 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 18 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ತೆಲುಗು ವಿಷಯದಲ್ಲಿ ನೋಂದಾಯಿಸಿಕೊಂಡಿದ್ದಂತ 78 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಸಂಸ್ಕೃತ ಪರೀಕ್ಷೆಯಲ್ಲಿ 20,307 ವಿದ್ಯಾರ್ಥಿಗಳಲ್ಲಿ 347 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಉರ್ದು ವಿಷಯದಲ್ಲಿ 11,237 ಮಂದಿಯಲ್ಲಿ, 1,117 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮರಾಠಿ ವಿಷಯದಲ್ಲಿ 2,464 ನೋಂದಾಯಿತ ವಿದ್ಯಾರ್ಥಿಗಳಲ್ಲಿ 172 ಮಂದಿ, ಮಲಯಾಳಂ ವಿಷಯದಲ್ಲಿ 9 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಗೈರು ಹಾಜರಾಗಿದ್ದರು.
ಕನ್ನಡ ಭಾಷೆ ಪರೀಕ್ಷೆಗೆ ಗೈರು ಹಾಜರಾದವರು
ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಕನ್ನಡ ಭಾಷಾ ವಿಷಯದ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದವರ ಪೈಕಿ 15,884 ಮಂದಿ ಹಾಜರಾಗಿದ್ದು, 1723 ಅಭ್ಯರ್ಥಿಗಳು ಗೈರಾಗಿದ್ದರು.
ಪರೀಕ್ಷೆಯ ಮೊದಲ ದಿನ ಗೈರು ಹಾಜರಾದವರು
ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನ ತರ್ಕಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್ ವಿಷಯಗಳ ಪರೀಕ್ಷೆ ನಡೆಡಿದ್ದವು. ಪರೀಕ್ಷೆಯ ಮೊದಲ ದಿನವೇ 11,379 ವಿದ್ಯಾರ್ಥಿಗಳು ಹಲವು ಕಾರಣಗಳಿಂದ ಪರೀಕ್ಷೆಗೆ ಗೈರಾಗಿದ್ದಾರೆ. ತರ್ಕಶಾಸ್ತ್ರ ಪರೀಕ್ಷೆಗೆ 620 ವಿದ್ಯಾರ್ಥಿಗಳು ನೋಂದಾಯಿಸಿದ್ದು, 552 ಹಾಜರಾಗಿದ್ದರೆ 68 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆಗೆ 2,38,764 ವಿದ್ಯಾರ್ಥಿಗಳು ನೋಂದಾಯಿಸಿದರೆ 2,27,453 ಹಾಜರಾಗಿದ್ದು 11,311 ಗೈರು ಹಾಜರಾಗಿದ್ದಾರೆ.
ಫಲಿತಾಂಶ ನೋಡುವ ವಿಧಾನ
ವಿಧಾನ:
1. ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ kseeb.kar.nic.in, pue.kar.nic.in ಅಥವಾ karresults.nic.in ಗೆ ಭೇಟಿ ನೀಡಿ.
2. ಓಪನ್ ಆದ ಪೇಜ್‌ನಲ್ಲಿ ಪಿಯುಸಿ ಫಲಿತಾಂಶಕ್ಕೆ ಸಂಬಂಧಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ.
3. ಆ ಓಪನ್ ಆದ ಪೇಜ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಟೈಪ್ ಮಾಡಿ. ನಂತರ ‘Submit’ ಎಂಬಲ್ಲಿ ಕ್ಲಿಕ್ ಮಾಡಿ.
4. ಆಗ ನಿಮಗೆ ನಿಮ್ಮ ಫಲಿತಾಂಶ ಪ್ರದರ್ಶನವಾಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದುಕೊಳ್ಳಬಹುದು.
ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಶುಭಾಶಯ
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ (ಜೂನ್.18) ಪ್ರಕಟಿಸಲಾಗುತ್ತದೆ.
ವಿದ್ಯಾರ್ಥಿಗಳಿಗೆ ಶುಭಾಶಯಗಳು.
2nd PUC exam results will be announced tomorrow.
Best wishes to all students?.
— B.C Nagesh (@BCNagesh_bjp) June 17, 2022
ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮಾಹಿತಿ ಹೀಗಿದೆ
ಕಳೆದ ಎಪ್ರಿಲ್ 23 ರಿಂದ ಮೇ 18ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ರು. ಈ ಪೈಕಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು ದಾಖಲಾಗಿದ್ದರು. ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕಲಾ ವಿಭಾಗಕ್ಕೆ 2,28,167 ಮಂದಿ, ವಾಣಿಜ್ಯ ವಿಭಾಗಕ್ಕೆ 2,45,519 ಮಂದಿ ಮತ್ತು ವಿಜ್ಞಾನ ವಿಭಾಗದಲ್ಲಿ 2,10,569 ಮಂದಿ ಪರೀಕ್ಷೆಗೆ ಕುಳಿತಿದ್ದರು.
ನಾಳೆ ಸಚಿವ ಬಿಸಿ ನಾಗೇಶ್ ಸುದ್ದಿಗೋಷ್ಠಿ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ಅವರು ಬೆಂಗಳೂರಿನ ಪಿಯು ಬೋರ್ಡ್‌ನಲ್ಲಿ ನಾಳೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ
ಜೂನ್ 18ಕ್ಕೆ ಪಿಯುಸಿ ಫಲಿತಾಂಶ
ನಾಳೆ (ಜೂನ್ 18) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಕರ್ನಾಟಕ ಪಿಯು ಬೋರ್ಡ್ ಇದೀಗತಾನೆ ತಿಳಿಸಿದೆ. ನಾಳೆ ಶನಿವಾರ ಬೆಳಗ್ಗೆ 11 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಬವಾಗಲಿದೆ
Published On - Jun 17,2022 4:24 PM